• Mon. Sep 16th, 2024

PLACE YOUR AD HERE AT LOWEST PRICE

ಕೆಜಿಎಫ್:ಗಡಿ ಭಾಗದ ಸ್ರೀ ಶಕ್ತಿ ಮಹಿಳಾ ಸಂಘಗಳು ಆದಾಯ ಉತ್ಪನ್ನ ಚಟುವಟಿಕೆಗಳಲ್ಲಿ ತೋಡಿಸಿಕೊಂಡಿರುವುದು ಶ್ಲಾಘನೀಯ ಸಂಗತಿ ಎಂದು ತಾಲ್ಲೂಕಿನ ಸ್ರೀ ಶಕ್ತಿ ಮಹಿಳಾ ಒಕ್ಕೂಟಗಳ ಸಂಯೋಜಕರಾದ ಡಾ.ಎಂ.ಗೋಪಾಲ್ ಅಭಿಪ್ರಾಯಪಟ್ಟರು.

ಅವರು ಸುಂದರಪಾಳ್ಯ ಮಹಿಳಾ ಒಕ್ಕೂಟಗಳ ಕಟ್ಟಡದಲ್ಲಿ ಬೇತಮಂಗಲ ಗ್ರಾಮಾಭಿವೃದ್ಧಿ ಮಹಿಳಾ ಒಕ್ಕೂಟ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಅಮೃತ ಯೋಜನೆ ಅಡಿಯಲ್ಲಿ ಆಯ್ಕೆಯಾಗಿರುವ 52 ಸ್ರೀ ಶಕ್ತಿ ಸಂಘಗಳಿಗೆ ಸಣ್ಣ ಉದ್ಯಮ ಸ್ಥಾಪಿಸಲು ಹಮ್ಮಿಕೊಂಡಿದ್ದ ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಮಹಿಳಾ ಒಕ್ಕೂಟಗಳ ಸುಮಾರು 450ಸ್ತ್ರೀ ಶಕ್ತಿ ಸಂಘಗಳ ಆರ್ಥಿಕ ಅಭಿವೃದ್ಧಿಗೆ ಇಲಾಖೆಯಿಂದ ಸುತ್ತುನಿಧಿ, ಪ್ರೋತ್ಸಾಹಧನ, ಸಹಾಯಧನ, ಬೀಜಧನವನ್ನು ಸಂಘಗಳ ಆದಾಯ ಹೆಚ್ಚಿಸಿಕೊಳ್ಳಲು ಮಹಿಳೆಯರಿಗೆ ಅನೇಕ ಯೋಜನೆಗಳ ಮೂಲಕ ಇಲಾಖೆಯಿಂದ ನೀಡಲಾಗುತ್ತಿದೆ ಎಂದರು.

ಮಹಿಳಾ ಒಕ್ಕೂಟಗಳ ಸದಸ್ಯರು ಸಣ್ಣ ಉದ್ಯಮ ಸ್ಥಾಪನೆಗೆ ಬ್ಯಾಂಕಿನಿಂದ ಸಾಲ ಸೌಲಭ್ಯವನ್ನು ನೀಡಲಾಗಿದೆ, ಸಾಲವನ್ನು ಸಮಯಕ್ಕೆ ಸರಿಯಾಗಿ ಮರು ಪಾವತಿ ಮಾಡುತ್ತಿರುವುದರಿಂದ ಸರ್ಕಾರದಿಂದ ಪ್ರೋತ್ಸಾಹಧನ ನೀಡಲಾಗುತ್ತದೆ ಎಂದರು.

ಗ್ರಾಮಗಳಲ್ಲಿ ಸ್ರೀ ಶಕ್ತಿ ಸಂಘಗಳು 2001ರಲ್ಲಿ ಪ್ರಾರಂಭವಾದಾಗಿನಿಂದಲ್ಲೂ ಈವರಿಗೂ ಕೋಲಾರ ಜಿಲ್ಲೆಯಲ್ಲಿಯೇ ಮಾದರಿಯಾಗುವಂತೆ ಕಾರ್ಯಪ್ರವೃತರಾಗಿರುವುದು ಹೆಮ್ಮೆಯ ಸಂಗತಿ ಎಂದರು,

ಕೆಜಿಎಫ್ ತಾಲ್ಲೂಕಿನ ಮಹಿಳಾ ಒಕ್ಕೂಟಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅವರು ಮಹಿಳೆ ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದಾಗಿದ್ದು, ಸಂಘದಲ್ಲಿ ಆದಾಯದಾಯಕ ಕಾರ್ಯಕ್ರಮಗಳನ್ನು ಮಾಡುವಂತೆ ಸಲಹೆ ನೀಡಿದರು.

ಈ ತರಬೇತಿಯಲ್ಲಿ ಗ್ರಾಪಂ ಅಧ್ಯಕ್ಷ ಡಾ.ರಾಂಬಾಬು, ಗ್ರಾಪಂ ಅಭಿವೃದ್ಧಿ ಅಧಿಕಾರಿ ಏಜಾಜ್ ಪಾಷ, ಸಿಡಿಪಿಒ ನಾಗರತ್ನ, ಮಹಿಳಾ ಒಕ್ಕೂಟಗಳ ಅಧ್ಯಕ್ಷೆ ಅನುಸೂಯಮ್ಮ, ಮಹಿಳಾ ಮಂಡಳಿಯ ರತ್ನಮ್ಮ ಸೇರಿದಂತೆ ತರಬೇತಿದಾರರು ಹಾಗೂ ಮಹಿಳಾ ಸದಸ್ಯರು ಭಾಗವಹಿಸಿದ್ದರು.

 

 

Leave a Reply

Your email address will not be published. Required fields are marked *

You missed

error: Content is protected !!