• Sun. May 19th, 2024

ಕೋಲಾರ I ಮಕ್ಕಳ ನಾಟಕ ನಾಯಿತಿಪ್ಪ ಪುಸ್ತಕ ಬಿಡುಗಡೆ – ಜೀವ ಆದಿಮವಾಗಿ ಬುಡ್ಡಿದೀಪ ಚಟುವಟಿಕೆಗಳು – ಕೋಟಿಗಾನಹಳ್ಳಿ ರಾಮಯ್ಯ

PLACE YOUR AD HERE AT LOWEST PRICE

ನೆಲ ಸಂಸ್ಕೃತಿಯ ನಡೆಯನ್ನು ಜೀವ ಕೇಂದ್ರಿತ ಚಟುವಟಿಕೆಗಳ ತಾಣವಾಗಿಸುವ ಸಲುವಾಗಿ ಬುಡ್ಡಿದೀಪ ಕೇಂದ್ರವನ್ನು ಜೀವಆದಿಮ ಕೇಂದ್ರವಾಗಿ ವಿನ್ಯಾಸಗೊಳಿಸುವ ಗುರಿ ಹೊಂದಲಾಗಿದೆಯೆಂದು ಸಾಹಿತಿ ಚಿಂತಕ, ಕವಿ, ನಾಟಕಕಾರ ಕೋಟಿಗಾನಹಳ್ಳಿ ರಾಮಯ್ಯ ಹೇಳಿದರು.

ಕೋಲಾರ ನಗರದ ಅಂತರಗಂಗೆ ಬೆಟ್ಟದ ಬುಡ್ಡಿದೀಪ ಉಸ್ಮಾನ್‌ತಾತನ ದರ್ಗಾ ಕೇಂದ್ರದಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ತಮ್ಮ ಮಕ್ಕಳ ನಾಟಕ ನಾಯಿತಿಪ್ಪ ಪುಸ್ತಕವನ್ನು ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.

ನೆಲ ಸಂಸ್ಕೃತಿಯ ನಡೆಗಳು ಸ್ಥಾವರವಾಗುವ ಅಪಾಯದಲ್ಲಿರುವುದರಿಂದ ಈ ನಡೆಗೆ ಜೀವಂತಿಕೆ ತುಂಬುವ ಸಲುವಾಗಿ ವೈವಿಧ್ಯಮಯ ಚಟುವಟಿಕೆಗಳನ್ನು ಮತ್ತು ಮಕ್ಕಳ ರಂಗಭೂಮಿ ಚಟುವಟಿಕೆಗಳನ್ನು ಬುಡ್ಡಿದೀಪ ಕೇಂದ್ರದಲ್ಲಿ ಆಸಕ್ತರ ಸಹಕಾರ ಸಮ್ಮುಖದಲ್ಲಿ ನಡೆಸಲು ಉದ್ದೇಶಿಸಲಾಗಿದೆ, ನೆಲ ಸಂಸ್ಕೃತಿಯ ಹುಡುಕಾಟದ ಭಾಗವಾಗಿರುವ ಎಲ್ಲರ ಸಹಕಾರ ಅಗತ್ಯ ಎಂದರು.

ನಾಯಿತಿಪ್ಪ ನಾಟಕದ ಪುಸ್ತಕ ಬಿಡುಗಡೆ ಮಾಡಿ ಕೃತಿ ಕುರಿತಂತೆ ಸಿ.ಎ.ರಮೇಶ್ ಮಾತನಾಡಿ, ಕೋಟಿಗಾನಹಳ್ಳಿ ರಾಮಯ್ಯರನ್ನು ಅರಿಯದೆ ನಾಟಕ ಓದಿದರೆ ಅರ್ಥವಾಗುವುದಿಲ್ಲ, ಈಗಾಗಲೇ ನಾಯಿತಿಪ್ಪ ಕನ್ನಡ ನಾಡಿನಾದ್ಯಂತ ನೂರಾರು ಪ್ರದರ್ಶನಗಳನ್ನು ಕಂಡಿರುವುದು ನಾಟಕದ ಯಶಸ್ಸಿಗೆ ಸಾಕ್ಷಿಯಾಗಿದೆಯೆಂದರು.

