• Fri. May 3rd, 2024

PLACE YOUR AD HERE AT LOWEST PRICE

ಮುಳಬಾಗಿಲು:ಗಡಿಭಾಗದಲ್ಲಿ ಕನ್ನಡ ಭಾಷೆ ಬೆಳೆಯಬೇಕಾದರೆ ಇಲ್ಲಿನ ತೆಲುಗು ಹಾಡುಗಳನ್ನು ಕನ್ನಡಕ್ಕೆ ಅನುವಾದ ಮಾಡಿ ಹಾಡಲು ಪ್ರೋತ್ಸಾಹಿಸುವ ಸಲುವಾಗಿ ಶಿಬಿರಗಳು, ಕನ್ನಡ ಕಮ್ಮಟಗಳನ್ನು ಮಾಡಬೇಕು. ಪೌರಾಣಿಕ ನಾಟಕಗಳನ್ನು ಸಹ ಕನ್ನಡದಲ್ಲಿ ಹಾಡಿದರೆ ಇಲ್ಲಿನ ಜನರಿಗೆ ಕನ್ನಡ ಬಳಕೆ ಸುಗಮವಾಗುತ್ತದೆ ಎಂದು ಪ್ರಾದ್ಯಾಪಕ ಜಿ. ಶಿವಪ್ಪ ಅರಿವು ಅಭಿಪ್ರಾಯಪಟ್ಟರು.

ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು, ಶಾಂತಿ ಸೌಹಾರ್ಧ ಕ್ರೀಡೆ ಮತ್ತು ಸಾಂಸ್ಕೃತಿಕ ಸಂಸ್ಥೆ ಇವರ ಸಹಯೋಗದಲ್ಲಿ ಮುಳಬಾಗಿಲು ತಾಲ್ಲೂಕು ಮುದುಗೆರೆ ಗ್ರಾಮದ ಆಂಜನೇಸ್ವಾಮಿ ದೇವಾಲಯ ಮುಂಭಾಗದಲ್ಲಿ ಹಮ್ಮಿಕೊಂಡಿದ್ದ ಗಡಿನಾಡು ಜನಪದ ಉತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕನ್ನಡ ನಾಡಿನ ಗಡಿ ಭಾಗದ ಕಲಾವಿದರಿಗೆ ಸರ್ಕಾರದಿಂದ ಸಿಗುವ ಸೌವಲತ್ತುಗಳನ್ನು ಕಲ್ಪಿಸಿಕೊಡಬೇಕು. ಗಡಿ ಭಾಗದಲ್ಲೇ ಕಲಾವಿದರು ಈ ಕಲೆಯನ್ನೇ ನಂಬಿ ಜೀವನ ಸಾಗಿಸುತ್ತಿದ್ದಾರೆ. ಈ ತರಹದ ಕಾರ್ಯಕ್ರಮಗಳು ಮಾಡುವುದರಿಂದ ಕಲಾವಿದರಿಗೂ ಹಾಗೂ ಗಡಿ ಭಾಗದ ಜನರಿಗೂ ಕನ್ನಡದ ಬಗ್ಗೆ ಕಾಳಜಿ ಬರುತ್ತದೆ ಎಂದರು.

ಗಡಿ ಪ್ರದೇಶದಲ್ಲಿ ತೆಲುಗು ಭಾಷೆ ಮಾತನಾಡುವವರು ಹೆಚ್ಚಿನ ಜನಸಂಖ್ಯೆಯಿಂದ ಕೂಡಿದ್ದು ಜನಪದ ಕಲಾವಿದರು ಜಾನಪದ ಹಾಡು, ನಾಟಕ, ಕೇಳಿಕೆ, ಭಜನೆ ಮತ್ತು ತತ್ವಪದಗಳನ್ನು ತೆಲುಗು ಭಾಷೆಯಲ್ಲಿ ಹಾಡುತ್ತಾರೆ. ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರವು ಗಡಿಭಾಗದಲ್ಲಿ ಕನ್ನಡ ಉಳಿವಿಗಾಗಿ ಕಾರ್ಯಕ್ರಮಗಳನ್ನು ಮಾಡುತ್ತಿರುವುದು ನಮಗೆ ಸಂತಸ ತಂದಿದೆ ಎಂದರು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಅಶ್ವಥನಾರಾಯಣ ಮಾತನಾಡಿ ಜನಪದ ಕಲೆಗಳು ಶ್ರೀಮಂತವಾಗಿ ಬೆಳೆಯಬೇಕಾದರೆ ಗಡಿನಾಡು ಉತ್ಸವಗಳು ಅವಶ್ಯಕ, ಗಡಿಭಾಗದಲ್ಲಿ ಕರ್ನಾಟಕ ಸರ್ಕಾರ ಅತಿ ಹೆಚ್ಚಿನ ಅನುದಾನಗಳನ್ನು ಬಿಡುಗಡೆ ಮಾಡಿದೆ. ಗಡಿಭಾಗದ ಹಳ್ಳಿಗಳಲ್ಲಿ ಗ್ರಂಥಾಲಯಗಳನ್ನು ಕಡ್ಡಾಯವಾಗಿ ನಡೆಸಲು ಕ್ರಮ ಜಗುಗಿದೆ.

