• Thu. Sep 19th, 2024

PLACE YOUR AD HERE AT LOWEST PRICE

ಕೆಜಿಎಫ್:ಕ್ಷೇತ್ರದಲ್ಲಿ 2008ರಿಂದ ತಳಮಟ್ಟದಿಂದ ಬಿಜೆಪಿ ಪಕ್ಷವನ್ನು ಸಂಘಟಿಸಿ, ಸಾಮಾನ್ಯ ಕಾರ್ಯಕರ್ತನಿಗೂ ಸ್ಥಾನಮಾನ ಕಲ್ಪಿಸಲು ಶ್ರಮಿಸಿದ ಮಾಜಿ ಶಾಸಕ ವೈ.ಸಂಪಂಗಿಗೆ ಟಿಕೆಟ್ ನೀಡಲು ಮೊದಲ ಪ್ರಾಶಸ್ತ್ಯ ನೀಡಬೇಕೆಂದು ಬಿಜೆಪಿ ಕಾರ್ಯಕರ್ತರು ಪಕ್ಷದ ವರಿಷ್ಠರನ್ನು ಆಗ್ರಹಿಸುತ್ತಿರುವುದಾಗಿ ತಿಳಿಸಿದರು.

ಬೇತಮಂಗಲದ ಅಥಿತಿ ಗೃಹದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾರ್ಯಕರ್ತರು, ಕೆಜಿಎಫ್‍ನಲ್ಲಿ ನೆಲಕಚ್ಚಿದ್ದ ಬಿಜೆಪಿಯನ್ನು 2008ರಲ್ಲಿ ವೈ.ಸಂಪಂಗಿ ಜಯಗಳಿಸುವ ಮೂಲಕ, ಪಕ್ಷವನ್ನು ಭದ್ರ ಬುನಾದಿಯಾಗಿ ಮಾರ್ಪಡು ಮಾಡಿದರು.

ನಂತರ 2013ರಲ್ಲಿ ತಮ್ಮ ತಾಯಿ ರಾಮಕ್ಕ ರನ್ನು ಶಾಸಕಿಯಾಗಿ ಆಯ್ಕೆ ಮಾಡಿಕೊಂಡು ನಂತರ  ನಡೆದ ಜಿಪಂ, ತಾಪಂ, ಹಲವು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ನಿಷ್ಠಾವಂತ ಕಾರ್ಯಕರ್ತರಿಗೆ ಸ್ಥಾನಮಾನ ನೀಡಿ ಪಕ್ಷವನ್ನು ಬಲಿಷ್ಠಗೊಳಿಸಿದ್ದರು.

ಗ್ರಾಪಂ ಚುನಾವಣೆಯಲ್ಲಿಯೂ ಅತಿಹೆಚ್ಚು ಬಿಜೆಪಿ ಸದಸ್ಯರು ಗೆದ್ದು, ಅಧ್ಯಕ್ಷ ಸ್ಥಾನವನ್ನು ಪಡೆದುಕೊಳ್ಳಲು ಯಶಸ್ವಿಯಾಗಿರುವ ಮಾಜಿ ಶಾಸಕ ವೈ.ಸಂಪಂಗಿಗೆ ಈ ಬಾರಿಯ 2023ರ ಚುನಾವಣೆಯಲ್ಲಿ ಭಿ.ಪಾರಂ ನೀಡಬೇಕು, ಇಲ್ಲದಿದ್ದರೆ ಅವರ ಪುತ್ರಿ ಅಶ್ವಿನಿಗೆ ಟಿಕೆಟ್ ನೀಡಬೇಕೆಂದರು.

ಕೆಜಿಎಫ್ ಕ್ಷೇತ್ರದಲ್ಲಿ ನಾಲ್ಕೂವರೆ ವರ್ಷದಿಂದ ಪಕ್ಷದ ಸಂಘಟನೆಯಲ್ಲಿ ತೊಡಗಿರುವ ವಿ.ಮೋಹನಕೃಷ್ಣರು ಸಹ ಪ್ರಭಲ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಕಮ್ಮಸಂದ್ರ ಗ್ರಾಪಂ ಅದ್ಯಕ್ಷ ಸುರೇಶ್, ಜಿ.ಚಲಪತಿ ಅವರಲ್ಲಿ ಯಾರಿಗಾದರೂ ಟಿಕೆಟ್ ಕೊಟ್ಟರೆ ಖಂಡಿತ ಶಕ್ತಿ ಮೀರಿ ಕೆಲಸ ಮಾಡಿ ಗೆಲ್ಲಿಸುತ್ತೇವೆ ಎಂದು ಹೇಳಿದರು.

