• Mon. Apr 29th, 2024

PLACE YOUR AD HERE AT LOWEST PRICE

ಕೆಜಿಎಫ್: 2001ರಲ್ಲಿ ಚಿನ್ನದ ಗಣಿಯನ್ನು ಮುಚ್ಚುವ ವೇಳೆಯಲ್ಲಿ ಎಸ್‌ಟಿಬಿಪಿ ಯೋಜನೆಯಡಿಯಲ್ಲಿ ಮುಂಗಡವಾಗಿ ಹಣವನ್ನು ಪಾವತಿಸಿದ್ದ 2800 ಮಂದಿ ನೌಕರರಿಗೆ ಮುಂದಿನ ಅಕ್ಟೋಬರ್ 2ನೇ ತಾರೀಖಿನೊಳಗೆ ಮನೆಗಳ ಹಕ್ಕುಪತ್ರಗಳನ್ನು ನೀಡಲಾಗುವುದು ಎಂದು ಕೇಂದ್ರ ಗಣಿ ಸಚಿವಾಲಯದ ಜಂಟಿ ಕಾರ್ಯದರ್ಶಿ ಮತ್ತು ಬಿಜಿಎಂಎಲ್ ವ್ಯವಸ್ಥಾಪಕ ನಿರ್ದೇಶಕಿ ಫರೀದಾ ಎಂ ನಾಯಕ್ ಹೇಳಿದರು.

ನಗರದ ಸ್ವರ್ಣ ಭವನ್‌ಗೆ ಭೇಟಿ ನೀಡಿ, ಚಿನ್ನದ ಗಣಿಯಲ್ಲಿ ಕಾರ್ಯನಿರ್ವಹಿಸಿದ ನೌಕರರಿಗೆ ಗಣಿ ಪ್ರದೇಶಗಳ ಮನೆಗಳ ನೊಂದಣಿ ಕುರಿತಾಗಿ ಕೆಲವು ಆಯ್ದ ಕಾರ್ಮಿಕ ಸಂಘಟನೆಗಳೊAದಿಗೆ ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ,  ಎಸ್‌ಟಿಬಿಪಿ ಯೋಜನೆಯ ನೌಕರರಿಗೆ ಮೊದಲಿಗೆ ಹಕ್ಕುಪತ್ರಗಳನ್ನು ನೀಡಲಾಗುವುದು, ಬಳಿಕ ಅವರು ನಗರಸಭೆ ವತಿಯಿಂದ ತಮ್ಮ ಮನೆಗಳಿಗೆ ಸಂಬAಧಿಸಿದAತೆ ಪಿಐಡಿ ನಂಬರ್‌ಗಳನ್ನು ಪಡೆದುಕೊಂಡು ಉಪ ನೊಂದಣಾಧಿಕಾರಿಗಳ ಕಚೇರಿಯಲ್ಲಿ ನೊಂದಣಿ ಮಾಡಿಸಿಕೊಳ್ಳಬಹುದು ಎಂದರು.

ಬಿಜಿಎಂಎಲ್ ಒಡೆತನಕ್ಕೆ ಸೇರಿದ ಎಲ್ಲ ಪ್ರದೇಶವನ್ನು ಸಂಪೂರ್ಣವಾಗಿ ರಾಜ್ಯ ಸರ್ಕಾರದ ಅಧೀನಕ್ಕೆ ತೆಗೆದುಕೊಳ್ಳಲಾಗುತ್ತಿದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಇದುವರೆಗೆ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಚಿನ್ನದ ಗಣಿಯನ್ನು ಮುಚ್ಚುವ ಸಮಯದಲ್ಲಿ ಎಸ್‌ಟಿಬಿಪಿ ಯೋಜನೆಯಡಿಯಲ್ಲಿ ನಿವೃತ್ತಿಯಾಗಿರುವ ನೌಕರರಿಂದ ಹಣವನ್ನು ಪಡೆದುಕೊಂಡಿದ್ದು, ಅವರ ಹೆಸರಿಗೆ ಮನೆಗಳನ್ನು ವರ್ಗಾಯಿಸುವುದಕ್ಕೆ ಕ್ಯಾಬಿನೆಟ್ ಅನುಮೋದನೆಯನ್ನು ಪಡೆದುಕೊಂಡಿದ್ದು, ಅದನ್ನು ಈಗ ಜಾರಿಗೊಳಿಸಲಾಗುತ್ತಿದೆ.

