• Sat. May 4th, 2024

PLACE YOUR AD HERE AT LOWEST PRICE

ಬಂಗಾರಪೇಟೆ:ಸರ್ಕಾರಿ ಶಾಲೆಗಳಲ್ಲಿ ಓದುವ ಮಕ್ಕಳು ಬಡ ಮಕ್ಕಳು ಈ ಮಕ್ಕಳಿಗೆ ಹೆಚ್ಚಿನ ಸೌಲಭ್ಯಗಳನ್ನು ಮಾಡಿಕೊಟ್ಟರೆ ಚೆನ್ನಾಗಿ ಓದಲು ಅನುಕೂಲವಾಗುತ್ತದೆ ಎಂದು ಎಸ್ ಎನ್ ನಾರಾಯಣಸ್ವಾಮಿ ಹೇಳಿದರು.

ಪಟ್ಟಣದ ಕರ್ನಾಟಕ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಎಸ್ ಸಿ ಪಿ ಹಾಗೂ ಟಿ ಎಸ್ ಪಿ ಕಾಯ್ದೆಯ ಅನುದಾನದಲ್ಲಿ ನಿರ್ಮಿಸಲಾದ ಎರಡು ಕೊಠಡಿಗಳನ್ನು ಉದ್ಘಾಟಿಸಿ, ಮಕ್ಕಳಿಗೆ ಎರಡನೇ ಅವಧಿಯ ಸಮಸ್ತ್ರವನ್ನು ನೀಡಿ ಅವರು ಮಾತನಾಡಿದರು.

ನಮ್ಮ ಸರ್ಕಾರದಿಂದ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡಲು ಒಳ್ಳೆಯ ಕಟ್ಟಡ, ಸಮವಸ್ತ್ರ, ಶೂ, ಮಧ್ಯಾಹ್ನ ಸಮಯದಲ್ಲಿ ಬಿಸಿಯೂಟ, ವಾರಕ್ಕೆ ಎರಡು ಬಾರಿ ಮೊಟ್ಟೆ, ಇದರೊಟ್ಟಿಗೆ  ಒಳ್ಳೆ ಶಿಕ್ಷಕರನ್ನು ನೀಡಿದ್ದೇವೆ.

ಇಷ್ಟೆಲ್ಲ ಅನುಕೂಲಗಳನ್ನು ಸರ್ಕಾರಿ ಶಾಲೆಗಳ ಮಕ್ಕಳಿಗೆ ಏತಕ್ಕೆ ಮಾಡುತ್ತೇವೆ ಎಂದರೆ ಸರ್ಕಾರಿ ಶಾಲೆಗೆ ಬರುವವರೆಲ್ಲರೂ ರೈತರ ಮಕ್ಕಳು, ಬಡ ಮಕ್ಕಳು ಆಗಿರುವುದರಿಂದ ಸರ್ಕಾರ ಸರ್ಕಾರಿ ಶಾಲೆಗಳ ಅಭಿವೃದ್ಧಗೆ ಕಟಿಬದ್ದವಾಗಿದೆ ಎಂದರು.

ಇನ್ನೂ ಅನೇಕ ಶಾಲೆಗಳನ್ನು ಕಟ್ಟಬೇಕಿದೆ. ಹಂತ ಹಂತವಾಗಿ ಮಾಡುತ್ತೇವೆ, ಇನ್ನುಈ ಶಾಲೆಯ ಆವರಣದಲ್ಲಿ ಇರುವಂತಹ ಹಳೆ ಕಟ್ಟಡಗಳನ್ನು ತೆರುಗೊಳಿಸಿ ನೂತನ ಕಟ್ಟಡವನ್ನು ನನ್ನ ಅಧಿಕಾರ ಅವಧಿಯಲ್ಲಿ ನಿರ್ಮಾಣ ಮಾಡುತ್ತೇನೆಂದು ಭರವಸೆ ನೀಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯನ್ನು ನಿರ್ಮಿಸಲು ಈಗಾಗಲೇ ಪ್ರಸ್ತಾವನೆಯನ್ನು ಸಲ್ಲಿಸಿದ್ದೇನೆ ಆದಷ್ಟು ಬೇಗ ಕಟ್ಟಡವನ್ನು ಕಟ್ಟಲು ಪ್ರಯತ್ನಿಸುತ್ತೇವೆ ಎಂದು ಹೇಳಿದರು.

ವಿದ್ಯಾರ್ಥಿಗಳು ಚೆನ್ನಾಗಿ ಓದಿ ಉನ್ನತ ಮಟ್ಟದಲ್ಲಿ ವಿದ್ಯಾಭ್ಯಾಸವನ್ನು ಮಾಡಿ ನಿಮ್ಮ ತಂದೆ ತಾಯಂದಿರಿಗೆ, ಹಾಗೂ ನಿಮಗೆ ವಿದ್ಯಾಭ್ಯಾಸ ನೀಡಿದ ಗುರುಗಳಿಗೆ ಮತ್ತು ತಾಲೂಕಿಗೆ ಕೀರ್ತಿಯನ್ನು ತರಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಸುಕನ್ಯ, ಬಿ ಆರ್ ಸಿ ಶಶಿಕಲಾ, ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷ ಎಚ್.ಕೆ.ನಾರಾಯಣಸ್ವಾಮಿ, ಮುಖಂಡ ಚಂದ್ರು, ಮುಖ್ಯೋಪಾಧ್ಯಾಯರಾದ ಕೃಷ್ಣಪ್ಪ ಇಸಿಓ ವಾಜಿದ್ ಖಾನ್, ಎಸ್ ಡಿ ಎಂ ಸಿ ಅಧ್ಯಕ್ಷರಾದ ನಾಗರತ್ನ ಹಾಗೂ ಸದಸ್ಯರು,ಶಿಕ್ಷಕರು ಭಾಗವಹಿಸಿದ್ದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!