• Sun. Apr 28th, 2024

ರಾಹುಲ್‌ಗಾಂಧಿ ಲೋಕಸಭೆ ಸದಸ್ಯತ್ವ ರದ್ದು ಖಂಡಿಸಿ ಇಂದು ಗಾಂಧೀವನದಲ್ಲಿ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ , ಏಪ್ರಿಲ್ ೫ರಂದು ಸತ್ಯಮೇವ ಜಯತೇ ಆಂದೋಲನ , ಒಂದು ಲಕ್ಷ ಜನ ಸೇರುವ ನಿರೀಕ್ಷೆ, ಕೋಲಾರದಲ್ಲಿ ಸಿದ್ದತೆಗೊಳ್ಳುತ್ತಿರುವ ಬೃಹತ್ ಮೈದಾನ.

PLACE YOUR AD HERE AT LOWEST PRICE

ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಸಂವಿಧಾನದ ಹಕ್ಕುಗಳನ್ನು ದಮನ ಮಾಡಲು ಹೊರಟಿದ್ದು, ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ನಿರ್ಮಾಣ ಮಾಡಿದೆ ಎಂದು ವಿಧಾನ ಪರಿಷತ್ ಸದಸ್ಯ ನಸೀರ್ ಅಹಮದ್ ಅಕ್ರೋಶ ವ್ಯಕ್ತಪಡಿಸಿದ್ದಾರೆ.

ಕೋಲಾರ ನಗರದ ಗಾಂಧೀವನದಲ್ಲಿ ಗುರುವಾರ ಕಾಂಗ್ರೆಸ್ ಪಕ್ಷದ ವತಿಯಿಂದ ರಾಹುಲ್‌ಗಾಂಧಿಯವರನ್ನು ಲೋಕಸಭೆ ಸದಸ್ಯತ್ವದಿಂದ ಅನರ್ಹ ಗೊಳಿಸಿರುವುದನ್ನು ಖಂಡಿಸಿ ಹಮ್ಮಿಕೊಂಡಿದ್ದ ಕಪ್ಪುಪಟ್ಟಿ ಧರಿಸಿ ಮೌನ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಇಂದು ದೇಶದಲ್ಲಿ ಜನ್ರು ಮಾತನಾಡುವುದಕ್ಕೂ ಹಕ್ಕಿಲ್ಲವಾಗಿದೆ.

ಕೇಂದ್ರ ಸರ್ಕಾರದ ನಡೆಯಿಂದ ದೇಶದಲ್ಲಿ ಇಂದು ಅಘೋಷಿತ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ. ಈ ನಿಟ್ಟಿನಲ್ಲಿ ಏಪ್ರಿಲ್ ೫ರಂದು ಕೋಲಾರದಲ್ಲಿ ಸತ್ಯಮೇವ ಜಯತೇ ಜನಾಂಧೋಲನಕ್ಕೆ ಖುದ್ದು ರಾಹುಲ್ ಗಾಂಧಿಯವರೇ ಚಾಲನೆ ನೀಡಲಿದ್ದಾರೆ. ಆಡಳಿತ ಸರ್ಕಾರದ ಧೋರಣೆ ವಿರುದ್ಧದ ಈ ಪ್ರತಿಭಟನಾ ಸಮಾವೇಶಗಳು ಕೋಲಾರದಿಂದ ಆರಂಭವಾಗಿ ದೇಶದ ಎಲ್ಲಾ ಕಡೆ ಚಲಿಸಲಿದೆ. ಇದಕ್ಕಾಗಿ ಕೋಲಾರದ ಜಾಲಪ್ಪ ಆಸ್ಪತ್ರೆ ಮುಂಭಾಗದಲ್ಲಿರುವ ಬೃಹತ್ ಮೈದಾನದ ಸಜ್ಜುಗೊಳಿಸಲಾಗುತ್ತಿದ್ದು, ಕಾಂಗ್ರೆಸ್ ಕಾರ್ಯಕರ್ತರು ರಾಜ್ಯ ಮತ್ತು ರಾಷ್ಟ್ರೀಯ ಮುಖಂಡರು  ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳಿಂದ ಸುಮಾರು ಒಂದು ಲಕ್ಷ ಜನ ಭಾಗವಹಿಸಲಿದ್ದಾರೆ ಎಂದರು.

