• Mon. Apr 29th, 2024

ಕೋಲಾರ I ಅಭಿವೃದ್ಧಿಗೆ ಅನುದಾನ ತಂದಿರುವುದು ಕಾಂಗ್ರೆಸ್ಸಿಗರಿಗೆ ಹೊಟ್ಟೆಕಿಟ್ಟು – ವರ್ತೂರು ಪ್ರಕಾಶ್

PLACE YOUR AD HERE AT LOWEST PRICE

ಸರಕಾರದಿಂದ ಕೋಲಾರ ಅಭಿವೃದ್ದಿಗೆ ೧೦ ಕೋಟಿ ರೂ ಅನುದಾನ ತಂದಿರುವುದು ಕಾಂಗ್ರೆಸ್ ಪಕ್ಷದವರ ಕಣ್ಣು ಕುಕ್ಕುತ್ತಿದೆ. ಅನುದಾನ ತಂದು ಅಭಿವೃದ್ಧಿ ಮಾಡಲು ಹೊರಟಿರುವುದಕ್ಕೆ ಸಂತೋಷ ಪಡುವುದು ಬಿಟ್ಟು, ಹೊಟ್ಟೆ ಕಿಚ್ಚಿನಿಂದ ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ವರ್ತೂರು ಪ್ರಕಾಶ್ ಟೀಕಿಸಿದರು.

ಕೋಲಾರ ತಾಲೂಕಿನ ನರಸಾಪುರ ಹೋಬಳಿಯ ಬೆಳ್ಳೂರು, ಉದ್ದಪನಹಳ್ಳಿ, ಚಾಕಾರಸನಹಳ್ಳಿ, ಸೊಣ್ಣೇನಹಳ್ಳಿ,ದಾನಹಳ್ಳಿ,ತೋರಣಕಂಬ ಹಳ್ಳಿಗಳಲ್ಲಿ ಕಳೆದ ತಡ ರಾತ್ರಿಯವರೆಗೆ ಸ್ವಾಭಿಮಾನ ಸಂಕಲ್ಪ ನಡಿಗೆ ಕಾರ್ಯಕ್ರಮದ ಅಡಿಯಲ್ಲಿ ಹಳ್ಳಿಹಳ್ಳಿಗೂ ಸಂಚರಿಸಿ ಮತಯಾಚಿಸಿ ಅವರು ಮಾತನಾಡುತ್ತಿದ್ದರು.

ನನಗೆ ಅಧಿಕಾರವಿಲ್ಲ, ನಾನು ಶಾಸಕನೂ ಅಲ್ಲ, ಆದರೂ ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಗೆ ಮುಖ್ಯಮಂತ್ರಿಗಳ ಬಳಿ ಮನವಿ ಮಾಡಿ ೧೦ ಕೋಟಿ ರೂ.ಗಳನ್ನು ತಂದು ಅಭಿವೃದ್ದ ಕೆಲಸ ಮಾಡಿಸುತ್ತಿದ್ದೇನೆ ಇದಕ್ಕೂ ಸಹಿಸಲು ಶ್ರೀನಿವಾಸಗೌಡರಿಂದ ಸಾಧ್ಯವಾಗುತ್ತಿಲ್ಲ, ಶಾಸಕರಾಗಿ ಇವರು ಮಾಡದ್ದನ್ನು ನಾನು ಮಾಡುತ್ತಿದ್ದೇನೆ ಇದೇ ನಮಗೂ ಅವರಿಗೆ ಇರುವ ಸಾಮರ್ಥ್ಯ ಎಂದು ತಿಳಿಸಿದರು.

ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದೇ ಬರುತ್ತದೆ. ವಿಧಾನಸಭಾ ಕ್ಷೇತ್ರವನ್ನು ಇಡೀ ರಾಜ್ಯದಲ್ಲಿ ಮಾದರಿಯನ್ನಾಗಿ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಒಂದು ವೇಳೆ ಸಿದ್ದರಾಮಯ್ಯ ಇಲ್ಲಿ ಗೆದ್ದರೆ ಈಗಾಗಲೇ ಶ್ರೀನಿವಾಸ ಗೌಡರು ನಾನೇ ಶಾಸಕ ಎಂದು ಹೇಳಿಕೊಂಡಿದ್ದಾರೆ, ಕಳೆದ ಐದು ವರ್ಷಗಳಿಂದ ಶಾಸಕರಾಗಿ ಏನೂ ಮಾಡದ ಶ್ರೀನಿವಾಸಗೌಡರು, ಸಿದ್ದರಾಮಯ್ಯ ಹೆಸರಲ್ಲಿ ಕೋಲಾರದಲ್ಲಿ ಏನುತಾನೇ ಅಭಿವೃದ್ದಿ ಮಾಡಿಯಾರು ಎಂದು ಪ್ರಶ್ನಿಸಿದರು.

