• Thu. Mar 28th, 2024

PLACE YOUR AD HERE AT LOWEST PRICE

ಬಂಗಾರಪೇಟೆ:ಬಿಜೆಪಿ ಮತ್ತು ಕಾಂಗ್ರೆಸ್ ನವರ ಚಿತ್ರಹಿಂಸೆಯಿಂದಾಗಿ ಕುಮಾರಣ್ಣ ಆಡಳಿತವನ್ನು ನಡೆಸಲು ಸಾಧ್ಯವಾಗಲಿಲ್ಲ, ಜನಪ್ರಿಯ ಕಾರ್ಯಕ್ರಮಗಳನ್ನು ನೀಡುತ್ತಿದ್ದದ್ದನ್ನು ಕಂಡು ಹೆಚ್.ಡಿ.ಕೆ ರಾಜ್ಯದಲ್ಲಿ ಹೆಚ್ಚು ಪ್ರಖ್ಯಾತಿ ಪಡೆಯುತ್ತಾರೆಂಬ ಹತಾಶೆಯಿಂದ ಅವರನ್ನು ಅಧಿಕಾರದಿಂದ ಕೆಳಗಿಳಿಸಲಾಯಿತು ಎಂದು ಜೆಡಿಎಸ್ ಅಭ್ಯರ್ಥಿ ಮಲ್ಲೇಶ್ ಬಾಭು ಹೇಳಿದರು.

ತಾಲೂಕಿನ ಕಾಮಸಮುದ್ರ ಹೋಬಳಿ ಕೇಂದ್ರದಲ್ಲಿ ಜೆಡಿಎಸ್ ಹೋಬಳಿ ಮಟ್ಟದ ಬೂತ್ ಮಟ್ಟದ ಕಾರ್ಯಕರ್ತರು ಮತ್ತು ಮುಖಂಡರ ಸಮಾವೇಶವನ್ನು ಉದ್ದೇಶಿಸಿ ಅವರು ಮಾತನಾಡಿ, ಕಾಮಸಮುದ್ರ ಹೋಬಳಿ ವ್ಯಾಪ್ತಿಯಲ್ಲಿ ನಡೆದ ಮನೆ ಮನೆಗೆ ಪಂಚರತ್ನ ಯೋಜನೆ ಕಾರ್ಯಕ್ರಮಕ್ಕೆ ಅತ್ಯಂತ ಉತ್ತಮ ಸ್ಪಂದನೆ ಮತ್ತು ಸಹಕಾರವನ್ನು ನೀಡಿದ ತಮಗೆಲ್ಲಾ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.

ನಿಮ್ಮ ಪ್ರಮುಖ ಜವಾಬ್ದಾರಿ ಇಂದಿನಿಂದ ಶುರುವಾಗುತ್ತದೆ. ಇಲ್ಲಿ ಸೇರಿರುವಂತಹ ಎಲ್ಲಾ ಬೂತ್ ಮುಖಂಡರು ಕಾರ್ಯಕರ್ತರು ಇಡೀ ಕ್ಷೇತ್ರದಲ್ಲಿ ಪ್ರತಿಯೊಂದು ಬೂತ್ ಗಳಲ್ಲಿ ಜೆಡಿಎಸ್ ಪಕ್ಷ ಗೆದ್ದರೆ ಪಂಚರತ್ನ ಯೋಜನೆಯ ಜಾರಿಯಿಂದಾಗುವ ಅನುಕೂಲತೆಗಳ ಬಗ್ಗೆ ಜನತೆಗೆ ತಿಳಿಸಿ ಪಕ್ಷವನ್ನು ಗೆಲ್ಲಿಸಲು ದುಡಿಯಬೇಕು ಎಂದರು.

ಪ್ರತಿಯೊಬ್ಬರು ಇಂದಿನಿಂದಲೇ ತಮ್ಮ ತಮ್ಮ ಬೂತ್  ವ್ಯಾಪ್ತಿಗೆ ಬರುವ ಪ್ರತಿ ಮನೆಗೂ ಭೇಟಿ ನೀಡಿ ಪಂಚರತ್ನ ಯೋಜನೆಯ ಮಹತ್ವವನ್ನು ಮತದಾರರಿಗೆ ಅರ್ಥೈಸಿ ಪ್ರೀತಿ ಮತದಾರರ ಮನಸ್ಸು ಗೆಲ್ಲುವ ಕೆಲಸ ಮಾಡಬೇಕಿದೆ. ಈ ಕಾರ್ಯ ಸಿದ್ಧಿಯಾದಾಗಲೇ ನಾವು ಕ್ಷೇತ್ರದಲ್ಲಿ ಜೆಡಿಎಸ್ ಶಾಸಕರನ್ನು ಗೆಲ್ಲಿಸಿ ರಾಜ್ಯದಲ್ಲಿ ಹೆಚ್.ಡಿ.ಕುಮಾರಸ್ವಾಮಿರನ್ನು ಮುಖ್ಯಮಂತ್ರಿ ಮಾಡಲು ಸಾಧ್ಯ ಎಂದರು‌.

