• Fri. May 3rd, 2024

PLACE YOUR AD HERE AT LOWEST PRICE

ಕೋಲಾರ ಜಿಲ್ಲಾ ಪಂಚಾಯತ್ ಅಡಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಗರಿಷ್ಟ ಅಂಶದವರೆಗೆ ಪೂರ್ಣಗೊಳಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯುಕೇಶ್ ಕುಮಾರ್ ಅವರು ಹೇಳಿದರು.

ತಮ್ಮ ಕಛೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಸುದ್ಧಿಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ನರೇಗಾ ಅಡಿ ೩೦ ಕೋಟಿಗಳು ಖಾಸಗಿ ಸಹಭಾಗಿತ್ವದ ಸಿಎಸ್‌ಆರ್ ಅನುದಾನದಡಿ ೭ ಕೋಟಿಗಳು, ಅಮೃತ ಸರೋವರ ಯೋಜನೆಯಡಿ ೭ ಕೋಟಿಗಳು ಹೀಗೆ ಜಿಲ್ಲೆಯಲ್ಲಿ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಪ್ರಸಕ್ತ ಸಾಲಿನಲ್ಲಿ ವೆಚ್ಚ ಮಾಡಲಾಗಿದೆ. ಶ್ರೀನಿವಾಸಪುರದಲ್ಲಿ ೫ ಪರಿಸರ ಸಂರಕ್ಷಣಾ ಘಟಕಗಳನ್ನು ನಿರ್ಮಾಣ ಮಾಡಲಾಗಿದೆ. ಅಮೃತ್ ಸರೋವರ ಕಲ್ಯಾಣ ಯೋಜನೆಯಡಿ ಜಿಲ್ಲೆಯ ಪ್ರಮುಖ ೧೩೦ ಕೆರೆಗಳಲ್ಲಿ ಹೂಳೆತ್ತುವ ಹಾಗೂ ಕಟ್ಟೆ ಕಟ್ಟುವ ಮೂಲಕ ಜಲಮೂಲಗಳ ಸಂರಕ್ಷಣೆ ಮಾಡಲಾಗಿದೆ. ಜಿಲ್ಲಾದ್ಯಂತ ೧೩೫ ಶಾಲೆಗಳಿಗೆ ಕಾಂಪೌಂಡ್ ಗೋಡೆಗಳನ್ನು ಕಟ್ಟಿಸಲಾಗಿದೆ. ೩೨೭ ಅಡುಗೆ ಕೋಣೆಗಳು, ೪೬೦ ಶೌಚಾಲಯಗಳು, ೪೮೮ ಕೈದೋಟಗಳು, ೧೬೬ ಆಟದ ಮೈದಾನಗಳು, ೪೭೭ ಮಳೆ ನೀರು ಕೊಯ್ಲು ಪರಿಕರಗಳನ್ನು ಅಳವಡಿಸುವ ಕಾರ್ಯ ಪೂರ್ಣಗೊಳಿಸಲಾಗಿದೆ.

ಜಿಲ್ಲಾ ಪಂಚಾಯತ್ ಅನುದಾನದ ವ್ಯಾಪ್ತಿಯಲ್ಲಿ ಹೊಸ ಅಂಗನವಾಡಿಗಳನ್ನು ತೆರೆಯಲಾಗಿದೆ. ಶಿಥಿಲಗೊಂಡ ೪೫೦ ಅಂಗನವಾಡಿ ಕೇಂದ್ರಗಳನ್ನು ಪುನರ್ಚೇತನಗೊಳಿಸಿ ಅಭಿವೃದ್ಧಿ ಪಡಿಸಲಾಗಿದೆ. ಕೆ.ಜಿ.ಎಫ್ ವ್ಯಾಪ್ತಿಯಲ್ಲಿ ಟಿ.ಗೊಲ್ಲಹಳ್ಳಿ, ಕ್ಯಾಸಂಬಳ್ಳಿ, ಮಲ್ಲಂಪಲ್ಲಿ, ರಾಮಸಾಗರ, ಬೇತಮಂಗಲಗಳಲ್ಲಿರುವ ಅಂಗನವಾಡಿಗಳನ್ನು ಖಾಸಗಿ ಸಹಭಾಗಿತ್ವದ ಅಡಿಯಲ್ಲಿ ಅಮಿಗಾ ಫೌಂಡೇಶನ್ ಅವರ ಸಹಕಾರದಲ್ಲಿ ಮಾಂಟೆಸ್ಸರಿ ಮಾದರಿ ಶಿಕ್ಷಣ ಸಂಸ್ಥೆಗಳಂತೆ ಪರಿವರ್ತಿಸಲಾಗಿದೆ. ನಮ್ಮ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಸರ್ಕಾರಿ ಶಿಶುಪಾಲನಾ ಕೇಂದ್ರಗಳನ್ನು ಮಾದರಿ ಶಿಶುಪಾಲನಾ ಕೇಂದ್ರಗಳಾಗಿ ಪರಿವರ್ತಿಸಲು ಮುಂದಿನ ದಿನಗಳಲ್ಲಿ ಕ್ರಮಕೈಗೊಳ್ಳಲಾಗುವುದು. ಇದರ ಅಂಗವಾಗಿ ಈಗಾಗಲೇ ಎಸ್.ಎನ್.ಆರ್ ಆಸ್ಪತ್ರೆ ಆವರಣದಲ್ಲಿಯೂ ಸಹ ಶಿಶು ಪಾಲನಾ ಕೇಂದ್ರವನ್ನು ತೆರೆಯಲಾಗಿದೆ.

