• Sun. May 5th, 2024

ಗದ್ದರ್ ಅಣ್ಣಾ, ಕವಿದ ಕತ್ತಲೆಯಲ್ಲಿ ಎತ್ತ ಹೊರಳಿದೆಯೋ ಅಣ್ಣಾ:ಪ್ರೊ.ಚಂದ್ರಶೇಖರ ನಂಗಲಿ.

PLACE YOUR AD HERE AT LOWEST PRICE

ಗದ್ದರ್ ಅಣ್ಣಾ, ದ ಕತ್ತಲೆಯಲ್ಲಿ ಎತ್ತ ಹೊರಳಿದೆಯೋ ಅಣ್ಣಾ:ಪ್ರೊ.ಚಂದ್ರಶೇಖರ ನಂಗಲಿ.

 ಬಡ ರೈತರ ನೊಗಕ್ಕೆ ಹೆಗಲು ಕೊಟ್ಟ

ಬಡ ಎತ್ತುಗಳ ಕೊರಳ ಕಿಂಕಿಣಿ ಪಟ್ಟಿಯನ್ನು

ಕಾಲಿನ ಕಿರುಗೆಜ್ಜೆಯಾಗಿ ಕಟ್ಟಿ ಕುಣಿಯುತ್ತಾ

ಕೇಕೆ ಹಾಕುತ್ತಾ ಆಳುವವವರ ಕಣ್ಣಿಗೆ ಧೂಳೆಬ್ಬಿಸುತ್ತಾ

ಶ್ರಮಜೀವಿಗಳ ಮನೋರಂಗಭೂಮಿಯಲ್ಲಿ

ನವಕ್ರಾಂತಿಯ ಗಾನವನ್ನು ಮೊಳಗಿಸಿದ ಗದ್ದರ್ !

 

ಓದು ಬರಹ ಗೊತ್ತಿಲ್ಲದ, ಅಡವಿ ಗ್ರಾಮದ

ನಡಮಂತರಂ ಯಾನಾದುಲ ಆತ್ಮಬಂಧುವಾಗಿ

ಮುಗ್ದಜನರ ದಗ್ಧಬದುಕಿನ ಬವಣೆಗಳನ್ನೇ

ಹಾಡು ಕಟ್ಟಿ ಕಣ್ತೆರೆಸಿದ, ಕಣ್ಣೊರೆಸಿದ,

ಕಪ್ಪುಕಂಬಳಿ ಹೊದ್ದುಕೊಂಡ ಕೆಂಪುಕರವಸ್ತ್ರವೇ!

ಜನರ ನಾಲಿಗೆಯಲ್ಲೇ ಹಾಡಿದ ಕೆಂಪುಗುಂಡಿಗೆಯೇ !

 

ಕೂಲಿಜನರು, ರೈತಾಪಿಗಳು, ಪೀಡಿತರು,

ಪೌರುಷ ಸಂತ್ರಸ್ತ ಮಹಿಳೆಯರು, ಬಾಲಕಾರ್ಮಿಕರು,

ದೀನರು, ಹೀನರು ನಾನಾಬಗೆಯ ಮೂಕಜೀವಿಗಳಿಗೆ

ದಿಟ್ಟ ಧ್ವನಿಯಾಗಿ ಉಳ್ಳವರ ಎದೆಯಲ್ಲಿ ನಡುಕ

ಹುಟ್ಟಿಸಿದ ಉಗ್ರ ನರಸಿಂಹ ರೂಪಿಯಾದ ಗದ್ದರ್ !

ಬೆವರನ್ನು ತಬ್ಬಿಕೊಂಡು ಉಬ್ಬಿದ ವಕ್ಷಸ್ಥಲವೇ !

 

ಅರುಣ ಸೂರ್ಯನಾಗಿ ಹುಟ್ಟಿ ಕೆಂಪುಸೂರ್ಯನಾಗಿ

ದೇಶ ದೇಶಗಳನು ಮೆಟ್ಟಿದ ಅಜ್ಞಾನ ತಿಮಿರದಹನವೇ !

ಮಧ್ಯಾಹ್ನದ ಸುಡುಬಿಸಿಲು ಇಳಿದು ಸಂಜೆಸೂರ್ಯನಾಗಿ ಗಿರಿಶಿಖರಗಳ ಮಧ್ಯೆ ಕಾಣದಾಗಿ ಕಣ್ಮರೆಯಾದೆಯಾ ?

ಕವಿದ ಕತ್ತಲೆಯಲ್ಲಿ ಎತ್ತ ಹೊರಳಿದೆಯೋ ಅಣ್ಣಾ ?

ನಮ್ಮೆಲ್ಲರ ಭಾವಜಲಕ್ಕೆ ನಿನ್ನ ಹಾಡುಗಳೇ ಸುಣ್ಣಾ !

ಪ್ರೊ:ವಿ.ಚಂದ್ರಶೇಖರ ನಂಗಲಿ.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!