• Sat. May 11th, 2024

PLACE YOUR AD HERE AT LOWEST PRICE

ಹೆಜ್ಜೆ ಹೆಜ್ಜೆಗೂ ಯಶಸ್ಸು, ತಡೆಯಲಾಗದ ಕೌತುಕಗಳು. ಹೀಗೆ ಭಾರತದ ಚಂದ್ರಯಾನ-3 ಯಶಸ್ವಿಯಾಗಿ ಸಾಗಿದೆ. ಭಾರತ ತನ್ನ ಎಲ್ಲಾ ಬಾಹ್ಯಾಕಾಶ ಯೋಜನೆಗಳಲ್ಲೂ ಯಶಸ್ಸನ್ನ ಕಾಣುತ್ತಿದ್ದು, ಈಗ ಚಂದ್ರಯಾನ ಕೂಡ ಗೆಲುವಿನ ಹಾದಿ ಹಿಡಿದಿದೆ. ಬೆಳಗ್ಗೆಯಿಂದ ಖುಷಿ ವಿಚಾರವನ್ನೇ ಇಸ್ರೋ ಹಂಚಿಕೊಳ್ಳುತ್ತಿದ್ದು ಈಗ ಮತ್ತೊಂದು ಬ್ರೇಕಿಂಗ್ ನ್ಯೂಸ್ ಕೊಟ್ಟಿದೆ ಇಸ್ರೋ ಸಂಸ್ಥೆ.

ಅಷ್ಟಕ್ಕೂ ಭಾರತದ ಮಹತ್ವದ ಯೋಜನೆಯಾದ ಚಂದ್ರಯಾನ 3 ತನ್ನ ಗುರಿಯನ್ನ ಭಾಗಶಃ ತಲುಪಿದೆ. ಚಂದ್ರಯಾನ-3 ಮತ್ತು ಚಂದ್ರಯಾನ-2 ಆರ್ಬಿಟರ್ ಮಧ್ಯೆ ಸಂವಹನ ಕಾರ್ಯ ಜೋಡಿಸುವ ಕೆಲಸ ಯಶಸ್ವಿಯಾಗಿದೆ. ಈ ಖುಷಿ ಖುಷಿ ವಿಚಾರವನ್ನು ಇಸ್ರೋ ಸಂಸ್ಥೆಯು ಟ್ವೀಟ್ ಮೂಲಕ ಹಂಚಿಕೊಂಡಿದೆ. ಹೀಗೆ ಭಾರತ ಚಂದ್ರನ ಲ್ಯಾಂಡರ್ ಮೂಲಕ ಮುಟ್ಟಿ ಇತಿಹಾಸ ಬರೆಯಲು ಕ್ಷಣಗಣನೆ ಆರಂಭವಾಗಿದೆ. ಚಂದ್ರಯಾನ-2 ಆರ್ಬಿಟರ್ ವಾಹನವು ಚಂದ್ರಯಾನ 3 ಸ್ವಾಗತಿಸಿದೆ. ಇಬ್ಬರ ದ್ವಿಮುಖ ಸಂವಹನ ಯಶಸ್ವಿಯಾಗಿ ನಡೆದಿದೆ ಎಂದು ಇಸ್ರೋ ಬಿಗ್ ಬ್ರೇಕಿಂಗ್ ನ್ಯೂಸ್ ಕೊಟ್ಟಿದೆ.

ಈಗ ಎಲ್ಲವೂ ಸಕ್ಸಸ್ ಆಗಿದ್ದು, ಇದೀಗ ಲ್ಯಾಂಡರ್ ಇಳಿಸುವ ಮಹತ್ವದ ಕೆಲಸವು ಮಾತ್ರ ಬಾಕಿ ಉಳಿದಿದೆ. ಹೀಗಾಗಿ ಅದರ ಬಗ್ಗೆಯೂ ಇಂದು ಬೆಳಗ್ಗೆ ಬಿಗ್ ಅಪ್‌ಡೇಟ್ ಸಿಕ್ಕಿದೆ. ಆ ಪ್ರಕಾರ ವಿಕ್ರಮ ಲ್ಯಾಂಡರ್ ಲ್ಯಾಂಡಿಂಗ್ ಆಗಸ್ಟ್ 23ರ ಸಂಜೆ 6.04ಕ್ಕೆ ಫಿಕ್ಸ್ ಮಾಡಲಾಗಿದೆ. ಹಾಗೇ ಲ್ಯಾಂಡಿಂಗ್ ಕ್ಷಣವನ್ನು ಇಡೀ ಜಗತ್ತಿಗೆ ತಿಳಿಸಲು ಇಸ್ರೋ ಲೈವ್ ವ್ಯವಸ್ಥೆ ಕೂಡ ಮಾಡಿದೆ. ಈ ಮೂಲಕ ಇತಿಹಾಸ ಬರೆಯಲು ಭಾರತದ ಇಸ್ರೋ ಎಲ್ಲಾ ರೀತಿ ಸಿದ್ಧತೆ ನಡೆಸಿದೆ. ಇನ್ನೇನು ಎರಡು ದಿನದಲ್ಲಿ ಎಲ್ಲದಕ್ಕೂ ಉತ್ತರ ಸಿಗಲಿದೆ. ಅಲ್ಲಿ ಮೈನಸ್ 230 ಡಿಗ್ರಿ ಉಷ್ಣಾಂಶ! ಇದೆ.

