• Mon. Apr 29th, 2024

PLACE YOUR AD HERE AT LOWEST PRICE

ಕೆಜಿಎಪ್:ರಾಬರ್‌ಸನ್ ಪೇಟೆ ನಗರಸಭೆಯ ಅವೈಜ್ಞಾನಿಕ ಕಸ ವಿಲೇವಾರಿ ಮಾಡುತ್ತಿರುವ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಬೇಕು ಮತ್ತು ಕಸ ವಿಲೇವಾರಿಯಿಂದ ಪಾರಾಂಡಹಳ್ಳಿ ಉದಯ ನಗರ ಮಲ್ಲಂಪಲ್ಲಿ ಗ್ರಾಮಗಳ ಜನರ ಆರೋಗ್ಯವನ್ನು ಕಾಪಾಡಬೇಕೆಂದು ಒತ್ತಾಯಿಸಿ ರೈತ ಸಂಘದಿಂದ ಪಾರಾಂಡಹಳ್ಳಿ ಬಳಿ ಪ್ರತಿಭಟನೆ ಮಾಡಲಾಯಿತು.

ಈ ವೇಳೆ ಮುಖಂಡರು ಮಾತನಾಡಿ, ಕಸ ತ್ಯಾಜ್ಯವನ್ನು ಐದಾರು ವರ್ಷಗಳಿಂದ ರಾಬರ್ಟ್ಸನ್ ಪೇಟೆ ಕಸ ವಿಲೇವಾರಿ ಘಟಕದಲ್ಲಿ ನಗರಸಭೆ ಅಧಿಕಾರಿಗಳು ಸಾವಿರಾರು ಟ್ರಾಕ್ಟರ್ ಗಳಲ್ಲಿ ತಂದು ಸುರಿದು ಜನರ ಆರೋಗ್ಯ ಕೆಡಿಸುತ್ತಿದ್ದಾರೆ.

ಪ್ರತಿ ದಿನ ತ್ಯಾಜ್ಯದಿಂದ ಬರುವ ಬೀಕರ ವಾಸನೆಯಿಂದ ಊಟ ಮಾಡಲಾಗುತ್ತಿಲ್ಲ, ಮಕ್ಕಳಿಗೆ ಅನಾರೋಗ್ಯದ ಬಾದೆ. ಪರಿಸರ ಪ್ರಾಣಿಪಕ್ಷಿಗಳಿಗೂ ತೊಂದರೆಯಾಗುತ್ತಿದೆ ಎಂದು ಆರೋಪ ಮಾಡಿದರು.

ಅವೈಜ್ಞಾನಿಕ ಕಸ ವಿಲೇವಾರಿ ಸರಿಪಡಿಸಿ ಮೂರು ಗ್ರಾಮಗಳ ಆರೋಗ್ಯವನ್ನು ಹಾಗೂ ಪರಿಸರ ನೀರು ಜಾನುವಾರುಗಳ ಪ್ರಾಣಿ ಪಕ್ಷಿಗಳನ್ನು ರಕ್ಷಣೆ ಮಾಡದೇ ಇದ್ದರೆ ನೂರಾರು ಟ್ರಾಕ್ಟರ್‌ಗಳಲ್ಲಿ ಕಸವನ್ನು ತುಂಬಿಕೊಂಡು ಶಾಸಕರ ಮನೆ ಮುಂದೆ ಇಲ್ಲವೇ ಮುಖ್ಯಮಂತ್ರಿಗಳ ಮನೆ ಎದುರು ಸುರಿಯುವ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆಯನ್ನು ನೀಡಿದರು.

ಮನವಿ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್ ನಾಗವೇಣಿ ಮತ್ತು ನಗರಸಭೆ ಆಯುಕ್ತರು ಪವನ್ ಕುಮಾರ್ ಮುಂದಿನ ಕ್ರಮ ಜರುಗಿಸುವ ಭರವಸೆ ನೀಡಿದರು.

ಹೋರಾಟದಲ್ಲಿ ರಾಜ್ಯ ುಪಾದ್ಯಕ್ಷ ನಾರಾಯಣಗೌಡ, ಮಹಿಳಾ ಜಿಲ್ಲಾದ್ಯಕ್ಷೆ ಎ.ನಳಿನಿಗೌಡ, ಪಾರಂಡಹಳ್ಳಿ ಮಂಜುನಾಥ್ , ನಾಗಭೂಷಣ್, ಮಂಗಸಂದ್ರ ತಿಮ್ಮಣ್ಣ, ಯಾರಂಘಟ್ಟ ಗಿರೀಶ್, ಶಿವಾರೆಡ್ಡಿ, ಎ, ಮಂಜುನಾಥ್, ಕೃಷ್ಣಮೂರ್ತಿ, ಸುರೇಶ್, ಪ್ರಬಾಕರ್, ಸುಧಾಕರ್, ರಾಮು, ಕುಮಾರ್, ಬಾಬು ಸುಗುಣದೇವಿ, ಕಲ್ಪನಾ, ಲಕ್ಷ್ಮಿ,, ಕಲಾವತಿ, ಲಕ್ಷ್ಮಮ್ಮ, ನಾಗವೇಣಿ, ಕವಿತಾ, ಸರಸಮ್ಮ, ನಾರಯಣಮ್ಮ  ಮುಂತಾzವರಿದ್ದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!