• Sun. Apr 28th, 2024

PLACE YOUR AD HERE AT LOWEST PRICE

ಬಂಗಾರಪೇಟೆ:ಪಟ್ಟಣದ ಪುರಸಭೆಯಲ್ಲಿ ಮುಖ್ಯ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ  ಚಲಪತಿ ಚಿಂತಾಮಣಿಗೆ ಮತ್ತು ಯೋಜನಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ವೆಂಕಟೇಶ್ ಅವರು ವೇಮಗಲ್ ಗೆ ವರ್ಗಾವಣೆಗೊಂಡ ಹಿನ್ನೆಲೆ ಪುರಸಭೆ ಸಿಬ್ಬಂದಿ ಮತ್ತು ಪೌರಕಾರ್ಮಿಕರು ಹಾಗೂ ನೂತನವಾಗಿ ಪಟ್ಟಣಕ್ಕೆ ಬಂದಿರುವ ಮುಖ್ಯ ಅಧಿಕಾರಿ ಮೀನಾಕ್ಷಿ ಅವರು ಆತ್ಮೀಯವಾಗಿ ಬಿಳ್ಕೊಟ್ಟರು.

ಪಟ್ಟಣದ ಪುರಸಭೆ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಬಿಳ್ಕೊಡುಗೆ ಸಮಾರಂಭದಲ್ಲಿ ಸಿ.ಓ ಚಲಪತಿ ಮಾತನಾಡಿ, ಮೊದಲಿಗೆ ನನ್ನ ಸೇವಾ ಅವಧಿಯಲ್ಲಿ ನನಗೆ ಉತ್ತಮವಾಗಿ ಕಾರ್ಯನಿರ್ವಹಿಸಲು ಸಹಕಾರ ನೀಡಿದ ಶಾಸಕರಾದ ಎಸ್ಎನ್ ನಾರಾಯಣಸ್ವಾಮಿ ಅವರಿಗೆ ಹಾಗೂ ಪುರಸಭೆ ಅಧ್ಯಕ್ಷೆ, ಉಪಾಧ್ಯಕ್ಷರಿಗೆ, ಸದಸ್ಯರಿಗೆ, ನೌಕರರಿಗೆ ಪೌರಕಾರ್ಮಿಕರಿಗೆ ಧನ್ಯವಾದಗಳು ತಿಳಿಸುತ್ತೇನೆ ಎಂದರು.

ಪೌರಕಾರ್ಮಿಕರಿಗೆ ಸಿಂಗಾಪೂರ್ ಹೋಗಲು ಅವಕಾಶವಿದೆ ಕೇವಲ ಇಬ್ಬರು ಮೂವರು ಮಾತ್ರ ಹೋಗಿದ್ದಾರೆ. ಈಗಿರುವವರೆಲ್ಲರೂ ಯುವಕರು ಯಂಗ್ ಸ್ಟಾರ್ ಸಿದ್ದಾರೆ. ಅವರಿಗೆ ಹೋಗಲು ಅವಕಾಶ ಮಾಡಿಕೊಡಿ ಎಂದು ನೂತನ ಸಿಓ ಮೀನಾಕ್ಷಿ ಅವರಿಗೆ ಹೇಳಿದರು. ಕಚೇರಿಯ ಸ್ವಚ್ಛತೆ, ನಗರದ ಸ್ವಚ್ಛತೆಯನ್ನು ಕಾಪಾಡುವವರು ನಮ್ಮ ಪೌರಕಾರ್ಮಿಕರು ಅವರಿಂದಲೇ ನಮ್ಮ ನಗರಕ್ಕೆ ಒಳ್ಳೆಯ ಹೆಸರು ಬರುವುದು ಹಾಗೂ ಅವರ ಹಿತದೃಷ್ಟಿಯನ್ನು ಕಾಪಾಡುವುದು ನಿಮ್ಮ ಜವಾಬ್ದಾರಿ ಎಂದು ತಿಳಿಸಿದರು.

?????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????

ಕಚೇರಿ ವಿಷಯಕ್ಕೆ ಬಂದರೆ ಎಲ್ಲಾ ಸಿಬ್ಬಂದಿಯು ಉತ್ತಮ ರೀತಿ ಕೆಲಸ ಮಾಡುತ್ತಾರೆ, ಮಾನ್ಯ ಶಾಸಕರು ಸಹ ಉತ್ತಮ ರೀತಿ ಸಹಕಾರವನ್ನು ನೀಡಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಅವರ ನೀಡಿರುವಂತಹ ಸಲಹೆ ಸೂಚನೆಗಳ ಮೇರೆಗೆ ಚಾಚು ತಪ್ಪದೇ ಕೆಲಸವನ್ನು ನಿರ್ವಹಿಸುತ್ತಿದ್ದೇವೆ. ನಾವು ಯಾವತ್ತೂ ಸಹ ಜನಪ್ರತಿನಿಧಿಗಳ ಜೊತೆಗೆ ಕೆಲಸ ಮಾಡಬೇಕು ಎಂದರು.

