• Thu. May 2nd, 2024

PLACE YOUR AD HERE AT LOWEST PRICE

ಮಾಲೂರು:ರಾಜ್ಯದಲ್ಲಿ ಕೆಟ್ಟ, ಭ್ರಷ್ಟ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರವನ್ನು ಮನೆಗೆ ಕಳುಹಿಸಿ ಸುಭದ್ರ ಸರ್ಕಾರಕ್ಕಾಗಿ ಜನಪರ ಯೋಜನೆಗಳ ಅನುಷ್ಠಾನಕ್ಕಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಶಾಸಕ ಕೆ.ವೈ.ನಂಜೇಗೌಡ ಮನವಿ ಮಾಡಿದರು.

ಪಟ್ಟಣದ ಮಾರುತಿ ಬಡಾವಣೆಯ ತಿರುಮಲ ಕಲ್ಯಾಣ ಮಂಟಪದ ಮುಂಭಾಗದ ಆವರಣದಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಕಳೆದ ಐದು ವರ್ಷಗಳ ಹಿಂದೆ ತಾಲೂಕಿನಲ್ಲಿ ನನ್ನನ್ನು ಶಾಸಕರನ್ನಾಗಿ ಆಯ್ಕೆ ಮಾಡಿದ ಜನರ ಋಣ ತೀರಿಸಲು ಬಡವರು ಸಾಮಾನ್ಯ ಜನರ ರೈತರು ದುಃಖಗಳಲ್ಲಿ ಅವರಿಗೆ ಸ್ಪಂದಿಸಿ ಸರ್ಕಾರದಿಂದ ಬರುವ ಅನುದಾನಗಳನ್ನು ಸಮರ್ಪಕವಾಗಿ ಬಳಸಿಕೊಂಡು ತಾಲೂಕಿನಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗಿದೆ.

ಶಾಸಕರಾಗಿ ಆಯ್ಕೆಯಾದ ಮೇಲೆ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಸಾಕಷ್ಟು ಅನುದಾನಗಳನ್ನು ತಂದು

ತಾಲೂಕಿನಲ್ಲಿ ಅಭಿವೃದ್ಧಿ ಮಾಡಲಾಯಿತು ನಂತರ ಬಂದ ಬಿಜೆಪಿ ಸರ್ಕಾರದಲ್ಲಿ ತಾಲೂಕಿನ ಅಭಿವೃದ್ಧಿಗೆ ಸಮರ್ಪಕ ಅನುದಾನಗಳು ಸಿಗಲಿಲ್ಲ ಆದರೂ ಸಹ ಬಿಜೆಪಿಯವರು ಸರ್ಕಾರ ರಚನೆ ಮಾಡುವಾಗ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಲು ಆಸೆ ಆಮಿಷಗಳು ತೋರಿಸಿದರು.

ಅವರ ಮಾತಿಗೆ ಮರುಳಾಗದೆ ಕ್ಷೇತ್ರದ ಕಾರ್ಯಕರ್ತರು ಹಾಗೂ ಮುಖಂಡರ ಹಿತದೃಷ್ಟಿಯಿಂದ ಕಾಂಗ್ರೆಸ್ ಪಕ್ಷ ತೊರೆಯುವ ಕೆಲಸ ಮಾಡಲಿಲ್ಲ. ಸರ್ಕಾರ ಇಲ್ಲದಿದ್ದರೂ ಸಹ ಕಾಂಗ್ರೆಸ್ ಪಕ್ಷದಿಂದ ಹಾಗೂ ವೈಯಕ್ತಿಕವಾಗಿ ಕೋವಿಡ್ ಮೊದಲನೇ ಅಲೆ, ಎರಡನೇ ಅಲೆಯಲ್ಲಿ ಜನಸಾಮಾನ್ಯರಿಗೆ ಸ್ಪಂದಿಸಿ ಉತ್ತಮ ರೀತಿಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.

