• Sun. Apr 28th, 2024

ಕೋಲಾರದಲ್ಲಿ ಜೈಭಾರತ್ ರಾಹುಲ್‌ಗಾಂಧಿ ಸಮಾವೇಶ – ಕಾಂಗ್ರೆಸ್ ಚುನಾವಣಾ ರಣ ಕಹಳೆ – ಕೃಷ್ಣ ಬೈರೇಗೌಡ

PLACE YOUR AD HERE AT LOWEST PRICE

ಕರ್ನಾಟಕದಲ್ಲಿ ಕಾಂಗ್ರೆಸ್ ಚುನಾವಣೆ ರಣ ಕಹಳೆ ಮೊಳಗಿಸಲು ಕೋಲಾರದಿಂದ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಲಾಗುತ್ತಿದೆ ಎಂದು ಮಾಜಿಸಚಿವ ಕೃಷ್ಣಬೈರೇಗೌಡ ಹೇಳಿದರು.

ಕೋಲಾರ ನಗರದ ಹೊರವಲಯದಲ್ಲಿ ಬೈಭಾರತ್ ರಾಹುಲ್ ಗಾಂಧಿ ಸಮಾವೇಶದಲ್ಲಿ ಅವರು ಮಾತನಾಡುತ್ತಿದ್ದರು.

ಭ್ರಷ್ಟ ಬಿಜೆಪಿ ಸರ್ಕಾರದ ವಿರುದ್ಧ ಜನರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಇದಾಗಿದ್ದು, ನೇಮಕಾತಿಯಲ್ಲಿ ಭ್ರಷ್ಟಾಚಾರ, ಪ್ರತಿನಿತ್ಯ ಜನರಿಂದ ಹಣ ಸುಲಿಗೆ ಮಾಡಲಾಗುತ್ತಿದೆ. ಸಂತೋಷ್ ಪಾಟೀಲ್ ಎಂಬ ನಿಷ್ಟಾವಂತ ಕಾರ್ಯಕರ್ತ ರಸ್ತೆ ಅಭಿವೃದ್ಧಿ ಮಾಡಿದ ಬಿಲ್ಲು ಪಾವತಿಸದೆ ಕಮಿಷನ್ ಕೊಟ್ಟಿಲ್ಲ ಎಂದು ಆತ್ಮಹತ್ಯೆಗೆ ಶರಣಾದ ಘಟನೆ ಕಣ್ಣಮುಂದೆ ಇದೆ. ಬೆಲೆ ಏರಿಕೆ ಬಿಸಿಗೆ ಜನ ತತ್ತರಿಸಿದ್ದಾರೆ, ಅಗತ್ಯ ವಸ್ತುಗಳ ಬೆಲೆ ಮೂರು ಪಟ್ಟು ಹೆಚ್ಚಾಗಿದೆ ಎಂದುಆರೋಪಿಸಿದರು.

ಡಬಲ್ ಇಂಜಿನ್ ಸರ್ಕಾರದ ಜನವಿರೋಽ ನೀತಿಯಿಂದ ರೈತರು ಬೆಲೆ ಏರಿಕೆ ಮತ್ತು ೪೦ ಪರ್ಸೆಂಟ್ ಕಮೀಷನ್ ನಿಂದ, ಹಾಲು ಮೊಸರಿನ ಮೇಲೂ ಜಿಎಸ್ಟಿ ಹಾಕಿ ಸುಲಿಗೆ ಮಾಡಲಾಗುತ್ತಿದೆ.

ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಯ ಜನತೆ ಹೈನುಗಾರಿಕೆ ಹಾಗೂ ಹಾಲು ಉತ್ಪಾದನೆ ಮೂಲಕ ಜೀವನ ಕಟ್ಟಿಕೊಳ್ಳುವ ಸಂದರ್ಭದಲ್ಲಿ ಹಾಲಿಗೆ ಕಳೆದ ಐದು ವರ್ಷಗಳಲ್ಲಿ ಐದು ಪಟ್ಟು ಪೈಸೆ ಸಹಾಯಧನವನ್ನು ಕೊಟ್ಟಿಲ್ಲ.
ಜಗತ್ತಿನ ಶೀಮಂತರ ಪಟ್ಟಿಯಲ್ಲಿ ೭೦೦ನೇ ಸ್ಥಾನದಲ್ಲಿ ಇದ್ದ ಅದಾನಿ ಮೊದಲ ಸ್ಥಾನಕ್ಕೆ ೮ ವರ್ಷಗಳಲ್ಲಿ ಹೇಗೆ ಬಂದರು. ದೇಶದ ಎಲ್ಲಾ ಬಂದರುಗಳು, ಏರ್ಪೋರ್ಟ್ ಗಳು ಆದಾನಿಗೆ ಮಾರಾಟ ಮಾಡಲಾಗಿದೆ. ದೇಶದ ಆಸ್ತಿಯನ್ನು ಲೂಟಿ ಮಾಡಲಾಗಿದೆ.