ತಾಲೂಕಿನಲ್ಲಿ ಅಭಿವೃದ್ಧಿ ಕಾರ್ಯಗಳು ಹಾಗೂ ಪುರಸಭೆ ಕಟ್ಟಡ ನಿರ್ಮಾಣ ಮಾಡಲು ಶಾಸಕರ ಶ್ರಮ ಬಹಳಷ್ಟು ಇದೆ. ಪೌರ ಕಾರ್ಮಿಕರು ಪರ್ಮನೆಂಟ್ ಹುದ್ದೆ ಸಿಗಲು ಪ್ರತಿಭಟನೆ ಮಾಡಿದವರು ಸಹ ಭಾಗವಹಿಸಿ ಅವರಿಗೆ ಪರಮನೆಂಟ್ ಉದ್ಯೋಗ ಕೊಡಿಸುವಲ್ಲಿ ಶ್ರಮವಹಿಸಿದ್ದಾರೆ ಇಂತಹವರ ಸಹಕಾರ ನಿಮಗೆ ಬಹಳ ಮುಖ್ಯ ಎಂದು ನೂತನ ಸಿ ಒರಿಗೆ ಹೇಳಿದರು.

ಯೋಜನಾಧಿಕಾರಿ ವೆಂಕಟೇಶ್ ಅವರು ಮಾತನಾಡಿ, ನಾನು ಪುರಸಭೆಯಲ್ಲಿ 7 ವರ್ಷಗಳ ಕಾಲ ಉತ್ತಮ ರೀತಿ ಕಾರ್ಯನಿರ್ವಹಿಸಿದ್ದೇನೆ ಬಡತನ ನಿರ್ಮೂಲ ಯೋಜನೆಗಳನ್ನು ಯಾವುದೇ ಲೋಪ ದೋಷಗಳಿಲ್ಲದೆ 100ಕ್ಕೆ ನೂರರಷ್ಟು ಕೆಲಸವನ್ನು ಮಾಡಿದ್ದೇನೆ,ನಮ್ಮ ಪೌರಕಾರ್ಮಿಕರಿಗೆ ಪರಮನೆಂಟ್ ಆದ ವೇಳೆ 24 ಜನಕ್ಕೂ ತಲಾ ಒಂದೊಂದು ಮನೆ ನಿರ್ಮಿಸಿ ಕೊಟ್ಟಿದ್ದೇವೆ.

ಜೊತೆಗೆ ಎಲ್ಲಾ ಪೌರಕಾರ್ಮಿಕ ಮಕ್ಕಳಿಗೆ ವಿದ್ಯಾರ್ಥಿ ವೇತನ, ಇತರೆ ಮಕ್ಕಳಿಗೂ ಸಹ ಮಾಡಿಸಿಕೊಟ್ಟಿದ್ದೇನೆ ನನಗೆ ತೃಪ್ತಿ ತಂದಿದೆ. ನಮ್ಮ ಶಾಸಕರಿಗೆ ಸದ್ಯಸರಿಗೆ ಹಾಗೂ ಪುರಸಭೆಯ ಸಿಬ್ಬಂದಿ ವರ್ಗದವರಿಗೆ ನಾನು ಏಳು ವರ್ಷ ಕಾಲ ಸೇವೆ ಮಾಡಲು ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದಗಳು ತಿಳಿಸುತ್ತೇನೆ ಎಂದರು.

ಈ ಸಂದರ್ಭದಲ್ಲಿ ಪುರಸಭೆಯ ಮುಖ್ಯ ಅಧಿಕಾರಿ ಮೀನಾಕ್ಷಿ, ಆರೋಗ್ಯ ಅಧಿಕಾರಿ ಗೋವಿಂದರಾಜು, ಹಾಗೂ ಪುರಸಭೆಯ ಸಿಬ್ಬಂದಿ ವರ್ಗದವರು, ಪೌರಕಾರ್ಮಿಕರು ಇದ್ದರು.

 (ನಮ್ಮಸುದ್ದಿ.ನೆಟ್) nammasuddi.net

ನಲ್ಲಿ ಜಾಹಿರಾತಿಗಾಗಿ ಸಂಪರ್ಕಿಸಿ:

ಕೆ.ಎಸ್.ಗಣೇಶ್-9448311003. ಸಿ.ವಿ.ನಾಗರಾಜ್-9632188872. ಕೆ.ರಾಮಮೂರ್ತಿ-9449675480.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!