• Sun. Apr 28th, 2024

PLACE YOUR AD HERE AT LOWEST PRICE

ಬಂಗಾರಪೇಟೆ:ಶಿರಡಿ ಸಾಯಿ ಮಂದಿರ ಟ್ರಸ್ಟ್ವತಿಯಿಂದ ಶಿಕ್ಷಣಕ್ಕೆ ಕ್ಷೇತ್ರಕ್ಕೆ ಒತ್ತು ನೀಡುವ ಹಿತ ದೃಷ್ಠಿಯಿಂದ ಗ್ರಾಮೀಣ ಭಾಗದ ಶಾಲಾ ಮಕ್ಕಳಿಗೆ ಉಚಿತ ನೋಟ್ ಪುಸ್ತಕ, ಪ್ರತಿಭಾವಂತ ವಿಧ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸೇರಿದಂತೆ ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಬಂದಿದ್ದೇವೆ ಎಂದು ಶಿರಡಿ ಸಾಯಿ ಮಂದಿರ ಟ್ರಸ್ಟ್ ಅಧ್ಯಕ್ಷ ನಾರಾಯಣಸ್ವಾಮಿ ಹೇಳೀದರು.

ತಾಲ್ಲೂಕಿನ ಕೀಲುಕೊಪ್ಪ ಗ್ರಾಮದ ಶ್ರೀ ಶನೇಶ್ವರ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ರಿಂದ ೭ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳಿಗೆ ಸಾಯಿ ಟ್ರಸ್ಟ್ ವತಿಯಿಂದ ಉಚಿತ ನೋಟ್ ಪುಸ್ತಕ ವಿತರಿಸಿ ಮಾತನಾಡಿದ ಅವರು ಈಗಾಗಲೇ ನಾವು ತಾಲ್ಲೂಕಿನ ಬೂದಿಕೋಟೆ ಹೋಬಳಿ ಎಂ.ಹೊಸಹಳ್ಳಿ ಗ್ರಾಮದಲ್ಲಿ ಹುಟ್ಟಿದ್ದು, ಆದ್ಯಾತ್ಮಿಕತೆ ಹೆಚ್ಚು ಒತ್ತು ನೀಡಿ ಗ್ರಾಮದ ಗಂಗಮ್ಮ ದೇವಾಲಯವನ್ನು ಅಭಿವೃದ್ಧಿ ಮಾಡಿದೇವು.

ನಂತರ ದೈವ ಪ್ರೇರಣೆಯಾಗಿ ಶಿರಡಿ ಸಾಯಿ ಮಂದಿರ ನಿರ್ಮಾಣ ಮಾಡಿ ಶಿರಡಿಯಲ್ಲಿ ನಡೆಯುವಂತೆ ಪ್ರತಿದಿನ ಪೂಜಾ ಕೈಕರ್ಯಗಳು ನಡೆಸಿಕೊಂಡು ಬಂದಿದ್ದು, ನಿತ್ಯ ಅನ್ನದಾನ ನಡೆಯುತ್ತಿದೆ ಎಂದರು ಇದರ ನಂತರ ಸಮಾಜ ಮುಖಿ ಕಾರ್ಯ ಮಾಡುವ ಉದ್ದೇಶದಿಂದ ಗುಲ್ಲಹಳ್ಳಿ, ಯಳೇಸಂದ್ರ, ಶಾಲೆ ಸೇರಿದಂತೆ ೨೦ ಶಾಲೆಯ ಮಕ್ಕಳಿಗೆ ನೋಟ್ ಪುಸ್ತಕ ವಿತರಣೆ ಮಾಡುತ್ತಿದ್ದೇವೆ ಎಂದರು.

ಎಲ್ಲಾ ವಿದ್ಯಾರ್ಥಿಗಳಿಗೆ ಒಳ್ಳೆಯದಾಗಲಿ, ಉತ್ತಮ ವ್ಯಾಸಂಗ ಮಾಡಿ ಮುಂದೆ ಬನ್ನಿ ನೀವು ಸಹ ದಾನ ಮಾಡುವ ಗುಣ ಬೆಳೆಸಿಕೊಳ್ಳಿ ಎಂದರು, ಶಿಕ್ಷಕರ ಮಾರ್ಗದರ್ಶನ ಪಡೆದು ಜೀವನದಲ್ಲಿ ಮುಂದೆ ಬನ್ನಿ ಎಂದು ಶುಭ ಹಾರೈಸಿದರು.

