• Tue. May 7th, 2024

PLACE YOUR AD HERE AT LOWEST PRICE

ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಗಾಜಗ ಗ್ರಾಮದವರಾದ ಅನಿಲ್ ಕುಮಾರ್   ವಿಧ್ಯಾಭ್ಯಾಸದಲ್ಲಿ ಸತತ ಮುಂದುವರೆದು ಬಂಗಾರಪೇಟೆ ಕೀರ್ತಿಯನ್ನು ಜರ್ಮನಿ ದೇಶದವರೆಗೂ ಪಸರಿಸಿದ್ದಾರೆ.

ಗಾಜಗ ಗ್ರಾಮದ ಕೃಷ್ಣಪ್ಪ(ತಾಪಂ ಮಾಜಿ ಸದಸ್ಯ) ಹಾಗೂ ವಿಮಲಮ್ಮ ದಂಪತಿಗಳಿಗಳ ದ್ವಿತೀಯ ಮಗ ಅನಿಲ್ ಕುಮಾರ್ ಬಂಗಾರಪೇಟೆಯ ವೆಂಕಟೇಶ್ವರ ಬೆಸ್ಟ್ ಸ್ಕೂಲ್, ಕಮ್ಮಸಂದ್ರ ಆಕ್ಸಫರ್ಡ್ ಶಾಲೆ, ಆಳ್ವಾಸ್ ಪದವಿಪೂರ್ವ ಕಾಲೇಜಿನ ಪದವಿ ಪೂರ್ವ ಶಿಕ್ಷಣ.

ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯ ಹಾಗೂ ಹಾಸನ ಕೃಷಿ ಕಾಲೇಜಿನಲ್ಲಿ ಸರ್ಕಾರಿ ಸ್ಕಾಲರ್ಶಿಪ್ ಪಡೆದು ಪದವಿಯನ್ನು ಮುಗಿಸಿದ ಅನಿಲ್, ಜರ್ಮನಿ ದೇಶದ ಕೃಷಿ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಮಾಡಲು ಅವಕಾಶ ಪಡೆದುಕೊಂಡಿದ್ದಾರೆ.

ಕರ್ನಾಟಕ ಸರ್ಕಾರದ ಪ್ರಬುದ್ಧ ಸ್ಕಾಲರ್ಶಿಪ್ ಅಡಿಯಲ್ಲಿ ಒಬ್ಬರಾಗಿ ಆಯ್ಕೆಯಾಗಿ ಸ್ನಾತಕೋತ್ತರ ಶಿಕ್ಷಣವನ್ನು ಮುಂದುವರೆಸಿ ಓದುತ್ತಿರುವ ಸಮಯದಲ್ಲಿ ಅವರು ವಿಶ್ವವಿದ್ಯಾಲಯದಲ್ಲಿ ಮೊದಲ ಬಾರಿಗೆ ವಿಶ್ವವಿದ್ಯಾಲಯದ ಪಾರ್ಲಿಮೆಂಟ್ನಲ್ಲಿ ಮೊದಲ ಭಾರತೀಯನಾಗಿ ಆಯ್ಕೆಯಾಗಿದ್ದಾರೆ.

ಒಂದು ವರ್ಷ ವಿಶ್ವವಿದ್ಯಾಲಯದ ಪಾರ್ಲಿಮೆಂಟಿನ ಸದಸ್ಯನಾಗಿ ಕೆಲಸ ಮಾಡಿದ ಅಂತರಾಷ್ಟ್ರೀಯ ಪಶು ಸಂಶೋಧನ ಕೇಂದ್ರದಲ್ಲಿ ಮತ್ತು  Hohenheim ವಿಶ್ವವಿದ್ಯಾಲಯ ಅಡಿಯಲ್ಲಿ ಅವರು ವ್ಯಾಸಂಗ ಮುಗಿಸಿದ್ದಾರೆ.

ಭಾರತದ ಕೃಷಿ, ಹೈನುಗಾರಿಕೆಯನ್ನು ಡಿಜಿಟಲ್ ಡೇಟಾ ಮತ್ತು ಡಿಜಿಟಲ್ ಅಪ್ಲಿಕೇಶನ ಮೂಲಕ ಭಾರತದ ಅನಿಮಲ್ ಬ್ರೀಡಿಂಗ್ ನಲ್ಲಿ ಬದಲಾವಣೆ ಮತ್ತು ಸುಧಾರಣೆ ಹೇಗೆ ಎಂಬ ವಿಷಯದಲ್ಲಿ ಪ್ರಬಂದವನ್ನು ಪ್ರಕಟಿಸಿದ್ದಾರೆ.

