• Thu. May 9th, 2024

PLACE YOUR AD HERE AT LOWEST PRICE

ಕೋಲಾರದ ಟಿ.ಚೆನ್ನಯ್ಯ ರಂಗಮಂದಿರದಲ್ಲಿ ಜು.೩೧ರಂದು ಸಂಜೆ ೭ ಗಂಟೆಗೆ ‘ನಾಟಕದೊಳ್ ಕನಾಟಕ’ ಎಂಬ ಶೀರ್ಷಿಕೆಯಡಿಯಲ್ಲಿ “೫೫ ನಿಮಿಷದ ಒಂದು ಪ್ರೇಮಕಥೆ” ನಾಟಕ ಪ್ರದರ್ಶನವನ್ನು ಕದಂಬ ಸೇವಾ ಫೌಂಡೇಷನ್, ಕರ್ನಾಟಕ ಇವರ ಸಹಕಾರದಲ್ಲಿ ಆಯೋಜಿಸಲಾಗಿದೆ.

ಬೆಂಗಳೂರಿನ ರಂಗಪಯಣ ತಂಡದ ಮಾಲೂರು ಮೂಲದ ಶರತ್ ಬಹುಜನ್ ಅಭಿನಯಿಸುತ್ತಿದ್ದು, ಬಿಸ್ಮಿಲ್ಲಾ ಖಾನ್ ಪ್ರಶಸ್ತಿ ಪುರಸ್ಕೃತ ರಾಜ್‌ಗುರು ಅವರು ಈ ನಾಟಕವನ್ನು ರಚಿಸಿದ್ದು, ಸಂಗೀತ ಹಾಗೂ ನಿರ್ದೇಶನ ಮಾಡಲಿದ್ದಾರೆ.

ಲಿಮ್ಕಾ ಬುಕ್ ಆಫ್ ರಿಕಾರ್ಡ್ನಲ್ಲಿ ದಾಖಲೆ ಮಾಡುವ ಉದ್ದೇಶದಿಂದ ೩೧ ಕಲಾವಿದರು, ೩೧ ಜಿಲ್ಲೆಯ ೩೧ ರಂಗಮಂದಿರಗಳಲ್ಲಿ ಜುಲೈ ೩೧ರಂದು ಏಕಕಾಲದಲ್ಲಿ ಪ್ರದರ್ಶ ನೀಡಲಿದ್ದಾರೆ. ಶರತ್ ಬಹುಜನ್ ಅವರು ಮೂಲತಹಃ ಕೋಲಾರ ಜಿಲ್ಲೆಯ ಮಾಲೂರಿನ ತಿಮ್ಮನಾಯಕನಹಳ್ಳಿಯವರಾಗಿದ್ದು, ಆನೇಕಲ್ ವಾಸಿಯಾಗಿದ್ದಾರೆ.

ಇವರು ಕಾನೂನು ಪದವಿ ಮುಗಿಸಿದ್ದು, ಎಂ.ಎ ವಿದ್ಯಾಬ್ಯಾಸದ ಜೊತೆಗೆ ಡಿಪ್ಲೋಮೋ ಇನ್ ಪೋಕ್ ಮಾಡುತ್ತಿದ್ದಾರೆ. ಇವರು ಕಾಲೇಜು ದಿನಗಳಿಂದಲೇ ಕೆಲವು ಸೇವಾಸಂಸ್ಥೆಗಳೊAದಿಗೆ ಸಾಮಾಜಿಕ ಕಳಕಳಿಯ ಬೀದಿ ನಾಟಕಗಳನ್ನು ಮಾಡುವುದರ ಮೂಲಕ ಸಾಮಾಜಿಕ ಕ್ಷೇತ್ರಕ್ಕೆ ಆಗಮಿಸಿ ರಂಗಪಯಣ ತಂಡದಲ್ಲಿ ಹಲವಾರು ನಾಟಕಗಳಲ್ಲಿ ಪಾತ್ರಗಳನ್ನು ನಿಭಾಯಿಸಿ ಸೈ ಎನಿಸಿಕೊಂಡಿದ್ದಾರೆ.

ಇಡೀ ರಾಜ್ಯದಲ್ಲಿ ಏಕಕಾಲಕ್ಕೆ ಪ್ರದರ್ಶನ ನೀಡುವ ಈ ನಾಟಕ ಲಿಮ್ಕಾ ದಾಖಲೆಯತ್ತ ಸಾಗಿದ್ದು, ಪ್ರತಿಯೊಬ್ಬರೂ ಈ ನಾಟಕವನ್ನು ವೀಕ್ಷಿಸಿ ಕಲಾವಿದರಿಗೆ ಪ್ರೋತ್ಸಾಹ ನೀಡಬೇಕೆಂದು ಕದಂಬ ಸೇವಾ ಫೌಂಡೇಷನ್ ನ ಅಧ್ಯಕ್ಷರಾದ ಹೊಲ್ಲಂಬಳ್ಳಿ ಶಿವು ಮತ್ತು ನಾಟಕದಲ್ಲಿ ಅಭಿನಯಿಸುತ್ತಿರುವ ಶರತ್ ಬಹುಜನ್ ಮನವಿ ಮಾಡಿದ್ದಾರೆ.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!