• Sat. Apr 27th, 2024

PLACE YOUR AD HERE AT LOWEST PRICE

ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (ಎಂಎಐ) ಮತ್ತು ದೇಶದಾದ್ಯಂತ ವಿವಿಧ ಚಿತ್ರಮಂದಿರಗಳು ಈ ಬಾರಿ ಅಕ್ಟೋಬರ್ 13 ರಂದು ರಾಷ್ಟ್ರೀಯ ಸಿನಿಮಾ ದಿನವನ್ನಾಗಿ ಆಚರಿಸುತ್ತಿವೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿಯೇ ರಾಷ್ಟ್ರೀಯ ಸಿನಿಮಾ ದಿನ ಆಚರಣೆಯಂದು 65 ಲಕ್ಷಕ್ಕೂ ಹೆಚ್ಚು ಸಿನಿ ಪ್ರೇಕ್ಷಕರು ಚಿತ್ರಮಂದಿರಗಳಿಗೆ ಭೇಟಿ ನೀಡಿದ್ದರು.

ಅಕ್ಟೋಬರ್ 13 ರಂದು ಕೇವಲ 99 ರೂಪಾಯಿಗೆ ಸಿನಿಮಾ ಟಿಕೆಟ್‌ಗಳು ಲಭ್ಯವಿರಲಿವೆ. ಆದರೆ, ರಿಕ್ಲೈನರ್‌ಗಳು ಮತ್ತು 4DX ಮತ್ತು ಐಮ್ಯಾಕ್ಸ್ ನಂತಹ ಪ್ರೀಮಿಯಂ ಫಾರ್ಮ್ಯಾಟ್‌ಗಳ ಟಿಕೆಟ್ ಬೆಲೆಯಲ್ಲಿ ಬದಲಾವಣೆಯಾಗುವುದಿಲ್ಲ.

ಪಿವಿಆರ್, ಐನಾಕ್ಸ್, ಸಿನೆಪೊಲಿಸ್, ಮೀರಜ್, ಸಿಟಿಪ್ರೈಡ್, ಏಷ್ಯನ್, ಮುಕ್ತಾ A2, ಮೂವೀ ಟೈಮ್, ವೇವ್, M2K, ಡಿಲೈಟ್ (PVR, Inox, Cinepolis, Miraj, Citypride, Asian, Mukta A2, Movie Time, WAVE, M2K, Delite) ಮತ್ತು ಇತರ ಜನಪ್ರಿಯ ಸಿನಿಮಾ ಮಂದಿರಗಳು ಸೇರಿ ಸುಮಾರು 4,000 ಕ್ಕೂ ಹೆಚ್ಚು ಪರದೆಗಳಲ್ಲಿ ಸಿನಿಮಾ ಪ್ರದರ್ಶನ ನಡೆಯಲಿದ್ದು, ಎಲ್ಲವೂ ಕಡಿಮೆ ದರಕ್ಕೆ ಟಿಕೆಟ್ ನೀಡಲಿವೆ.

ಚಿತ್ರಮಂದಿರಗಳಿಗೆ ಜನರನ್ನು ಸೆಳೆಯಲು ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಎಂಎಐ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ. “ಅಕ್ಟೋಬರ್ 13 ರಂದು ರಾಷ್ಟ್ರೀಯ ಚಲನಚಿತ್ರ ದಿನ ಆಚರಿಸಲಾಗುತ್ತದೆ. ಭಾರತದಾದ್ಯಂತ 4000ಕ್ಕೂ ಹೆಚ್ಚು ಪರದೆಗಳಲ್ಲಿ ಸಿನಿಮಾ ಪ್ರದರ್ಶನವಾಗಲಿದ್ದು, ನಮ್ಮೊಂದಿಗೆ ಸೇರಿಕೊಳ್ಳಿ, ಚಲನಚಿತ್ರ ಟಿಕೆಟ್‌ಗಳ ಬೆಲೆ ಕೇವಲ ರೂ. 99. ನಿಮ್ಮ ನೆಚ್ಚಿನ ಚಲನಚಿತ್ರಗಳನ್ನು ಸ್ನೇಹಿತರು ಮತ್ತು ಕುಟುಂಬದೊಂದಿಗೆ ಆನಂದಿಸಲು ಇದು ಉತ್ತಮ ದಿನ” ಎಂದು ತಿಳಿಸಿದೆ.

