• Thu. Sep 19th, 2024

PLACE YOUR AD HERE AT LOWEST PRICE

ಟೊಮೆಟೊ ಬೆಲೆ ಏರಿಕೆ ಪರಿಣಾಮ ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿ ಸಾರ್ವಕಾಲಿಕ ದಾಖಲೆಯ
ರೂ. ೧.೨೪ ಕೋಟಿ ಸೆಸ್ ಸಂಗ್ರಹ

* ಪ್ರತಿ ರೂ. ೧೦೦ ವಹಿವಾಟಿಗೆ ೬೦ ಪೈಸೆ ಸೆಸ್
* ನಿತ್ಯ ೧೫ ರಾಜ್ಯಗಳಿಗೆ ಟೊಮೆಟೊ ಸರಬರಾಜು
* ತಿಂಗಳೊ0ದರಲ್ಲಿ ದಾಖಲಾದ ಅತಿ ಹೆಚ್ಚಿನ ಸೆಸ್

ಕೋಲಾರ, ಆಗಸ್ಟ್ ೦೧ : ಟೊಮೆಟೊ ಬೆಲೆ ಏರಿಕೆಯ ಪರಿಣಾಮ ಕೋಲಾರದ (ಎಪಿಎಂಸಿ) ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಜುಲೈ ಒಂದೇ ತಿಂಗಳಲ್ಲಿ ೧.೨೪ ಕೋಟಿ ರೂಪಾಯಿ ದಾಖಲೆಯ ಸೆಸ್ ಸಂಗ್ರಹವಾಗಿದೆ.

ಕೇವಲ ಒಂದು ತಿಂಗಳ ಅವಧಿಯಲ್ಲಿ ಸಂಗ್ರಹವಾದ ದಾಖಲೆಯ ಬಳಕೆದಾರರ ಶುಲ್ಕ ಇದಾಗಿದ್ದು, ಏಷ್ಯಾದಲ್ಲೇ ಎರಡನೇ ಅತಿ ದೊಡ್ಡ ಟೊಮೆಟೊ ಮಾರುಕಟ್ಟೆಯಾದ ಕೋಲಾರ ಎಪಿಎಂಸಿ ಮಾರುಕಟ್ಟೆ ಜುಲೈನಲ್ಲಿ ೩ ಲಕ್ಷ ೧೨ ಸಾವಿರ ಕ್ವಿಂಟಲ್ ಟೊಮೆಟೊ ಆವಕವಾಗಿದೆ. ಅಂದರೆ ೧೫ ಕೆ.ಜಿ ತೂಕದ ೨೦ ಲಕ್ಷ ೮೩ ಸಾವಿರ ಟೊಮೆಟೊ ಬಾಕ್ಸ್ಗಳು ಹರಾಜಿನಲ್ಲಿ ಮಾರಾಟವಾಗಿದ್ದು, ಇಲ್ಲಿಯ ತನಕ ೧೫ ಕೆ.ಜಿ.ಯ ಒಂದು ಬಾಕ್ಸ್ ಗರಿಷ್ಠ ೨,೭೦೦ ರೂಪಾಯಿಗೆ ಹರಾಜಾಗಿರುವುದು ಗರಿಷ್ಠ ದಾಖಲೆಯಾಗಿದೆ.


ಇದೇ ಅವಧಿಯಲ್ಲಿ ೨೦೨೨ರ ಜುಲೈನಲ್ಲಿ ಇದಕ್ಕಿಂತ ಮೂರು ಪಟ್ಟು ಅಧಿಕ ಪ್ರಮಾಣದ ಟೊಮೆಟೊ ಮಾರಾಟವಾಗಿತ್ತು. ಕಳೆದ ಸಾಲಿನ ಇದೇ ತಿಂಗಳಲ್ಲಿ ಸುಮಾರು ೧೦ ಲಕ್ಷ ೫೧ ಸಾವಿರ ಕ್ವಿಂಟಾಲ್ ಟೊಮೆಟೋ ಆವಕವಾಗಿತ್ತು. ೬೫ ಲಕ್ಷ ೮೪ ಸಾವಿರ ಸೆಸ್ ಸಂಗ್ರಹವಾಗಿತ್ತು. ಪ್ರತಿ ಕೆಜಿಗೆ ಗರಿಷ್ಟ ರೂ.೧೨೦ಕ್ಕೆ ಮಾರಾಟವಾಗಿದ್ದರೂ ಇಷ್ಟೊಂದು ಸೆಸ್ ಸಂಗ್ರಹವಾಗಿರಲಿಲ್ಲ. ಪ್ರತಿ ೧೦೦ ರೂಪಾಯಿ ವಹಿವಾಟಿಗೆ ೬೦ ಪೈಸೆ ಸೆಸ್ ಸಂಗ್ರಹ ಮಾಡಲಾಗುತ್ತಿದೆ.

ಈ ಗರಿಷ್ಠ ಮಟ್ಟದ ದಾಖಲೆಯ ಸೆಸ್ ಸಂಗ್ರಹ ರೈತರು, ವರ್ತಕರು, ಕಮಿಷನ್ ಏಜೆಂಟರು ಹಾಗೂ ಎಪಿಎಂಸಿಗೆ ಶುಭ ಒಳ್ಳೆಯ ಸುದ್ದಿ. ಟೊಮೆಟೊ ಬೆಲೆ ಏರಿಕೆ ಕಾರಣ ಒಂದು ತಿಂಗಳಿನಿ0ದ ಎಲ್ಲರಿಗೂ ಲಾಭವಾಗಿದೆ. ಮುಂದಿನ ಆಗಸ್ಟ್ ಹಾಗೂ ಸೆಪ್ಟೆಂಬರ್ ತಿಂಗಳವರೆಗೂ ಇದೇ ವಾತಾವರಣ ಮುಂದುವರಿಯುವ ಸಾಧ್ಯತೆ ಇದೆ.

ಬಾಕ್ಸ್ ಸುದ್ದಿ :
ಎಪಿಎಂಸಿ ಮಟ್ಟಿಗೆ ಇದೊಂದು ಉತ್ತಮ ಬೆಳವಣಿಗೆ. ಎಪಿಎಂಸಿ ಆಡಳಿತ ಕಾರ್ಯದರ್ಶಿಯಾಗಿ ನನಗಂತೂ ತುಂಬಾ ಖುಷಿಯಾಗಿದೆ. ಒಂದು ತಿಂಗಳಿನಲ್ಲಿ ಯಾವತ್ತೂ ಇಷ್ಟು ಬಳಕೆದಾರರ ಶುಲ್ಕ ಸಂಗ್ರಹವಾಗಿರಲಿಲ್ಲ. ಇದು ಮುಂದಿನ ತಿಂಗಳು ಮುಂದುವರೆಯುವ ಸಾಧ್ಯತೆ ಇದೆ.

ವಿಜಯಲಕ್ಷ್ಮಿ, ಕೋಲಾರ ಎಪಿಎಂಸಿ ಕಾರ್ಯದರ್ಶಿ.

 

Leave a Reply

Your email address will not be published. Required fields are marked *

You missed

error: Content is protected !!