ವಿಜ್ಞಾನಿಗಳಿಗೆ ಕುತೂಹಲ ಕೆರಳಿಸಿರುವ ಚಂದ್ರನ ಭಾಗವೆಂದರೆ ಅದು ದಕ್ಷಿಣ ಧ್ರುವ ಮಾತ್ರ. ಏಕೆಂದರೆ ಚಂದ್ರನ ದಕ್ಷಿಣ ಧ್ರುವ ವಿಸ್ಮಯಗಳ ಖಜಾನೆ ಇದ್ದಂತೆ. ಈ ಭಾಗದಲ್ಲಿ ಉಷ್ಣಾಂಶ ಮೈನಸ್ 230 ಡಿಗ್ರಿಗಿಂತ ಕಡಿಮೆ ಇದೆ. ಬೆಳಕನ್ನೇ ಕಾಣದ ಎಷ್ಟೊಂದು ಪ್ರದೇಶಗಳು ಇಲ್ಲಿವೆ. ಚಂದ್ರಯಾನ-1 ಯೋಜನೆ ಚಂದ್ರನ ಮೇಲೆ ನೀರಿದೆ ಎಂದು ಮೊದಲ ಬಾರಿ ತಿಳಿಸಿತ್ತು. ಹೀಗೆ ಭಾರತ 2008ರಲ್ಲಿ ಚಂದ್ರನ ಮೇಲೆ ನೀರು ಕಂಡುಹಿಡಿದ ನಂತರ, ಜಗತ್ತಿನ ಬಾಹ್ಯಾಕಾಶ ವಿಜ್ಞಾನಿಗಳು ಚಂದ್ರನ ದಕ್ಷಿಣ ಧ್ರುವದಲ್ಲಿ ಅಧ್ಯಯನ ಆರಂಭಿಸಲು ಯೋಜನೆ ರೂಪಿಸಿ ಸಿದ್ಧತೆ ನಡೆಸುತ್ತಿದ್ದಾರೆ. ಇದೀಗ ಭಾರತ ಕೂಡ ದಕ್ಷಿಣ ಧ್ರುವದಲ್ಲೇ ವಿಕ್ರಮ್ ಲ್ಯಾಂಡರ್ ಇಳಿಸಲು ತೀರ್ಮಾನಿಸಿದೆ.

ಈಗ ಭಾರತದ ವಿಕ್ರಮ್ ಲ್ಯಾಂಡರ್ ಚಂದ್ರನಿಗೆ ಅತ್ಯಂತ ಸಮೀಪ ಇರುವ 134 ಕಿಮೀ ದೂರದ ಕಕ್ಷೆ ತಲುಪಿದೆ. ಇಲ್ಲಿಂದ ದಕ್ಷಿಣ ಧ್ರುವ ಪ್ರದೇಶದಲ್ಲಿ ಲ್ಯಾಂಡಿಂಗ್‌ಗೆ ಇಸ್ರೋ ಪ್ರಯತ್ನಿಸಲಿದೆ. 25 ಕಿಲೋ ಮೀಟರ್ x 134 ಕಿಲೋ ಮೀಟರ್ ಕಕ್ಷೆ ಚಂದ್ರನ ಅತಿ ಸಮೀಪದ ಕಕ್ಷೆಯಾಗಿದ್ದು ಚಂದ್ರನ ಮೇಲೆ ಇಳಿಯುವ ಪ್ರಕ್ರಿಯೆ ಆಗಸ್ಟ್ 23ರಂದು ನಡೆಯಲಿದೆ. ಹೀಗೆ ಜಗತ್ತು ಭಾರತದ ಕಡೆ ಕಣ್ಣಿಟ್ಟು ಕಾಯುತ್ತಿದೆ.

ಕಳೆದ ಬಾರಿ ಭಾರತ ಚಂದ್ರನ ಮೇಲೆ ಲ್ಯಾಂಡರ್ ಇಳಿಸುವಾಗಲೆ ಸ್ವಲ್ಪ ಎಡವಟ್ಟಾಗಿತ್ತು. ಹೀಗೆ ಸಣ್ಣ ಸಮಸ್ಯೆ ಇಡೀ ಯೋಜನೆ ಹಾಳು ಮಾಡಿತ್ತು. ಇದೇ ಕಾರಣಕ್ಕೆ ಎಚ್ಚರಿಕೆ ವಹಿಸಲಾಗಿದ್ದು, ಲ್ಯಾಂಡರ್ ಇಳಿಸುವ ಪ್ರತಿಕ್ಷಣ ಇಸ್ರೋಗೆ ಗೊತ್ತಾಗಲಿದೆ. ಈ ಲ್ಯಾಂಡರ್ ಪೊಸಿಷನ್ ಡಿಟೆಕ್ಷನ್ ಕ್ಯಾಮೆರಾ (LPDC) ಕೆಲಸವು ಏನೆಂದರೆ ವಿಕ್ರಮ್‌ಗೆ ಸರಿಯಾದ ಲ್ಯಾಂಡಿಂಗ್ ಸ್ಥಳ ತೋರಿಸುತ್ತೆ. ಹಾಗೂ ಲ್ಯಾಂಡರ್‌ನ ಅಪಾಯ ಪತ್ತೆ ಮತ್ತು ಅಪಾಯ ತಪ್ಪಿಸುವ ಕ್ಯಾಮರಾ (LHDAC) ಕೂಡ ಇದರಲ್ಲಿದೆ. ಜೊತೆಗೆ ಲೇಸರ್ ಆಲ್ಟಿಮೀಟರ್ (LASA), ಲೇಸರ್ ಡಾಪ್ಲರ್ ವೆಲಾಸಿಟಿಮೀಟರ್ (LDV) & ಲ್ಯಾಂಡರ್ ಹಾರಿಜಾಂಟಲ್ ವೆಲಾಸಿಟಿ ಕ್ಯಾಮೆರಾ (LHVC) ಈ ಪೇಲೋಡ್‌ ಒಟ್ಟಿಗೆ ಕೆಲಸ ಮಾಡುತ್ತದೆ.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!