• Sun. Apr 28th, 2024

PLACE YOUR AD HERE AT LOWEST PRICE

ಕೋಲಾರ ತಾಲೂಕಿನ ಅರಾಭಿಕೊತ್ತನೂರು ಗ್ರಾಮ ಪಂಚಾಯತಿಯ ಎರಡನೇ ಅವಧಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಎನ್.ರೇಣುಕಾಂಭ ಕೆ.ಮುನಿರಾಜ, ಉಪಾಧ್ಯಕ್ಷರಾಗಿ ಆರ್.ನಾಗೇಂದ್ರ(ನಾಗೇಶ್) ಆಯ್ಕೆಯಾಗಿದ್ದಾರೆ.


ಅರಾಭಿಕೊತ್ತನೂರು ಗ್ರಾಮ ಪಂಚಾಯಿತಿ ಒಟ್ಟು ೨೦ ಸದಸ್ಯರನ್ನೊಳಗೊಂಡಿದ್ದು, ಸಾಮಾನ್ಯರಿಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಪರಿಶಿಷ್ಟ ಜಾತಿಯ ರೇಣುಕಾಂಭ ೧೨ ಮತಗಳು ಪಡೆದು ೮ ಮತಗಳನ್ನು ಗಳಿಸಿದ್ದ ತಮ್ಮ ಪ್ರತಿಸ್ಪರ್ಧಿ ಪವಿತ್ರ ವಿರುದ್ಧವಿಜೇತರಾಗಿದ್ದಾರೆ. ಅದೇ ರೀತಿ ಸಾಮಾನ್ಯ(ಪುರುಷ) ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಮಡೇರಹಳ್ಳಿ ನಾಗೇಂದ್ರ (ನಾಗೇಶ್) ೧೨ ಮತಗಳಿಸಿ ೮ ಮತಗಳನ್ನು ಪಡೆದ ತಮ್ಮ ಪ್ರತಿಸ್ಪರ್ಧಿ ನಂಜುAಡಗೌಡ ವಿರುದ್ಧ ಬಹುಮತದಿಂದ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಪ್ರವೀಣ್ ಘೋಷಿಸಿದರು.

ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಗುಟ್ಟಹಳ್ಳಿ ಜಿ.ಎಂ.ಶ್ರೀನಿವಾಸ್ ಹಾಗೂ ಅರಾಭಿಕೊತ್ತನೂರು ಶ್ರೀಧರ್ ಜೋಡಿಯಾಗಿ ರೂಪಿಸಿದ ತಂತ್ರಗಾರಿಕೆಯಿ0ದ ಬಹುಮತಕ್ಕೆ ಅಗತ್ಯವಾದ ಸದಸ್ಯರ ಮನಗೆಲ್ಲುವಲ್ಲಿ ಯಶಸ್ವಿಯಾದ ಉಭಯ ಅಭ್ಯರ್ಥಿಗಳು ಕಾಂಗ್ರೆಸ್ ಬೆಂಬಲಿತರಾಗಿ ವಿಜಯ ಪತಾಕೆ ಹಾರಿಸಿದರಲ್ಲದೆ ಸಾಮಾನ್ಯ ಮೀಸಲು ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿ ಮಹಿಳೆಯನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಗ್ರಾಮ ಪಂಚಾಯ್ತಿಯಲ್ಲಿ ಹೊಸ ಭಾಷ್ಯ ಬರೆಯಲಾಗಿದೆ.

ಈ ಸಂದರ್ಭದಲ್ಲಿ ಪಿಡಿಓ ಶಾಲಿನಿ, ಗ್ರಾಮ ಪಂಚಾಯತಿ ಸದಸ್ಯರಾದ ದೊಡ್ಡ ಅಯ್ಯೂರು ಗೋಪಾಲಕೃಷ್ಣ, ಚಿಕ್ಕ ಅಯ್ಯೂರು ಚಿಕ್ಕಚನ್ನಪ್ಪ, ತ್ಯಾವನಹಳ್ಳಿ ಬಿ.ನಾರಾಯಣಪ್ಪ, ವೆಂಕಟಾಪುರ ನಾರಾಯಣಸ್ವಾಮಿ (ಅಪ್ಪಯ್ಯ), ಮಂಗಸ0ದ್ರ ಪ್ರಸನ್ನಕುಮಾರ್, ಚೌಡದೇನಹಳ್ಳಿ ಸಿ.ನಾಗರಾಜ, ಅರಾಭಿಕೊತ್ತನೂರು ಕವಿತ ಪ್ರಕಾಶ್‌ಬಾಬು, ವೀಣಾ ವಿಜಯಕುಮಾರ್, ಚಿಕ್ಕ ಅಯ್ಯೂರು ಸುಜಾತ ಗಣೇಶ್, ಮಂಗಸAದ್ರ ಪುಷ್ಪಲತಾ ಸುರೇಶ್, ರೀಟಾ ಪುಟ್ಟ ಬೆತ್ತನಿ, ಅರಾಭಿಕೊತ್ತನೂರು ಮುಳ್ಳಳ್ಳಿ ಮಂಜುನಾಥ್, ನಂಜೇಗೌಡ, ಶ್ರೀನಿವಾಸ, ಶ್ರೀಧರಮೂರ್ತಿ, ನಾರಾಯಣರೆಡ್ಡಿ, ಮುನಿಶಾಮಿಗೌಡ, ಮುರಳಿ, ಡಿಪಿಎಸ್ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಕೆ.ಆರ್.ಪುರಂ ಹಾಗೂ ಪಂಚಾಯತಿ ವ್ಯಾಪ್ತಿಯ ಎಲ್ಲಾ ಗ್ರಾಮಸ್ಥರು ಉಪಸ್ಥಿತರಿದ್ದರು.

 

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!