• Sun. Apr 28th, 2024

ಜು.೧,೨ ಮತ್ತು ೩ ರಂದು ಕೈವಾರದಲ್ಲಿ ಗುರುಪೂಜಾ ಸಂಗೀತೋತ್ಸವ ನಿರಂತರ ೭೨ ಗಂಟೆ ದಾಖಲೆಯ ಸಂಗೀತ ಸೇವೆ-ಬಾಲಕೃಷ್ಣ ಭಾಗವತರ್

PLACE YOUR AD HERE AT LOWEST PRICE

ಅವಿಭಜಿತ ಕೋಲಾರ ಜಿಲ್ಲೆಯ ಇತಿಹಾಸ ಪ್ರಸಿದ್ದ ಪುಣ್ಯಕ್ಷೇತ್ರ ಕೈವಾರದ ಸದ್ಗುರು ಶ್ರೀ ಯೋಗಿ ನಾರೇಯಣ ತಾತಯ್ಯನವರ ಮಠದಲ್ಲಿ ಗುರುಪೂರ್ಣಿಮಾ ಅಂಗವಾಗಿ ಜು.೧ ರಿಂದ ೩ ರವರೆಗೂ ನಡೆಯಲಿರುವ ಸತತ ದಾಖಲೆಯ ೭೨ ಗಂಟೆಗಳ ಗುರುಪೂಜಾ ಸಂಗೀತ ಸೇವೆಯನ್ನು ತಾತಯ್ಯನವರಿಗೆ ಸಮರ್ಪಿಸಲಾಗುತ್ತಿದೆ ಎಂದು ಕೈವಾರ ಕ್ಷೇತ್ರದ ಶ್ರೀಯೋಗಿನಾರೇಯಣ ಸಂಕೀರ್ತನಾ ಯೋಜನೆಯ ಸಂಚಾಲಕ ವಾನರಾಶಿ ಬಾಲಕೃಷ್ಣ ಭಾಗವತರ್ ತಿಳಿಸಿದರು.

ಕೋಲಾರ ನಗರದ ಪತ್ರಕರ್ತರ ಭವನದಲ್ಲಿ ಈ ಸಂಬಂಧ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಷ್ಟ್ರಮಟ್ಟದ ಖ್ಯಾತ ಸಂಗೀತ ಕಲಾವಿದರೊಂದಿಗೆ ಸ್ಥಳೀಯ ಕಲಾವಿದರೂ ಮತ್ತು ಸಹಸ್ರಾರು ಭಜನಾ ತಂಡಗಳು ಈ ನಾದೋಪಾಸನೆಯಲ್ಲಿ ಭಾಗವಹಿಸಿ ಸಂಗೀತ ಸೇವೆಯನ್ನು ನಿರಂತರ ೭೨ ಗಂಟೆಗಳ ಕಾಲ ಸದ್ಗುರು ತಾತಯ್ಯನವರಿಗೆ ಸಮರ್ಪಿಸಲಿದ್ದಾರೆ ಎಂದರು.

ಜು. ೧ ಶನಿವಾರದಂದು ಬೆಳಿಗ್ಗೆ ೬ ಗಂಟೆಗೆ ಸದ್ಗುರುಗಳನ್ನು ಸಭಾಂಗಣಕ್ಕೆ ಕರೆತಂದು ಕಾರ್ಯಕ್ರಮಗಳನ್ನು ಪ್ರಾರಂಭಿಸಲಾಗುತ್ತದೆ. ಧರ್ಮಾಧಿಕಾರಿ ಡಾ||ಎಂ.ಆರ್.ಜಯರಾಮ್ ರವರ ನೇತೃತ್ವದಲ್ಲಿ ಸಾಮೂಹಿಕ ನಾಮ ಸಂಕೀರ್ತನೆಯೊಂದಿಗೆ ಸಂಗೀತೋತ್ಸವಕ್ಕೆ ಚಾಲನೆಯನ್ನು ನೀಡಲಾಗುತ್ತದೆ ಎಂದರು.

