• Mon. Apr 29th, 2024

PLACE YOUR AD HERE AT LOWEST PRICE

ಟೊಮ್ಯಾಟೋ ಬೆಲೆ ಏರಿಕೆಯಿಂದ ಹೈರಾಣಾಗಿದ್ದ ಜನ ಬೆಲೆ ಕುಸಿತ ಕಂಡ ನಂತರ ನಿಟ್ಟುಸಿರು ಬಿಟ್ಟು ಟೊಮ್ಯಾಟೋ ಕೊಳ್ಳಲು ಮುಂದಾಗಿದ್ದಾರೆ. ಇದರ ಬೆನ್ನಲ್ಲೇ ಇದೀಗ ಈರುಳ್ಳಿ ದರ ಸದ್ದಿಲ್ಲದಂತೆ ಹೆಚ್ಚಳವಾಗುತ್ತಿದೆ. ಕಳೆದ ಒಂದು ವಾರದಿಂದ ಕೆಜಿ ಈರುಳ್ಳಿ ಬೆಲೆ ಸುಮಾರು ₹12-15 ರಷ್ಟು ಏರಿಕೆ ಕಂಡಿದೆ.

ಕಳೆದ ನಾಲ್ಕು ತಿಂಗಳಿನಿಂದ ಟೊಮ್ಯಾಟೋ ದರ ₹200 ಗಡಿ ದಾಟಿತ್ತು. ಇದರಿಂದ ಜನರು ಟೊಮ್ಯಾಟೋ ಕೊಳ್ಳುವುದನ್ನು ಕಡಿಮೆ ಮಾಡಿದ್ದರು. ಅಂದರೆ ಕೆಜಿ ಟೊಮ್ಯಾಟೋ ತೆಗೆದುಕೊಳ್ಳುತ್ತಿದ್ದ ಗ್ರಾಹಕ ಅರ್ಧ ಕೆಜಿ ಟೊಮ್ಯಾಟೋ ಖರೀದಿ ಮಾಡುತ್ತಿದ್ದರು. ಇನ್ನೂ ಕೆಲವರು ಟೊಮ್ಯಾಟೋ ದರ ಹೆಚ್ಚಳದಿಂದ ಟೊಮ್ಯಾಟೋ ಬಳಸದೇ ಹುಣಸೆಹಣ್ಣು ಹಾಕಿ ಅಡುಗೆ ಮಾಡುತ್ತಿದ್ದರು.

ಕಳೆದ ಒಂದು ವಾರದಿಂದ ಟೊಮ್ಯಾಟೋ ದರದಲ್ಲಿ ಭಾರೀ ಇಳಿಕೆಯಾಗುತ್ತಿದ್ದು, ಕಳೆದ ವಾರ ಕೆಜಿ ಟೊಮ್ಯಾಟೋಗೆ ₹80 ರಿಂದ ₹90 ಇತ್ತು. ಇದೀಗ ₹50 ರಿಂದ ₹60 ಆಗಿದೆ. ಟೊಮ್ಯಾಟೋ ದರ ಇಳಿಕೆ ಕಂಡಿದೆ ಎಂದು ಗ್ರಾಹಕರು ಸಂತಸ ಪಡುವಷ್ಟರಲ್ಲಿಯೇ ಈರುಳ್ಳಿ ದರ ಏರಿಕೆಯಾಗುತ್ತಿರುವುದರಿಂದ ಮತ್ತೆ ಕಂಗಾಲಾಗಿದ್ದಾರೆ.

ಸದ್ದಿಲ್ಲದೇ ಹೆಚ್ಚಳವಾಗುತ್ತಿರುವ ಈರುಳ್ಳಿ ದರ.

ಸದ್ದಿಲ್ಲದಂತೆ ಈರುಳ್ಳಿ ದರ ಹೆಚ್ಚಳವಾಗುತ್ತಿದೆ. ಕಳೆದ ವಾರ ₹25 ಇದ್ದ ಈರುಳ್ಳಿ ದರ ಇದೀಗ ₹30 – ₹40 ತಲುಪಿದೆ. ಸೂಪರ್‌ ಮಾರುಕಟ್ಟೆಗಳಲ್ಲಿ ಕೆಜಿ ಈರುಳ್ಳಿಗೆ ₹45 ನಂತೆ ಮಾರಾಟ ಮಾಡಲಾಗುತ್ತಿದೆ.

