• Sat. Apr 27th, 2024

ಜಿಲ್ಲಾಧಿಕಾರಿ  ಅಕ್ರಂಪಾಷಾರಿಂದ ದಿಢೀರ್ ನಗರ ಪ್ರದಕ್ಷಿಣೆ ರಾಜಕಾಲುವೆ, ರಸ್ತೆ ಬದಿ ಕಸದ ರಾಶಿಗಳ ಪರಿಶೀಲನೆ ಸ್ವಚ್ಛತೆಗೆ ಸೂಚನೆ

PLACE YOUR AD HERE AT LOWEST PRICE

ಕೋಲಾರ ಜಿಲ್ಲಾಧಿಕಾರಿ ಅಕ್ರಂಪಾಷಾ ಬುಧವಾರ ಮುಂಜಾನೆ ದಿಢೀರ್ ನಗರ ಪ್ರದಕ್ಷಿಣೆ ಹಾಕುವ ಮೂಲಕ ನಗರದ ಕಸದ ರಾಶಿಗಳು ಮತ್ತು ಕೊಳಕು ರಾಜಕಾಲುವೆಗಳ ಖುದ್ದು ಪರಿಶೀಲನೆ ನಡೆಸಿ ತ್ವರಿತವಾಗಿ ಸ್ವಚ್ಛಗೊಳಿಸಲು ಕ್ರಮವಹಿಸಬೇಕೆಂದು ಅಕಾರಿಗಳಿಗೆ ಸೂಚನೆ ನೀಡಿದರು.

ಮೊದಲ ಸುದ್ದಿಗೋಷ್ಠಿಯಲ್ಲಿಯೇ ನಗರದ ಸ್ವಚ್ಛತೆ ಮತ್ತು ಸೌಂದರೀಕರಣಕ್ಕೆ ಒತ್ತು ನೀಡುವುದಾಗಿ ಘೋಷಿಸಿದ್ದ ಜಿಲ್ಲಾಕಾರಿ ಅಕ್ರಂಪಾಷಾ, ಬುಧವಾರ ಮುಂಜಾನೆಯೇ ನಗರಸಭೆ ಆಯುಕ್ತ ಶಿವಾನಂದ ಮತ್ತು ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕ ಖಲೀಲ್‌ರೊಂದಿಗೆ ನಗರ ಪ್ರದಕ್ಷಿಣೆ ನಡೆಸುವ ಮೂಲಕ ನಗರದ ಅಸ್ವಚ್ಛತೆಯನ್ನು ಖುದ್ದು ಪರಿಶೀಲಿಸಿದರು.

ಮೊದಲಿಗೆ ಇಟಿಸಿಎಂ ಮುಂಭಾಗದಲ್ಲಿರುವ ರಾಜಕಾಲುವೆಯು ನಗರದ ಕೊಳಕನೆಲ್ಲಾ ಕೆರೆಗೆ ಸೇರಿಸುವುದರ ಜೊತೆಗೆ ಕಸ ತುಂಬಿಕೊಂಡು ಸೊಳ್ಳೆಗಳ ಆವಾಸಸ್ಥಾನವಾಗಿರುವುದರ ಕುರಿತು ಪರಿಶೀಲನೆ ನಡೆಸಿ ಸ್ವಚ್ಛಗೊಳಿಸಲು ಸೂಚಿಸಿದರು.

ಬಂಗಾರಪೇಟೆ ವೃತ್ತದ ಮಾರ್ಗವಾಗಿ ಸಂಚರಿಸಿ ರಸ್ತೆಯಲ್ಲಿ ಹಾಕಿರುವ ಹಾಗೂ ಟೇಕಲ್ ರಸ್ತೆಯ ಆರಂಭದಲ್ಲಿಯೇ ರೈಲ್ವೆಮಾರ್ಗದ ಬಳಿಇರುವ ಕಸದ ರಾಶಿಗಳನ್ನು ಪರಿಶೀಲಿಸಿ ತಕ್ಷಣಕ್ಕೆ ಕಸತೆರವುಗೊಳಿಸಲು ಆದೇಶಿಸಿದರು.