ವಿಧಾನಪರಿಷತ್ತಿನ ಮತ್ತೊಬ್ಬ ಸದಸ್ಯ ಎಂ.ಎಲ್. ಅನಿಕುಮಾರ್ ಮಾತನಾಡಿ, ಕೇಂದ್ರದ ಬಿಜೆಪಿ ಸರಕಾರ ಪ್ರಜಾಪ್ರಭುತ್ವ ಮತ್ತು ಸಂವಿಧಾನ ವಿರೋಧಿ ಸರ್ಕಾರವಾಗಿದೆ. ಸರ್ಕಾರದ ಸೌಲಭ್ಯಗಳನ್ನು ಪಡೆದು ದೇಶ ಬಿಟ್ಟು ಓಡಿಹೋದ ಕಳ್ಳರನ್ನು ಕಳ್ಳರೆಂದು ಹೇಳುವುದು ತಪ್ಪಾ? ನೀರವ್ ಮೋದಿ, ಲಲಿತ್ ಮೋದಿ ವಿದೇಶದಲ್ಲಿ ಐಷಾರಾಮಿ ಜೀವನ ಸಾಗಿಸುತ್ತಿದ್ದಾರೆ. ದೇಶದ ದುಡ್ಡು ತಿಂದು ವಿದೇಶಕ್ಕೆ ಹಾರಿದವರನ್ನು ರಕ್ಷಣೆ ಮಾಡಿದ್ದು ಇದೇ ನರೇಂದ್ರ ಮೋದಿ ಅಲ್ಲವೇ? ಇವರನ್ನು ಕಳ್ಳರೆನ್ನದೆ ಏನೆನ್ನಬೇಕು ಹೇಳಿ ಎಂದು ಪ್ರಶ್ನೆ ಮಾಡಿದ ಅವರು, ಕೇವಲ ೧೫ ದಿನದಲ್ಲಿ ಕೇಸ್ ನಡೆಸಿ ಶಿಕ್ಷೆ ಕೊಡತ್ತಾರೆ ಎಂದರೆ ನ್ಯಾಯಾಂಗ ಯಾರ ಪರವಾಗಿ ಕೆಲಸ ಮಾಡುತ್ತಿದೆ ಎಂಬುದು ಅರ್ಥವಾಗುತ್ತೆ ಎಂದರು.

ದೇಶದಲ್ಲಿ ರಾಹುಲ್ ಗಾಂಧಿಯವರ ಕುಟುಂಬ ಸ್ವಾತಂತ್ರ‍್ಯಕ್ಕಾಗಿ ಹೋರಾಡಿದ್ದಾರೆ. ಮೊದಲಿಗೆ ಜವಾಹರ್‌ಲಾಲ್ ನೆಹರು, ನಂತರ ಇಂದಿರಾಗಾAಧಿ, ರಾಜೀವ್‌ಗಾಂಧಿ ಅವರು ಪ್ರಧಾನ ಮಂತ್ರಿಯಾಗಿ ದೇಶದಲ್ಲಿ ತನ್ನದೇ ಆದ ಜನಮೆಚ್ಚುಗೆ ಗಳಿಸುವ ಆಡಳಿತ ಕೊಟ್ಟಿದ್ದಾರೆ. ದೇಶಕ್ಕಾಗಿ ಪ್ರಾಣ ಕೊಟ್ಟ ಕುಟುಂಬವಾಗಿದೆ ಸಂವಿಧಾನದ ಹಕ್ಕುಗಳನ್ನು ದಮನ ಮಾಡಲು ಹೊರಟಿದ್ದಾರೆ ಜೊತೆಗೆ ಅಘೋಷಿತ ತುರ್ತು ಪರಿಸ್ಥಿತಿ ನಿರ್ಮಾಣ ಮಾಡಿದ್ದಾರೆ ಎಂದು ಬಿಜೆಪಿ ಮತ್ತು ನರೇಂದ್ರ ಮೋದಿ ಆಡಳಿತದ ವ್ಯವಸ್ಥೆಯ ವಿರುದ್ದ ವಾಗ್ದಾಳಿ ನಡೆಸಿದರು.

ಈ ಸಂದರ್ಭದಲ್ಲಿ ಪ್ರದೇಶ್ ಕಾಂಗ್ರೆಸ್ ಸಮಿತಿಯ ಜಿಲ್ಲಾಧ್ಯಕ್ಷ ಲಕ್ಷ್ಮೀನಾರಾಯಣ, ಕಾರ್ಯಾಧ್ಯಕ್ಷ ಊರಬಾಗಿಲು ಶ್ರೀನಿವಾಸ್, ಕೆಪಿಸಿಸಿ ಸದಸ್ಯ ನಂದಿನಿ ಪ್ರವೀಣ್, ಬಂಗಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೀಸಂದ್ರ ಗೋಪಾಲಗೌಡ, ಕೋಲಾರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸಾದ್ ಬಾಬು, ಎಸ್ಸಿ ಘಟಕದ ಜಿಲ್ಲಾಧ್ಯಕ್ಷ ಕೆ.ಜಯದೇವ್, ಬೆಳಗಾನಹಳ್ಳಿ ಮುನಿವೆಂಕಟಪ್ಪ, ವೆಂಕಟಪತಿ, ಇನ್ಟೆಕ್ ಜಿಲ್ಲಾಧ್ಯಕ್ಷ ಹೊನ್ನೇನಹಳ್ಳಿ ಯಲ್ಲಪ್ಪ, ಸಲ್ಲಾವುದ್ದೀನ್ ಬಾಬು, ರತ್ನಮ್ಮ, ಶಿವಕುಮಾರ್, ಜಗನ್ ಜಗದೀಶ್, ಒಬಿಸಿ ಮಂಜುನಾಥ್, ಗಂಗಮ್ಮನಪಾಳ್ಯ ರಾಮಯ್ಯ, ಎಸ್.ಟಿ. ಘಟಕದ ನಾಗರಾಜ್ ಮುಂತಾದವರು ಇದ್ದರು

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!