• Thu. May 2nd, 2024

PLACE YOUR AD HERE AT LOWEST PRICE

ಮುಚ್ಚಿಟ್ಟ ಜಗತ್ತಿನ ಸೌಂದರ್ಯವನ್ನು ಹೊರತಂದು, ಹೊಸತನ್ನು ತೋರುವ ಶಕ್ತಿ ಕಾವ್ಯಕ್ಕಿದೆ ಎಂದು ಕವಿ ಯೂಸುಫ್ ಅಭಿಪ್ರಾಯಪಟ್ಟರು.

ಕೋಲಾರ ನಗರದ ರೋಟರಿ ಭವನದಲ್ಲಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ಹಣಬೆ ನಾ ಪಾಪೇಗೌಡ ರವರ ಚುಟುಕು ಚಕೋರಿ ಕೃತಿ ಲೋಕಾರ್ಪಣೆ ಮಾಡಿ ಮಾತನಾಡುತ್ತಿದ್ದರು. ಕವಿ ಹಣಬೇ ಭಾವನಾತ್ಮಕ ಜೀವಿ. ಸರಳತೆಯ ಜೀವನ ಅವರ ಬದುಕಿನ ಶಕ್ತಿಯಾಗಿತ್ತು. ಅಂತಹ ಶಕ್ತಿಯುಳ್ಳ ಕವಿತೆಯ, ಬರೆಯುವ ಕವಿಯ ಮನೋಭಾವ ತುಂಬಾನೇ ಅರ್ಥಪೂರ್ಣವಾಗಿದೆ. ಪ್ರಚಲಿತ ಕಾಲಘಟ್ಟದ ಕಾವ್ಯ ತನ್ನ ಅಂತರಾತ್ಮದ ಮತ್ತು ಬಾಹ್ಯ ಸೌಂದರ್ಯವನ್ನು ಕಳೆದುಕೊಂಡಿದೆ. ಕವಿಯೂ ಕೂಡ ಸಂಕುಚಿತ ಮನೋಭಾವದೊಳಗೆ ಕಲುಷಿತಗೊಳ್ಳುತ್ತಿರುವುದು ಶೋಚನೀಯ ಸಂಗತಿ ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ಅಧ್ಯಕ್ಷ ನಾಗಾನಂದ ಕೆಂಪರಾಜ್ ಮಾತನಾಡಿ, ಹನ್ನೆರಡನೆ ಶತಮಾನದ ವಚನ ಸಾಹಿತ್ಯವು ಬದುಕಿಗೆ ದಾರಿ ದೀಪವಾಗಿದೆ. ಬಸವಣ್ಣನವರು ರಚಿಸಿದ ವಚನಗಳು ಉತ್ತಮ ಜೀವನಕ್ಕೆ ಸಹಕಾರಿಯಾಗಿವೆ. ನಮ್ಮ ನಾಡಿನ ಸಂಸ್ಕೃತಿಯನ್ನು ಬಿಂಬಿಸಲು ಸಾಹಿತ್ಯ ಆಧಾರವಾಗಿದೆ ಎಂದು ತಿಳಿಸಿದರು.

ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪಿ ನಾರಾಯಣಪ್ಪ ಮಾತನಾಡಿ, ಕನ್ನಡ ಸಾಹಿತ್ಯವು ಕನ್ನಡ ಭಾಷೆಯಷ್ಟೇ ಪ್ರಾಚೀನ, ಅಷ್ಟೇ ವೈಭವಯುತ. ಇಡೀ ಕನ್ನಡ ಸಾಹಿತ್ಯದಲ್ಲಿ ಕನ್ನಡ ನಾಡಿನ ಕಲೆ, ಸಂಸ್ಕೃತಿ, ಬದುಕು ಹೀಗೆ ಒಟ್ಟಾರೆ ಕನ್ನಡ ಸಾಂಸ್ಕೃತಿಕ ಜಗತ್ತೇ ಅಡಕಗೊಂಡಿದೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಆರ್ ಶಂಕರೇಗೌಡ ಮಾತನಾಡಿ, ಲೋಕದ ಅನುಭವವನ್ನು ಇದ್ದಹಾಗೆ ಹೇಳುವುದಾದರೆ ಅದು ಕಾವ್ಯವಾಗುವುದಿಲ್ಲ; ಅದು ವರದಿಯಾಗುತ್ತದೆ ಅಥವಾ ವಾರ್ತೆಯಾಗುತ್ತದೆ ಎಂದರು.

ಕವಿ ಡಾ. ಶರಣಪ್ಪ ಗಬ್ಬೂರ್ ಮಾತನಾಡಿ, ಕವಿ ಪಾಪೇಗೌಡ ಸಮಾಜದ ಮತ್ತು ಬದುಕಿನ ಸಾಹಿತ್ಯವನ್ನು ಕಟ್ಟಿಕೊಟ್ಟಿದ್ದಾರೆ ಎಂದರು.

ಕನ್ನಡ ಸಿರಿ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಟಿ. ಸುಬ್ಬರಾಮಯ್ಯ ಮಾತನಾಡಿ, ಇಡೀ ಲೋಕಾನುಭವದ ಅಕ್ಷರಗಳು ಇಲ್ಲಿ ಎದ್ದು ತೋರುತ್ತವೆ. ಅಂತಹ ಭಾವನೆಗಳ ನೆಲೆಯಲ್ಲಿ ಕವಿಯ ಮನಸ್ಸು ಹೇಗಿರಬಹುದು ಎಂಬುದನ್ನು ಅರ್ಥಮಾಡಿಕೊಳ್ಳಲು ಅವನೊಂದಿಗೆ ಒಡನಾಟದ ಮನಸ್ಸು ಅನಿವಾರ್ಯ ಎಂದರು.

ಕವಿಗೋಷ್ಠಿಯಲ್ಲಿ ರಾಧ ಪ್ರಕಾಶ್, ರಮೇಶ್ ಬಾಬು, ರೂಪ ಶಿವಕುಮಾರ್, ಇಂಚರ ನಾರಾಯಣಸ್ವಾಮಿ, ಭಾರತಿ, ಟಿ ಎಮ್ ನಾಗರಾಜ್, ಅನುಷ್ಕ್ಕಾ, ಮಾಸ್ತೇನಹಳ್ಳಿ ನಾರಾಯಣಸ್ವಾಮಿ, ಚಿಟ್ನಹಳ್ಳಿ ರಾಮಚಂದ್ರ, ರವೀಂದ್ರ, ಮಂಜುನಾಥ, ಗೌರಿಪೇಟೆ ಕೆ.ಎನ್.ರವೀಂದ್ರನಾಥ್, ನಂಜುಂಡಪ್ಪ, ಹೊಸಹಳ್ಳಿ ಸೋಮಶೇಖರ್, ಟೈಗರ್ ಪೋಲಿಸ್, ಸುಪ್ರೀಂ, ಮಸ್ತಾಕ್ ತಾಳಿಕೋಟೆ, ದಾಸೇನಹಳ್ಳಿ ಸೋಮಶೇಖರ್, ಅಕೃ ಸೋಮಶೇಖರ್. ಮುಂತಾದವರು ಕವಿತೆಗಳನ್ನು, ಚುಟುಕುಗಳನ್ನು ವಾಚಿಸಿ ಉಪಸ್ಥಿತರಿದ್ದರು.

 

 

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!