• Tue. May 14th, 2024

ಗೋಮಾಳದಲ್ಲಿ ಕಲ್ಲು ಗಣಿಗಾರಿಕೆಗೆ ನೀಡಿರುವ ಅನುಮತಿ ರದ್ದಿಗೆ ಆಗ್ರಹಿಸಿ ದೊಡ್ಡ ಅಯ್ಯೂರು ಗ್ರಾಮದಲ್ಲಿ ಮತದಾನ ಬಹಿಷ್ಕಾರಕ್ಕೆ ಗ್ರಾಮಸ್ಥರ ನಿರ್ಧಾರ

PLACE YOUR AD HERE AT LOWEST PRICE

ದೊಡ್ಡ ಅಯ್ಯೂರು ಗ್ರಾಮದ ಸರ್ವೇನಂ.೭೬ರ ಗೋಮಾಳದಲ್ಲಿ ಕಲ್ಲು ಗಣಿಗಾರಿಕೆಗೆ ನೀಡಿರುವ ಅನುಮತಿ ರದ್ದುಗೊಳಿಸಲು ಸ್ಪಂದಿಸದ್ದ ಜಿಲ್ಲಾಡಳಿತ,ಜನಪ್ರತಿನಿಧಿಗಳ ಧೋರಣೆ ಖಂಡಿಸಿ ತಾಲ್ಲೂಕಿನ ದೊಡ್ಡ ಅಯ್ಯೂರು ಗ್ರಾಮಸ್ಥರು ಗ್ರಾಮದಲ್ಲಿ ಸಭೆ ನಡೆಸಿ ಮತದಾನ ಬಹಿಷ್ಕಾರದ ನಿರ್ಣಯ ಕೈಗೊಂಡಿರುವ ಘಟನೆ ನಡೆದಿದೆ.

ಗ್ರಾಮದ ಯುವಕರು ಸಂಘಟಿತರಾಗಿ ಕಳೆದ ರಾತ್ರಿ ಇಡೀ ಗ್ರಾಮದ ಮನೆಮನೆಗೂ ಹೋಗಿ ಕಲ್ಲು ಗಣಿಗಾರಿಕೆಗೆ ಅನುಮತಿ ವಾಪಸ್ಸಾಗುವವರೆಗೂ ನಮ್ಮ ಗ್ರಾಮದ ಜನತೆ ಮತದಾನದಲ್ಲಿ ಪಾಲ್ಗೊಳ್ಳದಂತೆ ಕೈಗೊಂಡಿರುವ ನಿರ್ಧಾರಕ್ಕೆ ಬೆಂಬಲ ಕೋರಿದ್ದು, ಸಹಮತದೊಂದಿಗೆ ಗ್ರಾಮದಲ್ಲಿ ‘ಮತದಾನದ ಬಹಿಷ್ಕಾರ’ ಬ್ಯಾನರ್‌ಗಳನ್ನು ಅಳವಡಿಸಲಾಗಿದೆ.

ಗ್ರಾಮದ ಮುಖಂಡರು ತಿಳಿಸುವಂತೆ ಕಳೆದ ೨೦೧೮-೧೯ನೇ ಸಾಲಿನಲ್ಲಿ ಕೆಲವು ಅಧಿಕಾರಿಗಳು ಭ್ರಷ್ಟತೆಯಲ್ಲಿ ಮುಳುಗಿ ಅಕ್ರಮವಾಗಿ ಸರ್ವೆನಂ ೭೬ ಗೋಮಾಳ ಜಮೀನಿನಲ್ಲಿ ಕಲ್ಲು ಗಣಿಗಾರಿಕೆಗೆ ಅನುಮತಿ ಕೊಟ್ಟಿರುವುದನ್ನು ರಹಸ್ಯವಾಗಿಟ್ಟುಕೊಂಡು ೨೦೨೧ರಲ್ಲಿ ಗಣಿಗಾರಿಕೆ ಆರಂಭಿಸಲಾಗಿದೆ.
ಕಲ್ಲು ಗಣಿಗಾರಿಕೆಯಿಂದ ಗ್ರಾಮದ ಕೃಷಿ,ರೇಷ್ಮೆ,ಹೈನುಗಾರಿಕೆಗೆ ಆಗುತ್ತಿರುವ ತೊಂದರೆ ಮನಗಂಡ ಗ್ರಾಮಸ್ಥರು ಗಣಿಗಾರಿಕೆಗೆ ನೀಡಿರುವ ಅನುಮತಿ ರದ್ದುಪಡಿಸಲು ತಹಸೀಲ್ದಾರ್, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.