ಜೂನ್ ತಿಂಗಳಿನಲ್ಲಿ ವಾಡಿಕೆಯಂತೆ ಮಳೆಯಾಗಿಲ್ಲ. ಮುಂಗಾರು ಕೈಕೊಟ್ಟ ಕಾರಣ ರಾಜ್ಯದ ಹಲವೆಡೆ ಉತ್ತಮ ಬೆಳೆ ಬಂದಿಲ್ಲ. ಚಿತ್ರದುರ್ಗ, ದಾವಣಗೆರೆ ಸೇರಿದಂತೆ ರಾಜ್ಯದ ಹಲವು ಕಡೆಗಳಿಂದ ಈರುಳ್ಳಿ ಪೂರೈಕೆಯಾಗುತ್ತಿಲ್ಲ. ಈ ವರ್ಷ ರಾಜ್ಯದಲ್ಲಿ 4000 ಹೆಕ್ಟೇರ್ ಬೆಳೆ ಕೊರತೆ ಎದುರಾಗಿದೆ. ಮುಂದಿನ ದಿನಗಳಲ್ಲಿ ಈರುಳ್ಳಿ ಬೆಲೆ ₹50 – ₹60 ಏರಿಕೆಯಾಗುವ ಸಾಧ್ಯತೆ ಇದೆ.

ಆಂಧ್ರ ಪ್ರದೇಶ ಮತ್ತು ಕರ್ನಾಟಕದಲ್ಲಿ ಈರುಳ್ಳಿಯ ಹೊಸ ಬೆಳೆ ಒಂದು ತಿಂಗಳು ವಿಳಂಬವಾಗಿದೆ. ಅಹ್ಮದ್‌ ನಗರದಲ್ಲಿಯೂ ಪೂರೈಕೆ ಕಡಿಮೆ ಇದೆ. ಹೀಗಾಗಿ, ಈರುಳ್ಳಿ ಬೆಲೆ ಏರಿಕೆಯಾಗಿದೆ.

ಕಳೆದ ಎರಡು ತಿಂಗಳಿನಿಂದ ಬೆಳ್ಳುಳ್ಳಿ ಬೆಲೆ ಹೆಚ್ಚಳವಾಗಿದ್ದು, ಪ್ರಸ್ತುತ ಕೆಜಿಗೆ ₹200 ಇದೆ. ಹೊಸ ಬೆಳೆ ಬರುವವರಿಗೆ ಈ ದರ ಮುಂದುವರೆಯುವ ಸಾಧ್ಯತೆ ಇದೆ.

ಮಹಾರಾಷ್ಟ್ರದಲ್ಲಿ ಕ್ವಿಂಟಾಲ್‌ ಈರುಳ್ಳಿ ದರ ಶೇ. 48ರಷ್ಟು ಏರಿಕೆ.

ದೇಶದಲ್ಲಿ ಅತಿ ಹೆಚ್ಚು ಈರುಳ್ಳಿ ಬೆಳೆಯುವ ರಾಜ್ಯ ಮಹಾರಾಷ್ಟ್ರ. ಇಲ್ಲಿ ಕಳೆದ ಒಂದು ವಾರದಲ್ಲಿ ಕ್ವಿಂಟಾಲ್‌ ಈರುಳ್ಳಿ ದರ ಶೇ. 48ರಷ್ಟು ಏರಿಕೆ ಕಂಡಿದೆ. ಆಗಸ್ಟ್ 4 ರಂದು ಕ್ವಿಂಟಾಲ್‌ಗೆ ₹1,550 ಇದ್ದ ಈರುಳ್ಳಿ ದರ ಶುಕ್ರವಾರ ₹2,300ಗೆ ತಲುಪಿದೆ. ಮಹಾರಾಷ್ಟ್ರದ ಲಾಸಲ್‌ಗಾಂವ್ ಎಪಿಎಂಸಿಯಲ್ಲಿ ಈರುಳ್ಳಿಯ ಸಗಟು ಬೆಲೆ ಹೆಚ್ಚಳವಾಗಿದೆ.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!