• Mon. Sep 16th, 2024

PLACE YOUR AD HERE AT LOWEST PRICE

ಜನಸಾಮಾನ್ಯರ ಮೇಲೆ ಇಚ್ಛಾಶಕ್ತಿಯಲ್ಲದ ಬಂಡವಾಳಶಾಹಿ, ಹಾಗೂ ಕೋಮುವಾದಿ ಪಕ್ಷಗಳನ್ನು ಸೋಲಿಸಿ ಈ ಬಾರಿಯ ಚುನಾವಣೆಯಲ್ಲಿ ಎಡ-ಜಾತ್ಯಾತೀತ ಹಾಗೂ ಸಾಮಾನ್ಯ ವರ್ಗದ ಜನರ ಹಿತ ಕಾಯುವ ಪಕ್ಷಗಳನ್ನು ಬೆಂಬಲಿಸುವಂತೆ ಸಿಪಿಐಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಜಿ.ಸಿ ಬಯ್ಯಾರೆಡ್ಡಿ ತಿಳಿಸಿದರು.

ಕೋಲಾರ ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಸಿಪಿಐಎಂ ಪಕ್ಷದ ಜಿಲ್ಲಾ ಮಟ್ಟದ ರಾಜಕೀಯ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು ರಾಜ್ಯದಲ್ಲಿ ಪ್ರಸ್ತುತ ಯುವಜನರಿಗೆ ಉದ್ಯೋಗ ಕೊಡದ ಸರ್ಕಾರಗಳು ನಮಗೆ ಬೇಕಾಗಿದೆ ರಾಜಕೀಯದ ಉದ್ದಗಲ್ಕಕ್ಕೂ ಜನವಿರೋಧಿಯ ಜೊತೆಗೆ ಭ್ರಷ್ಟಾಚಾರ ಮಾಡಿ ಜನರ ಮೂಲಭೂತ ಸೌಕರ್ಯಗಳ ಪ್ರಶ್ನೆ ಮಾಡುವ ಸಂದರ್ಭದಲ್ಲಿ ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟು ಕೋಮುವಾದಿ ಹೆಸರಿನಲ್ಲಿ ಸರಕಾರ ನಡೆಸುವ ಪಕ್ಷಗಳನ್ನು ಈ ಚುನಾವಣೆಯಲ್ಲಿ ದೂರವಿಡಬೇಕಾಗಿದೆ ಎಂದರು.

ರಾಜ್ಯ ಮತ್ತು ಕೇಂದ್ರದಲ್ಲಿ ಸಿಪಿಐಎಂ ಪಕ್ಷವು ಅಧಿಕಾರದಲ್ಲಿ ಇರಲಿ ಇಲ್ಲದೇ ಹೋದರು ಜನರ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಹೋರಾಟ ಜಾಗೃತಿ ಮೂಡಿಸುವ ಮಾತ್ರವೇ ಜನರ ಕಷ್ಟಗಳಿಗೆ ನಿಟ್ಟಿನಲ್ಲಿ ಕೆಲಸ ಮಾಡಿಕೊಂಡು ಬಂದಿದೆ ಸಿಪಿಐಎಂ ಪಕ್ಷ ಹೊರತು ಪಡಿಸಿ ಬೇರೆ ಪಕ್ಷಗಳು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಯಥೇಚ್ಛವಾಗಿ ಖರ್ಚು ಮಾಡಿ ಜನರ ಜೀವನವನ್ನು ಹಾಳು ಮಾಡುತ್ತಿದ್ದಾರೆ. ಸಾಮಾನ್ಯ ಜನರ ಸಾಮಾಜಿಕ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿದ್ದಾರೆ. ಆದ್ದರಿಂದ ಅಂತಹ ಪಕ್ಷಗಳನ್ನು ತಿರಸ್ಕರಿಸಿ ಪರ್ಯಾಯವಾದ ರಾಜಕೀಯ ಪಕ್ಷಗಳನ್ನು ಬೆಂಬಲಿಸುವಂತೆ ಮನವಿ ಮಾಡಿದರು.

ಸಿಪಿಐಎಂ ರಾಜ್ಯ ಮುಖಂಡ ಡಾ.ಕೆ ಪ್ರಕಾಶ್ ಮಾತನಾಡಿ, ಆರ್‌ಎಸ್‌ಎಸ್ ದಕ್ಷಿಣ ಭಾರತದಲ್ಲಿ ಕರ್ನಾಟಕವನ್ನು ಕೋಮುಪ್ರಯೋಗ ಶಾಲೆಯನ್ನಾಗಿ ಮಾಡಲು ಹೊರಟಿದೆ. ಮಕ್ಕಳಿಂದಲೇ ತಲೆಗೆ ಕೋಮು ದ್ವೇಷ ತುಂಬಿಸಲಾಗುತ್ತಿದೆ. ಹಾಗಾಗಿ ವಿದ್ಯಾರ್ಥಿಗಳು ಹಾಗೂ ಗಣ್ಯ ವ್ಯಕ್ತಿಗಳ ಮೂಲಕವೂ ಕೋಮು ದ್ವೇಷ ಹರಡಲಾಗುತ್ತಿದೆ ಜನ ಎಚ್ಚರಿಕೆಯಿಂದ ಈ ಚುನಾವಣೆಯನ್ನು ಎದುರಿಸಬೇಕು ಎಂದರು.

ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಗಾಂಧಿನಗರ ನಾರಾಯಣಸ್ವಾಮಿ ಮಾತನಾಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಗ್ರಾಮೀಣ ಜನರ ಬದುಕುಗಳಿಗೆ ಆಸರೆಯಾಗಿಲ್ಲ ವಿಧಾನಸೌಧದಲ್ಲಿ ಸಾಮಾನ್ಯ ವರ್ಗದ ಧ್ವನಿಯಾಗಿ ಕೆಲಸ ಮಾಡಲು ಬಡವರು, ಹಿಂದುಳಿದವರು, ರೈತರ ಏಳಿಗೆಗಾಗಿ ದುಡಿಯುವ ವರ್ಗದ ಸಿಪಿಐಎಂ ಪಕ್ಷದ ಕೆಜಿಎಫ್ ಮೀಸಲು ಕ್ಷೇತ್ರದ ಅಭ್ಯರ್ಥಿ ತಂಗರಾಜ್ ಅವರನ್ನು ಬೆಂಬಲಿಸುವಂತೆ ಕೋರಿದರು

ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಪಿ.ಆರ್ ಸೂರ್ಯನಾರಾಯಣ, ಟಿ.ಎಂ ವೆಂಕಟೇಶ್, ವಿ.ಗೀತಾ, ಎ.ಆರ್ ಬಾಬು, ಜಿಲ್ಲಾ ಸಮಿತಿ ಸದಸ್ಯರಾದ ಅಶೋಕ್, ಪುಣ್ಯಹಳ್ಳಿ ಶಂಕರ್ ಮುಂತಾದವರು ಇದ್ದರು.

Leave a Reply

Your email address will not be published. Required fields are marked *

You missed

error: Content is protected !!