ಜಿಲ್ಲಾಡಳಿತ ಗ್ರಾಮಸ್ಥರ ಮನವಿಗೆ ಸ್ಪಂದಿಸದ ಕಾರಣ ಗ್ರಾಮಸ್ಥರು ಗಣಿಗಾರಿಕೆಗೆ ನೀಡಿರುವ ಅನುಮತಿ ರದ್ದು ಪಡಿಸಲು ಕೋರಿ ನ್ಯಾಯಾಲಯಕ್ಕೆ ಹೋಗಿದ್ದಾರೆ. ಹೈಕೋರ್ಟ್‌ನಲ್ಲಿ ಪ್ರಕರಣ ಕಲ್ಲು ಗಣಿಗಾರಿಕೆ ಮಾಲೀಕರ ಪರವೇ ಆಗಿದ್ದರಿಂದ ಮನನೊಂದ ಗ್ರಾಮಸ್ಥರು ಸುಪ್ರೀಂ ಕೋರ್ಟ್‌ಗೂ ಮೊರೆ ಹೋಗಿದ್ದಾರೆ.
ಇದೀಗ ಸುಪ್ರೀಂ ಕೋರ್ಟ್ ಸದರಿ ಪ್ರಕರಣವನ್ನು ಹಸಿರು ನ್ಯಾಯಾಧೀಕರಣಕ್ಕೆ ವಹಿಸಿದ್ದು, ಸ್ಥಳ ತನಿಖೆ ನಡೆಸಿ ಇತ್ಯರ್ಥಗೊಳಿಸಲು ಆದೇಶಿಸಿದೆ ಎಂದು ಗ್ರಾಮ ಪಂಚಾಯಿತಿ ಸದಸ್ಯ ಗೋಪಾಲಕೃಷ್ಣ ಮಾಹಿತಿ ನೀಡಿದ್ದಾರೆ.

ಈ ನಡುವೆ ಹಸಿರು ನ್ಯಾಯಾಧೀಕರಣದ ತೀರ್ಪು ಬರುವವರೆಗೂ ಗ್ರಾಮದಲ್ಲಿ ಕಲ್ಲು ಗಣಿಗಾರಿಕೆಗೆ ತಡೆ ನೀಡಬೇಕು, ರೈತರ ಬೆಳೆ ರಕ್ಷಣೆಗೆ ಕ್ರಮವಹಿಸಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.
ಜಿಲ್ಲಾಧಿಕಾರಿಗಳ ನೇತೃತ್ವದ ತಂಡ ಗ್ರಾಮಕ್ಕೆ ಬಂದು ಸ್ಥಳ ಪರಿಶೀಲನೆ ನಡೆಸಿ ಕಲ್ಲು ಗಣಿಗಾರಿಕೆಯಿಂದ ಆಗಿರುವ ಸಾಧಕಬಾಧಕಗಳ ಕುರಿತು ಗಮನಹರಿಸಿ ವರದಿ ನೀಡಬೇಕು, ಗಣಿಗಾರಿಕೆಗೆ ನೀಡಿರುವ ಅನುಮತಿ ರದ್ದುಪಡಿಸಬೇಕು ಎಂಬುದು ಗ್ರಾಮಸ್ಥರ ಒಕ್ಕೊರಲ ಆಗ್ರಹವಾಗಿದೆ.
ಈ ಹಿನ್ನಲೆಯಲ್ಲಿ ಗಣಿಗಾರಿಕೆ ತಡೆಗೆ ಅಗತ್ಯ ಕ್ರಮ ಕೈಗೊಳ್ಳುವವರೆಗೂ ಮತದಾನ ಬಹಿಷ್ಕರಿಸಲು ಗ್ರಾಮದ ಯುವಕರು ನಿರ್ಧಾರ ಕೈಗೊಂಡಿದ್ದು, ಈ ಸಂಬಂಧ ಗ್ರಾಮದಲ್ಲಿ ಓಡಾಡಿ ಸಹಮತ ಪಡೆದ ನಂತರವೇ ಯುವಕರ ತೀರ್ಮಾನವನ್ನು ಇಡೀ ಗ್ರಾಮವೇ ಒಪ್ಪಿದ್ದು, ಗ್ರಾಮದ ಹಲವಾರು ಕಡೆಗಳಲ್ಲಿ ಮತದಾನದ ಬಹಿಷ್ಕಾರದ ಬ್ಯಾನರ್ ಅಳವಡಿಸಿದ್ದಾರೆ.

ಜನಪ್ರತಿನಿಧಿಗಳು ನೀಡುವ ಭರವಸೆಗಳಿಗಿಂತ ಜಿಲ್ಲಾಧಿಕಾರಿಗಳೇ ಖುದ್ದು ಗ್ರಾಮಕ್ಕೆ ಬಂದು ಸಭೆ ನಡೆಸಿ ಕಲ್ಲುಗಣಿಗಾರಿಕೆಯಿಂದ ಆಗುತ್ತಿರುವ ಸಂಕಷ್ಟಗಮನಹರಿಸಿ ಕ್ರಮವಹಿಸಬೇಕು, ಹಸಿರು ನ್ಯಾಯಾಧೀಕರಣದ ತೀರ್ಪು ಬರುವವರೆಗೂ ಗಣಿಗಾರಿಕೆ ನಿಲ್ಲಿಸಲಿ
—ಗೋಪಾಲಕೃಷ್ಣ ಗ್ರಾ.ಪಂ ಸದಸ್ಯರು ದೊಡ್ಡ ಅಯ್ಯೂರು.

 

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!