ಆದರೆ ಯಾವುದೇ ಕಾರಣಕ್ಕೂ ವಲಸಿಗ ಆಕಾಂಕ್ಷಿ ವೇಲ್ ನಾಯ್ಕರ್‍ಗೆ ಟಿಕೆಟ್ ಕೊಟ್ಟರೆ ನಾವು ನೋಟಾಗೆ ಓಟು ಹಾಕಿ ಅಭ್ಯರ್ಥಿಯನ್ನು ಸೋಲಿಸುತ್ತೇವೆ. ನಿಷ್ಠಾವಂತ ಕಾರ್ಯಕರ್ತರಾದ ನಾವು ಸ್ವಕ್ಷೇತ್ರ ಆಕಾಂಕ್ಷಿಗಳಿಗೆ ಟಿಕೆಟ್ ಕೊಟ್ಟರೆ ಶೇ.100% ಗೆಲ್ಲಿಸುತ್ತೇವೆ.

ಕೆಜಿಎಫ್‍ನ ಯಾವುದೇ ಹಳ್ಳಿ, ವಾರ್ಡ್, ಸಮಸ್ಯೆಗಳು ತಿಳಿಯದ ಹಾಗೂ ಒಂದು ದಿನವೂ ಕೆಜಿಎಫ್‍ನಲ್ಲಿ ಪಕ್ಷ ಸಂಘಟನೆ ಮಾಡದ ವೇಲ್ ನಾಯ್ಕರ್ ಗೆ  ಟಿಕೆಟ್ ಕೇಳಲು ಯಾವುದೇ ಅರ್ಹತೆ ಇಲ್ಲ. ನಾವು ಸಹ ಅನೇಕ ಬಾರಿ ವೇಲ್ ನಾಯ್ಕರ್ ವಿರುದ್ಧ ದೂರು ನೀಡಿದರೂ ಕ್ರಮ ಇಲ್ಲ ಎಂದರು.

ಕೆಜಿಎಫ್‍ಗೆ ಸಚಿವ ಮುನಿರತ್ನ ಬೇಟಿ ನೀಡಿದಾಗಲೆಲ್ಲ ಮತಭಾಂದವರೆ, ಈ ಬಾರಿ ಸಂಪಂಗಿ ವಿಧಾನ ಸೌಧ ಮೆಟ್ಟಲು ಹತ್ತೇ ಹತ್ತುತ್ತಾರೆ. ಸೂರ್ಯ-ಚಂದ್ರ ಹುಟ್ಟುವುದು ಎಷ್ಟು ಸತ್ಯವೋ ಸಂಪಂಗಿ ಗೆಲ್ಲುವುದು ಅಷ್ಟೆ ಸತ್ಯ ಎನ್ನುತ್ತಿದ್ದ ಸಚಿವರು ಏಕಾ ಏಕಿ ಅವರ ಬೆಂಬಲಿಗರನ್ನು ಕೆಜಿಎಫ್‍ಗೆ ತಂದು ಬಿಜೆಪಿ ಅಭ್ಯರ್ಥಿಯನ್ನಾಗಿ ಮಾಡಲು ಹೊರಟಿರುವುದು ಎಷ್ಟರ ಮಟ್ಟಿಗೆ ಸರಿ ಇದೆ ಎಂದು ಅಸಮದಾನ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಎನ್.ಜಿ.ಹುಲ್ಕೂರು ಗ್ರಾಪಂ ಅಧ್ಯಕ್ಷ ಸುನೀಲ್ ಕುಮಾರ್, ಬಿಜೆಪಿ ಗ್ರಾಮಾಂತರ ಉಪಾಧ್ಯಕ್ಷ ವಿಜಿಕುಮಾರ್, ಎಸ್.ಸಿ ಮೋರ್ಚಾ ಅಧ್ಯಕ್ಷ ಕೃಷ್ಣಮೂರ್ತಿ, ಮೈನಾರಿಟಿ ಮೋರ್ಚಾ ಅಧ್ಯಕ್ಷ ಖುನ್ನು, ಗ್ರಾಪಂ ಸದಸ್ಯ ಪ್ರಸಾದ್, ಮುಖಂಡರಾದ ನಾರಾಯಣಸ್ವಾಮಿ, ಜೆಸಿಬಿ ಮುನಿಯಪ್ಪ, ಬೊಮ್ಮಾಂಡಹಳ್ಳಿ ಸುಭ್ರಮಣಿ,, ಮದ್ದಿನಾಯಕನಹಳ್ಳಿ ವೆಂಕಟೇಶ್, ಕೆ.ಬಿ ದೇವರಾಜ್, ಚಲಪತಿ, ಅಮರೇಶ್, ಉಮೇಶ್, ರಾಜು, ಅನಿಲ್, ಮಂಜುನಾಥ್, ರಾಮು, ಲೋಕನಾಥ್ ಮೊದಲಾದವರಿದ್ದರು.

Leave a Reply

Your email address will not be published. Required fields are marked *

You missed

error: Content is protected !!