ಜೆಡಿಎಸ್ ತಾಲ್ಲೂಕು ಅಧ್ಯಕ್ಷರಾದ ಎಂ.ಎಂ.ಮುನಿರಾಜು ಮಾತನಾಡಿ ರಾಜ್ಯದಲ್ಲಿ ಅಧಿಕಾರ ನಡೆಸಿದ ಎರಡೂ ರಾಷ್ಟ್ರೀಯ ಪಕ್ಷಗಳು ಭ್ರಷ್ಟಾಚಾರ ಮತ್ತು ದುರಾಡಳಿತ ನಡೆಸಿವೆ. ಕಾಂಗ್ರೆಸ್ ಮತ್ತು ಬಿಜೆಪಿ ಯಾವುದೇ ಸರ್ಕಾರಗಳು ಕೂಡ ಬಲಹೀನರಿಗೆ, ಬಡವರಿಗೆ, ಮಹಿಳೆಯರಿಗೆ, ದೀನ ದಲಿತರಿಗೆ, ಶಕ್ತಿ ತುಂಬುವ ಕೆಲಸ ಮಾಡಲಿಲ್ಲ ಎಂದು ಆರೋಪ ಮಾಡಿದರು.

ಕುಮಾರಣ್ಣನವರು ಎರಡು ಬಾರಿ ಮುಖ್ಯಮಂತ್ರಿಗಳಾಗಿ ವೃದ್ಧಾಪ್ಯ ವೇತನ, ಅಂಗವಿಕಲರ ವೇತನ, ವಿಧವಾ ವೇತನಗಳನ್ನು ಹೆಚ್ಚಳ ಮಾಡಿದ್ದಾರೆ. ಈ ಬಾರಿ ಮುಖ್ಯಮಂತ್ರಿಯಾದರೆ ವೃದ್ಧಾಪ್ಯ ವೇತನ 5000 ರೂಗಳಿಗೆ ಹೆಚ್ಚಿಸುವ ಭರವಸೆ ನೀಡಿದ್ದಾರೆ. ಹಾಗೆಯೇ ಹಾಲಿನ  ಪ್ರೋತ್ಸಾಹ ಧನ ಹೆಚ್ಚಳ ಮತ್ತು ‌ಸ್ತ್ರೀಶಕ್ತಿ ಸಂಘಗಳ ಸಂಪೂರ್ಣ ಸಾಲಮನ್ನಾ ಮಾಡುವ ಭರವಸೆಯನ್ನು ಸಹ ನೀಡಿದ್ದಾರೆ.

ಪಂಚರತ್ನ ಯೋಜನೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ, ವಿದ್ಯಾವಂತ ಯುವಕರಿಗೆ ಅನುಕೂಲಗಳು,  ಮಹಿಳಾ ಸಬಲೀಕರಣ, ರೈತರಿಗೆ ಮತ್ತು ಬಡತನ ನಿವಾರಣೆಗೆ ಸಾಕಷ್ಟು ಯೋಜನೆಗಳನ್ನು ರೂಪಿಸಿಕೊಂಡಿದ್ದಾರೆ. ಅವರು ಈ ಬಾರಿ ಮುಖ್ಯಮಂತ್ರಿಗಳಾಗುವುದು ಶತಸಿದ್ಧ. 2023ರ ಚುನಾವಣೆಯ ನಂತರ ಕುಮಾರಣ್ಣನವರ ಆಡಳಿತದಿಂದ ಕರ್ನಾಟಕವು ಸ್ವರ್ಗವಾಗುತ್ತದೆ ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಕೀಲುಕೊಪ್ಪ ಯಲ್ಲಪ್ಪ, ಕಾರ್ಯಾಧ್ಯಕ್ಷರಾದ ಶ್ರೀನಿವಾಸ ಮೂರ್ತಿ, ರಾಜೇಂದ್ರ ಪ್ರಸಾದ್, ತಾಲ್ಲೂಕು ಸಂಘಟನಾ ಕಾರ್ಯದರ್ಶಿ ಭಾಸ್ಕರ್ ಗೌಡ, ಸಂಪಂಗಿ ಗೌಡ, ಇರಗಸಂದ್ರ ವಿಶ್ವನಾಥ್, ಶ್ರೀರಾಮ್, ಪುರಂ ಸತೀಶ್, ಸೀಮೇಗೌಡ, ಶ್ರೀನಿವಾಸ್ ಮೊದಲಾದವರಿದ್ದರು.

Leave a Reply

Your email address will not be published. Required fields are marked *

You missed

error: Content is protected !!