ಕಳೆದ ವರ್ಷ ಸೆಪ್ಟೆಂಬರ್ 23 ರಂದು ರಾಷ್ಟ್ರೀಯ ಸಿನಿಮಾ ದಿನವನ್ನು ಆಚರಿಸಲಾಗಿತ್ತು. ಅಂದು ದೇಶದಾದ್ಯಂತ 65 ಲಕ್ಷಕ್ಕೂ ಹೆಚ್ಚು ಸಿನಿ ಪ್ರೇಕ್ಷಕರು ಚಿತ್ರಮಂದಿರಗಳಿಗೆ ಭೇಟಿ ನೀಡಿದ್ದರು. ಇಡೀ ವರ್ಷದಲ್ಲಿ ಚಿತ್ರಮಂದಿರಗಳಿಗೆ ಅತಿ ಹೆಚ್ಚು ಜನರು ಭೇಟಿ ನೀಡಿದ್ದ ದಿನವಾಗಿ ಸೆಪ್ಟೆಂಬರ್ 23 ದಾಖಲೆ ಮಾಡಿದೆ. ಬಹುತೇಕ ಎಲ್ಲಾ ಸಿನಿಮಾ ಟಿಕೆಟ್‌ಗಳು ಮಾರಾಟವಾಗಿದ್ದವು. ಹೆಚ್ಚಿನ ಚಿತ್ರಮಂದಿರಗಳ ಟಿಕೆಟ್ ಕೌಂಟರ್‌ಗಳ ಬಳಿ ಹೌಸ್‌ಫುಲ್ ಬೋರ್ಡ್‌ಗಳು ಕಾಣಿಸಿದ್ದವು.

ಕಳೆದ ವರ್ಷದ ರಾಷ್ಟ್ರೀಯ ಸಿನಿಮಾ ದಿನದ ಯಶಸ್ಸಿನ ಹಿನ್ನೆಲೆ ಈ ಬಾರಿಯು ಅಸೋಸಿಯೇಷನ್ ಕಡಿಮೆ ಬೆಲೆಯ ಟಿಕೆಟ್‌ಗಳ ಪ್ರಯೋಗವನ್ನು ಮುಂದುವರಿಸಲು ನಿರ್ಧರಿಸಿದೆ. ಹೊದ ವರ್ಷ ಟಿಕೆಟ್‌ಗಳ ಬೆಲೆ 75 ರೂಪಾಯಿ ಮಾಡಲಾಗಿತ್ತು. ವಿವಿಧ ಭಾಷೆಯ ಚಲನಚಿತ್ರಗಳಲ್ಲಿ ಸುಮಾರು 48 ಕೋಟಿ ರೂಪಾಯು ಕಲೆಕ್ಷನ್ ಆಗಿತ್ತು.

ಟ್ರೇಡ್ ವೆಬ್‌ಸೈಟ್ ಬಾಕ್ಸ್ ಆಫೀಸ್ ಇಂಡಿಯಾದ ಪ್ರಕಾರ, ದುಲ್ಕರ್ ಸಲ್ಮಾನ್ ಅಭಿನಯದ ಮಿಸ್ಟರಿ ಥ್ರಿಲ್ಲರ್ ‘ಚುಪ್: ರಿವೆಂಜ್ ಆಫ್ ದಿ ಆರ್ಟಿಸ್ಟ್’ ತನ್ನ ಮೊದಲ ದಿನದಲ್ಲಿ ಸುಮಾರು 2.75 ರಿಂದ 3 ಕೋಟಿ ರೂಪಾಯಿ ಸಂಗ್ರಹಿಸಿತ್ತು. ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ‘ಬ್ರಹ್ಮಾಸ್ತ್ರ: ಭಾಗ ಒಂದು – ಶಿವ’ 8.50 ಕೋಟಿ ಗಳಿಸಿತ್ತು.

ಈ ವರ್ಷ, ಇತ್ತೀಚಿನ ಬ್ಲಾಕ್‌ಬಸ್ಟರ್ ‘ಜವಾನ್’ ರಾಷ್ಟ್ರೀಯ ಸಿನಿಮಾ ದಿನ್ ಲಾಭ ಪಡೆಯುತ್ತದೆ ಎಂದು ಸಿನಿಪ್ರೇಮಿಗಳು ಈಗಾಗಲೇ ಲೆಕ್ಕಾಚಾರ ಹಾಕುತ್ತಿದ್ದಾರೆ. ಚಿತ್ರದಲ್ಲಿ ಶಾರುಖ್ ಖಾನ್, ನಯನತಾರಾ ಮತ್ತು ವಿಜಯ್ ಸೇತುಪತಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ದೀಪಿಕಾ ಪಡುಕೋಣೆ, ಸಂಜಯ್ ದತ್ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!