ಕೋಲಾರ ಜಿಲ್ಲೆಯಲ್ಲಿ ಹಳ್ಳಿಗಳ ವ್ಯಾಪ್ತಿ ಪ್ರದೇಶದಲ್ಲಿ ಸುಮಾರು ೪.೫ ಲಕ್ಷ ಸಂಖ್ಯೆಯ ಸ್ವತ್ತು ಇದೆ. ಇದನ್ನು ಮರು ಅಳತೆ ಮಾಡಿ ಹೊಸ ತೆರಿಗೆ ಪದ್ಧತಿಯಡಿ ಸೇರಿಸಲು ಯೋಜಿಸಲಾಗಿದೆ. ಈ ಮೂಲಕ ಶೇ.೧೦೦ ರಷ್ಟು ತೆರಿಗೆ ಪರಿಷ್ಕರಣೆ ಮಾಡಲಾಗುವುದು ಎಂದು ತಿಳಿಸಿದರು.

ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ೧೫೪ ಗ್ರಂಥಾಲಯಗಳನ್ನು ಈಗಾಗಲೇ ಡಿಜಿಟಲೀಕರಣಗೊಳಿಸಲಾಗಿದೆ. ಸಾರ್ವಜನಿಕರು ಡಿಜಿಟಲ್ ಗ್ರಂಥಾಲಯಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಸ್ವೀಪ್ ಸಂಬಂಧಪಟ್ಟಂತೆ ಶೇ.೨.೩೮ರಷ್ಟು ಯುವ ಮತದಾರರನ್ನು ಪ್ರಸಕ್ತ ಸಾಲಿನಲ್ಲಿ ನೊಂದಾಯಿಕೊಳ್ಳಲಾಗಿದೆ. ರಾಜ್ಯದಲ್ಲಿ ೩ನೇ ಅತಿ ಹೆಚ್ಚು ಯುವ ಮತದಾರರನ್ನು ನೊಂದಾಯಿಸಿಕೊಂಡಿರುವ ಜಿಲ್ಲೆಯಾಗಿ ಕೋಲಾರವನ್ನು ಗುರುತಿಸಲಾಗಿದೆ. ಜಿಲ್ಲೆಯಲ್ಲಿ ಪ್ರತಿ ೧೦೦೦ ಪುರುಷರಿಗೆ ೧೦೦೯ ಮಹಿಳೆಯರಂತೆ ಲಿಂಗಾನುಪಾತ ದಾಖಲಾಗಿದೆ. ಜಿಲ್ಲೆಯಲ್ಲಿ ೧೫೯೦ ಸುಸಜ್ಜಿತ ಮತಗಟ್ಟೆಗಳನ್ನು ಗುರುತಿಸಲಾಗಿದೆ. ಕೆಲವು ಶಿಥಿಲಗೊಂಡ ಕಟ್ಟಡಗಳಲ್ಲಿರುವ ಮತಗಟ್ಟೆಗಳನ್ನು ಸಮೀಪದ ಸರ್ಕಾರಿ ಕಟ್ಟಡಗಳಿಗೆ ವರ್ಗಾಯಿಸಲಾಗಿದೆ. ಪ್ರಸಕ್ತ ಚುನಾವಣಾ ಸಾಲಿನಲ್ಲಿ ಸ್ವೀಪ್‌ಗಾಗಿ ಸುಮಾರು ರೂ. ೪೦ ಲಕ್ಷಗಳ ಅನುದಾನವನ್ನು ಪ್ರಚಾರ ಕಾರ್ಯಗಳಿಗಾಗಿ ಮೀಸಲಿರಿಸಲಾಗಿದೆ. ಈ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಮತದಾನ ಮಾಡುವ ಬಗ್ಗೆ ಜನರಲ್ಲಿ ಹೆಚ್ಚಿನ ಜಾಗೃತಿ ಉಂಟುಮಾಡಲಾಗುವುದು ಎಂದರು.

ಸುದ್ದಿ ಓದಿ ಹಂಚಿ:

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!