• Sat. May 4th, 2024

PLACE YOUR AD HERE AT LOWEST PRICE

ಕೆಜಿಎಫ್:ಬಿಜೆಪಿ ಬೆಂಬಲಿತ ಕ್ಯಾಸಂಬಳ್ಳಿ ಗ್ರಾಮ ಪಂಚಾಯ್ತಿ ಸದಸ್ಯೆ ಶ್ಯಾಮಲಮ್ಮ, ನರೇಂದ್ರರೆಡ್ಡಿ, ಜಯರಾಮರೆಡ್ಡಿ, ಅಶ್ವಿನಿ ಶ್ರೀನಿವಾಸ್, ರವಿ ಹಾಗೂ ಬೆಂಬಲಿಗರ ಬಿಜೆಪಿ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಶಾಸಕಿ ಡಾ.ರೂಪಕಲಾ ಎಂ ಶಶಿಧರ್ ರ ಸಮ್ಮುಖದಲ್ಲಿ ಕಾಂಗ್ರೇಸ್ ಪಕ್ಷಕ್ಕೆ ಸೇರ್ಪಡೆಯಾದರು.

ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯ್ತಿ ಸದಸ್ಯರನ್ನು ತಾಲ್ಲೂಕಿನ ಕ್ಯಾಸಂಬಳ್ಳಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಂಡು ಶಾಸಕಿ ಡಾ.ರೂಪಕಲಾ ಎಂ ಶಶಿಧರ್ ಮಾತನಾಡಿ, ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತಗಳನ್ನು ನಂಬಿ ಬಿಜೆಪಿ ಬೆಂಬಲಿತ ಗ್ರಾಪಂ ಸದಸ್ಯರು ಹಾಗೂ ಇತರರು ಬಿಜೆಪಿ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಬರುತ್ತಿದ್ದು ಇದರಿಂದ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಶಕ್ತಿ ಮತ್ತಷ್ಟು ಬೆಳೆದಿದೆ ಎಂದರು.

ರಾಜ್ಯದಲ್ಲಿ ಇತ್ತೀಚ್ಚಿನ ದಿನಗಳಲ್ಲಿ ನಡೆಯುತ್ತಿರುವ ಘಟನೆಗಳನ್ನು ಕಂಡಂತಹ ಸಾಮಾನ್ಯ ನಾಗರೀಕರು ಬಿಜೆಪಿ ಪಕ್ಷದಿಂದ ವಿಮುಖರಾಗಿರುವುದು ಕಂಡು ಬಂದಿದ್ದು ಅವರುಗಳು ಕಾಂಗ್ರೆಸ್ ಪಕ್ಷದತ್ತ ಮರಳುತ್ತಿದ್ದಾರೆ. ನಾನು ಕ್ಷೇತ್ರದಲ್ಲಿ ಶಾಸಕಿಯಾದ ನಂತರ ಡಿಸಿಸಿ ಬ್ಯಾಂಕ್ ಅಧ್ಯಕ್ಷರ ಸಹಕಾರದಿಂದ ಕ್ಷೇತ್ರದಲ್ಲಿನ ಸಾವಿರಾರು ಸ್ರೀ ಶಕ್ತಿ ಸಂಘಗಳನ್ನು ಪ್ರಾರಂಭಿಸಲು ಪ್ರರೇಣೆ ನೀಡಿದ್ದೇನೆ.

ಸಾವಿರಾರು ಸ್ರೀಶಕ್ತಿ ಸಂಘಗಳಲ್ಲಿ ಮಹಿಳೆಯರು ಸದಸ್ಯತ್ವ ಪಡೆದುಕೊಂಡಿದ್ದು, ಅವರಿಗೆ  ಡಿಸಿಸಿ ಬ್ಯಾಂಕ್ ಮೂಲಕ ಶೂನ್ಯ ಬಡ್ಡಿ ದರದಡಿ ಸಾಲವನ್ನು ವಿತರಿಸಲಾಗಿದೆ. ಇದರಿಂದ ಸಾವಿರಾರು ಕುಟುಂಭಗಳು ಆರ್ಥಿಕವಾಗಿ ಚೇತರಿಕೆ ಕಂಡಿವೆ ಮತ್ತು 3-4 ಬಾರಿ ಸಾಲವನ್ನು ಪಡೆದಿದ್ದಾರೆ ಅದೇ ರೀತಿ ರೈತರಿಗೂ ಸಾಲವನ್ನು ನೀಡಲಾಗಿದೆ ಮತ್ತು ರೈತರು ಕೃಷಿ ಕ್ಷೇತ್ರದಲ್ಲಿ ಪ್ರಗತಿ ಕಂಡಿದ್ದಾರೆ ಎಂದರು.