ಈಗಿನ ಬಿಜೆಪಿ ಸರ್ಕಾರದಲ್ಲಿ ಹಲವಾರು ಹಗರಣಗಳು ನಡೆದಿದೆ ಪಿಎಸ್‍ಐ ಹಗರಣ 40% ಕಮಿಷನ್ ಹಗರಣ, ಸರ್ಕಾರ ಇದೊಂದು ಕೆಟ್ಟ ಭ್ರಷ್ಟ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಜನಸಾಮಾನ್ಯರಿಗಾಗಿ ಯಾವುದೇ ರೀತಿಯ ಯೋಜನೆಗಳನ್ನು ಅನುಷ್ಠಾನಗೊಳಿಸಿದ ಸರ್ಕಾರವಾಗಿದೆ ಎಂದ ಅವರು ಆರೋಪಿಸಿದರು.

ಬಡವರು ದೀನ ದಲಿತರು ಅಲ್ಪಸಂಖ್ಯಾತರು ರೈತರ ಪರವಾಗಿ ಬಜೆಟ್ ನಲ್ಲಿ ಕಾರ್ಯಕ್ರಮಗಳನ್ನು ರೂಪಿಸಿಲ್ಲ ಜನ ವಿರೋಧಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಮಾತಿಗೆ ಕಿವಿ ಕೊಡಬೇಡಿ, ಕೆಲವು ರಾಜಕಾರಣಿಗಳಿಗೆ ನಮ್ಮ ತಾಲೂಕಿನಲ್ಲಿ ಹಣ ಕೊಟ್ಟರೆ ಮತ ಹಾಕುತ್ತಾರೆ ಎಂಬ ನಂಬಿಕೆಯಲ್ಲಿದ್ದಾರೆ.

ಟೆಂಟುಗಳನ್ನು ಎತ್ತಿಕೊಂಡು ಹೋಗುವವರೆಗೆ ತಾಲೂಕಿನ ಜನತೆ ಅವಕಾಶ ನೀಡಬೇಡಿ ಜನ ಸೇವಕನಾಗಿ  ಸ್ಥಳೀಯವನಾಗಿ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಬಡ ರೈತನ ಮಗನಾದ ನಾನು ಕಷ್ಟದಲ್ಲಿ ಹೋರಾಟ ಮಾಡಿ ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಶಾಸಕರಾಗಿ ಆಯ್ಕೆಯಾಗಿದ್ದೇನೆ

ಬಿಜೆಪಿ ಸರ್ಕಾರದಿಂದ ನೋವು ಅನುಭವಿಸಿದ್ದೇನೆ. ಬಿಜೆಪಿ ಸರ್ಕಾರ ಕಾಂಗ್ರೆಸ್ ಪಕ್ಷದ ಶಾಸಕರಿಗೆ ಅನುದಾನ ನೀಡುವಲ್ಲಿ ತಾರತಮ್ಯ ಮಾಡಿದೆ ಪಟ್ಟಣದಲ್ಲಿ ಆಶ್ರಯ ಯೋಜನೆ ಯಡಿ ಬಡವರು ನಿರ್ಗತಿಕರು ನಿವೇಶನಕ್ಕಾಗಿ ಈ ಹಿಂದೆ ಅರ್ಜಿಗಳನ್ನು ಪುರಸಭೆಗೆ ಸಲ್ಲಿಸಿದ್ದರು.

ನಿವೇಶನಗಳನ್ನು ಹಂಚಿಕೆ ಮಾಡಲು  ಪುರಸಭೆಯು ಈಗಾಗಲೇ ಫಲಾನುಭವಿಗಳ ಹೆಸರುಗಳನ್ನು ಪ್ರಕಟಣಾ ಫಲಕದಲ್ಲಿ ಪ್ರಕಟಿಸಿದೆ. ಆದರೆ ಕೆಲವು ಕಾಣದ ಕೈಗಳು ನಿವೇಶನ ಹಂಚಿಕೆಗೆ ಅಡ್ಡಿಪಡಿಸುತ್ತಿದ್ದಾರೆ. ನನ್ನ ಅಧಿಕಾರವಧಿಯ ಅಭಿವೃದ್ಧಿ ಯೋಜನೆಗಳನ್ನು ಕೈಪಿಡಿ ಮಾಡಿ ಜನಗಳಿಗೆ ತಲುಪಿಸಿ ಮತ್ತೊಮ್ಮೆ ಅವಕಾಶ ಕೇಳುತ್ತೇನೆ.