ಇದನ್ನು ಹೊರತಾಗಿ ಬೇರೆ ಯಾವುದೇ ಹೊಸ ವಿಷಯವನ್ನು ಜಾರಿಗೊಳಿಸುವ ಮುನ್ನ ಕಡ್ಡಾಯವಾಗಿ ಕ್ಯಾಬಿನೆಟ್ ಅನುಮೋದನೆಯನ್ನು ಪಡೆದುಕೊಳ್ಳಬೇಕಾಗಿರುವುದು ಅಗತ್ಯವಾಗಿದೆ. ಕ್ಯಾಬಿನೆಟ್ ಅನುಮೋದನೆ ಪಡೆದುಕೊಳ್ಳದ ಹೊರತು ನಾನು ಏನನ್ನೂ ಹೇಳಲು ಸಾಧ್ಯವಾಗುವುದಿಲ್ಲ ಎಂದರು.

ಸಂಸದ ಎಸ್.ಮುನಿಸ್ವಾಮಿ ಮಾತನಾಡಿ, ಬಿಜಿಎಂಎಲ್ ನೌಕರರ ಹಲವಾರು ವರ್ಷಗಳ ಬೇಡಿಕೆಯಾಗಿದ್ದ ಮನೆಗಳ ಹಕ್ಕುಪತ್ರಗಳಿಗೆ ಸಂಬಂಧಿಸಿದಂತೆ ಕೇಂದ್ರ ಗಣಿ ಸಚಿವಾಲಯದ ಜಂಟಿ ಕಾರ್ಯದರ್ಶಿ ಮತ್ತು ಬಿಜಿಎಂಎಲ್ ವ್ಯವಸ್ಥಾಪಕ ನಿರ್ದೇಶಕಿ ಫರೀದಾ ಎಂ ನಾಯಕ್ ರವರೊಂದಿಗೆ ಮಾತುಕತೆ ನಡೆಸಿದ್ದು, ಎಸ್‌ಟಿಬಿಪಿ ಯೋಜನೆಯಡಿಯಲ್ಲಿ ನಿವೃತ್ತಿಯಾಗಿರುವ 2800 ಮಂದಿಗೆ ಹಕ್ಕುಪತ್ರಗಳನ್ನು 2 ತಿಂಗಳೊಳಗೆ ನೀಡುವ ಕೆಲಸ ಮಾಡಲಾಗುತ್ತದೆ.

ಅಲ್ಲದೇ ಬಿಜಿಎಂಎಲ್ ಪ್ರದೇಶದಲ್ಲಿ ಮನೆಗಳನ್ನು ನಿರ್ಮಾಣ ಮಾಡಿಕೊಂಡಿರುವ ಎಲ್ಲ ಜಾಗವನ್ನು ಸರ್ವೆ ಮಾಡಿಸಿ, ಚಕ್ಕುಬಂದಿಯನ್ನು ನಿರ್ಧರಿಸಲು ಸಹ ಕ್ರಮ ಕೈಗೊಳ್ಳಲಾಗುವುದು ಎಂದರು. ನೊಂದಣಿಗೆ ಅಗತ್ಯವಾದ ಎಲ್ಲ ದಾಖಲೆಗಳನ್ನು ಅಕ್ಟೋಬರ್ ವೇಳೆಗೆ 2800 ಅರ್ಹ ಫಲಾನುಭವಿಗಳಿಗೆ ನೀಡಲಾಗುವುದು. ಅಲ್ಲದೇ ಈ ಹಕ್ಕುಪತ್ರಗಳು ಸಂಪೂರ್ಣವಾಗಿ ಡಿಜಿಟಲ್ ಸ್ವರೂಪದ್ದಾಗಿದ್ದು, ಯಾವುದೇ ರೀತಿಯ ನಕಲು ಮಾಡಲು ಸಾಧ್ಯವಾಗದಂತೆ ದೆಹಲಿಯಲ್ಲಿಯೇ ಮುದ್ರಿಸಿ, ವಿತರಿಸುವ ಕಾರ್ಯವನ್ನು ಮಾಡಲಾಗುತ್ತದೆ.