ಈ ಭಾಗದ ರೈತರು ವಿದ್ಯುತ್ ಸಮಸ್ಯೆಯನ್ನು ಎದುರಿಸುತ್ತಿದ್ದರು ಈ ಹಿನ್ನಲೆಯಲ್ಲಿ ಸಬ್ ಸ್ಟೇಷನ್ ಪ್ರಾರಂಭಿಸಲಾಗಿದೆ ಇದರಿಂದ ವಿದ್ಯುತ್ ಸಮಸ್ಯೆ ಸಹ ಬಗೆಹರಿದಿದೆ ಮತ್ತು ಗ್ರಾಮಗಳಿಗೆ ಸಂರ್ಪಕ ರಸ್ತೆ ಕಾಮಗಾರಿಗಳು ಸಹ ಪೂರ್ಣಗೊಳಿಸಲಾಗಿದೆ. ಪ್ರತಿಯೋಂದು ಗ್ರಾಮದಲ್ಲೂ ಶುದ್ಧ ಕುಡಿಯುವ ಘಟಕಗಳನ್ನು ಪ್ರಾರಂಭಿಸಲಾಗಿದೆ ಎಂದು ಹೇಳಿದರು.

ಯುಗಾದಿ ಹಬ್ಬದ ಹಿನ್ನಲೆಯಲ್ಲಿ ಪ್ರತಿಯೊಂದು ಕುಟುಂಭಗಳಿಗೆ ವಿಶೇಷ ಗಿಫ್ಟ್‍ಗಳನ್ನು ನೀಡಲುಚಿಂತನೆ ನಡೆಸಲಾಗುತ್ತಿದ್ದು ಶೀಘ್ರದಲ್ಲೇ ಕ್ಷೇತ್ರದ ಜನರ ಮನೆ ಭಾಗಿಲಿಗೆ ತಲುಪಲಿದೆ ಎಂದು ಹೇಳಿದರು.

ಈ ವೇಳೆ ಕೋಲಾರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದೇಗೌಡ, ಪಿಎಲ್‍ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ವೆಂಕಟಕೃಷ್ಣಾರೆಡ್ಡಿ, ಜಿಪಂ ಮಾಜಿ ಸದಸ್ಯ ಅಪ್ಪಿ ವೆಂಕಟರಾಮರೆಡ್ಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಕೃಷ್ಣರೆಡ್ಡಿ, ಎಪಿಎಂಸಿ ಅಧ್ಯಕ್ಷ ವಿಜಯರಾಘವರೆಡ್ಡಿ, ಮುಖಂಡರಾದ ಆನಂದಮೂರ್ತಿ, ಎನ್.ಟಿಆರ್ ಶ್ರೀನಿವಾಸರೆಡ್ಡಿ, ಹಿರಿಯ ಮುಖಂಡರಾದ ಪ್ರಸಾದ್ ರೆಡ್ಡಿ, ಬಳುವನಹಳ್ಳಿ ಪ್ರಕಾಶ್ ರೆಡ್ಡಿ, ಗಂಗಿರೆಡ್ಡಿ, ಕ್ಯಾಸಂಬಳ್ಳಿ ಗುರುವಾರೆಡ್ಡಿ, ಕೆಇಬಿ ವೆಂಕಟೇಶ್, ಒಬಿಸಿ ಮುನಿಸ್ವಾಮಿ, ಸುರೇಂದ್ರ ಗೌಡ, ಕಾರಿ ಪ್ರಸನ್ನ, ಪದ್ಮನಾಭ ರೆಡ್ಡಿ, ಬುಜ್ಜು, ಯುವ ಮುಖಂಡ ವಿಕ್ಕಿ ರೆಡ್ಡಿ, ಶಿವಾರೆಡ್ಡಿ, ಶ್ರೀರಾಮ್ ರೆಡ್ಡಿ, ಮಂಜುನಾಥ್ ರೆಡ್ಡಿ, ರಾಮೇಗೌಡ, ಅಸೀನ್ ಸಾಬ್, ಗೋಪಾಲ್, ವೆಂಕಟಕೃಷ್ಣ, ಶ್ರೀನಿವಾಸ್, ಶಂಕರ್, ಮನೋಜ್, ಸಂತೋಷ್, ಅರುಣ್ ಮೊಲಾದವರಿದ್ದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!