• Fri. May 3rd, 2024

PLACE YOUR AD HERE AT LOWEST PRICE

ಪ್ರಜಾಗಾಯಕ ಕ್ರಾಂತಿಕಾರಿ ಕವಿ ಗದ್ದರ್ ಎಂದೇ ಕರೆಯಲ್ಪಡುವ ಗುಮ್ಮಡಿ ವಿಠ್ಠಲ್ ರಾವ್ (೭೪) ರವಿವಾರ ಮದ್ಯಾಹ್ನ ನಿಧನರಾದ ಹಿನ್ನಲೆಯಲ್ಲಿ ಕೋಲಾರದ ನಚಿಕೇತ ನಿಲಯದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಮುಂದೆ ವಿವಿಧ ಸಾಮಾಜಿಕ ಹೋರಾಟಗಾರರಿಂದ ಗದ್ದರ್ ಭಾವಚಿತ್ರಕ್ಕೆ ದೀಪ ಹಿಡಿದು ಶ್ರದ್ದಾಂಜಲಿ ನಡೆಸಲಾಯಿತು.

ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಗದ್ದರ್ ಹೈದರಾಬಾದ್‌ನ ಅಪೋಲೋ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರು ಬೈಪಸ್ ಶಸ್ತç ಚಿಕಿತ್ಸೆಗೆ ಒಳಗಾದ ನಂತರ ಚೇತರಿಸಿಕೊಳ್ಳುತ್ತಿದ್ದಾಗಲೇ ಇತರೆ ಆರೋಗ್ಯ ಸಮಸ್ಯೆಗಳಿಗೆ ಈಡಾಗಿ ಹೃದಯಾಘಾತಕ್ಕೆ ಒಳಗಾಗಿ ಕೊನೆಯುಸಿರು ಎಳೆದಿದ್ದಾರೆ.

ಸಾಮಾಜಿಕ ಹೋರಾಟಗಳಿಗೆ ಸ್ಪೂರ್ತಿದಾಯಕವಾಗಿದ್ದ ಪ್ರಜಾಗಾಯಕ ಗದ್ದರ್ ನಿಧನ ವಾರ್ತೆ ತಿಳಿಯುತ್ತಿದ್ದಂತೆ ಕೋಲಾರದ ಹಿರಿಯ ಹೋರಾಟಗಾರ ಗದ್ದರ್ ಜೊತೆ ಒಡನಾಡಿದ್ದ ಕೋಟಿಗಾನಹಳ್ಳಿ ರಾಮಯ್ಯ ನೇತೃತ್ವದಲ್ಲಿ ಜಿಲ್ಲೆಯ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು ಹಾಗೂ ಕಲಾವಿದರು, ಹಾಡುಗಾರರು, ಕೋಲಾರ ನಗರದ ನಚಿಕೇತ ನಿಲಯದಲ್ಲಿರುವ ಅಂಬೇಡ್ಕರ್ ಪ್ರತಿಮೆ ಮುಂಭಾಗ ಜಮಾವಣೆಗೊಂಡು ಮೇಣದ ಬತ್ತಿಹಚ್ಚಿ ಅಗಲಿದ ಕಲಾವಿದನಿಗೆ ಶ್ರದ್ದಾಂಜಲಿ ಸಲ್ಲಿಸಿದರು.

ಕೋಲಾರ ಜಿಲ್ಲೆಯ ದಲಿತ ಚಳುವಳಿ ಕಲಾ ಮಂಡಳಿಗೆ ಪ್ರೇರಣೆಯಾಗಿದ್ದ ಗದ್ದೆರ್ ರವರು ರಚಿಸಿದ ಹಾಡುಗಳು ದಲಿತ ಸಂಘರ್ಷ ಸಮಿತಿ ರಾಜ್ಯದಲ್ಲಿ ಉತ್ತುಂಘಕ್ಕೇರಲು ಉತ್ತೇಜನ ನೀಡಿತ್ತು. ಈ ಹಿನ್ಲೆಯಲ್ಲಿ ಅವರ ಹಾಡುಗಳನ್ನು ಕನ್ನಡಕ್ಕೆ ಕವಿ ಕೋಟಿಗಾನಹಳ್ಳಿ ರಾಮಯ್ಯ ತರ್ಜುಮೆ ಮಾಡುವ ಮೂಲಕ ಶೋಷಿತ ಸಮುದಾಯಗಳ ಬಿಡುಗಡೆಗಾಗಿ ಸಾಂಸ್ಕೃತಿಕ ಹೋರಾಟಕ್ಕೆ ಜೀವ ತುಂಬಿದ್ದರು.

ಶ್ರದ್ದಾಂಜಲಿ ಸಭೆಯಲ್ಲಿ ಗದ್ದರ್ ಅವರ ತೆಲುಗು ಹಾಗೂ ಕನ್ನಡಕ್ಕೆ ಅನುವಾದಗೊಂಡ ಪ್ರಜಾಹಿತ ಹಾಡುಗಳನ್ನು ಹಾಡುವ ಮೂಲಕ ಗಾನ ಶ್ರದ್ದಾಂಜಲಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷಿö್ಮನಾರಾಯಣ(ಲಚ್ಚಿ), ಜಾನಪದ ಗಾಯಕ ಪಿಚ್ಚಳ್ಳಿ ಶ್ರೀನಿವಾಸ್, ಡಿ.ಆರ್.ರಾಜಪ್ಪ, ಟಿ.ವಿಜಯಕುಮಾರ್, ಅಬ್ಬಣಿ ಶಿವಪ್ಪ, ಎಂ.ಚAದ್ರಶೇಖರ್, ಹಾರೋಹಳ್ಳಿ ರವಿ, ಸಿ.ವಿ.ನಾಗರಾಜ್, ಈನೆಲ ಈಜಲ ವೆಂಕಟಾಚಲಪತಿ, ವಿ.ಗೀತಾ, ಗಾಂಧೀನಗರ ನಾರಾಯಣಸ್ವಾಮಿ, ಮರ್ಜೇನಹಳ್ಳಿ ಬಾಬು, ಮಾರುತಿ ಪ್ರಸಾದ್, ಬೀರಮಾನಹಳ್ಳಿ ಆಂಜಿನಪ್ಪ, ಅನಂತಕೀರ್ತಿ, ನಡುಪಳ್ಳಿ ಮಂಜುನಾಥ್, ಜನಾಧಿಕಾರ ಮಂಜುಳ, ಸಂಜೀವಪ್ಪ, ದಿಶಾ, ದುರ್ಗಾ ಮತ್ತಿತರರು ಭಾಗವಹಿಸಿದ್ದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!