ಬಿಜೆಪಿಯವರಾದ ಸಂಸದರಿಗೆ ತಾಲೂಕಿನ ಜನತೆ ಹೆಚ್ಚಿನ ಮತಗಳನ್ನು ನೀಡಿ ಗೆಲ್ಲಿಸಿದ್ದಾರೆ ಅವರದೇ ಬಿಜೆಪಿ ಸರ್ಕಾರದಿಂದ ಏಕೆ ಅನುದಾನ ತರುತ್ತಿಲ್ಲ ತಾಲೂಕಿನಲ್ಲಿ ಎಲ್ಲಾ ಇಲಾಖೆಗಳಲ್ಲಿ ಭ್ರಷ್ಟಾಚಾರ ತುಂಬಿದೆ ಎಂದು ಹೇಳುತ್ತಾರೆ ಅವರದ್ದೇ ಸರ್ಕಾರ ಇದ್ದಾಗ ಬ್ರಷ್ಟಾಚಾರಕ್ಕೆ ಏಕೆ ಕಡಿವಾಣ ಹಾಕಬಾರದು ಎಂದು ಪ್ರಶ್ನಿಸಿದರು

ಹಿಂದಿನ ಮಾಜಿ ಶಾಸಕರು ತಾಲೂಕಿನಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಸಲು ಅವರ ಮನೆಯಿಂದ ಹಣ ತರಲಿಲ್ಲ. ಈಗಿನ ಬಿಜೆಪಿ ಸರ್ಕಾರ ಸುಳ್ಳಿನ ಸರ್ಕಾರವಾಗಿದ್ದು ಕಾಂಗ್ರೆಸ್ ಪಕ್ಷ ಸತ್ಯದ ಸರ್ಕಾರವಾಗಿದೆ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬಂದಲ್ಲಿ ಚುನಾವಣೆಯ ಪ್ರಣಾಳಿಕೆಯಲ್ಲಿ ನೀಡಿರುವ ಸ್ಪಷ್ಟ ಭರವಸೆಗಳನ್ನು ನೆರವೇರಿಸಲಿದೆ ಎಂದರು.

ಅನ್ನಭಾಗ್ಯ ಅಕ್ಕಿ ವಿತರಣೆ ತಿಂಗಳಿಗೆ ಒಬ್ಬ ವ್ಯಕ್ತಿಗೆ 7 ಕೆಜಿಯಿಂದ 10 ಕೆಜಿಗೆ ಹೆಚ್ಚಿಸಿ ವಿತರಣೆ ಮಾಡುವುದು ಸ್ತ್ರೀಶಕ್ತಿಯ ಮಹಿಳಾ ಸಂಘಗಳಿಗೆ ನೀಡುತ್ತಿದ್ದ 5 ಲಕ್ಷ ಸಾಲವನ್ನು 10 ಲಕ್ಷಕ್ಕೆ ಏರಿಕೆ ಮಾಡುವುದು ಗೃಹಲಕ್ಷ್ಮಿ ಯೋಜನೆ ಅಡಿ ಪ್ರತಿ ಕುಟುಂಬದ ಯಜಮಾನಿಗೆ ಪ್ರತಿ ತಿಂಗಳು ಉಚಿತವಾಗಿ 2000ಹಣವನ್ನು ನೀಡುವುದು.

ಆ ಹಣವನ್ನು ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಿ ಬೆಲೆ ಏರಿಕೆ ಕಷ್ಟಕ್ಕೆ ನೆರವಾಗುವುದು ರೈತರ ಕಲ್ಯಾಣಕ್ಕಾಗಿ ಬಡ್ಡಿ ರಹಿತ 3 ಲಕ್ಷ ಕೃಷಿ ಸಾಲವನ್ನು 5 ಲಕ್ಷಕ್ಕೆ ಹೆಚ್ಚಳ ಮಾಡುವುದು ಕಾಂಗ್ರೆಸ್ ಪಕ್ಷದ ಅವಧಿಯಲ್ಲಿನ ಯೋಜನೆಗಳನ್ನು ಮರುಜಾರಿ ಮಾಡುವುದು.

