• Fri. May 3rd, 2024

PLACE YOUR AD HERE AT LOWEST PRICE

ಕೆಜಿಎಫ್:ಹಲವು ದಿನಗಳಿಂದ ವಿವಾದಕ್ಕೆ ಕಾರಣವಾಗಿದ್ದ ರಸ್ತೆ ಅಗಲೀಕರಣ ವೇಳೆ ಹೈ ಡ್ರಾಮಾ ನಡೆದಿದ್ದು, ಕೆಜಿಎಫ್ ಶಾಸಕಿ ರೂಪಕಲಾ ಮೇಲೆ ಕಲ್ಲಿನಿಂದ ಹೊಡೆಯಲು ಮುಂದಾದ ಘಟನೆ ಕೋಲಾರ ಜಿಲ್ಲೆಯ ಬೇತಮಂಗಲದಲ್ಲಿ ನಡೆದಿದೆ.

ಒತ್ತುವರಿ ತೆರವುಗೊಳಿಸುವ ವೇಳೆ ವ್ಯಕ್ತಿಯೊರ್ವ ಹಲ್ಲೆಗೆ ಮುಂದಾದ ಪರಿಣಾಮ ಭಾರಿ ಅನಾಹುತವೊಂದು ತಪ್ಪಿದೆ. ಕೋಲಾರ ಜಿಲ್ಲೆಯ ಕೆಜಿಎಫ್ ತಾಲ್ಲೂಕಿನ ಬೇತಮಂಗಲದಲ್ಲಿ ಈ ಘಟನೆ ನಡೆದಿದ್ದು, ಪೊಲೀಸರ ಸಮಯ ಪ್ರಜ್ಞೆಯಿಂದ ಬಾರಿ ಅನಾಹುತ ತಪ್ಪಿದೆ.

ಕೆಜಿಎಫ್ ಶಾಸಕಿ ರೂಪಕಲಾ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ ಮಾಡಲಾಗುತಿತ್ತು, ಶಾಸಕಿ ಹಾಗೂ ಜೆಸಿಬಿಗೆ ಕಲ್ಲು ಹೊಡೆಯಲು ಮುಂದಾದ ವ್ಯಕ್ತಿಯನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ವಿವಾದಕ್ಕೆ ಕಾರಣವಾಗಿದ್ದ ರಸ್ತೆಯನ್ನ ತೆರವುಗೊಳಿಸಲು ಇಂದು ಶಾಸಕಿ ರೂಪ ರವರು ಫೀಲ್ಡಿಗಿಳಿದಿದ್ರು, ತೆರವುಗೊಳಿಸುತ್ತಿದ್ದ ವೇಳೆ ಕುಪಿತಗೊಂಡ ವ್ಯಕ್ತಿ ಯೊರ್ವ ಶಾಸಕಿ ಹಾಗೂ ಜೆಸಿಬಿ ಮೇಲೆ ಕಲ್ಲು ತೂರಲು ಮುಂದಾದ, ಈ ವೇಳೆ ಆತನನ್ನ ವಶಕ್ಕೆ ಪಡೆದ ಪೊಲೀಸರು ಜರುಗಬಹುದಾದ ಬಾರಿ ಅನಾಹುತವನ್ನ ತಪ್ಪಿಸಿದ್ದಾರೆ.

ಪರಿಣಾಮ ಶಾಸಕಿ ಇಂದು ತಾವೇ ಮುಂದೆ ನಿಂತು ತೆರವು ಮಾಡಲು ಮುಂದಾಗಿದ್ರು, ಪರಿಣಾಮ ತೆರವು ಕಾರ್ಯಾಚರಣೆ ವೇಳೆ ಸಖತ್ ಹೈ ಡ್ರಾಮಾ ನಿರ್ಮಾಣವಾಯಿತು.

ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ರಸ್ತೆ ಕಾಮಗಾರಿಯನ್ನ ಮಾಡಲು ಖುದ್ದು ಶಾಸಕಿ ರೂಪ ನೇತೃತ್ವದಲ್ಲಿ ಕಾರ್ಯಾಚರಣೆಗಿಳಿದ ಪಿಡಬ್ಲ್ಯೂಡಿ ಅಧಿಕಾರಿಗಳು ತೆರವುಗೊಳಿಸಿದ್ದಾರೆ.

ಸದ್ಯ ಶಾಸಕಿ ಸಮ್ಮುಖದಲ್ಲಿ ತೆರವು ಕಾರ್ಯಾಚರಣೆ ನಡೆಯುತ್ತಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣವಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.

ಈ ವೇಳೆ ಕಲ್ಲು ತೂರಲು ಮುಂದಾದ ವ್ಯಕ್ತಿಯನ್ನ ವಶಕ್ಕೆ ಪಡೆದಿರುವ ಬೇತಮಂಗಲ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!