• Fri. May 3rd, 2024

PLACE YOUR AD HERE AT LOWEST PRICE

ಕೋಲಾರ:ಕರ್ನಾಟಕ ರಾಜ್ಯದಲ್ಲಿನ ಪೋಲೀಸ್ ಠಾಣೆಗಳಲ್ಲಿ ಸುಸ್ಥಿತಿ ಸಿ ಸಿ ಕ್ಯಾಮೆರಗಳನ್ನು ಅಳವಡಿಸಲು ಸ್ವಯಂ ಪ್ರೇರಿತವಾಗಿ ಕ್ರಮವಹಿಸಲು ಕರ್ನಾಟಕ ಮಾಹಿತಿ ಆಯೋಗ ಪೋಲೀಸ್ ಮಹಾ ನಿರ್ದೇಶಕ ಡಾ.ಅಲೋಕ್ ಮೋಹನ್ ರಿಗೆ ಆದೇಶಿಸಿ, ಈ ಕುರಿತು ಅನುಪಾಲನಾ ವರದಿ ಸಲ್ಲಿಕೆ ಮಾಡುವಂತೆ ನಿರ್ದೇಶನ ನೀಡಿದೆ.

ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕು ನಂಗಲಿ ಪೋಲೀಸ್ ಠಾಣೆಯ ಸಿಸಿ ಟಿವಿ ಕ್ಯಾಮೆರ ದೃಶ್ಯಾವಳಿ ಕೋರಿ ಕೋಲಾರ ಮೂಲದ ಪತ್ರಕರ್ತ ಎಸ್. ಶಮ್ಗರ್ ಎಂಬುವರು ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಕೆ ಮಾಡಿದ್ದರು. ವಿಚಾರಣೆ ವೇಳೆ ಪ್ರಕರಣದ ಗಂಬೀರತೆ ಅರಿತ  ಆಯೋಗ ಕರ್ನಾಟಕ ಪೋಲೀಸ್ ಮಹಾ ನಿರ್ದೇಶಕರನ್ನು ಪ್ರತಿವಾದಿಯಾಗಿಸಿಕೊಂಡು ಈ ರೀತಿ ನಿರ್ದೇಶಿಸಿದೆ.

ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ನಂಗಲಿ ಪೋಲೀಸ್ ಠಾಣೆಗೆ ಆಂಧ್ರ ಮೂಲದ ವ್ಯಕ್ತಿ ಮುನಿರಾಜು ಎಂಬುವರನ್ನು ಕಳ್ಳತನ ಆರೋಪದ ಮೇಲೆ ವಿಚಾರಣೆಗಾಗಿ ಕಳೆದ ಸೆಪ್ಟೆಂಬರ್ ನಲ್ಲಿ ಕರೆತರಲಾಗಿತ್ತು.

ವಿಚಾರಣೆ ವೇಳೆ ಪೋಲೀಸರ ಹಿಂಸೆಯಿಂದ ಕೋಲಾರದ ಜಾಲಪ್ಪ ಆಸ್ಪತ್ರೆಯಲ್ಲಿ ಆತ ಅಸುನೀಗಿದ್ದಾನೆಂದು ಮೃತ ನ ಪೋಷಕರು ಗಲ್ ಪೇಟೆ ಪೋಲೀಸ್ ಠಾಣೆಗೆ ದೂರು ನೀಡಿದ್ದರು.

ಈ ಘಟನೆಯ ಸತ್ಯ ಅನ್ವೇಷಣೆಗೆ ಪತ್ರಕರ್ತ ಎಸ್. ಶಮ್ಗರ್ ಮಾಹಿತಿ ಹಕ್ಕಿನಡಿ ಮೊರೆ ಹೋದ. ಅದಕ್ಕೆ ಠಾಣೆಯ ಪೋಲೀಸ್ ನಿರೀಕ್ಷಕರು  ಕಾಯ್ದೆ 8(1) ಜೆ ಪ್ರಕಾರ ಮಾಹಿತಿ ನೀಡಲು ಅವಕಾಶವಿರುವುದಿಲ್ಲವೆಂದು ಹಿಂಬರಹ ನೀಡಲಾಗಿತ್ತು.

ಪತ್ರಕರ್ತ ಎಸ್. ಶಮ್ಗರ್ ಇದನ್ನು ಪ್ರಶ್ನಿಸಿ ಆಯೋಗಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಆಯೋಗವು ವಿಚಾರಣೆ ಕೈಗೆತ್ತಿಕೊಂಡಗ ಸಾರ್ವಜನಿಕ ಮಾಹಿತಿ ಅಧಿಕಾರಿ ಠಾಣೆಯ ಸಿಸಿ ಟಿವಿ ದುರಸ್ಥಿಯಲ್ಲಿತ್ತೆಂದು ಮಾರುತ್ತರ ನೀಡಿದರು.

ಆಯೋಗ ವ್ಯತಿರಿಕ್ತ ಹೇಳಿಕೆ, ದುರುದ್ದೇಶದಿಂದ ಅರ್ಜಿದಾರರಿಗೆ ಮಾಹಿತಿ ಒದಗಿಸದೆ,ಸರ್ವೋಚ್ಚ ನ್ಯಾಯಾಲಯದ ಆದೇಶ ಪಾಲನೆಯಲ್ಲಿನ ನಿರ್ಲಕ್ಷ್ಯಕ್ಕೆ ನಂಗಲಿ ಪೋಲೀಸ್ ಉಪ ನಿರೀಕ್ಷಕ ಜಿ.ಪ್ರದೀಪ್ ಸಿಂಗ್ ಗೆ 25.000 ಸಾವಿರ ರೂ.ದಂಡ ವಿದಿಸಿದೆ.

ಜೊತಗೆ,ಸಿಸಿ ಟಿವಿ ದೃಶ್ಯಾವಳಿ ಸುಸ್ಥಿತಿ ಕನಿಷ್ಠ ಒಂದು ವರ್ಷದವರಗೆ ಕಾಯ್ದಿರಿಸಲು ರಾಜ್ಯದಲ್ಲಿನ ಎಲ್ಲಾ ಪೋಲೀಸ್ ಠಾಣೆಗಳಿಗೆ ನಿರ್ದೇಶನ ನೀಡಲು ತಮ್ಮ ಆದೇಶದಲ್ಲಿ ಉಲ್ಲೇಖಿಸಿದೆ. ಅರ್ಜಿದಾರರ ಪರ ಹೈ ಕೋರ್ಟ್ ವಕೀಲೆ ಸುಧಾ ಕಟ್ವಾ ವಕಾಲತ್ತು ವಹಿಸಿದ್ದರು .

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!