• Sun. Apr 28th, 2024

PLACE YOUR AD HERE AT LOWEST PRICE

ಬೆಂಗಳೂರು:ರಾಮಲಿಂಗಾರೆಡ್ಡಿ ಅವರು ಸಾರಿಗೆ ಸಚಿವರಾದಾಗಿನಿಂದ ನೌಕಕರು ಹಾಗೂ ಪ್ರಯಾಣಿಕರ ಹಿತದೃಷ್ಟಿಯಲ್ಲಿ ಇಲಾಖೆಯಲ್ಲಿ ಒಂದಲ್ಲ ಒಂದು ರೀತಿಯ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಲೇ ಇದ್ದಾರೆ. ಇದೀಗ ಪಾರ್ಸೆಲ್‌ಗಾಗಿಯೇ KSRTC ಲಾರಿಗಳನ್ನು ರಸ್ತೆಗಳಿಸಲು ಮುಂದಾಗಿದ್ದಾರೆ.

ಮಹಾಮಾರಿ ಕೊರೊನಾ ಸಮಯದಲ್ಲಿ ಕೆಎಸ್‌ಆರ್‌ಟಿಸಿಗೆ ಬರುತ್ತಿದ್ದ ಆದಾಯ ಅಷ್ಟಕಷ್ಟೇ. ಯಾಕೆಂದೆರೆ ಆ ಸಮಯದಲ್ಲಿ ಬಸ್‌ಗಳಲ್ಲಿ ಪ್ರಯಾಣ ಮಾಡುವವರ ಸಂಖ್ಯೆ ಕಡಿಮೆಯಾಗಿತ್ತು. ಆದರೆ ಆ ನಷ್ಟವನ್ನು ಸರಿದೂಗಿಸಲು ಕೊರೊನಾ ಮಹಾಮಾರಿ ತೊಲಗಿದ ನಂತರ ಪಾರ್ಸೆಲ್‌ ಸೇವೆಯನ್ನು ವಿಸ್ತರಣೆ ಮಾಡಲು ಸಾರಿಗೆ ಇಲಾಖೆ ಮುಂದಾಗಿತ್ತುದೆ. ಪಾರ್ಸೆಲ್‌ ಸೇವೆ ಏನೋ ಇತ್ತು. ಇದು ಬಸ್‌ಗಳಲ್ಲಿ ಸಣ್ಣ ಪ್ರಮಾಣದಲ್ಲಿ ಇತ್ತು.

ಬಸ್‌ಗಳಲ್ಲಿ ಪಾರ್ಸೆಲ್‌ಗೆ ಅಷ್ಟೊಂದು ಜಾಗ ಇರುತ್ತಿರಲಿಲ್ಲ. ಆದ್ದರಿಂದ ಪಾರ್ಸೆಲ್‌ ಸೇವೆಯನ್ನು ಇನ್ನೂ ದೊಡ್ಡ ಮಟ್ಟದಲ್ಲಿ ಮಾಡಲು ಲಾರಿಗಳನ್ನು ಬಿಡಲು ಇಲಾಖೆ ಮುಂದಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇದರಿಂದ ಸಾರಿಗೆ ಇಲಾಖೆಯ ಆದಾಯವೂ ಹೆಚ್ಚಿದಂತಾಗುತ್ತದೆ. ಹೆಚ್ಚೆಚ್ಚು ಪಾರ್ಸೆಲ್‌ ತಲುಪಿಸಿದಂತೆಯೂ ಆಗುತ್ತದೆ ಎನ್ನುವ ಪ್ಲಾನ್‌ ಇಲಾಖೆಯದ್ದಾಗಿದೆ.

ಕೆಎಸ್‌ಆರ್‌ಟಿಸಿಯು ವಿವಿಧ ಮಾರ್ಗಗಳ ಮೂಲಕ ಆದಾಯ ಹೆಚ್ಚಳಕ್ಕೆ ಮುಂದಾಗಿದ್ದು, ವ್ಯವಸ್ಥಿತ ಮತ್ತು ಸಮರ್ಪಕವಾದ ಪಾರ್ಸೆಲ್‌ ಸೇವೆ ಒದಗಿಸಲು ಶೀಘ್ರದಲ್ಲೇ ಅಂದರೆ ಇನ್ನೊಂದು ತಿಂಗಳಲ್ಲಿಯೇ ಟ್ರಕ್‌ಗಳನ್ನು ಬಿಡಲಾಗುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಮಹಾಮಾರಿ ಕೊರೊನಾ ಸಮಯದಲ್ಲಿ KSRTCಯು ಭಾರೀ ನಷ್ಟ ಅನುಭವಿಸಿತ್ತು.

ಇದೀಗ ಶಕ್ತಿ ಯೋಜನೆ ಮೂಲಕ ಮಹಿಳೆಯರಿಗೆ ಉಚಿತ ಪ್ರಯಾಣದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಈ ಹಿನ್ನೆಲೆ ಆದಾಯವನ್ನು ಹೆಚ್ಚಿಸಿಕೊಳ್ಳಲು ಸಣ್ಣ ಪ್ರಮಾಣದಲ್ಲಿದ್ದ ಪಾರ್ಸೆಲ್‌ ಸೇವೆಯನ್ನು ಬಲಪಡಿಸಲು 20 ಲಾರಿಗಳನ್ನು ಖರೀದಿಸಲು ಕೆಎಸ್‌ಆರ್‌ಟಿಸಿ ಮುಂದಾಗಿದೆ. ಈ ಹಿಂದೆ ಬಸ್‌ಗಳಲ್ಲಿಯೇ ಸಣ್ಣ ಪ್ರಮಾಣದಲ್ಲಿ ಪಾರ್ಸೆಲ್‌ ಸೇವೆಯನ್ನು ಕೆಎಸ್‌ಆರ್‌ಟಿಸಿ ಆರಂಭಿಸಿದೆ. ಪ್ರಾರಂಭದಲ್ಲಿ 109 ಕೇಂದ್ರಗಳಲ್ಲಿ ಈ ಸೇವೆಯನ್ನು ಆರಂಭ ಮಾಡಲಾಗಿತ್ತು.

