• Sat. May 4th, 2024

ಕೋಲಾರ I ಸಿದ್ದರಾಮಯ್ಯ ದಲಿತ ವಿರೋಧಿ ಅಲ್ಲ ಹೇಳಿಕೆ ನೀಡಿದ್ದಕ್ಕೆ ಸಂಸದ ಮುನಿಸ್ವಾಮಿಯಿಂದ ಕಿಡ್ನಾಪ್ ಕೇಸು-ದಲಿತ ಮುಖಂಡ ಸಂದೇಶ್ ಆತ್ಮಹತ್ಯೆಗೆ ಯತ್ನ

PLACE YOUR AD HERE AT LOWEST PRICE

ಸಿದ್ದರಾಮಯ್ಯ ದಲಿತ ವಿರೋಧಿ ಅಲ್ಲ ಎಂಬ ಹೇಳಿಕೆ ನೀಡಿದ ಕಾರಣದಿಂದ ಬಿಜೆಪಿ ಸಂಸದ ಮುನಿಸ್ವಾಮಿ ತಮ್ಮ ಮೇಲೆ ಸುಳ್ಳು ಕಿಡ್ನಾಪ್ ಕೇಸು ದಾಖಲಾಗುವಂತೆ ಮಾಡಿ ಜೈಲಿಗೆ ಕಳುಹಿಸಿದ್ದರು, ಈ ಅಪಮಾನ ತಾಳಲಾರದೆ ಆತ್ಮಹತ್ಯೆಗೆ ಶರಣಾಗುತ್ತಿದ್ದೇನೆ ಎಂದು ಅಂಬೇಡ್ಕರ್ ಸೇವಾ ಸಮಿತಿ ಸಂಸ್ಥಾಪಕ ಅಧ್ಯಕ್ಷ ಕೆ.ಎಂ.ಸಂದೇಶ್ ತನ್ನ ಡೆತ್ ನೋಟ್‌ನಲ್ಲಿ ಬರೆದು ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ.

ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಲು ಪ್ರಯತ್ನಿಸಿ ನರಳಾಡುತ್ತಿದ್ದ ಸಂದೇಶ್‌ರನ್ನು ಅವರ ಸಹವರ್ತಿಗಳು ಸಕಾಲದಲ್ಲಿ ಗಮನಿಸಿಕೊಂಡು ಜಾಲಪ್ಪ ಆಸ್ಪತ್ರೆಗೆ ಸೇರಿಸಿ ತುರ್ತು ಚಿಕಿತ್ಸೆ ಸಿಗುವಂತೆ ಮಾಡಿದ್ದು, ವೈದ್ಯರು ಚಿಕಿತ್ಸೆ ನೀಡಿ ೨೪ ಗಂಟೆಗಳ ಕಾಲ ತುರ್ತು ನಿಗಾ ಕೊಠಡಿಯಲ್ಲಿ ಚಿಕಿತ್ಸೆ ಮುಂದುವರೆಸಲು ಸಲಹೆ ನೀಡಿದ್ದಾರೆ.

ಕೆಲವು ದಿನಗಳ ಹಿಂದೆ ದಲಿತ ಯುವತಿಗೆ ಆಗಿರುವ ಅನ್ಯಾಯಕ್ಕೆ ನ್ಯಾಯ ಕೊಡಿಸಲು ಮುಂದಾಗಿದ್ದ ಕೆ.ಎಂ.ಸಂದೇಶ್‌ರ ಮೇಲೆ ಯುವಕನ ಅಪಹರಣ ಪ್ರಕರಣವನ್ನು ದಾಖಲಿಸಿ ಜೈಲಿಗೆ ಕಳುಹಿಸಲಾಗಿತ್ತು. ಇದು ಸಾಲದ್ದಕ್ಕೆ ಸಂದೇಶ್‌ರ ಮೇಲೆ ವಿವಿಧ ರೋಲ್‌ಕಾಲ್ ಆರೋಪಗಳನ್ನು ಮಾಡಲಾಗಿತ್ತು.

ಅಪಹರಣಕ್ಕೊಳಗಾಗಿದ್ದ ಎಂದು ಹೇಳಲ್ಪಟ್ಟ ಯುವಕ ಸಂದೇಶ್‌ರಿಂದ ತಮ್ಮ ಅಪಹರಣವಾಗಿರಲಿಲ್ಲ ಎಂಬ ಹೇಳಿಕೆ ಮೇರೆಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು.