ಅಂದು ಸಂಜೆ ವಿಶೇಷ ಕಾರ್ಯಕ್ರಮದಲ್ಲಿ ಎ.ಚಂದನ್ ಕುಮಾರ್ ಮೈಸೂರು ರವರಿಂದ ಪಿಟೀಲುವಾದನ, ಡಾ||ಎಸ್.ವಿ.ಸಹನಾ ರವರಿಂದ ವೀಣಾವಾದನ, ಶ್ರೀ ಆದಿಚುಂಚನಗಿರಿ ಮಠ ನಾರಾಯಣಧಾಮದ ಶ್ರೀಸಾಯಿಕೀರ್ತಿನಾಥ ಸ್ವಾಮಿಜೀ, ಎಂ.ಆರ್.ಸುಧಾ, ಅಧಿತಿ ಪ್ರಹ್ಲಾದ್, ಡಿ.ಆರ್.ರಾಜಪ್ಪರವರಿಂದ ಗಾಯನ ಕಾರ್ಯಕ್ರಮಗಳು ಇರುತ್ತದೆ ಎಂದರು.

ಜು.೨ ರಂದು ಎಸ್.ಐಶ್ವರ್ಯ-ಎಸ್.ಸೌಂದರ್ಯ, ಚೆನ್ನೈನ ಸಂದೀಪ್ ನಾರಾಯಣ ಗಾಯನವಿರುತ್ತದೆ. ಯು.ರಾಜೇಶ್ ಮ್ಯಾಂಡೋಲಿನ್, ಡಾ||ವೇದಾಂತಂ ರಾಮಲಿಂಗಶಾಸ್ತ್ರೀ ತಂಡದವರಿಂದ ನೃತ್ಯ ರೂಪಕ, ಚಿನ್ನಮನ್ನೂರ್ ಎ.ವಿಜಯ್ ಕಾರ್ತೀಕೇಯನ್, ಪ್ರಕಾಶ್ ಇಳಯರಾಜ, ಪಿ.ಎಂ.ರಂಜೀತ್ ವಿನಾಯಕ್, ಬಿ.ಮುತ್ತುಕುಮಾರ್, ತಿರುಪ್ಪಂಬುರಮ್ ಸಹೋದರರಾದ ಟಿ.ಕೆ.ಎಸ್.ಮೀನಾಕ್ಷಿ ಸುಂದರಂ, ಟಿ.ಎಸ್.ಎನ್.ಶೇಷಗೋಪಾಲನ್, ತಿರುಪಂಗೂರ್ ಟಿ.ಜಿ.ಮುತ್ತುಕುಮಾರಸ್ವಾಮಿ, ತಿರುಕಡಿಯೂರ್ ಟಿ.ಜಿ.ಬಾಬುರವರಿಂದ ವಿಶೇಷ ನಾದಸ್ವರ, ತವಿಲ್ ವಾದನವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಜು.೩ ಸೋಮವಾರ ಗುರುಪೂರ್ಣಿಮ ದಿನ ಬೆಳಿಗ್ಗೆ ೧೦.೩೦ ರಿಂದ ಸದ್ಗುರು ಯೋಗಿ ನಾರೇಯಣ ತಾತಯ್ಯನವರಿಗೆ ವಿಶೇಷ ಗುರುಪೂಜೆಯನ್ನು ನಡೆಸಲಾಗುವುದು. ನಾಡಿನ ಪ್ರಸಿದ್ಧ ವಿದ್ವಾಂಸರುಗಳಿಂದ ತಾತಯ್ಯನವರು ರಚಿಸಿರುವ ಪಂಚರತ್ನ ಕೀರ್ತನೆಗಳ ಗೋಷ್ಠಿಗಾಯನ ನಡೆಯಲಿದೆ.

