• Thu. May 16th, 2024

PLACE YOUR AD HERE AT LOWEST PRICE

ಕೋಲಾರದ  ಕೆ.ಜಿ.ಎಫ್ ನಲ್ಲಿ ಮೊದಲ ಬಾರಿಗೆ ಅಮಿಗಾ ಫೌಂಡೇಶನ್ ವತಿಯಿಂದ ಕೆ.ಜಿ.ಎಫ್ ತಾಲ್ಲೂಕಿನ ಐದು ಅಂಗನವಾಡಿ ಕೇಂದ್ರಗಳಾದ ಟಿ.ಗೊಲ್ಲಹಳ್ಳಿ, ರಾಮಸಾಗರ, ಕ್ಯಾಸಂಬಳ್ಳಿ, ಮಲ್ಲಂಪಲ್ಲಿ ಮತ್ತು ಬೇತಮಂಗಲ ಅಂಗನವಾಡಿ ಕೇಂದ್ರಗಳಲ್ಲಿ ಉಚಿತ ಮಾಂಟೆಸ್ಸರಿ ಅಂಗನವಾಡಿ ಕೇಂದ್ರಗಳಲ್ಲಿ ಸುಮಾರು ೧೨೦ ಮಕ್ಕಳಿಗೆ ಕನ್ನಡ ಮತ್ತು ಇಂಗ್ಲೀಷ್‌ನಲ್ಲಿ ಉಚಿತ ಮಾಂಟೆಸ್ಸರಿ ಶಿಕ್ಷಣವನ್ನು ನೀಡಲಾಗುತ್ತಿದೆ.

ಅಮಿಗಾ ಫೌಂಡೇಶನ್ ಒಂದು ದಾನ ದತ್ತಿ ಟ್ರಸ್ಟ್ ಆಗಿದ್ದು, ಪ್ರಸ್ತುತ ಭಾರತದ ೧೬ ಅಂಗನವಾಡಿ ಕೇಂದ್ರಗಳಲ್ಲಿ ಸುಮಾರು ೩೦೦ಕ್ಕೂ ಅಧಿಕ ಪುಟ್ಟ ಮಕ್ಕಳಿಗೆ ಉಚಿತ ಮಾಂಟೆಸ್ಸರಿ ಶಿಕ್ಷಣವನ್ನು ಒದಗಿಸುವಂತಹ ಉತ್ತಮ ಕಾರ್ಯವನ್ನು ಮಾಡುತ್ತಿದೆ. ಸದರಿ ಸಂಸ್ಥೆಯು ನೀಡುತ್ತಿರುವ ಮಕ್ಕಳ ಸ್ನೇಹಿ ಸೌಲಭ್ಯವನ್ನು ಇಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯುಕೇಶ್ ಕುಮಾರ್ ಅವರು ಖುದ್ದು ಭೇಟಿ ನೀಡಿ, ಪರಿಶೀಲಿಸಿ ಅತ್ಯುತ್ತಮ ಮಕ್ಕಳ ಸ್ನೇಹಿ ವ್ಯವಸ್ಥೆ ಹೊಂದಿರುವ ಸದರಿ ಅಂಗನವಾಡಿಗಳ ಕಾರ್ಯವೈಖರಿಯ ಕುರಿತು ಹಾಗೂ ಅಮಿಗಾ ಫೌಂಡೇಶನ್ ರವರ ಕೊಡುಗೆಯ ಕುರಿತು ಶ್ಲಾಘೀಸಿದರು.

ಅಮಿಗಾ ಫೌಂಡೇಶನ್ ಮೇಲ್ಕಂಡ ಅಂಗನವಾಡಿಗಳಲ್ಲಿ ಶಿಶು ಸ್ನೇಹಿ ಆಟದ ಪರಿಕರಗಳು, ಪುಸ್ತಕಗಳು, ಆಸನ ವ್ಯವಸ್ಥೆ ಸಮವಸ್ತç, ಶುಚಿತ್ವ ಇತ್ಯಾದಿ ವ್ಯವಸ್ಥೆಯನ್ನು ಒದಗಿಸುತ್ತಿದೆ. ಅಲ್ಲದೆ ಆಟದೊಂದಿಗೆ ಕನ್ನಡ, ಇಂಗ್ಲೀಷ್, ಗಣಿತ, ವಿಜ್ಞಾನ ಹಾಗೂ ಸಮಾಜ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ ಮಕ್ಕಳ ವಯೋಮಾನಕ್ಕೆ ತಕ್ಕಂತೆ ಸರಳವಾಗಿ ಕಲಿಸುವ ನೂತನ ಬೋದನಾ ವಿಧಾನಗಳನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದೊಂದಿಗೆ ತರಬೇತಿ ಪಡೆದ ನುರಿತ ಶಿಕ್ಷಕರಿಂದ ಬೋಧಿಸಲಾಗುತ್ತಿದೆ.

ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ರಾಮಸಾಗರ ಅಂಗನವಾಡಿ ಕೇಂದ್ರದ ಮಕ್ಕಳೊಂದಿಗೆ ಖುದ್ದು ಈ ದಿನ ಕಲಿಕ ಚಟುವಟಿಕೆಯನ್ನು ವೀಕ್ಷಿಸುವ ಮೂಲಕ ಮಕ್ಕಳ ಧನಾನ್ಮಕ ಪಾಲ್ಗೋಳುವಿಕೆಯನ್ನು ಅಭಿನಂದಿಸಿದರು ಹಾಗೂ ಸದರಿ ಟ್ರಸ್ಟ್ ನೀಡುತ್ತಿರುವ ಸೌಲಭ್ಯವನ್ನು ಉತ್ತಮ ರೀತಿಯಲ್ಲಿ ಬಳಸಿಕೊಳ್ಳುವಂತೆ ಕರೆ ನೀಡಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯುಕೇಶ್ ಕುಮಾರ್ ಅವರು ಮಾತನಾಡಿ, ವಿಶ್ವದರ್ಜೆಯ ಶಿಶು ಸ್ನೇಹಿ ಸೌಲಭ್ಯ ಕಲ್ಪಿಸಿರುವ ಅಮಿಗಾ ಫೌಂಡೇಶನ್ ರವರ ಕೊಡುಗೆ ಜಿಲ್ಲಾಡಳಿತದ ಪರವಾಗಿ ಅಭಿನಂದನೆ ತಿಳಿಸಿದರು. ಅಲ್ಲದೆ ಮುಂಬರುವ ದಿನಗಳಲ್ಲಿ ಕೋಲಾರ ಜಿಲ್ಲೆಯ ವಿವಿಧ ಅಂಗನವಾಡಿ ಕೇಂದ್ರಗಳು ಹಾಗೂ ಜಿಲ್ಲಾ/ತಾಲ್ಲೂಕು ಶಿಶುಪಾಲನಾ ಕೇಂದ್ರಗಳಲ್ಲಿಯೂ ಸಹ ಸದರಿ ಶಿಶು ಸ್ನೇಹಿ ಮಾಂಟೆಸ್ಸರಿ ಶಿಕ್ಷಣವನ್ನು ನೀಡಲು ಯೋಜನೆ ರೂಪಿಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಪೋಬೆಷನರಿ ಐ.ಎ.ಎಸ್ ಅಧಿಕಾರಿ ವಿನಾಯಕ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಮುದ್ದಣ್ಣ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ನಾಗರತ್ನ, ಅಮಿಗಾ ಫೌಂಡೇಶನ್ ವ್ಯವಸ್ಥಾಪಕಿ ಲಕ್ಷ್ಮೀ ರಾಮಮೂರ್ತಿ, ಮಮತ, ಎಂ.ಆರ್.ಧರ್ಮರಾಜನ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Related Post

ಶಿಕ್ಷಕರ ಸಮಸ್ಯೆಗಳನ್ನು ಬಗೆಹರಸದೆ, ಶಿಕ್ಷಕರಿಗೆ ದ್ರೋಹವೆಸಗಿದ ಎಂ.ಎಲ್.ಸಿ. ವೈ.ಎ.ನಾರಾಯಣಸ್ವಾಮಿ : ರುಪ್ಸಾ ಅಧ್ಯಕ್ಷ ಹಾಗೂ ಪಕ್ಷೇತರ ಅಭ್ಯರ್ಥಿ ಲೋಕೇಶ್ ತಾಳಿಕಟ್ಟೆ ಆರೋಪ
ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್

Leave a Reply

Your email address will not be published. Required fields are marked *

You missed

error: Content is protected !!