• Thu. May 9th, 2024

PLACE YOUR AD HERE AT LOWEST PRICE

ಕೋಲಾರ:ನಗರದ ಎಪಿಎಂಸಿ ಮಾರುಕಟ್ಟೆಯಿಂದ ಸುಮಾರು ೨೧ ಲಕ್ಷ ರೂಪಾಯಿ ಮೌಲ್ಯದ ಟೊಮ್ಯಾಟೋ ತುಂಬಿದ್ದ ಲಾರಿ ನಾಪತ್ತೆಯಾಗಿದ್ದು, ಈ ಸಂಬಂಧ ಎಪಿಎಂಸಿ ಮಾರುಕಟ್ಟೆಯ ವರ್ತಕರು ಕೋಲಾರ ನಗರ ಪೊಲೀಸ್ ಠಾಣೆಗೆ ದೂರು ನೀಡಿರುವ ಘಟನೆ ವರದಿಯಾಗಿದೆ.

ದಕ್ಷಿಣ ಭಾರತದ ಕೆಂಪು ಸೇಬು ಎಂದೇ ಖ್ಯಾತವಾಗಿರುವ ಟಮೋಟೋ ಕಳೆದ ಎರಡು ತಿಂಗಳಿAದ ತನ್ನ ಬೆಲೆ ಏರಿಸಿಕೊಳ್ಳುತ್ತಲೇ ಸಾಗಿದ್ದು, ಈ ಅಪಹರಣ ಘಟನೆಗಳಿಗೆ ಕಾರಣವಾಗಿದೆ.

ಕೋಲಾರ ಎಪಿಎಂಸಿ ಮಾರುಕಟ್ಟೆಯ ಎಜಿ ಟ್ರೇಡರ್ಸ್ನ ಸಕ್ಲೇನ್ ಹಾಗೂ ಎಸ್.ವಿ.ಟಿ ಟ್ರೇಡರ್ಸ್ನ ಮುನಿರೆಡ್ಡಿ ಎಂಬುವರು ಸುಮಾರು ೨೧ ಲಕ್ಷ ರೂಪಾಯಿ ಮೌಲ್ಯದ ಸುಮಾರು ೭೫೦ ಕ್ರೇಟ್ ಟೊಮ್ಯಾಟೋವನ್ನು ಜುಲೈ-೨೭ ರಂದು ರಾಜಾಸ್ಥಾನದ ಜೈಪುರ್‌ಗೆ ಮೆಹತ್ ಟ್ರಾನ್ಸ್ಪೋರ್ಟ್ಗೆ ಸೇರಿದ ಲಾರಿಯ ಮೂಲಕ ಕಳಿಸಿದ್ದರು.

ನಿನ್ನೆ ರಾತ್ರಿ ಜೈಪುರಕ್ಕೆ ಲಾರಿ ತಲುಪಬೇಕಿತ್ತು ಆದರೆ ನಿನ್ನೆ ರಾತ್ರಿಯಿಂದಲೂ ಕೂಡಾ ಲಾರಿ ಹಾಗೂ ಲಾರಿ ಚಾಲಕ ಇಬ್ಬರೂ ಸಂಪರ್ಕಕ್ಕೆ ಸಿಗುತ್ತಿಲ್ಲ, ಇನ್ನು ಮೆಹತ್ ಟ್ರಾನ್ಸ್ಪೋರ್ಟ್ ಮಾಲೀಕ ಸಾಧಿಕ್ ಅವರಿಗೂ ಕೂಡಾ ಲಾರಿ ಸಂಪರ್ಕಕ್ಕೆ ಸಿಗುತ್ತಿಲ್ಲವಂತೆ ಲಾರಿ ನಾಪತ್ತೆಯಾಗಿರುವ ಕುರಿತು ಇದೀಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕೋಲಾರ ಎಪಿಎಂಸಿ ಮಾರುಕಟ್ಟೆ ಏಷ್ಯಾದಲ್ಲೇ ಎರಡನೇ ಅತಿದೊಡ್ಡ ಮಾರುಟಕ್ಟೆ ಎಂಬ ಹೆಗ್ಗಳಿಗೆ ಹೊಂದಿರುವ ಮಾರುಕಟ್ಟೆ ಇಲ್ಲಿಂದ ದೇಶದ ಹಲವು ರಾಜ್ಯಗಳಿಗೆ ಟೊಮ್ಯಾಟೋ ರಪ್ತು ಮಾಡಲಾಗುತ್ತದೆ.