ಬಿಜಿಎಂಎಲ್ ಭಾಗದಲ್ಲಿ ಸುಮಾರು ವರ್ಷಗಳಿಂದ ಬಾಕಿಯಿದ್ದಂತಹ ಕೆಲಸ ಈಗ ನಡೆಯುತ್ತಿದ್ದು, ನೌಕರರಿಗೆ ಬಾಕಿಯಿರುವ 52 ಕೋಟಿ ರೂಗಳ ಗ್ರಾಚುಟಿ ಹಣ ಬಿಡುಗಡೆಗೆ ಸಂಬಂಧಪಟ್ಟಂತೆ ಸರ್ಕಾರದ ಮಟ್ಟದಲ್ಲಿ ಮಾತುಕತೆ ನಡೆಸುವುದಾಗಿ ಬಿಜಿಎಂಎಲ್ ಎಂಡಿ ಮೇಡಮ್‌ರವರೂ ಸಹ ಭರವಸೆ ನೀಡಿದ್ದು, ಜನಪ್ರತಿನಿಧಿಗಳಾಗಬಹುದು, ಅಧಿಕಾರಿಗಳಾಗಬಹುದು ಸದಾ ಬಿಜಿಎಂಎಲ್ ನೌಕರರ ಪರವಾಗಿಯೇ ಕೆಲಸ ಮಾಡುತ್ತಿರುವುದಾಗಿ ತಿಳಿಸಿದರು.

ಇದಲ್ಲದೇ ಬಿಜಿಎಂಎಲ್ ಪ್ರದೇಶದಲ್ಲಿ ವಸ್ತು ಸಂಗ್ರಹಾಲಯ ನಿರ್ಮಿಸುವುದು, ಚಿನ್ನದ ಗಣಿ ಪ್ರದೇಶದಲ್ಲಿ ಮಿಷಿನರಿಗಳಿರುವ ಜಾಗ, ಗಣಿ ಕಾರ್ಯ ನಡೆಯುತ್ತಿದ್ದ ಜಾಗಗಳನ್ನು ಪ್ರವಾಸೋದ್ಯಮ ಸ್ಥಳವನ್ನಾಗಿ ಅಭಿವೃದ್ಧಿಪಡಿಸುವುದು, ಸೇರಿದಂತೆ ಇನ್ನಿತರ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ.

ಅಂತರ ರಾಜ್ಯ ಸಂಪರ್ಕ ಇರುವುದರಿಂದ ಗಣಿ ಪ್ರದೇಶದ ಜಾಗವನ್ನು ಕೈಗಾರಿಕೆಗಳಿಗೆ ನೀಡಿ ಸ್ಥಳೀಯವಾಗಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಗುರಿಯನ್ನು ಹೊಂದಲಾಗಿದೆ. ಇದರಿಂದ ಸ್ಥಳೀಯರು ಉದ್ಯೋಗಕ್ಕಾಗಿ ಪ್ರತಿದಿನ ದೂರದ ಬೆಂಗಳೂರಿಗೆ ಹೋಗುವುದನ್ನು ತಪ್ಪಿಸಿದಂತಾಗುತ್ತದೆ ಎಂದರು.