ದೇಶದ ಆಸ್ತಿಯನ್ನು ಲೂಟಿ ಮಾಡಿದ ನೀರವ್ ಮೋದಿ,ಲಲಿತ್ ಮೋದಿ, ಮಲ್ಯ ಮುಂತಾದವರು ಸ್ಟಾರ್ ಹೋಟೆಲ್ ನಲ್ಲಿ ಮಜಾ ಮಾಡ್ತಾ ಇದ್ದಾರೆ. ಲೂಟಿ ಮಾಡಿದವರ ಬಗ್ಗೆ ಮಾತನಾಡಿದ ರಾಹುಲ್ ಗಾಂಽ ಯವರಿಗೆ ಜೈಲು ಶಿಕ್ಷೆ ಆಗಿದೆ ಎಂದು ವಿವರಿಸಿದರು.

ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಕುಟುಂಬದ ಕುಡಿ ರಾಹುಲ್ ಗಾಂಧಿ ಯವರಿಗೆ ಜೈಲು ಶಿಕ್ಷೆ ನೀಡಿ, ಅವರನ್ನು ಅವರ ಮನೆಯಿಂದ ಹೊರಗೆ ಹಾಕಲಾಗುತ್ತಿದೆ.

ಈ ಎಲ್ಲಾ ಅನ್ಯಾಯದ ವಿರುದ್ಧ ಹೋರಾಟವನ್ನು ಕೋಲಾರದಿಂದ ಪ್ರಾರಂಭ ಮಾಡೋಣ. ಮುಂದಿನ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಭ್ರಷ್ಟ ಬಿಜೆಪಿ ಸರ್ಕಾರವನ್ನು ತೊಲಗಿಸಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸೋಣ ಎಂದರು.

ವಿಧಾನಪರಿಷತ್‌ಸದಸ್ಯ ನಜೀರ್ ಅಹ್ಮದ್ ಮಾತನಾಡಿ, ಕೋಲಾರದಿಂದ ಜೈ ಭಾರತ್ ರ‍್ಯಾಲಿ ಪ್ರಾರಂಭವಾಗಿ ದೇಶ ವ್ಯಾಪ್ತಿ ಮುಂದುವರೆಯಲಿದೆ. ದ್ವೇಷ ರಾಜಕೀಯಕ್ಕೆ ಕೊನೆ ಹಾಡಲು ನಾವು ಹೋರಾಟ ನಡೆಸಬೇಕಾಗುತ್ತದೆ.

ಸೇಡಿನರಾಜಕಾರಣ ಮಾಡುವ ನಿಟ್ಟಿನಲ್ಲಿ ರಾಹುಲ್ ಗಾಂಽ ಯವರ ಮೇಲೆ ಪ್ರಕರಣ ದಾಖಲಿಸಿಕೊಂಡು ಕೇವಲ ಎರಡು ದಿನಗಳಲ್ಲಿ ತೀರ್ಪು ನೀಡಿದೆ. ಕೂಡಲೇ ಅವರ ಲೋಕಸಭಾ ಸದಸ್ಯ ಸ್ಥಾನದಿಂದ ತೆಗೆದು ಹಾಕಿ ದ್ವೇಷ ಸಾಧಿಸುತ್ತಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವ ಮೂಲಕ ಜನ ವಿರೋಧಿ ಬಿಜೆಪಿ ಸರಕಾರವನ್ನು ಕಿತ್ತೊಗೆಯಬೇಕೆಂದು ಕರೆ ನೀಡಿದರು.

 

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!