ಕನ್ನಡ ಭಾಷೆ ಹಳ್ಳಿ ಜನರಿಗೆ ಕಲಿಸಲು ಮತ್ತು ಗಡಿ ಭಾಗದಲ್ಲಿ ತೆಲುಗು ತಮಿಳು ಭಾಷೆಯಲ್ಲಿ ಮಾತನಾಡುವುದರಿಂದ ಕನ್ನಡ ನಶಿಸಿ ಹೋಗದಂತೆ ವಿಶೇಷವಾದ ಅನುದಾನಗಳನ್ನು ಬಿಡುಗಡೆ ಮಾಡಿದೆ. ಕನ್ನಡ ಶಾಲೆಗಳನ್ನು ತೆರೆಯುವಲ್ಲಿ ಶಾಲೆಗಳಲ್ಲಿ ಕನ್ನಡ ಭಾಷೆಗೆ ವಿಶೇಷ ಶಿಕ್ಷಕರನ್ನು ನೇಮಕ ಮಾಡಿಕೊಂಡಿದೆ ಎಂದರು.

ಜನಪದ ಗಾಯಕ ಈ ನೆಲ ಈ ಜಲ ವೆಂಕಟಾಚಲಪತಿ ಮಾತನಾಡಿ ನಗರ ಪ್ರದೇಶಗಳಲ್ಲಿ ಕಲೆಯು ನಶಿಸಿ ಹೋಗಿದೆ. ಜಾನಪದ ಕಲೆಗಳು ಉಳಿದಿರುವುದು ಹಳ್ಳಿಗಳಲ್ಲಿ. ಅದರಲ್ಲೂ ಗಡಿಭಾಗದಲ್ಲಿ ಜನಪದ ಕಲೆಗಳು ಇನ್ನೂ ಜೀವಂತವಾಗಿದೆ.

ಜಾತ್ರೆ, ಹಬ್ಬ, ಉತ್ಸವ, ಜನಪದ ಕಲೆಗಳಾದ ತಮಟೆ, ಡೊಳ್ಳುಕುಣಿತ, ವೀರಗಾಸೆ, ಪಂಡರಿ ಭಜನೆ, ಕೀಲು ಕುದುರೆ, ವೇಣುಕುಣಿತ, ದೊಮ್ಮರಾಟ, ಹುಲಿವೇಷ, ಜನಪದ ನೃತ್ಯಗಳಾದ ಕೋಲಾಟ, ಚಕ್ಕೆ ಭಜನೆ ಇನ್ನೂ ಮುಂತಾದ ಕಲೆಗಳು ಪ್ರದರ್ಶನ ನೀಡುತ್ತಿವೆ.

ಸುತ್ತಮುತ್ತಲಿನ ಜನರು ಈ ಕಲೆಗಳನ್ನು ನೋಡಿ ಆನಂದಿಸುತ್ತಾರೆ. ಗದ್ದೆಗಳಲ್ಲಿ, ಕಣದಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಜನಪದ ಹಾಡುಗಳನ್ನು ಹಾಡಿ ಅವರ ನೋವುಗಳನ್ನು ಮರೆಯುತ್ತಾರೆ ಎಂದರು.