ಆನೂರು ಅನಂತಕೃಷ್ಣಶರ್ಮ ತಂಡದವರಿಂದ ಲಯಲಹರಿ ತಾಳವಾದ್ಯ, ತೇಜಸ್ವಿನಿ ಮನೋಜ್ ಕುಮಾರ್, ಬೊಮ್ಮಿಶೆಟ್ಟಿ ರಘುನಾಥ್, ಕೆ.ಸುಧಾಮಣಿ ವೆಂಕಟರಾಘವನ್, ಭೈರತಿ ಆಂಜಿನಪ್ಪ, ಮಹಾಲಿಂಗಯ್ಯ ಮಠದ್ ರವರಿಂದ ಗಾಯನ, ಆರ್.ಮಂಜುನಾಥ್ ರವರಿಂದ ಸ್ಯಾಕ್ಸೋಪೋನ್, ವೇದಾಂತಂ ವಾಗ್ದೇವಿ ಪ್ರಸಾದ್ ರವರಿಂದ ಕುಚುಪೂಡಿ ನೃತ್ಯ, ಹಾಗೂ ಸಾಯಿತೇಜಸ್ವಿನಿ, ಮೇಘನಾ ಟಿ.ಎಂ., ಕೇಶವ ಡ್ಯಾನ್ಸ್ ಅಕಾಡೆಮಿ ತಂಡದವರಿಂದ ಭರತನಾಟ್ಯ ಕಾರ್ಯಕ್ರಮವಿರುತ್ತದೆ ಎಂದರು.

ಕೈವಾರ ಯೋಗಿ ನಾರೇಯಣ ಮಠದ ಚಿಂತಕ,ಪ್ರವಚನಕಾರ ತಳಗವಾರ ಆನಂದ್ ಮಾತನಾಡಿ, ಮೂರು ದಿನಗಳ ಕಾಲ ಪ್ರತಿನಿತ್ಯ ಕೋಲಾರ, ಚಿಕ್ಕಬಳ್ಳಾಪುರ ಮತ್ತು ನಾಡಿನ ಹೆಸರಾಂತ ಕಾಲಾವಿದರಿಂದ ಸಂಗೀತ ಕಛೇರಿ, ನಾದಸ್ವರ-ತವಿಲ್ ವಾದನ, ಭರತನಾಟ್ಯ, ಹರಿಕಥೆ, ಬುರ್ರಕಥೆ, ಹಾಗೂ ಸಾವಿರಾರು ಭಜನಾ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತದೆ ಎಂದರು.

ಸತತ ೨೫ ವರ್ಷಗಳಿಂದ ಈ ಸಂಗೀತ ಸೇವೆ ನಡೆಸಿಕೊಂಡು ಬರುತ್ತಿದ್ದು, ಧರ್ಮಾಧಿಕಾರಿ ಡಾ.ಜಯರಾಂ ಅವರು ಈಗಾಗಲೇ ಸಾವಿರಾರು ಹಳ್ಳಿಗಳಿಗೆ ಸ್ವತಃ ಹೋಗಿ ತಾತಯ್ಯನವರ ತತ್ವಗಳ ಪ್ರಚಾರ ನಡೆಸಿದ್ದಾರೆ. ಸಮಾಜಕ್ಕೆ ಅಗತ್ಯವಾದ ತಾತಯ್ಯನವರ ತತ್ವಗಳು ಪ್ರತಿಯೊಬ್ಬರಿಗೂ ತಲುಪಿಸುವ ಕಾರ್ಯವನ್ನು ಮಠ ಮಾಡುತ್ತಿದೆ ಎಂದರು.
ಶ್ರೀಯೋಗಿನಾರೇಯಣ ಮಠ ಟ್ರಸ್ಟ್‌ನ ಆಡಳಿತಾಧಿಕಾರಿ ಕೆ.ಲಕ್ಷ್ಮೀ ನಾರಾಯಣ ಉಪಸ್ಥಿತರಿದ್ದರು.

 

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!