ಇದೇ ೫ ರಂದು ನರಸಾಪುರದಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಸಾವಿರಾರು ಕಾರ್ಯಕರ್ತರ ಸೇರ್ಪಡೆ ಕಾರ್ಯಕ್ರಮದ ಜೊತೆಗೆ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ಸಮಾವೇಶದಲ್ಲಿ ಜಿಲ್ಲೆಯ ಉಸ್ತುವಾರಿ ಸಚಿವರಾದ ಮುನಿರತ್ನ, ಸಂಸದ ಮುನಿಸ್ವಾಮಿ ಹಾಗೂ ಇನ್ನೂ ಅನೇಕ ಮುಖಂಡರು ಭಾಗವಹಿಸಲಿದ್ದು, ಸಿದ್ದರಾಮಯ್ಯರಿಗೆ ನನ್ನ ಶಕ್ತಿ ಪ್ರದರ್ಶನ ತೋರಿಸುವುದಾಗಿ ತಿಳಿಸಿದರು.

ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸೂಲೂರು ಆಂಜನಪ್ಪ ಮಾತನಾಡಿ, ಜೆಡಿಎಸ್ ಅಭ್ಯರ್ಥಿ ಸಿಎಂಆರ್ ಶ್ರೀನಾಥ್ ದಲಿತರನ್ನು ಮನೆ ಒಳಗಡೆ ಸೇರಿಸುವುದಿಲ್ಲ. ಇನ್ನು ನಿಮ್ಮ ಕಷ್ಟಗಳಿಗೆ ಸ್ಪಂದಿಸುತ್ತಾರಾ? ನಿಮ್ಮ ಕಷ್ಟ ಸುಖಗಳಿಗೆ ಸ್ಪಂದಿಸುವವರು, ಎಲ್ಲಾ ಜನಾಂಗದವರನ್ನು ತನ್ನ ಕುಟುಂಬದ ಸದಸ್ಯರು ಎಂದು ಭಾವಿಸುವ ವರ್ತೂರು ಪ್ರಕಾಶ್ ಮಾತ್ರ ಎಂದರು.

ಮುಖಂಡರುಗಳಾದ ಬೆಗ್ಲಿ ಸೂರ್ಯ ಪ್ರಕಾಶ್, ಜಿಪಂ ಮಾಜಿ ಅಧ್ಯಕ್ಷ ಸಿ.ಎಸ್ .ವೆಂಕಟೇಶ್, ಮಾಜಿ ಸದಸ್ಯರುಗಳಾದ ರೂಪಶ್ರೀ ಮಂಜುನಾಥ್, ಅರುಣ್ ಪ್ರಸಾದ್,ಬಂಕ್ ಮಂಜುನಾಥ್, ತಾಲೂಕು ಅಧ್ಯಕ್ಷ ಸಿಡಿ ರಾಮಚಂದ್ರಗೌಡ, ಕುರುಬರ ಸಂಘದ ಅಧ್ಯಕ್ಷ ತಂಬಳ್ಳಿ ಮುನಿಯಪ್ಪ, ತಾಲೂಕು ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ವೇಮಗಲ್ ನವೀನ್ ಕುಮಾರ್,ಮುಖಂಡ ಮುರಳಿ, ಚಾಕರಾಸನಳ್ಳಿ ಡಿಎನ್‌ಡಿ ದೇವರಾಜ್, ತಾಪಂ ಮಾಜಿ ಸದಸ್ಯ ಮಂಜುನಾಥ, ಮುನಿ ಚಿನ್ನಪ್ಪ ಮತ್ತಿತರರಿದ್ದರು.

ಸುದ್ದಿ ಓದಿ ಹಂಚಿ:

 

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!