ಅಂತರರಾಷ್ಟ್ರೀಯ ಮಟ್ಟದ  ಪ್ರಪಂಚದ ಶ್ರೇಷ್ಠ ಸಂಶೋಧನೆ ಸಂಸ್ಥೆಯಂತಹ FiBL (ಸಾವಯವ ಕೃಷಿ ಸಂಶೋಧನೆ ಸಂಸ್ಥೆ switzerland)  ಸಾವಯವ ಕೃಷಿ ಸಂಶೋಧನಯಲ್ಲಿ  ಟ್ರೈನಿಂಗ್ ಮುಗಿಸಿ, ವೈಜ್ಞಾನಿಕ ಸಲಹೆಗಾರರಾಗಿಯೂ ಸಹ ಕೆಲಸಮಾಡಿದ್ದಾರೆ.

ಇದೀಗ ಇವರು ಅಂತರಾಷ್ಟ್ರೀಯ ಸಾವಯುವ ಕೃಷಿ ಸಂಸ್ಥೆ ಜರ್ಮನಿಯಲ್ಲಿ ಸಂಯೋಜಕರಾಗಿ, ಆಪ್ರಿಕದ 19 ದೇಶಗಳಲ್ಲಿ ನಡೆಯುವ ಸಾವಯುವ ಕೃಷಿ ಚಟುವಟಿಗಳಿಗೆ ಸಂಯೋಜಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಸಣ್ಣವಯಸ್ಸಿನಲ್ಲೇ ಹೋರಾಟದ ಮನೋಭಾವವನ್ನು ರೂಪಿಸಿಕೊಂಡು ವಿಶ್ವವಿದ್ಯಾಲಯದಲ್ಲಿ ಓದುತ್ತಿರುವಾಗಲೇ ಕರ್ನಾಟಕದಲ್ಲಿ ಖಾಸಗಿ ಕೃಷಿ ಕಾಲೇಜು ಕಾಯ್ದೆಗಳ ವಿರುದ್ದ ಮತ್ತು ಖಾಸಗಿ ಕಾಲೇಜುಗಳ ವಿರುದ್ಧ ಹೋರಾಟ ಮಾಡಿದ್ದಾರೆ.

ಅಂದಿನ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿಯವರುನ್ನು ಭೇಟಿ ಮಾಡಿ ಇಡೀ ರಾಜ್ಯದ 10000  ಕೃಷಿ ವಿದ್ಯಾರ್ಥಿಗಳೊಂದಿಗೆ ಬೆಂಗಳೂರಿನಲ್ಲಿ ದೊಡ್ಡ ಮಟ್ಟದ ಹೋರಾಟ ಮಾಡಿ 2 ತಿಂಗಳುಗಳ ನಿರಂತರ ಹೋರಾಟ ಮಾಡಿದ್ದಾರೆ.

ಖಾಸಗಿ ಕೃಷಿ ಕಾಲೇಜುಗಳಿಗೆ ಅನುಮತಿಯನ್ನು ರದ್ದು ಪಡೆಸುವಲ್ಲಿ ಯಶಸ್ವಿಯಾದರು. ಈ ಪ್ರತಿಭಟನೆಯ ಮುಂಚೂಣಿಯಲ್ಲಿದ್ದವರ ಪ್ರಮುಖರಲ್ಲಿ ಅನಿಲ್ ಕುಮಾರ್ ಕೂಡ ಒಬ್ಬರು.

ಶೋಷಿತವರ್ಗಗಳ ಮತ್ತು ಬಡವರ ಪರವಾಗಿ  ವಿಶ್ವವಿದ್ಯಾಲಯಗಳ ಮಟ್ಟದಲ್ಲಿ ಅವರ ಧ್ವನಿ ಎತ್ತುತ್ತ, ಭಾರತೀಯ ಕೃಷಿ ವಿದ್ಯಾರ್ಥಿಗಳ ಸಂಘದಲ್ಲಿ ಸಾಮಾನ್ಯ ಸದಸ್ಯರಾಗಿದ್ದ ಅನಿಲ್ ಕುಮಾರ್ ಅವರ ಮೊಟ್ಟಮೊದಲ ಬಾರಿಗೆ ಕಾಲೇಜಿನ ಅಧ್ಯಕ್ಷರಾಗಿ ಆಯ್ಕೆಯಾಗಿ.