ನಂತರ ರಾಜ್ಯದ ಎಲ್ಲ ನಿಲ್ದಾಣಗಳಿಗೂ ಈ ಸೇವೆಯನ್ನು ವಿಸ್ತರಣೆ ಮಾಡಲಾಯಿತು. ಬಸ್‌ನ ಲಗೇಜ್‌ ಬಾಕ್ಸ್‌ಗಳಲ್ಲಿಯೇ ಸಣ್ಣ ಪ್ರಮಾಣದಲ್ಲಿ ಪಾರ್ಸೆಲ್‌ಗಳನ್ನು ಸಾಗಿಸಲಾಗುತ್ತಿತ್ತು. ಈ ಮೂಲಕ ವಾರ್ಷಿಕ ಸುಮಾರು 4 ಕೋಟಿ ರೂಪಾಯಿ ಆದಾಯ ಬರುತ್ತಿತ್ತು. ಬಳಿಕ ಈ ಸೇವೆಯನ್ನು ಬಿಸಿನೆಸ್‌ ಸ್ಟ್ಯಾಟಿಕ್‌ ಪಾರ್ಟನರ್‌ ಎಂದು ಮಾಡಿಕೊಂಡು ಸೇವೆ ನೀಡಲು ಆರಂಭಿಸಲಾಯಿತು.

ಈ ಸಹಭಾಗಿತ್ವದ ಸೇವೆಯಡಿ ಬಂದ ಹಣದಲ್ಲಿ ಶೇಕಡಾ 80ರಷ್ಟು KSRTCಗೆ ಮತ್ತು ಶೇಕಡಾ 20ರಷ್ಟು ಪಾರ್ಟ್‌ನರ್‌ಗೆ ಪಾಲು ನಿಗದಿ ಪಡಿಸಲಾಯಿತು. ಈ ವೇಳೆ ವಾರ್ಷಿಕ ಆದಾಯ 30 ಕೋಟಿ ರೂಪಾಯಿಗೆ ಹೆಚ್ಚಳವಾಗಿತ್ತು. ಆದ್ದರಿಂದ ಅಧಿಕೃತವಾಗಿ ಪಾರ್ಸೆಲ್‌ ಸೇವೆ ಒದಗಿಸಿದರೆ ಆದಾಯ ಹೆಚ್ಚಿಸಿಕೊಳ್ಳುವ ಪ್ರಸ್ತಾಪವನ್ನು ಸಾರಿಗೆ ಸಚಿವರ ಮುಂದಿಟ್ಟರು.

ಇದನ್ನು ಅವಲೋಕಿಸಿದ ಸಚಿವರು 100 ಕೋಟಿ ರೂಪಾಯಿ ಆದಾಯ ಗಳಿಸುವ ಗುರಿಯೊಂದಿಗೆ ಲಾರಿಗಳನ್ನು ಖರೀದಿ ಮಾಡಲು ಸಮ್ಮತಿ ನೀಡಿದ್ದಾರೆ. 6 ಟನ್‌ ಸಾಮರ್ಥ್ಯದ ಸಂಪೂರ್ಣ ನಿರ್ಮಿತ 20 ಟ್ರಕ್‌ಗಳನ್ನು ಖರೀದಿಸಲಾಗುತ್ತಿದೆ. ಒಂದು ಟ್ರಕ್‌ ಖರೀದಿಗೆ 22 ಲಕ್ಷ ರೂಪಾಯಿ ಅಂದಾಜಿಸಲಾಗಿದ್ದು, ಆಗಸ್ಟ್‌ನಲ್ಲಿ ನಡೆದ ಸಭೆಯಲ್ಲಿ ಅನುಮೋದನೆಯೂ ಸಿಕ್ಕಿದೆ.

ಬಸ್‌ಗಳಲ್ಲಿ ಹೆಚ್ಚಿನ ಸ್ಥಳಾವಕಾಶ ಇಲ್ಲದೆ, ಪಾರ್ಸೆಲ್‌ ಸೇವೆ ಒದಗಿಸಲು ಸಮಸ್ಯೆಯಾಗಿತ್ತು. ಹೀಗಾಗಿ ಅಧಿಕ ಪ್ರಮಾಣದ ಪಾರ್ಸೆಲ್‌ ಇರುವ ಮಾರ್ಗ ಗುರುತಿಸಿ ಟ್ರಕ್‌ಗಳ ಸಂಚಾರ ವ್ಯವಸ್ಥೆ ಮಾಡಲಾಗುತ್ತದೆ. ಟ್ರಕ್‌ಗಳು ಹೋಗದ ಕಡೆಗೆ ಬಸ್‌ಗಳಲ್ಲಿ ಈ ಸೇವೆ ಇರಲಿದೆ ಎನ್ನುವ ಮಾಹಿತಿಯನ್ನು ನೀಡಿದ್ದಾರೆ.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!