• Fri. May 3rd, 2024

PLACE YOUR AD HERE AT LOWEST PRICE

ಸೂಪರ್ ಸ್ಟಾರ್ ರಜನಿಕಾಂತ್ ‘ಜೈಲರ್’ ಫೀವರ್ ಜೋರಾಗಿದೆ. ಬೆಂಗಳೂರಿನಲ್ಲಿ ಕೊಂಚ ಹೆಚ್ಚೆ ಇದೆ ಎಂದು ಹೇಳುವಂತಾಗಿದೆ. ಯಾಕಂದರೆ ನಾಳೆ(ಆಗಸ್ಟ್ 10) ಸಾವಿರಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಸಿನಿಮಾ ತೆರೆಗಪ್ಪಳಿಸುತ್ತಿದೆ. ಈ ಮೂಲಕ KGF- 2 ದಾಖಲೆಯನ್ನು ತಮಿಳು ಸಿನಿಮಾ ಅಳಿಸಿ ಹಾಕಿದೆ. ಇನ್ನು ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಜೋರಾಗಿದ್ದು ಮೊದಲ ದಿನವೇ ಭರ್ಜರಿ ಓಪನಿಂಗ್ ನಿರೀಕ್ಷೆ ಮಾಡಲಾಗುತ್ತಿದೆ.

ನೆಲ್ಸನ್ ನಿರ್ದೇಶನದ ಆಕ್ಷನ್ ಎಂಟರ್‌ಟೈನರ್ ‘ಜೈಲರ್’ ಸಿನಿಮಾ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ಚಿತ್ರದಲ್ಲಿ ಕನ್ನಡ ನಟ ಶಿವರಾಜ್‌ಕುಮಾರ್, ಮಲಯಾಳಂ ನಟ ಮೋಹನ್ ಲಾಲ್ ಸೇರಿದಂತೆ ಘಟಾನುಘಟಿ ಕಲಾವಿದರು ನಟಿಸಿದ್ದಾರೆ. ಶಿವಣ್ಣ ನಟಿಸಿರೋದ್ರಿಂದ ಕರ್ನಾಟಕದಲ್ಲಿ ಬಹಳ ದೊಡ್ಡಮಟ್ಟದಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ. ಆದರೆ ಕನ್ನಡ ಶೋಗಳಿಗಿಂತ ತೆಲುಗು, ತಮಿಳು ಹೆಚ್ಚು ಶೋಗಳನ್ನು ಕೊಟ್ಟಿರುವುದು ಕೆಲವರ ಬೇಸರಕ್ಕೆ ಕಾರಣವಾಗಿದೆ.

ಕನ್ನಡಕ್ಕೆ ಸಿನಿಮಾ ಡಬ್ ಆಗಿದ್ದರೂ ಕನ್ನಡ ಶೋ ಯಾಕೆ ಕಮ್ಮಿ ಕೊಟ್ಟಿದ್ದಾರೆ ಎಂದು ಕೇಳುತ್ತಿದ್ದಾರೆ. ಇನ್ನು ಬೆಳ್ಳಂ ಬೆಳಗ್ಗೆ 6 ಗಂಟೆಯಿಂದಲೇ ‘ಜೈಲರ್’ ಫಸ್ಟ್ ಶೋ ಶುರುವಾಗಲಿದೆ. ಈಗಾಗಲೇ ಬಹುತೇಕ ಥಿಯೇಟರ್‌ಗಳಲ್ಲಿ ಅರ್ಲಿ ಮಾರ್ನಿಂಗ್ ಶೋಗಳು ಸೋಲ್ಡ್‌ಔಟ್ ಆಗ್ತಿದೆ. ಸಾಕಷ್ಟು ಕಡೆಗಳಲ್ಲಿ ಫಾಸ್ಟ್‌ ಫಿಲ್ಲಿಂಗ್ ಆಗುತ್ತಿದೆ. ಇನ್ನು ಬೆಂಗಳೂರಿನ ಕೆಲವೆಡೆ ಟಿಕೆಟ್ ದರ ಹೆಚ್ಚಿಸಲಾಗಿದೆ. ಪಿವಿಆರ್‌, ಐನಾಕ್ಸ್‌ ಚೈನ್‌ಗಳಲ್ಲಿ ಟಿಕೆಟ್ ದರ 1500 ರೂ. ದಾಟಿದೆ. ಆದರೂ ಟಿಕೆಟ್ ಬುಕ್ ಆಗುತ್ತಿರುವುದು ಕೆಲವರ ಅಚ್ಚರಿಗೆ ಕಾರಣವಾಗಿದೆ. ಕನ್ನಡ ಸಿನಿಮಾಗಳಿಗೂ ಇಲ್ಲದ ಕ್ರೇಜ್ ರಜನಿಕಾಂತ್ ಸಿನಿಮಾಗಳಿಗಿದ್ಯಾ? ಎಂದು ಹುಬ್ಬೇರಿಸಿದ್ದಾರೆ.