ಅದರಲ್ಲೂ ಈಗಂತೂ ಟೊಮ್ಯಾಟೋಗೆ ಚಿನ್ನದ ಬೆಲೆ ಇದೆ. ಅದಕ್ಕಾಗಿಯೇ ಕೋಲಾರದ ಎಪಿಎಂಸಿ ಮಾರುಕಟ್ಟೆಗೂ ಈಗಾಗಲೇ ಹೆಚ್ಚಿನ ಪೊಲೀಸ್ ಭದ್ರತೆ ಮಾಡಿದ್ದಾರೆ. ಮಂಡಿ ಮಾಲೀಕರು ಖಾಸಗಿ ಭದ್ರತೆ ಜೊತೆಗೆ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಕೆ ಮಾಡಿಕೊಂಡಿದ್ದಾರೆ.

ಇಷ್ಟೆಲ್ಲಾ ಭದ್ರತೆ ಇಲ್ಲಿ ಮಾಡಿಕೊಂಡಿದ್ದು ನಂಬಿಕೆ ಮೇಲೆ ಕೋಲಾರದ ಎಪಿಎಂಸಿ ಮಾರುಕಟ್ಟೆಯಿಂದ ರಾಜಾಸ್ಥಾನದ ಜೈಪುರ್‌ಗೆ ಎಂಟು ಚಕ್ರದ ಲಾರಿ ಸಂಖ್ಯೆ ಆರ್‌ಜೆ–೦೪- ಜಿಸಿ–೩೭೫೬ ಲಾರಿಯಲ್ಲಿ ಡ್ರೆöÊವರ್ ಅನ್ವರ್ ಎಂಬುವರೊAದಿಗೆ ಕೋಲಾರ ನಗರದ ಮೆಹತ್ ಟ್ರಾನ್ಸ್ಪೋರ್ಟ್ ಮುಖಾಂತರ ಕಳಿಸಲಾಗಿತ್ತು.

ಕಳೆದ ರಾತ್ರಿ ಅಲ್ಲಿಗೆ ಟೊಮ್ಯಾಟೋ ತಲುಪಬೇಕಿತ್ತು ಆದರೆ ನಿನ್ನೆ ಮದ್ಯಾಹ್ನದ ವರೆಗೂ ಸಂಪರ್ಕದಲ್ಲಿದ್ದ ಲಾರಿ ಡ್ರೆöÊವರ್ ಅನ್ವರ್ ರಾತ್ರಿಯಿಂದೀಚೆಗೆ ಸಂಪರ್ಕಕ್ಕೆ ಸಿಗುತ್ತಿಲ್ಲ.

ಲಾರಿ ಇನ್ನು ಅಫಘಾತವಾಗಿದ್ದರೆ ಅಥವಾ ಬೇರೆ ಏನಾದ್ರೂ ಸಮಸ್ಯೆ ಆಗಿದ್ದರೆ ನಮಗೆ ಮಾಹಿತಿ ಬರುತ್ತಿತ್ತು. ಆದರೆ ಇಲ್ಲಿ ಲಾರಿ ಚಾಲಕ ಟೊಮ್ಯಾಟೋ ಕಳ್ಳತನ ಮಾಡಿರುವ ಅನುಮಾನವಿದೆ ಅನ್ನೋದು ವ್ಯಾಪಾರಸ್ಥರ ಮಾತು.

ಅಲ್ಲದೆ ಟೊಮ್ಯಾಟೋ ಹೆಚ್ಚು ದಿನ ಇರೋದಿಲ್ಲ. ಕೊಳೆತು ಹೋಗುವ ಸಾಧ್ಯತೆ ಇದೆ.  ಹಾಗಾಗಿ ಸಮಯಕ್ಕೆ ಸರಿಯಾಗಿ ವ್ಯಾಪಾರಸ್ಥರಿಗೆ ತಲುಪಿಸುವುದು ನಮ್ಮ ಜವಾಬ್ದಾರಿ ಹಾಗೊಂದು ವೇಳೆ ಟೊಮ್ಯಾಟೋ ತಲುಪದಿದ್ದರೆ ರೈತರಿಗೆ ನಾವು ನಮ್ಮ ಕೈಯಾರೆ ಹಣ ಕೊಡಬೇಕಾಗುತ್ತದೆ ಎಂದು ವ್ಯಾಪಾರಿ ಮುನಿರೆಡ್ಡಿ ಆತಂಕ ವ್ಯಕ್ತಪಡಿಸಿದ್ದಾರೆ.

