• Fri. May 3rd, 2024

PLACE YOUR AD HERE AT LOWEST PRICE

ಬಂಗಾರಪೇಟೆ:ಇಂದ್ರಧನುಷ್ ಅತ್ಯಂತ ಮಹತ್ವಪೂರ್ಣ ಯೋಜನೆಯಾಗಿದ್ದು ಗರ್ಭಿಣಿ ಮತ್ತು ಮಕ್ಕಳ ಆರೋಗ್ಯವನ್ನು ಸದೃಢಗೊಳಿಸಲು ಸಹಕಾರಿಯಾಗಿದೆ ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೇಳಿದರು.

ಅವರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಇಂದ್ರಧನುಷ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,  ಪೋಷಕರ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ವ್ಯವಸ್ಥೆಯ ಅಸಮತೋಲನದಿಂದಾಗಿ ದೇಶದಲ್ಲಿ ಶೇ೬೫% ರಷ್ಟು ಮಕ್ಕಳು ಲಸಿಕೆ ಪಡೆಯುವಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದಾರೆ.

ಆದಕಾರಣ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಪ್ರತಿ ವರ್ಷ ಇಂದ್ರಧನುಷ್ ಶೀರ್ಷಿಕೆಯ ಅಡಿಯಲ್ಲಿ ಮಕ್ಕಳಿಗೆ ಉಚಿತ ಲಸಿಕೆಯನ್ನು ನೀಡಲಾಗುತ್ತಿದೆ. ಪ್ರಸ್ತುತ ಈ ಲಸಿಕೆಯಿಂದಾಗಿ ಸಿಡಬು, ಕ್ಷಯ, ದಡಾರ, ಹೆಪಟೈಟಸ್-ಬಿ, ಡಿಪ್ತೀರಿಯಾ, ನಾಯಿಕೆಮ್ಮು, ಪೋಲಿಯೋ, ಧನುರ್ವಾಯು ಒಳಗೊಂಡಂತೆ ಹನ್ನೇರಡು ಮಾರಣಾಂತಿಕ ರೋಗಗಳನ್ನು ತಡೆಯುತ್ತದೆ.

ಈ ಲಸಿಕೆ ಯಾವುದೇ ಲಿಂಗ, ಧರ್ಮ, ಜಾತಿ ಭೇದಭಾವವಿಲ್ಲದೆ ಹುಟ್ಟುವ ಮಕ್ಕಳೆಲ್ಲರೂ ಆರೋಗ್ಯವಂತರಾಗಿ ಸದೃಢವಾಗಿ ಬೆಳೆಯಲು ಸಹಕಾರಿಯಾಗಿದೆ. ಇದರೊಟ್ಟಿಗೆ ಭಾರತ ಸರ್ಕಾರದಿಂದ  ಯುನಿವರ್ಸಲ್ ಇಮ್ಯೂನೈಸೇಶನ್ ಪ್ರೋಗಾಂ (ಯುಐಪಿ) ವಿಸ್ತರಣೆಯಾಗಿದ್ದು, ವಾರ್ಷಿಕ ೨೬ಮಿಲಿಯನ್ ಮಕ್ಕಳನ್ನು ರಕ್ಷಿಸಲಾಗುತ್ತಿದೆ. ೧೨ ಗಂಭೀರ ಕಾಯಿಲೆಗಳಿಂದ ಮುಕ್ತಿಗೊಳಿಸಿದೆ ಎಂದರು.

ಬಂಗಾರಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಸುಸ್ವಜಿತವಾದ ಸೌಲಭ್ಯಗಳನ್ನು ಒಳಗೊಂಡಿದ್ದು, ಜಿಲ್ಲೆಯಲ್ಲಿಯೇ ಮಾದರಿ ಆಸ್ಪತ್ರೆಯಾಗಿದೆ. ಇಲ್ಲಿನ ಸಹಾಯಕ ವೈದ್ಯಾಧಿಕಾರಿ ಭಾರತಿ ಅವರ ಕಾರ್ಯವೈಖರಿ ಪ್ರಶಂಸನೀಯವಾಗಿದೆ.

ಕರೋನಾ ಸಂದರ್ಭದಲ್ಲಿ ಆಕ್ಸಿಜನ್ ಕೊರತೆ ಹೆಚ್ಚಾಗಿದ್ದು, ೧೨೦ಲೀ.ಗೂ ಹೆಚ್ಚು ಸಂಗ್ರಹಿಸುವಂತಹ ಆಕ್ಸಿಜನ್ ಪ್ಲಾಂಟೇಶನನ್ನು ನಿರ್ಮಿಸಲಾಗಿದೆ. ನಮ್ಮ ಸಿಬ್ಬಂದಿ ವರ್ಗದಿಂದ ಅತ್ಯಂತ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದ ಫಲವಾಗಿ ಜಿಲ್ಲೆಯಲ್ಲಿ ಅತಿ ಹೆಚ್ಚು ಜೀವಗಳನ್ನು ಉಳಿಸಿದ ಆಸ್ಪತ್ರೆ ಎಂಬ ಏಗ್ಗಳಿಕೆಗೆ ಪಾತ್ರವಾಗಿದೆ ಎಂದು ಶ್ಲಾಘಿಸಿದರು.

ಈ ಸಂದರ್ಭದಲ್ಲಿ ಎಎಂಓ ಭಾರತಿ, ಪಿಎಚ್‌ಒ ಕೃತಿಕ್ ಸ್ವಾಮಿ, ಆರೋಗ್ಯ ಸಮನ್ವಯಾಧಿಕಾರಿ ಅನಿತಾ, ಆರೋಗ್ಯ ನಿರೀಕ್ಷಕ ರವಿ, ಗೋವಿಂದರಾಜ್ ಹಾಗೂ ಸಿಬ್ಬಂದಿ ವರ್ಗ ಪ್ರಶಾಂತ್, ಅರುಣ್, ಪುನೀತ, ಉಷಾ ಇತರರು ಉಪಸ್ಥಿತರಿದ್ದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!