ಗುಲ್ಲಹಳ್ಳಿ ಸಿಆರ್ಪಿ ರಾಜಪ್ಪ ಮಾತನಾಡಿ ಸಾಯಿ ಟಸ್ಟ್ ವತಿಯಿಂದ ಕಳೆದ ವರ್ಷಗಳಿಂದ ಸರ್ಕಾರಿ ಶಾಲೆಯ ಮಕ್ಕಳಿಗೆ ನೋಟ್ ಪುಸ್ತಕಗಳನ್ನು ನೀಡುತ್ತಿದ್ದಾರೆ, ದಾನ ಮಾಡುವ ಗುಣ ಎಲ್ಲರಿಗೂ ಬರುವುದಿಲ್ಲ, ಸಾಯಿಬಾಬಾ ಇವರಿಗೆ ಇನ್ನು ಹೆಚ್ಚು ಆರೋಗ್ಯ, ಐಶ್ವರ್ಯ, ಸಂತೋಷ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು.

ಮುಖ್ಯಶಿಕ್ಷಕ ಎಚ್.ಎಲ್.ಆನಂದ್ ಮಾತನಾಡಿ ಉಚಿತವಾಗಿ ಯಾವುದೇ ಶುಲ್ಕವಿಲ್ಲದೆ ಅನುದಾನಿತ ಶಾಲೆಯನ್ನು ದಾನಿ ಗಳ ಸಹಾಯ ಸಹಕಾರದಿಂದ ನಡೆಸಿಕೊಂಡು ಬರುತ್ತಿದ್ದೇವೆ ಸಾರಿ ಸಾಯಿ ಟ್ರಸ್ಟ್ನವರು ಮಹೇಶ್ರವರ ಮುಖೇನ ಪರಿಚಿತರಾಗಿ ಇಂದು ನೋಟ್ ಪುಸ್ತಕ ಕೊಡಿಸಲು ಸಹಕಾರಿಯಾಗಿದ್ದರೆ ಎಂದರು.

ಶಿರಡಿ ಸಾಯಿ ಟ್ರಸ್ಟ್ ಅಧ್ಯಕ್ಷರಿಗೂ ಎಲ್ಲಾ ಕಾರ್ಯಕಾರಿ ಸಮಿತಿಗೂ ಅಭಾರಿಯಾಗಿದ್ದೇವೆ ಎಲ್ಲರಿಗೂ ಧನ್ಯವಾದ ಸಲ್ಲಿಸಿದರು. ನಿಮ್ಮ ಸೇವೆ ಹೀಗೆಯೇ ಸಾಗಲೀ ನಮ್ಮ ಶಾಲೆಯ ಎಲ್ಲಾ ಮಕ್ಕಳಿಗೂ ಪ್ರತಿ ವರ್ಷವೂ ನೋಟ್ ಪುಸ್ತಕ ನೀಡಬೇಕೆಂದು ಮನವಿ ಮಾಡಿದರು.

ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕ ವೃಂದದವರು ಶಿರಡಿ ಸಾಯಿ ಮಂದರ ಟ್ರಸ್ಟ್ ಅಧ್ಯಕ್ಷ ನಾರಾಯಣಸ್ವಾಮಿರವರನ್ನು ಸನ್ಮಾನಿಸಿ ಗೌರವಿಸಿದರು. ವೇದಿಕೆಯಲ್ಲಿ ಸಾಯಿ ಟ್ರಸ್ಟ್ ಉಪಾಧ್ಯಕ್ಷ ರಾಮಕೃಷ್ಣಪ್ಪಶಿಕ್ಷಕ ವೃಂದದವರಾದ ರಂಗಣ್ಣ, ಎಸ್.ಗಿರಿಜಮ್ಮ, ಉಷಾರಾಣಿ, ಪತ್ರಕರ್ತ ಎಸ್.ಮಹೇಶ್, ಮಣಿಕಂಠ ಹಾಜರಿದ್ದರು.

 (ನಮ್ಮಸುದ್ದಿ.ನೆಟ್) nammasuddi.net

ನಲ್ಲಿ ಜಾಹಿರಾತಿಗಾಗಿ ಸಂಪರ್ಕಿಸಿ:

ಕೆ.ಎಸ್.ಗಣೇಶ್-9448311003. ಸಿ.ವಿ.ನಾಗರಾಜ್-9632188872. ಕೆ.ರಾಮಮೂರ್ತಿ-9449675480.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!