ಪಟ್ಟಣದಲ್ಲಿ ಸಹ ಪುರಸಭೆಯ ವತಿಯಿಂದ ಹಲವಾರು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದು ಪಟ್ಟಣದ ಜನತೆ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ಮಾತುಗಳಿಗೆ ಕಿವಿಕೊಡದೆ ಪಟ್ಟಣ ಸೇರಿದಂತೆ ತಾಲೂಕಿನ ಸರ್ವತೋಮುಖ ಅಭಿವೃದ್ಧಿಗಾಗಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದ ಮಹಿಳೆಯರಿಗೆ ಬ್ಲಾಂಕೇಟ್ ವಿತರಣೆ ಮಾಡಲಾಯಿತು.  ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸಿ. ಲಕ್ಷ್ಮೀನಾರಾಯಣ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂಜಿ ಮಧುಸೂದನ್, ಕೆಪಿಸಿಸಿ ಸದಸ್ಯರುಗಳಾದ ಅಂಜನಿ ಸೋಮಣ್ಣ, ಪ್ರದೀಪ್ ರೆಡ್ಡಿ, ಜಿಲ್ಲಾ ಕಾಂಗ್ರೆಸ್ ಪಕ್ಷದ ಮಹಿಳಾ ಘಟಕದ ಅಧ್ಯಕ್ಷ ರತ್ನಮ್ಮ ಪುರಸಭೆ ಅಧ್ಯಕ್ಷ ಮಂಜುನಾಥ್, ಉಪಾಧ್ಯಕ್ಷೆ ಭಾರತೀ ಶಂಕ್ರಪ್ಪ ಸ್ಥಾಯಿ ಸಮಿತಿ ಅಧ್ಯಕ್ಷ ಜಾಕೀರ್ ಖಾನ್, ಪುರಸಭೆ ಸದಸ್ಯರುಗಳಾದ ಆರ್ ವೆಂಕಟೇಶ್, ಇಂತಿಯಾಜ್  ಖಾನ್,ಎ .ರಾಜಪ್ಪ, ಕೋಮಲ ಕೋಳಿನಾರಾಯಣ್, ಪುರಸಭೆ ಮಾಜಿ ಅಧ್ಯಕ್ಷರುಗಳಾದ ಪಾರ್ವತಮ್ಮ, ವಿಜಯಲಕ್ಷ್ಮಿ,ಕಾಂಗ್ರೆಸ್ ಪಕ್ಷದ ಮಹಿಳಾ ಘಟಕದ ಅಧ್ಯಕ್ಷ ಚಂದ್ರಿಕಾ, ಎಸ್ಸಿ ಘಟಕದಅಧ್ಯಕ್ಷ ಮೈಲಾಂಡಹಳ್ಳಿ ನಾರಾಯಣಸ್ವಾಮಿ, ಯುವ ಘಟಕದ ಅಧ್ಯಕ್ಷ ತನ್ವೀರ್ ಅಹ್ಮದ್, ಮುಖಂಡರುಗಳಾದ ನಹೀಮ್‍ಖಾನ್, ಎಂ,ಎನ್ ಗುಂಡಪ್ಪ, ಗೋಪಾಲಕೃಷ್ಣ, ಬಿ.ಆರ್. ಶ್ರೀನಿವಾಸ್, ಕೃಷ್ಣಪ್ಪ, ಶ್ರೀನಿವಾಸ್, ಅಂಜನಪ್ಪ, ಮುದಾಸಿರ್, ನಾಸಿರ್,ರಾಮ್‍ಮೂರ್ತಿ, ತಿಮ್ಮೇಗೌಡ ಇನ್ನಿತರವರು ಹಾಜರಿದ್ದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!