ಸದಾ ಕಲಿಕೆಗಾಗಿ ಹಾತೊರೆಯುತ್ತಿರುವ ಕೋಟಿಗಾನಹಳ್ಳಿ ರಾಮಯ್ಯನವರಲ್ಲಿ ಸಮಾಜವನ್ನು ತಿದ್ದಿ ತೀಡಬೇಕೆಂಬ ಸೌಂದರ್ಯ ಪ್ರe ಎದ್ದು ಕಾಣಿಸುತ್ತದೆ, ಅವರು ಮಾಡುವ ಯಾವುದೇ ಕಾರ್ಯಕ್ರಮದಲ್ಲಿ ಅವರ ಆಶಯಗಳಲ್ಲಿ ಅದನ್ನು ಕಾಣಬಹುದಾಗಿದೆ ಎಂದರು.

ಪ್ರೊ.ನೇತ್ರಾವತಿ ಮಾತನಾಡಿ, ನಾಯಿತಿಪ್ಪ ಈಗಾಗಲೇ ಅನೇಕ ಪ್ರದರ್ಶನಗಳನ್ನು ಕಂಡಿದೆ, ನಾಯಿತಿಪ್ಪ ನಾಟಕ ನೋಡುವ ಸಂದರ್ಭದಲ್ಲಿ ನಾಯಿತಿಪ್ಪ ಪಾತ್ರನಮ್ಮದೇ ಅನಿಸಿಬಿಡುತ್ತದೆ, ನಾಟಕದ ಅಜ್ಜಿ ನನ್ನ ಅಜ್ಜಿ ಎನಿಸಿಬಿಡುತ್ತದೆ, ನಾಯಿತಿಪ್ಪ ನಾಟಕದಲ್ಲಿ ಮಕ್ಕಳಿಗೆ ಇಷ್ಟವಾಗುವ ಇಂಗ್ಲೀಷ್ ಮಿಶ್ರಿತ ಕನ್ನಡ ಜೊತೆಗೆ ಕೋಲಾರ ಸೊಗಡಿನ ಕನ್ನಡವನ್ನು ಬಳಸಿರುವುದು ನಾಟಕದ ಅಂದವನ್ನು ಹೆಚ್ಚಿಸುವಂತಾಗಿದೆಯೆಂದರು.

ಕಾರ್ಯಕ್ರಮದಲ್ಲಿ ಗುಂಡಪ್ಪ, ರುದ್ರೇಶ್ ಅದರಂಗಿ, ಕೋಟಿಗಾನಹಳ್ಳಿ ರಾಮಯ್ಯರ ತಾಯಿ, ಅರಿವು ಶಿವಪ್ಪ, ಆದಿಮ ಗೋವಿಂದಪ್ಪ ಮತ್ತು ಸಾಹಿತ್ಯಾಸಕ್ತರು ಹಾಜರಿದ್ದರು.
ಟಿ.ಗೊಲ್ಲಹಳ್ಳಿ ನಾರಾಯಣಸ್ವಾಮಿ ತಂಡದಿಂದ ಹಾಡುಗಾರಿಕೆ ನಡೆಯಿತು. ಕೌದಿ ಪ್ರಕಾಶನ, ವಾರಿಽ ಬುಡ್ಡಿದೀಪ ಕಲಾಶಾಲೆ ವ್ಯವಸ್ಥೆ ಮಾಡಿತ್ತು.

 

 

Related Post

ಎಪಿಎಂಸಿ ಕಾರ್ಯದರ್ಶಿ ವಿಜಯಲಕ್ಷ್ಮಿ ವಜಾಗೊಳಿಸಲು ತರಕಾರಿ ಮಂಡಿ ಮಾಲೀಕರ ಒತ್ತಾಯ. ಆರೋಪ ನಿರಾಕರಿಸಿದ ಎಪಿಎಂಸಿ ಕಾರ್ಯದರ್ಶಿ
ಯರಗೋಳ್ ಗ್ರಾಮದಲ್ಲಿ “ದಿ 1979 ಅನ್ ಟೋಲ್ಡ್ ಸ್ಟೋರಿ” ಸಿನಿಮಾದ ಅಂತಿಮ ಚಿತ್ರೀಕರಣ
ಶಿಕ್ಷಕರ ಸಮಸ್ಯೆಗಳನ್ನು ಬಗೆಹರಸದೆ, ಶಿಕ್ಷಕರಿಗೆ ದ್ರೋಹವೆಸಗಿದ ಎಂ.ಎಲ್.ಸಿ. ವೈ.ಎ.ನಾರಾಯಣಸ್ವಾಮಿ : ರುಪ್ಸಾ ಅಧ್ಯಕ್ಷ ಹಾಗೂ ಪಕ್ಷೇತರ ಅಭ್ಯರ್ಥಿ ಲೋಕೇಶ್ ತಾಳಿಕಟ್ಟೆ ಆರೋಪ

Leave a Reply

Your email address will not be published. Required fields are marked *

You missed

error: Content is protected !!