• Sun. Apr 28th, 2024

PLACE YOUR AD HERE AT LOWEST PRICE

ಬಂಗಾರಪೇಟೆ:ಜನಪದ ಸಾಹಿತ್ಯಕ್ಕೆ ಹೊಸ ಆಯಾಮವನ್ನು ಸೃಷ್ಟಿಸಿ ಕಲಾ ಸರಸ್ವತಿಯ ಸೇವೆಯನ್ನು  ಮಾಡಿ ಅಪಾರ ಶಿಷ್ಯ ಕೋಟೆಯನ್ನು ಹುಟ್ಟು ಹಾಕಿ ಕಣ್ಮರೆಯಾದ ಶ್ರೀಯುತ ಯಲವಾರ ಮುನಿಯಪ್ಪ ಮತ್ತು ಜಾನಪದ ಕಲಾವಿದ ಜನ್ನಘಟ್ಟ ಕೃಷ್ಣಮೂರ್ತಿರವರ ನುಡಿ ನಮನ ಕಾರ್ಯಕ್ರಮಕ್ಕೆ ಹೆಚ್ಚಿ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಬೇಕಾಗಿ ಕಲಾವಿದ ಯಲ್ಲಪ್ಪ ಮನವಿ ಮಾಡಿದರು.

ಪಟ್ಟಣದ ತಾಲೂಕು ಪಂಚಾಯಿತಿ ಮುಂಭಾಗದಲ್ಲಿ ಪತ್ರಿಕಾ ಹೇಳಿಕೆ ನೀಡಿದ ಇವರು ಕಲೆ. ಸಾಹಿತ್ಯ , ಸಂಗೀತ  ಯಾರ ಮನೆಯ ಆಸ್ತಿಯೂ ಅಲ್ಲ, ಕಲಾ ಸರಸ್ವತಿಗೆ ಯಾವುದೇ ಜಾತಿ, ಧರ್ಮ, ಮತ, ಭೇದವಿಲ್ಲ ಯಾವ ವ್ಯಕ್ತಿಯಲ್ಲಿ ಆಚಲವಾದ ದೃಢ ಸಂಕಲ್ಪ ವಿರುತ್ತದೆಯೋ ಅಂತಹ ವ್ಯಕ್ತಿಗಳಿಗೆ ಕಲಾ ಸರಸ್ವತಿ ಒಳೆಯುತ್ತಾಳೆ.

ದಿವಂಗತ ಯಲವಾರ ಮುನಿಯಪ್ಪನವರು ಆರೋಗ್ಯ ಇಲಾಖೆಯಲ್ಲಿ ಸುಧೀರ್ಘವಾಗಿ ಸೇವೆ ಸಲ್ಲಿಸಿ ನಿವೃತ್ತಿ ನಂತರ ಶ್ರೀ ವಿದ್ಯಾ ಗಣಪತಿ ಸಾಂಸ್ಕೃತಿಕ ಜಾನಪದ ಸಂಘವನ್ನು ಸ್ಥಾಪಿಸಿ ನೂರಾರು ದ್ಯಾರ್ಥಿಗಳಿಗೆ ಹಾರ್ಮೋನಿಯಂ ಶಿಕ್ಷಣವನ್ನು ನೀಡಿದ್ದಾರೆ. ಇವರಿಗೆ ಕರ್ನಾಟಕ ಕಲಾ ರತ್ನ, ಕಲಾಭಾರ್ಗವ ಎಂಬ ಬಿರುದುಗಳನ್ನು ಸರ್ಕಾರ ಮತ್ತು ಸಂಘ ಸಂಸ್ಥೆಗಳನ್ನು ನೀಡಿದೆ.

ದಿವಂಗತ ಜನ್ನಘಟ್ಟ ಕೃಷ್ಣಮೂರ್ತಿ ಅವರು ಜನಪದ ಹಾಡುಗಳನ್ನು ದೇಶದ ವಿವಿಧ ರಾಜ್ಯಗಳಲ್ಲಿ ತಮ್ಮ ಮಧುರ ಕಂಠದಿಂದ ಪಸರಿಸುವುದರ ಮೂಲಕ ಜನಪದ  ಸಾಹಿತ್ಯಕ್ಕೆ ಹೊಸ ಮೆರುಗು ನೀಡಿದ್ದಾರೆ. ಇವರಿಗೆ ಕರ್ನಾಟಕ ರಾಜ್ಯ ಸರ್ಕಾರವು ರಾಜ್ಯ ಯುವ ಪ್ರಶಸ್ತಿ ನೀಡಿ ಗೌರವಿಸಿದೆ.  ದೂರದರ್ಶನ ಚಂದನ ಟಿವಿಯಲ್ಲಿ ತಮ್ಮ ಗಾಯನದ ಪ್ರದರ್ಶನವನ್ನು ಸಹ ನೀಡಿದ್ದಾರೆ.

ತದನಂತರ ಕನ್ನಡ ಜಾನಪದ ಕಲಾ ಸಂಘವನ್ನು ಸ್ಥಾಪಿಸಿ ನೂರಾರು ವಿದ್ಯಾರ್ಥಿಗಳಿಗೆ ಜನಪದ ಸಾಹಿತ್ಯವನ್ನು ಪರಿಚಯಿಸಿದ್ದಾರೆ. ಇಂತಹ ಮಹಾನ್ ಕಲಾ ಸರಸ್ವತಿಯ ಮಕ್ಕಳು ಇಂದು ದೈವಾಧೀನರಾಗಿದ್ದಾರೆ. ಅವರಿಗೆ ಗೌರವ ನಮನಗಳನ್ನು ಸಲ್ಲಿಸುವ ಹಿನ್ನೆಲೆಯಲ್ಲಿ ನುಡಿ ನಮನ ಕಾರ್ಯಕ್ರಮವನ್ನು ಟಿ ಚೆನ್ನಯ್ಯ ರಂಗಮಂದಿರ, ಹಳೆ ಬಸ್ ನಿಲ್ದಾಣ ಹತ್ತಿರ ಕೋಲಾರದಲ್ಲಿ ನಡೆಸಲು  ನಿರ್ಧರಿಸಲಾಗಿದೆ.

ಸಾರ್ವಜನಿಕರು ಕಲಾಭಿಮಾನಿಗಳು ಹೆಚ್ಚಿನ ಸಮಖ್ಯೆ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಆರ್. ಮುನಿಸ್ವಾಮಿ. ಜಿ ವೆಂಕಟಚಲಪತಿ. ಚಿಕ್ಕರೆಡಪ್ಪ. ಕಲಾವಿದ ಎಲ್ಲಪ್ಪ. ಮುನಿಕೃಷ್ಣ .ಇತರರು ಉಪಸ್ಥಿತರಿದ್ದರು.

 (ನಮ್ಮಸುದ್ದಿ.ನೆಟ್) nammasuddi.net

ನಲ್ಲಿ ಜಾಹಿರಾತಿಗಾಗಿ ಸಂಪರ್ಕಿಸಿ:

ಕೆ.ಎಸ್.ಗಣೇಶ್-9448311003. ಸಿ.ವಿ.ನಾಗರಾಜ್-9632188872. ಕೆ.ರಾಮಮೂರ್ತಿ-9449675480.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!