ಟೇಕಲ್ ರಸ್ತೆಯಲ್ಲಿ ಸಾಗಿ ಬಂದ ನಂತರ ಹೆದ್ದಾರಿ ಸೇವಾ ರಸ್ತೆಯಲ್ಲಿ ಸಂಚರಿಸಿ ರಸ್ತೆಬದಿಯಲ್ಲಿ ಕಸವನ್ನು ಅನಕೃತವಾಗಿ ರಾಶಿ ಹಾಕಿರುವುದನ್ನು ಪರಿಶೀಲಿಸಿ ರಸ್ತೆ ಬದಿಗಳಲ್ಲಿ ಕಸ ಹಾಕಲು ಅವಕಾಶ ಕಲ್ಪಿಸದಂತೆ ಸೂಚಿಸಿದರು. ಹಾಕಿರುವ ಕಸವನ್ನು ಸ್ವಚ್ಛಗೊಳಿಸಲು ತಿಳಿಸಿದರು.

ನಗರದ ಗಡಿಯಾರ ಗೋಪುರ ವೃತ್ತವನ್ನು ಹಾದು ಬಂದು ಅಂತರಗಂಗೆ ರಸ್ತೆಯ ಸಂಪೂರ್ಣ ಹಾಳಾಗಿರುವುದನ್ನು ಪರಿಶೀಲಿಸಿದರು. ಸ್ವಾತಂತ್ರ್ಯ ದಿನಾಚರಣೆಗೆ ಮಂತ್ರಿ ಮತ್ತು ಶಾಸಕರು ಅಕಾರಿ ವಿದ್ಯಾರ್ಥಿಗಳು ಇದೇ ರಸ್ತೆಯಲ್ಲಿ ಸಂಚರಿಸಬೇಕಾಗಿರುವುದರಿಂದ ಈ ರಸ್ತೆಯನ್ನು ಸ್ವಾತಂತ್ರ್ಯ ದಿನಕ್ಕಾಗಿ ತೇಪೆ ಹಾಕಿ ಸರಿಪಡಿಸುವ ಬದಲು ಕೂಡಲೇ ಇಡೇ ರಸ್ತೆಗೆ ಡಾಂಬರೀಕರಣ ಮಾಡಬೇಕು, ಸ್ವಾತಂತ್ರೋತ್ಸವಕ್ಕೆ ಸಜ್ಜುಗೊಳಿಸಬೇಕೆಂದು ಲೋಕೋಪಯೋಗಿಇಲಾಖೆಯ ಅಕಾರಿಗಳಿಗೆ ಮೊಬೈಲ್ ಮೂಲಕ ಆದೇಶಿಸಿದರು.

ಇದೇ ರಸ್ತೆಯಲ್ಲಿರುವ ಕಾಲುವೆಗಳು ಮತ್ತು ರಸ್ತೆಬದಿಹಾಕಿರುವ ಕಸವನ್ನುವೀಕ್ಷಿಸಿ ತೆರವುಗೊಳಿಸಲು ಶೀಘ್ರ ಕ್ರಮ ತೆಗೆದುಕೊಳ್ಳಬೇಕೆಂದು ಸೂಚಿಸಿದರು.

ಆನಂತರ ಬಸ್ ನಿಲ್ದಾಣ ಮುಂಭಾಗದರಸ್ತೆಯ ಮಾರ್ಗವಾಗಿ ಅಂಬೇಡ್ಕರ್ ಜೋಡಿ ರಸ್ತೆಯುದ್ದಕ್ಕೂ ಸಾಗಿ ಬಂದು ವಾಪಸಾದರು. ಈ ಸಂದರ್ಭದಲ್ಲಿ ಇಡೀ ಕೋಲಾರ ನಗರದಲ್ಲಿ ಅಸ್ವಚ್ಛತೆತಾಂಡವವಾಡುತ್ತಿದ್ದುದು ಜಿಲ್ಲಾಕಾರಿಗಳ ಅಸಮಾಧಾನಕ್ಕೆ ಕಾರಣವಾಗಿತ್ತು.

ನಗರದ ಸ್ವಚ್ಛತೆ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚಿಸುವ ಮೂಲಕ ಕೋಲಾರ ಸ್ವಚ್ಛನಗರವಾಗಿಮಾರ್ಪಡಿಸಲು ಮೊದಲ ಹೆಜ್ಜೆ ಇಟ್ಟರು.

 

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!