• Tue. May 14th, 2024

PLACE YOUR AD HERE AT LOWEST PRICE

ಕೋಲಾರ ಜಿಲ್ಲಾ ಸ್ವೀಪ್‌ಸಮಿತಿಯು ಮತದಾನಕ್ಕೆ ಮದುವೆ ಮಾದರಿಯ ಆಮಂತ್ರಣ ಪತ್ರಿಕೆಯನ್ನು ಮುದ್ರಿಸುವ ಮೂಲಕ ಮತದಾರರ ಗಮನ ಸೆಳೆಯುವ ಪ್ರಯತ್ನ ಮಾಡಿದೆ.

ಭಾರತ ಸರಕಾರದ ಚುನಾವಣಾ ಆಯೋಗದ ಹೆಸರಿನಲ್ಲಿ ಈ ಆಮಂತ್ರಣ ಪತ್ರಿಕೆಯನ್ನು ಮುದ್ರಿಸಿದ್ದು, ಸ್ವಸ್ತಿಶ್ರೀ ವಿಜಯಾಭ್ಯುದಯ ಶಾಲಿ ವಾಹನ ಶಕ ೧೯೪೫ ಕ್ಕೆ ಸರಿಯಾದ ಶ್ರೀಶೋಭಕೃತ್ ನಾಮಸಂವತ್ಸರ ದಿನಾಂಕ ೧೦.೫.೨೦೨೩ ರ ಬುಧವಾರ ಬೆಳಿಗ್ಗೆ ೭ಗಂಟೆಯಿಂದ ಸಂಜೆ ೬ ಗಂಟೆಯವರೆಗೆ ಸಲ್ಲುವ ಶುಭ ಘಳಿಗೆಯಲ್ಲಿ ಮತದಾನ ಎಂಬ ಚುನಾವಣೋತ್ಸವ ನೆರವೇರುವಂತೆ ಭಾರತ ಸರಕಾರ ನಿಶ್ಚಯಿಸಿರುವುದರಿಂದ ತಾವು ಸಕುಟುಂಬ ಸಮೇತರಾಗಿ ಆಗಮಿಸಿ ತಮ್ಮ ಸ್ವಇಚ್ಛೆಯಂತೆ ನಿಮ್ಮ ಅಮೂಲ್ಯವಾದ ಮತವನ್ನು ಚಲಾಯಿಸಿ ಭಾರತದ ಭವಿಷ್ಯವನ್ನು ರೂಪಿಸಬೇಕೆಂದು ಕೋರುವ, ತಮ್ಮ ಆಗಮನಾಭಿಲಾಷಿಗಳು ಭಾರತಚುನಾವಣಾ ಆಯೋಗ, ಸ್ಥಳ ಮತಗಟ್ಟೆ ಕೇಂದ್ರ ಎಂದು ಆಹ್ವಾನ ಕೋರಲಾಗಿದೆ.

ವಿಶೇಷ ಸೂಚನೆಯಾಗಿ ಹಣಕೇಳದೆ ಮತ ನೀಡಿ ಆಶೀರ್ವದಿಸಿ ಸುಖಾಗಮನ ಬಯಸುವವರು ಎಲ್ಲಾ ಪಕ್ಷಗಳು ಎಂದು ಮುದ್ರಿಸಲಾಗಿದೆ.

ಮತದಾನ ಪ್ರಮಾಣವನ್ನು ಹೆಚ್ಚಿಸುವ ಸಲುವಾಗಿ ಈಗಾಗಲೇ ವಿವಿಧ ವೈವಿಧ್ಯಮ ಸ್ಪೀಪ್ ಕಾರ್ಯಕ್ರಮಗಳನ್ನು ನಡೆಸುತ್ತಿರುವ ಚುನಾವಣಾಆಯೋಗವು ಮುದ್ರಿಸಿರುವ ಈ ಆಮಂತ್ರಣ ಪತ್ರಿಕೆಯು ಸಾಮಾಜಿಕ ಜಾಲ ತಾಣಗಳ ಮೂಲಕ ಮತದಾರರಿಗೆ ಹಂಚಿಕೆಯಾಗುತ್ತಿದೆ.

ಇದೇ ರೀತಿಯಲ್ಲಿ ಹೊಸದಾಗಿ ಮತದಾರರ ಪಟ್ಟಿಗೆ ಸೇರ್ಪಡೆಯಾಗಿರುವ ನೂತನ ಮತದಾರರಿಗೆ ಜಿಲ್ಲಾ ಚುನಾವಣಾಽಕಾರಿ ಸಹಿ ಹೊಂದಿರುವ ಪತ್ರವೊಂದನ್ನು ಅಂಚೆ ಮೂಲಕ ಮತದಾರರ ಸ್ಮಾರ್ಟ್ ಕಾರ್ಡ್‌ನೊಂದಿಗೆ ಕಳುಹಿಸಲಾಗುತ್ತಿದ್ದು, ಮತದಾನ ಪ್ರಕ್ರಿಯೆಯಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳುವಂತೆಯೂ ಮನವಿ ಮಾಡುತ್ತಿರುವುದು ಮತದಾರರ ಗಮನ ಸೆಳೆಯುತ್ತಿದೆ.

 

Related Post

ಶಿಕ್ಷಕರ ಸಮಸ್ಯೆಗಳನ್ನು ಬಗೆಹರಸದೆ, ಶಿಕ್ಷಕರಿಗೆ ದ್ರೋಹವೆಸಗಿದ ಎಂ.ಎಲ್.ಸಿ. ವೈ.ಎ.ನಾರಾಯಣಸ್ವಾಮಿ : ರುಪ್ಸಾ ಅಧ್ಯಕ್ಷ ಹಾಗೂ ಪಕ್ಷೇತರ ಅಭ್ಯರ್ಥಿ ಲೋಕೇಶ್ ತಾಳಿಕಟ್ಟೆ ಆರೋಪ
ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್

Leave a Reply

Your email address will not be published. Required fields are marked *

You missed

error: Content is protected !!