ಎಸ್ಕಾರ್ಟ್ ಕಳಿಸಿದರೂ ಅಚ್ಚರಿ ಇಲ್ಲಶ್ರೀನಾಥ್.

ಈ ಕುರಿತು ಟಮೋಟೋ ಮಂಡಿ ಮಾಲೀಕರಾದ ಸಿಎಂಆರ್ ಶ್ರೀನಾಥ್ ಮಾಧ್ಯಮಕ್ಕೆ ಮಾಹಿತಿ ನೀಡಿ, ಒಟ್ಟಾರೆ ಟೊಮ್ಯಾಟೋ ಚಿನ್ನದ ಬೆಲೆ ಬಂದಿದೆ, ದೇಶ ವಿದೇಶಗಳಲ್ಲೂ ಟೊಮ್ಯಾಟೋ ಹೆಚ್ಚಿನ ಬೇಡಿಕೆ ಇದೆ.

ಹಾಗಾಗಿ ಟೊಮ್ಯಾಟೋವನ್ನು ಮಾರಾಟ ಮಾಡೋದು ಕಷ್ಟದ ಕೆಲಸವಲ್ಲ ಹಾಗಾಗಿಯೇ ಕೋಲಾರದಿಂದ ರಾಜಾಸ್ಥಾನಕ್ಕೆ ತಲುಪಬೇಕಿದ್ದ ಟೊಮ್ಯಾಟೋ ಕೂಡಾ ಕಳ್ಳತನದಿಂದ ಮಾರಾಟ ಮಾಡಿರುವ ಸಾಧ್ಯತೆ ಇದೆ,

ಸದ್ಯ ಇನ್ನು ಇದೇ ರೀತಿ ಟೊಮ್ಯಾಟೋ ಬೆಲೆ ಮುಂದುವರಿದಿದ್ದೇ ಆದರೆ ಎಸ್ಕಾರ್ಟ್ ಮೂಲಕ ಟೊಮ್ಯಾಟೋ ಕಳಿಸಬೇಕಾದ ಸ್ಥಿತಿ ಬಂದರೂ ಆಶ್ಚರ್ಯ ಪಡಬೇಕಾಗಿಲ್ಲ ಎಂದರು.

ಕಳ್ಳನೊಬ್ಬ ಟೊಮ್ಯಾಟೋ ತುಂಬಿದ್ದ ಬಾಕ್ಸ್ ಒಂದನ್ನು ಕಳ್ಳತನ ಮಾಡಿದ್ದ ಘಟನೆ ನಡೆದಿತ್ತು, ಈ ಘಟನೆ ಮಾಸುವ ಮೊದಲೇ ೨೧ ಲಕ್ಷ ಮೌಲ್ಯದ ಟಮೋಟೋ ಲಾರಿಯೇ ನಾಪತ್ತೆಯಾಗಿರುವುದು ವ್ಯಾಪಾರಿಗಳ ಆತಂಕಕ್ಕೆ ಕಾರಣವಾಗಿದೆ.

ಲಾರಿಯಲ್ಲಿ ಸರಾಸರಿ ೨೧ ಲಕ್ಷ ಮೌಲ್ಯದ ಟೊಮ್ಯಾಟೋ ಇತ್ತು ಆದರೆ ಇಲ್ಲಿ ಟೊಮ್ಯಾಟೋ ನಿಜಕ್ಕೂ ಕಳ್ಳತನವಾಗಿರುವ ಸಾಧ್ಯತೆ ಇದ್ದು ಕೂಡಲೇ ನಮಗೆ ಪೊಲೀಸರು ತನಿಖೆ ನಡೆಸಿ ನ್ಯಾಯ ಕೊಡಿಸಬೇಕು ಅನ್ನೋದು ಟೊಮ್ಯಾಟೋ ಕಳೆದುಕೊಂಡಿರುವ ವ್ಯಾಪಾರಸ್ಥರ ಮನವಿಯಾಗಿದೆ.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!