ಕರ್ನಾಟಕದ ಕಾಲೇಜು ಉತ್ತಮ ಅಧ್ಯಕ್ಷರು ಎಂಬ ಪ್ರಶಸ್ತಿಗೆ ಪಾತ್ರರಾಗುತ್ತಾರೆ, ಡಾ|| ಜಿ. ಪರಮೇಶ್ವರ್ ಅವರು ಸ್ಥಾಪಿಸಿದಂತಹ ಅಂಬೇಡ್ಕರ್ ವಿದ್ಯಾರ್ಥಿ ಸಂಘದಲ್ಲಿ ಕೃಷಿ ವಿಶ್ವವಿದ್ಯಾಲಯಗಳಲ್ಲಿ ಮೊದಲನೆ ಬಾರಿಗೆ ಅದನ್ನು ಬೆಂಗಳೂರು.

ಜೊತೆಗೆ ಬೇರೆಡೆಗಳಲ್ಲಿ ಸ್ಥಾಪಿಸಿದ ಹೆಗ್ಗಳಿಕೆ ಅನಿಲ್ ಕುಮಾರ್ ರವರಿಗೆ ಸಲ್ಲುತ್ತದೆ. ಜರ್ಮನಿ ಯಲ್ಲೂ ಸಹ ಅನಿಲ್ ಬಡವಿದ್ಯಾರ್ಥಿಗಳಿಗೆ ಶೋಷಿತವರ್ಗದವರಿಗೆ ಯಾವ ರೀತಿ ಶಿಕ್ಷಣ ಪಡೆಯಬೇಕು.

ಯಾವ ರೀತಿ ವಿದೇಶದ ವ್ಯಾಸಂಗ ಮಾಡಬೇಕೆಂದು ತಿಂಗಳಿಗೊಮ್ಮೆ ಒಂದು ಬಾರಿ ಸೆಮಿನಾರುಗಳನ್ನು ನಡೆಸಿ ತರಬೇತಿ ನೀಡುತ್ತಿದ್ದಾರೆ. ಭಾರತೀಯ ಕೃಷಿ ವಿದ್ಯಾರ್ಥಿ ಸಂಘ ಇವರನ್ನು ಅಂತರಾಷ್ಟ್ರೀಯ ಸಂಪುಟದ ಕ್ಯಾಬಿನೆಟ್ ಸಂಪುಟದ ಸದಸ್ಯರಾಗಿ ಆಯ್ಕೆ ಮಾಡಿ, ಜರ್ಮನಿಗೆ ಸಂಯೋಜಕರಾಗಿ ಸಹ ಆಯ್ಕೆ ಮಾಡಲಾಗಿದೆ.

ಭಾರತೀಯ ಬೆನ್ನೆಲುಬಾದ ಕೃಷಿಯನ್ನು ಯಾವ ರೀತಿ  ಉತ್ತಮ ಪಡಿಸುವುದರಿಂದ ಜನ ನಗರಗಳಿಗೆ ವಲಸೆ ಹೋಗುವುದನ್ನು ತಪ್ಪಿಸುವುದು ಹಾಗೂ ಕೃಷಿಯನ್ನು ಉನ್ನತಮಟ್ಟದಲ್ಲಿ ಅದರಲ್ಲೂ ಸಾವಯವ ಕೃಷಿಯಿಂದ ಜನರಿಗೆ ಸಿಗುವ ಅರೋಗ್ಯ.

ಯಾವ ರೀತಿ ರೈತರು  ಪರಿಸರದ ಗುಣಮಟ್ಟವನ್ನು ಕಾಪಾಡಬಹುದು ಎಂದು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಅವಿರತ ಪ್ರಯತ್ನ ನಡೆಸುತ್ತಿದ್ದಾರೆ, ಜರ್ಮನಿ ದೇಶದಲ್ಲಿರುವ ಭಾರತೀಯ ಕಾಂಗ್ರೆಸ್ ನ ಸಮಿತಿಯಲ್ಲಿ ಸಕ್ರಿಯ ಸದಸ್ಯರಾಗಿದ್ದಾರೆ.

ಅನಿಲ್ ಕುಮಾರ್ ರವರು ಅವರ ನಮ್ಮ ರಾಜ್ಯ ಹಾಗೂ ನಮ್ಮ ದೇಶ ಕೀರ್ತಿಯನ್ನು ಮತ್ತಷ್ಟು ಹೆಚ್ಚಿಸಲಿ ಎಂಬುದು ನಮ್ಮಸುದ್ದಿ.ನೆಟ್ ನ ಆಶಯವಾಗಿದೆ.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!