ಕಾರ್ಯಕ್ರಮದಲ್ಲಿ ವಿವಿಧ ಕಲಾ ತಂಡಗಳು ಜಾನಪದ ಕಲೆಗಳನ್ನು ಪ್ರದರ್ಶನ ನೀಡಿದರು. ಸಾಂಸ್ಕೃತಿಕ ಕಲಾ ತಂಡಗಳು ಜನಪದ ಗಾಯನವನ್ನು ಈನೆಲ ಈಜಲ ವೆಂಕಟಾಚಲಪತಿ ಮತ್ತು ತಂಡ, ಸುಗಮ ಸಂಗೀತ-ಸೌದಾಮಿನಿ.ಬಿ.ವಿ ಮತ್ತು ತಂಡ, ಚಕ್ಕೆ ಭಜನೆ-ತೂಪಲ್ಲಿ ಬಸವರಾಜ್ ಮತ್ತು ತಂಡ, ಶ್ರೀನಿವಾಸಪುರ, ತಮಟೆ ವಾದನ : ನಾರಾಯಣಸ್ವಾಮಿ ಮತ್ತು ತಂಡ, ಜಾನಪದ ಗಾಯನ – ಗುಜ್ಜಮಾರಂಡಹಳ್ಳಿ ಜಗದೀಶ್ ಮತ್ತು ತಂಡ.

ಕೋಲಾಟ : ಗಣೇಶಪ್ಪ ಮತ್ತು ತಂಡ, ಜಾನಪದ ಗಾಯನ – ಶೈಲಜಾ.ಎಂ ಮತ್ತು ತಂಡ, ನೃತ್ಯ ರೂಪಕ : ವೈಷ್ಣವಿ ಮತ್ತು ತಂಡ, ಗೀಗಿಪದ – ನಾದಪ್ರಿಯ ಮತ್ತು ತಂಡ, ಪೌರಾಣಿಕ ನಾಟಕ – ಬಾಲು ಮತ್ತು ತಂಡ, ಸಾಮಾಜಿಕ ನಾಟಕ ಕನ್ನಡ ಅಳಿವು ಮತ್ತು ಉಳಿವು ರಂಗೋಲಿ ಸ್ಪರ್ಧೆ : ಮುದುಗೆರೆ ಪಂಚಾಯಿತಿ ಗಡಿಭಾಗದ ಮಹಿಳೆಯರಿಗೆ ಕೀಬೋರ್ಡ್ ರಾಜು.ಜಿ, ವಕ್ಕಲೇರಿ ಆನಂದ್, ತಬಲ ತ್ಯಾವನಹಳ್ಳಿ ಕಾಶಿ ಕಂಜರ- ವಿ.ಸಂಜೀವಯ್ಯ ತಬಲ – ಅಂಬೇಡ್ಕರ್ ನಗರ ಕೃಷ್ಣಪ್ಪ ನೆಡಸಿಕೊಟ್ಟರು.

ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಡಿ ಭಾಗದ ಚೇತನ್ ಪ್ರಸಾದ್, ಪ್ರಭಾಕರ್ ಗುಪ್ತಾ, ಜಿ.ಟಿ. ಹರೀಶ್ ಮತ್ತು ನದೀಮ್ ಪಾಷ, ಈನೆಲ ಈಜಲ ವೆಂಕಟಾಚಲಪತಿ, ಆರ್. ಸುಜಾತ, ಗೋವಿಂದರಾಜು ರವರುಗಳನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಮುದುಗೆರೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ವಸಂತಮ್ಮ, ಸದಸ್ಯರುಗಳಾದ ಆರ್. ಸಂಪತ್, ರೆಡ್ಡೆಮ್ಮ, ಪಿ.ಡಿ.ಒ. ಸಂತೋಷ್ ಕುಮಾರ್, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಪ್ರಭಾಕರ ಗುಪ್ತಾ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರು, ಸದಸ್ಯರುಗಳು, ಶಾಂತಿ ಸೌಹಾರ್ಧ ಕ್ರೀಡೆ ಮತ್ತು ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷೆ ಹೆಚ್.ಶಾಂತಮ್ಮ ಮುಂತಾದವರು ಭಾಗವಹಿಸಿದ್ದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!