ಎಸ್‌ಟಿಬಿಪಿ ಯೋಜನೆಯ 2800 ಮಂದಿ ನೌಕರರನ್ನು ಹೊರತುಪಡಿಸಿ ಗಣಿಯಲ್ಲಿ ಕೆಲಸ ಮಾಡಿ ನಿವೃತ್ತಿಯಾಗಿರುವ ನೌಕರರ ಮನೆಗಳಿಗೂ ಯಾವುದೇ ರೀತಿಯಲ್ಲಿ ತೊಂದರೆಯಾಗದ ರೀತಿಯಲ್ಲಿ ಕ್ರಮ ವಹಿಸಲಾಗುವುದು. ಕೇಂದ್ರ ಸರ್ಕಾರದಿಂದ ಚಿನ್ನದ ಗಣಿ ಜಾಗವನ್ನು ರಾಜ್ಯ ಸರ್ಕಾರಕ್ಕೆ ಒಪ್ಪಿಸುವ ಮುನ್ನ 2800 ಮಂದಿಗೆ ಮನೆಗಳ ಹಕ್ಕುಪತ್ರಗಳನ್ನು ನೀಡಿದ ಹಾಗೆ ಏನಾದರೂ ಸೌಕರ್ಯಗಳನ್ನು ಕಲ್ಪಿಸಲು ಸಾಧ್ಯವಿದೆಯೇ ಎಂಬುದರ ಬಗ್ಗೆ ಮಾತುಕತೆ ನಡೆಸಲಾಗುವುದು. ಯಾವುದೇ ರೀತಿಯಲ್ಲಿ ಗಣಿ ನೌಕರರಿಗೆ ತೊಂದರೆಯಾಗದ ರೀತಿಯಲ್ಲಿ ಕ್ರಮ ವಹಿಸಲಾಗುವುದು ಎಂದರು.

ವಿವಿಧ ಸಂಘಟನೆಗಳ ಮುಖಂಡರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಪತ್ರಗಳನ್ನು ಸಲ್ಲಿಸಿದ್ದು, ಬಿಜಿಎಂಎಲ್‌ನಲ್ಲಿ ಕಳ್ಳತನವಾಗುತ್ತಿರುವುದು, ಬಿಜಿಎಂಎಲ್ ಸಿಬ್ಬಂದಿ ಕಳ್ಳರೊಂದಿಗೆ ಶಾಮೀಲಾಗಿರುವ ಫೋಟೋಗಳು, ಬಿಜಿಎಂಎಲ್ ಪ್ರದೇಶದಲ್ಲಿ ಅನಧಿಕೃತವಾಗಿ ಕಟ್ಟಡಗಳು ನಿರ್ಮಾಣವಾಗುತ್ತಿದ್ದರೂ ಭದ್ರತಾ ಸಿಬ್ಬಂದಿ ಕಂಡೂ  ಕಾಣದಂತೆ ಮೂಕ ಪ್ರೇಕ್ಷಕರಾಗಿರುವುದೂ ಸೇರಿದಂತೆ 35 ದಾಖಲೆ ಸಮೇತ ಫೋಟೋಗಳನ್ನು ಇದೇ ಸಂದರ್ಭದಲ್ಲಿ ಬಿಜಿಎಂಎಲ್ ಎಂಡಿ ರವರಿಗೆ ಸಲ್ಲಿಸಿದ್ದು, ವಿಶೇಷವಾಗಿತ್ತು.

ಕೆಲವು ಕಾರ್ಮಿಕ ಸಂಘಟನೆಗಳ ಮುಖಂಡರು ಐಷಾರಾಮಿ ಜೀವನ ನಡೆಸುತ್ತಿದ್ದು, ಕಾರ್ಮಿಕರ ಹಿತರಕ್ಷಣೆಗೆ ಯಾವುದೇ ಕ್ರಮ ಕೈಗೊಳ್ಳದೇ ಇರುವುದರಿಂದ ಕಾರ್ಮಿಕರನ್ನೇ ನೇರವಾಗಿ ಭೇಟಿ ಮಾಡಿ ಸಮಸ್ಯೆಗಳ ಬಗ್ಗೆ ಆಲಿಸಬೇಕೆಂದು ಸ್ವರ್ಣ ಭವನದ ಹೊರಗೆ ನಿವೃತ್ತ ಕಾರ್ಮಿಕರು ಕೆಲ ಕಾಲ ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಿದರು.

nammasuddi.net ನಲ್ಲಿ ಜಾಹಿರಾತಿಗಾಗಿ ಸಂಪರ್ಕಿಸಿ:

ಕೆ.ಎಸ್.ಗಣೇಶ್-9448311003. ಸಿ.ವಿ.ನಾಗರಾಜ್-9632188872. ಕೆ.ರಾಮಮೂರ್ತಿ-9449675480.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!