• Fri. May 10th, 2024

PLACE YOUR AD HERE AT LOWEST PRICE

ತಮಿಳು ನಟ ಧನುಷ್ ನಟನೆಯ ಮುಂದಿನ ಚಿತ್ರ ಕ್ಯಾಪ್ಟನ್ ಮಿಲ್ಲರ್‌ನ ಫಸ್ಟ್ ಲುಕ್ ಬಿಡುಗಡೆಗೊಂಡಿದೆ. ಈ ಚಿತ್ರ ವಿಭಿನ್ನ ಕಾರಣಗಳಿಗೆ ಸಿಕ್ಕಾಪಟ್ಟೆ ಸುದ್ದಿಗೀಡಾಗಿದ್ದು, ತಾರಾಗಣದಿಂದಲೂ ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿತ್ತು. ಈ ವರ್ಷ ಈಗಾಗಲೇ ವಾತಿ ಚಿತ್ರದ ಮೂಲಕ ನೂರು ಕೋಟಿ ಬಾಚಿ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸಿರುವ ಧನುಷ್ ಈ ಚಿತ್ರದ ಮೂಲಕವೂ ಸಹ ಸದ್ದು ಮಾಡಲಿದೆ ಎಂಬುದನ್ನು ಚಿತ್ರದ ಮೇಲಿರುವ ಕ್ರೇಜ್ ಹೇಳುತ್ತಿದೆ‌.

ಇನ್ನು ಈ ಚಿತ್ರದಲ್ಲಿ ನಾಯಕಿಯಾಗಿ ಪ್ರಿಯಾಂಕಾ ಅರುಲ್ ಮೋಹನ್ ನಟಿಸಿದ್ದಾರೆ ಹಾಗೂ ಸಂದೀಪ್ ಕಿಶನ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಅದರ ಜತೆ ಸ್ಯಾಂಡಲ್‌ವುಡ್ ಕಿಂಗ್ ಶಿವ ರಾಜ್‌ಕುಮಾರ್ ಸಹ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಚಿತ್ರದ ಫಸ್ಟ್ ಲುಕ್‌ನಲ್ಲಿ ಧನುಷ್ ಹೆಣಗಳ ರಾಶಿ ಇರುವ ಯುದ್ಧಭೂಮಿಯಲ್ಲಿ ಆಕಾಶ ನೋಡುತ್ತಾ ನಿಂತಿರುವ ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಹೆಸರಿನ ಮೂಲಕ ಹುಟ್ಟಿಕೊಂಡಿದ್ದ ಕ್ರೇಜ್ ಧನುಷ್ ಅವರ ಈ ಲುಕ್‌ನಿಂದ ಮತ್ತಷ್ಟು ಹೆಚ್ಚಿಸಿದೆ.

ಈ ಫಸ್ಟ್ ಲುಕ್ ಬಿಡುಗಡೆಯಾದ 22 ಗಂಟೆಗಳಲ್ಲಿಯೇ 1 ಲಕ್ಷ ಲೈಕ್‌ಗಳನ್ನು ಟ್ವಿಟರ್‌ನಲ್ಲಿ ಪಡೆದುಕೊಂಡಿದ್ದು ಧನುಷ್ ಸಿನಿ ಕೆರಿಯರ್‌ನಲ್ಲಿ ಅತಿವೇಗವಾಗಿ ಲಕ್ಷ ಲೈಕ್ಸ್ ಪಡೆದುಕೊಂಡ ಫಸ್ಟ್ ಲುಕ್ ಇದಾಗಿದೆ. ಚಿತ್ರದ ಟೀಸರ್ ಇದೇ ತಿಂಗಳ 12ರಂದು ಬಿಡುಗಡೆಯಾಗಲಿದೆ. ಚಿತ್ರಕ್ಕೆ ರಾಕಿ ಚಿತ್ರದ ಖ್ಯಾತಿಯ ಅರುಣ್ ಮಾದೇಶ್ವರನ್ ಆಕ್ಷನ್ ಕಟ್ ಹೇಳಿದ್ದಾರೆ.

ಇನ್ನು ಈ ಸಿನಿಮಾದಲ್ಲಿ ಸೆಂಚುರಿ ಸ್ಟಾರ್ ಶಿವಣ್ಣ ಧನುಷ್ ಅಣ್ಣನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹಾಗಂತ ಇದು ಅಣ್ಣ ತಮ್ಮ ಕಥೆ ಅಲ್ಲದೇ ಇದ್ದರೂ, ಶಿವಣ್ಣ ಪಾತ್ರಕ್ಕೆ ಸಿನಿಮಾದಲ್ಲಿ ಉತ್ತಮ ಹಿನ್ನೆಲೆಯಿದೆ ಎಂಬ ಮಾತಿದೆ. ಈ ಕಾರಣಕ್ಕೆ ಶಿವರಾಜ್‌ಕುಮಾರ್ ಕೂಡ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿದೆ.

ಶಿವರಾಜ್‌ಕುಮಾರ್ ಹಾಗೂ ಧನುಷ್ ಇಬ್ಬರ ಸ್ನೇಹ ಇಂದಿನದಲ್ಲ. ಬಹಳ ವರ್ಷಗಳಿಂದಲೂ ಇವರಿಬ್ಬರ ಒಡನಾಟವಿದೆ. ಈ ಹಿಂದೆ ಶಿವರಾಜ್‌ಕುಮಾರ್ ನಟಿಸಿದ್ದ ‘ವಜ್ರಕಾಯ’ ಸಿನಿಮಾದ ನೋ ಪ್ರಾಬ್ಲಮ್ ಹಾಡಿಗೆ ಧನುಷ್ ಧ್ವನಿ ನೀಡಿದ್ದರು.

“ನಾನು ಧನುಶ್‌ರ ದೊಡ್ಡ ಅಭಿಮಾನಿ. ಅವರ ಎಲ್ಲ ಸಿನಿಮಾಗಳನ್ನೂ ನಾನು ನೋಡಿದ್ದೇನೆ. ನನ್ನನ್ನು ನಾನು ಧನುಶ್ ಅವರಲ್ಲಿ ಕಾಣುತ್ತೇನೆ. ಅವರ ವ್ಯಕ್ತಿತ್ವ ಸಹ ನನ್ನೊಂದಿಗೆ ಹೋಲುತ್ತದೆ.

ಅವರು ನನ್ನಂತೆಯೇ ಇದ್ದಾರೆ ಅಥವಾ ನಾನು ಅವರಂತೆ ಇದ್ದೇನೆ. ಅವರೊಟ್ಟಿಗೆ ನಟಿಸುವ ಅವಕಾಶವನ್ನು ಕೈಬಿಡುವುದು ನನಗೆ ಇಷ್ಟವಿರಲಿಲ್ಲ ಹಾಗಾಗಿ ಸಿನಿಮಾವನ್ನು ಒಪ್ಪಿಕೊಂಡೆ” ಎಂದು ಸಂದರ್ಶನವೊಂದರಲ್ಲಿ ಶಿವರಾಜ್ ಕುಮಾರ್ ಹೇಳಿದ್ದರು.

(ನಮ್ಮಸುದ್ದಿ.ನೆಟ್) nammasuddi.net

ನಲ್ಲಿ ಜಾಹಿರಾತಿಗಾಗಿ ಸಂಪರ್ಕಿಸಿ:

ಕೆ.ಎಸ್.ಗಣೇಶ್-9448311003. ಸಿ.ವಿ.ನಾಗರಾಜ್-9632188872. ಕೆ.ರಾಮಮೂರ್ತಿ-9449675480.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!