ಇನ್ನು ಬ್ರಿಗೇಟ್ ರಸ್ತೆಯ ಫೋರಂ ರೆಕ್ಸ್ ವಾಲ್ಕ್ ಮಾಲ್‌ ಪಿವಿಆರ್‌ ಸ್ಕ್ರೀನ್‌ವೊಂದರಲ್ಲಿ ‘ಜೈಲರ್‌’ ಸಿನಿಮಾ ಟಿಕೆಟ್ ದರ 2000 ರೂ. ಮೀರಿದೆ. ಈ ಹಿಂದೆ ಅಲ್ಲಿ ಇದ್ದ ರೆಕ್ಸ್ ಥಿಯೇಟರ್ ಕೆಡವಿ ಈ ಮಾಲ್ ಕಟ್ಟಲಾಗಿದೆ. ದೇಶದಲ್ಲೇ ಅತಿ ದುಬಾರಿ ಮಲ್ಟಿಪ್ಲೆಕ್ಸ್ ಸ್ಕ್ರೀನ್‌ಗಳಲ್ಲಿ ಇದು ಒಂದು. ಡೈರೆಕ್ಟರ್ಸ್ ಕಟ್ ಹೆಸರಿನ ಈ ಹಾಲ್‌ನಲ್ಲಿ ಐಷಾರಾಮಿಯಾಗಿ ಕೂತು ಪ್ರೇಕ್ಷಕರು ಸಿನಿಮಾ ನೋಡುವ ಅವಕಾಶ ಇದೆ. ಕೇವಲ 50 ಸೀಟ್‌ಗಳು ಮಾತ್ರ ಇರುವ ಈ ಸ್ಕ್ರೀನ್‌ನಲ್ಲಿ ದೊಡ್ಡ ದೊಡ್ಡ ಸಿನಿಮಾಗಳನ್ನು ಮಾತ್ರ ಪ್ರದರ್ಶನ ಮಾಡಲಾಗುತ್ತದೆ. ಇಲ್ಲಿ ಇದೀಗ ‘ಜೈಲರ್’ ಸಿನಿಮಾ ಟಿಕೆಟ್ ಬುಕ್ಕಿಂಗ್ ಕೂಡ ಓಪನ್ ಆಗಿದೆ.

ಡೈರೆಕ್ಟರ್ಸ್ ಕಟ್ ಸ್ಕ್ರೀನ್‌ನಲ್ಲಿ ಫ್ಲಾಟಿನಂ ಹಾಗೂ ಫ್ಲಾಟಿನಂ ಸುಪಿರಿಯರ್ ಹೀಗೆ ಎರಡು ರೀತಿಯ ಸೀಟ್ ಟಿಕೆಟ್‌ ಖರೀದಿಸಿ ಸಿನಿಮಾ ನೋಡುವ ಅವಕಾಶ ಇದೆ. ಫ್ಲಾಟಿನಂ ಸುಪಿರಿಯರ್ ಒಂದು ಟಿಕೆಟ್ ಬೆಲೆ ಬರೋಬ್ಬರಿ 2200 ರೂ. ಇದೆ. ಬುಕ್ಕಿಂಗ್ ಚಾರ್ಜ್ ಸೇರಿ ಒಟ್ಟು 2271 ರೂ. ಟಿಕೆಟ್ ದರವಾಗುತ್ತದೆ. ಆದರೆ ರಜನಿಕಾಂತ್ ಕ್ರೇಜ್ ಹೇಗಿದೆ ಅಂದ್ರೆ ಶ್ರೀಮಂತ ಅಭಿಮಾನಿಗಳು ಟಿಕೆಟ್ ಬುಕ್ಕಿಂಗ್‌ಗೆ ಮುಗಿಬಿದ್ದಿದ್ದಾರೆ. ಈಗಾಗಲೇ ಬೆಳಗ್ಗೆ 6 ಗಂಟೆ ಶೋ ಅರ್ಧ ಟಿಕೆಟ್ ಮಾರಾಟವಾಗಿದೆ.

ರಜನಿಕಾಂತ್‌ಗೆ ಬೆಂಗಳೂರಿನಲ್ಲಿ ದೊಡ್ಡ ಅಭಿಮಾನಿ ಬಳಗ ಇದೆ. ‘ಜೈಲರ್’ ಸಿನಿಮಾ ಫಸ್ಟ್ ಡೇ ಫಸ್ಟ್ ಶೋ ನೋಡಬೇಕು ಎಂದು ಕಾಯುತ್ತಿರುವವರ ಸಂಖ್ಯೆ ಕೂಡ ಜಾಸ್ತಿನೇ ಇದೆ. ಹಾಗಾಗಿ ಟಿಕೆಟ್ ಬೆಲೆ ಬಗ್ಗೆ ಯಾರು ತಲೆ ಕೆಡಿಸಿಕೊಳ್ಳುತ್ತಿದ್ದಾರೆ. ‘ಅಣ್ಣಾತ್ತೆ’ ನಂತರ ರಜನಿಕಾಂತ್ ನಟನೆಯ ಸಿನಿಮಾ ‘ಜೈಲರ್’. ಈಗಾಗಲೇ ಟ್ರೈಲರ್ ಹಾಗೂ ಸಾಂಗ್ಸ್‌ನಿಂದ ಸಿನಿಮಾ ಹೈಪ್ ಕ್ರಿಯೇಟ್ ಮಾಡಿದೆ. ಆದರೆ ಕರ್ನಾಟಕದಲ್ಲಿ ಚಿತ್ರಕ್ಕೆ ಈ ರೀತಿ ರೆಸ್ಪಾನ್ಸ್ ಸಿಗುತ್ತಿರುವುದು ಅಚ್ಚರಿ ಮೂಡಿಸಿದೆ. ಮುಂದಿನ ದಿನಗಳಲ್ಲಿ ಸಿನಿಮಾ ಹೇಗೆಲ್ಲಾ ಸದ್ದು ಮಾಡುತ್ತದೋ ಕಾದು ನೋಡಬೇಕಿದೆ.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!