ನ್ಯಾಯಾಲಯ ಜಾಮೀನು ಪಡೆದು ಹೊರ ಬಂದಾದ ಮೇಲೂ ತಾವು ಮಾಡದ ತಪ್ಪಿಗೆ ಆಗಿರುವ ಶಿಕ್ಷೆಯಿಂದ ಅಪಮಾನ ತಾಳಲಾರದೆ ತಾವು ಆತ್ಮಹತ್ಯೆಗೆ ಶರಣಾಗಲು ನಿರ್ಧರಿಸುತ್ತಿರುವುದಾಗಿ ಸಂದೇಶ್ ಬರೆದಿರುವ ಎರಡು ಪುಟಗಳ ಡೆತ್ ನೋಟ್‌ನಲ್ಲಿ ವಿವರಿಸಿದ್ದಾರೆ.

ತಾವು ಯಾವುದೇ ಅಧಿಕಾರಿ ಮತ್ತು ಜನರಿಂದ ರೋಲ್‌ಕಾಲ್ ಮಾಡಿಲ್ಲ, ಈಗಲೂ ಬಾಡಿಗೆ ಮನೆಯಲ್ಲಿಯೇ ವಾಸವಾಗಿದ್ದು, ಒಂದು ಗುಂಟೆ ಜಮೀನು ಇಲ್ಲ, ಒಂದು ನಿವೇಶನವೂ ಇಲ್ಲ, ನನಗೆ ಯಾವುದೇಕೆಟ್ಟ ಹವ್ಯಾಸಗಳು ಇಲ್ಲ ಎಂದು ಸ್ಪಷ್ಟಪಡಿಸಿರುವ ಸಂದೇಶ್, ನನಗಿದ್ದ ಒಂದೇ ಹವ್ಯಾಸ ಎಂದರೆ ಯಾರೇ ಫೋನ್ ಮಾಡಿ ಸಮಸ್ಯೆ ಎಂದು ಹೇಳಿದರೆ ತಕ್ಷಣಕ್ಕೆ ಅಲ್ಲಿಗೆ ಹೋಗಿ ಅವರಿಗೆ ನ್ಯಾಯ ಕೊಡಿಸುವ ಮಾಡುತ್ತಿದ್ದೆ, ಸ್ವಾಭಿಮಾನದಿಂದ ಬದುಕುತ್ತಿದ್ದೆ ಆದರೆ ಮಾಡದ ತಪ್ಪಿಗೆ ಸಮಾಜದಲ್ಲಿ ತಲೆ ತಗ್ಗಿಸುವಂತಾಗಿದ್ದು ತಮಗೆ ಅವಮಾನವಾಗಿದೆ. ಆದ್ದರಿಂದ ನನಗೆ ಸಾವು ಬೇಕಾಗಿದೆಯೆಂದು ಅವರು ಡೆತ್ ನೋಟ್‌ನಲ್ಲಿ ಬರೆದಿದ್ದಾರೆ.

ಸಂದೇಶ್ ಇತ್ತೀಚಿನ ಉಳ್ಳೇರಹಳ್ಳಿ ದೇವರದಂಡ ಮುಟ್ಟಿದ ಕುಟುಂಬಕ್ಕೆ ಬಹಿಷ್ಕಾರದ ಶಿಕ್ಷೆ ವಿಧಿಸಿದ ಪ್ರಕರಣದಲ್ಲಿ ಆ ಕುಟುಂಬಕ್ಕೆ ಬೆಂಬಲವಾಗಿ ನಿಂತಿದ್ದು ಕೆಲವರ ಕಣ್ಣು ಕೆಂಪಾಗಿಸಿತ್ತು. ಅಂತರ್ಜಾತಿ ವಿವಾಹವಾಗುವ ಜೋಡಿಗಳಿಗೆ ನೈತಿಕ ಬೆಂಬಲ ನೀಡುತ್ತಿದ್ದುದು, ನೊಂದ ದಲಿತರ ಪರವಾಗಿ ನಿಲ್ಲುತ್ತಿದ್ದ ಸಂದೇಶ್ ಆತ್ಮಹತ್ಯೆಗೆ ಪ್ರಯತ್ನಿಸಿದ ಸುದ್ದಿ ಮತ್ತು ಅವರ ಡೆತ್ ನೋಟ್ ಸಾಮಾಜಿಕ ಜಾಲತಾಣಗಲ್ಲಿ ವೈರಲ್ ಆಗಿ ಗಮನ ಸೆಳೆಯುತ್ತಿವೆ.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!