• Mon. Apr 29th, 2024

ಕೋಲಾರ I ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಿರುವ ಪ್ರಬಲ ಕಾನೂನುಗಳ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ-ನ್ಯಾಯಾಧೀಶ ಸುನೀಲ ಎಸ್.ಹೊಸಮನಿ

PLACE YOUR AD HERE AT LOWEST PRICE

ಮಹಿಳೆಯರ ಮೇಲಿನ ದೌರ್ಜನ್ಯ ಸೇರಿದಂತೆ ಮಹಿಳಾ ವಿರೋಧಿ ಕೃತ್ಯಗಳನ್ನು ಸಮರ್ಪಕವಾಗಿ ತಡೆಗಟ್ಟಲು ಮತ್ತು ಮಹಿಳೆಯರ ಹಿತಾಸಕ್ತಿ ಕಾಪಾಡಲು ಬಂದಿರುವ ಹೋಸ ಕಾನೂನುಗಳ ಕುರಿತು ಮಹಿಳೆಯರಿಗೆ ಅರಿವು ಮೂಡಿಸುವ ಅಗತ್ಯವಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಸುನೀಲ ಎಸ್ ಹೊಸಮನಿ ಅಭಿಪ್ರಾಯಪಟ್ಟರು.

ಕೋಲಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾರ್ಮಿಕ ಇಲಾಖೆ ಸಹಯೋಗದೊಂದಿಗೆ ಸಿಲ್ವರ್ ಕ್ರಸ್ಟ್ ಗಾರ್ಮೆಂಟ್ಸ್ ಕಾರ್ಖಾನೆಯ ಮಹಿಳಾ ಕಾರ್ಮಿಕರಿಗೆ ಅಂತರರಾಷ್ಟ್ರಿಯ ಮಹಿಳಾ ದಿನಾಚರಣೆಯ ವಾರದ ಕಾರ್ಯಕ್ರಮವಾಗಿ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಮಹಿಳೆಯರ ವಿರುದ್ದ ಸಮಾಜದಲ್ಲಿ ನಡೆಯುತ್ತಿರುವ ಅತ್ಯಾಚಾರ, ವರದಕ್ಷಿಣೆ ಕೀರುಕುಳ, ಕೌಟುಂಬಿಕ ಕೌರ್ಯ, ಉದ್ಯೊಗ ಸ್ಥಳಗಳಲ್ಲಿ ಲೈಂಗಿಕ ಕೀರುಕುಳ ಸಾಮಾಜಿಕ ಜಾಲತಾಣಗಳಲಿ ಮಹಿಳೆಯರ ಶೋಷಣೆ ಈ ಎಲ್ಲವನ್ನು ತಡೆಯಲು ಕಾನೂನಿನ ಶಕ್ತಿ ಇದೆ, ಇದರ ಕುರಿತು ಅರಿತಾಗ ಶೋಷಣೆಯಿಂದ ಪಾರಾಗಬಹುದು ಎಂದು ಕಿವಿಮಾತು ಹೇಳಿದರು.

ಸಾಕ್ಷರತೆ ಹೆಚ್ಚಿದಂತೆಯೂ ಮಹಿಳೆಯರಮೇಲೆ ದೌರ್ಜನ್ಯ ಕಡಿಮೆಯಾಗಿಲ್ಲ, ಇದನ್ನು ತಡೆಯಲು ಸರ್ಕಾರ ಅನೇಕ ಕಠಿಣ ಕಾನೂನು ಮಾಡಿದೆ ಇದರ ನಡುವೆಯೂ ವರದಕ್ಷಿಣೆ ಕಿರುಕುಳದಂತಹ ಅಮಾನವೀಯ ಮನಸ್ಥಿತಿ ಬದಲಾಗಿಲ್ಲ ಎಂದರು.
ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ರಘುಪತಿಗೌಡ ಮಾತನಾಡಿ, ನಮ್ಮ ಸಂವಿಧಾನ ಮಹಿಳೆಯರಿಗೂ ಪುರುಷರಿಗೂ ಸಮಾನಹಕ್ಕುಗಳನ್ನು ನೀಡಿ ಮಹಿಳೆಯರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಹೆಣ್ಣುಮಕ್ಕಳಿಗೆ ಸಮಾನ ಆಸ್ತಿ ಹಕ್ಕು ಸಮಾನತೆಯತ್ತ ತಿಳಿಸಿದರು.

ಜಿಲ್ಲಾ ಕಾರ್ಮಿಕ ಅಕಾರಿ ಶಬನಾಅಜ್ಮಿ, ಮಹಿಳಾ ಕಾರ್ಮಿಕರಿಗೆ ಕಾನೂನಿನ ಅಡಿಯಲ್ಲಿ ದೊರಕಬಹುದಾದ ಕನಿಷ್ಠ ವೇತನ ನಿಯಮ ಕೆಲಸಕ್ಕೆ ಸಮಾನ ವೇತನ ಮತ್ತು ಕಾರ್ಖಾನೆಗಳಲ್ಲಿ ಅತ್ಯಾವಶ್ಯಕವಾಗಿ ಮಹಿಳಾ ಕಾರ್ಮಿಕರರಿಗೆ ಒದಗಿಸಬೇಕಾಗಿರುವ ಸೌಲಭ್ಯಗಳ ಬಗ್ಗೆ ಮನವರಿಕೆ ಮಾಡಿಕೊಟ್ಟರು.

ವಕೀಲ ಕೆ. ಆರ್. ಧನರಾಜ್ ಉಪನ್ಯಾಸ ನೀಡಿ, ಮಹಿಳಾ ಕಾರ್ಮಿಕರಿಗೆ ಸಂಬಂಸಿರುವ ಕಾನೂನುಗಳ ಬಗ್ಗೆ ಮನವರಿಕೆ ಮಾಡಿಕೊಡುವ ಮೂಲಕ ಕಾರ್ಮಿಕ ಕಾನೂನುಗಳ ಸೌಲಭ್ಯಗಳನ್ನು ಪಡೆದುಕೂಳ್ಳುವ ಬಗ್ಗೆ ಕಾರ್ಯಕ್ರಮದಲ್ಲಿ ತಿಳಿಸಿಕೊಟ್ಟರು.
ಮಹಿಳೆರ ಶೋಷಣೆ ತಡೆಗೆ ಸರ್ಕಾರ ಜಾರಿಗೆ ತಂದಿರುವ ಮಹಿಳಾ ದೌರ್ಜನ್ಯ ವಿರೋ ಕಾಯಿದೆ ಬಲವಾಗಿದೆ, ವರದಕ್ಷಿಣೆ ಕಿರುಕುಳದಂತಹ ಪ್ರಕರಣಗಳಲ್ಲಿ ನ್ಯಾಯಾಲಯ ಕಠಿಣ ಶಿಕ್ಷೆ ವಿಸಲು ಅವಕಾಶವೂ ಇದೆ ಎಂದರು.

ಕಾರ್ಖಾನೆಯ ಮಾನವ ಸಂಪನ್ಮೂಲ ಅಭಿವೃದ್ದಿ ವ್ಯವಸ್ಥಾಪಕ ಉಮೇಶ್ ಅದ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕೋಲಾರ ವಿಭಾಗದ ಕಾರ್ಮಿಕ ನಿರೀಕ್ಷಕಿ ರಾಜೇಶ್ವರಿ ಮತ್ತಿತರರು ಉಪಸ್ಥಿತರಿದ್ದರು.

 

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!