• Sun. May 5th, 2024

PLACE YOUR AD HERE AT LOWEST PRICE

1992ರಲ್ಲಿ ಬಿಡುಗಡೆಗೊಂಡ ರೋಜಾ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಮ್ಯೂಸಿಕ್ ಮಾಂತ್ರಿಕ ಎಆರ್ ರಹಮಾನ್ ಸದ್ಯ ಭಾರತ ಚಲನಚಿತ್ರರಂಗದ ದಿಗ್ಗಜ ಸಂಗೀತ ನಿರ್ದೇಶಕನಾಗಿ ಮಿಂಚುತ್ತಿದ್ದಾರೆ.

ಹೀಗೆ ಈ ವಿಶೇಷ ಮೈಲಿಗಲ್ಲನ್ನು ನಿರ್ಮಿಸಿರುವ ಎಆರ್ ರಹಮಾನ್ ಅವರಿಗೆ ಭಾರತದ ದೈತ್ಯ ಮಲ್ಟಿಪ್ಲೆಕ್ಸ್ ಸಂಸ್ಥೆ ಪಿವಿಆರ್ ಐನಾಕ್ಸ್ ವಿಶೇಷ ಗೌರವವನ್ನು ಸಲ್ಲಿಸಲು ಮುಂದಾಗಿದೆ.

ಹೌದು, ಐದು ದಿನಗಳ ಕಾಲ ಎಆರ್ ರಹಮಾನ್ ಸಂಗೀತ ನಿರ್ದೇಶನ ಮಾಡಿರುವ 15 ಚಿತ್ರಗಳನ್ನು ಪ್ರದರ್ಶಿಸಲು ಪಿವಿಆರ್ ಐನಾಕ್ಸ್ ನಿರ್ಧರಿಸಿದೆ. ಆಗಸ್ಟ್ 4ರಿಂದ 9ರವರೆಗೆ ಈ 15 ಚಿತ್ರಗಳನ್ನು ಪ್ರದರ್ಶಿಸುವುದಾಗಿ ಸ್ವತಃ ಪಿವಿಆರ್ ಐನಾಕ್ಸ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದೆ.

ಇನ್ನು ಆಯ್ದ 15 ಚಿತ್ರಗಳನ್ನು ಪ್ರದರ್ಶಿಸುವುದಾಗಿ ಪಿವಿಆರ್ ಐನಾಕ್ಸ್ ತಿಳಿಸಿದ್ದು ಈ ಚಿತ್ರಗಳನ್ನು ವೀಕ್ಷಿಸಲು ಇಚ್ಛಿಸುವವರು ಟಿಕೆಟ್‌ಗಳನ್ನು ಬುಕ್ ಮಾಡಿಕೊಳ್ಳಬಹುದಾಗಿದೆ.

ಈ ಖುಷಿಯನ್ನು ಎಆರ್ ರಹಮಾನ್ ಸಹ ಹಂಚಿಕೊಂಡಿದ್ದು, ಪಿವಿಆರ್ ಐನಾಕ್ಸ್ ತನ್ನ ಚಿತ್ರಗಳನ್ನು ಈ ವಿಶೇಷ ಮೈಲಿಗಲ್ಲನ್ನು ಮುಟ್ಟಿದ್ದರ ಸಂದರ್ಭದಲ್ಲಿ ಪ್ರದರ್ಶಿಸುತ್ತಿರುವುದನ್ನು ಅತ್ಯದ್ಭುತ ಘಳಿಗೆ ಎಂದು ಬರೆದುಕೊಂಡಿದ್ದಾರೆ.

“30 ವರ್ಷಗಳ ಪ್ರೀತಿಯ ಸಂಭ್ರಮಾಚರಣೆ! ನಿಮ್ಮೆಲ್ಲರಿಂದ ನಾನು ಪಡೆದಿರುವ ಮರೆಯಲಾಗದ ಪ್ರೀತಿ ಮತ್ತು ಬೆಂಬಲಕ್ಕಾಗಿ ನಾನು ಕೃತಜ್ಞನಾಗಿದ್ದೇನೆ. ಈ ಪ್ರಯಾಣದುದ್ದಕ್ಕೂ ನಿಮ್ಮ ದಯೆ ನನ್ನ ಹೃದಯವನ್ನು ಮುಟ್ಟಿದೆ.

ಇನ್ನೂ ಹಲವು ವರ್ಷಗಳ ಕಾಲ ನೆನಪಿನಲ್ಲಿ ಉಳಿಯುವ ಘಳಿಗೆಗಳು ಇಲ್ಲಿವೆ” ಎಂದು ಎಆರ್ ರಹಮಾನ್ ಸಂತಸ ವ್ಯಕ್ತಪಡಿಸಿದ್ದಾರೆ.

ಹೀಗೆ ಎಆರ್ ರಹಮಾನ್ 30 ವರ್ಷಗಳನ್ನು ಪೂರೈಸಿದ್ದರ ಕುರಿತು ನೆಟ್ಟಿಗರು ಟ್ವೀಟ್ ಮಾಡುತ್ತಿದ್ದು ಸಂಗೀತ ಮಾಂತ್ರಿಕನಿಗೆ ಶುಭ ಹಾರೈಸಿದ್ದಾರೆ. ಇನ್ನೂ ಹೆಚ್ಚಿನ ಆಲ್ಬಂಗಳನ್ನು ಮಾಡಿ ನಮ್ಮನ್ನು ರಂಜಿಸಿ ಎಂದು ಬರೆದುಕೊಳ್ಳುತ್ತಿದ್ದಾರೆ.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!