• Tue. May 14th, 2024

PLACE YOUR AD HERE AT LOWEST PRICE

ಕೆಜಿಎಫ್ ಘಟಕದಲ್ಲಿ ಪ್ರಸ್ತುತ ಖಾಲಿ ಇದ್ದಂತಹ ಸಿವಿಎಲ್ ಪಿಎಸ್‌ಐ ಹುದ್ದೆಗೆ ಜೇಷ್ಠತೆ ಮತ್ತು ಅರ್ಹತೆ ಅನುಸಾರ ನಿಯಮ ೩೨ರ ಅಡಿಯಲ್ಲಿ ೧೨ ಮಂದಿ ಎಎಸ್‌ಐ ಗಳಿಗೆ ಪೊಲೀಸ್ ಸಬ್‌ಇನ್ಸ್ಪೆಕ್ಟರ್ ಹುದ್ದೆಗೆ ಮುಂಬಡ್ತಿ ನೀಡಿ ಕೇಂದ್ರ ವಲಯ ಐಜಿಪಿ ಬಿ.ಆರ್. ರವಿಕಾಂತೇಗೌಡ ಅವರು ಆದೇಶ ಹೊರಡಿಸಿದರು.

ಅದರಂತೆ, ಶುಕ್ರವಾರದಂದು ಕೆಜಿಎಫ್ ಪೊಲೀಸ್ ಜಿಲ್ಲೆಯ ಹನ್ನೆರಡು ಮಂದಿ ಎಎಸ್‌ಐ ಗಳಿಗೆ ಪೊಲೀಸ್ ಸಬ್‌ಇನ್ಸ್ಪೆಕ್ಟರ್ ಹುದ್ದೆಗೆ ಮುಂಬಡ್ತಿ ಪ್ರಧಾನ ಮಾಡಲಾಯಿತು. ಪಿಎಸ್‌ಐ ಮುಂಬಡ್ತಿ ಹುದ್ದೆಯಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುವಂತೆ ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ.ಶಾಂತರಾಜು ಅವರು ಚಲನಾದೇಶ ಹೊರಡಿಸಿ, ಮುಂಬಡ್ತಿ ಹೊಂದಿರುವ ನೂತನ ಪಿಎಸ್‌ಐ ಗಳನ್ನು ಅಭಿನಂದಿಸಿದರು.

ಕರ್ನಾಟಕ ರಾಜ್ಯ ಪೊಲೀಸ್ ಕೈಪಿಡಿಯಂತೆ ಪಿಎಸ್‌ಐ ಕರ್ತವ್ಯಗಳ ಕುರಿತು ತಿಳುವಳಿಕೆಯನ್ನು ಲಿಖಿತ ಮೂಲಕವು ನೀಡಿದ ಎಸ್‌ಪಿ ಶಾಂತರಾಜು, ಮುಂಬಡ್ತಿ ಹೊಂದಿದ ಎಲ್ಲಾ ಪಿಎಸ್‌ಐಗಳು ಅತ್ಯಂತ ಹೆಚ್ಚಿನ ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸುವುದು ಅನಿವಾರ್ಯ. ಯಾವುದೇ ಸಂದರ್ಭದಲ್ಲೂ, ಎಂತಹ ಪರಿಸ್ಥಿತಿಯಲ್ಲಿಯೂ ಕರ್ತವ್ಯಕ್ಕೆ ಚ್ಯುತಿ ಬಾರದಂತೆ ನಿಷ್ಠೆಯಿಂದ ಕೆಲಸಮಾಡಿ ಸಮಾಜದಲ್ಲಿ ಉತ್ತಮ ಹೆಸರುಗಳಿಸುವ ದಿಸೆಯಲ್ಲಿ ದಕ್ಷತೆಯಿಂದ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವಂತೆ ತಿಳಿಸಿದರು.

ಮುಂಬಡ್ತಿ ಹೊಂದಿರುವ ನೂತನ ಪಿಎಸ್‌ಐ ಗಳಾದ ಕೆ.ವಿ.ನಾರಾಯಣಸ್ವಾಮಿ ಬೆಮೆಲ್‌ನಗರ ಠಾಣೆಗೆ, ಪ್ರಕಾಶ್ ನರಸಿಂಗ್ ಬಂಗಾರಪೇಟೆ ಠಾಣೆಗೆ, ಜಿ.ದೇವರಾಜ್ ಕ್ಯಾಸಂಬಳ್ಳಿ ಠಾಣೆಗೆ, ಹೆಚ್.ಎಂ.ಲಕ್ಷ್ಮೀನಾರಾಯಣ ಬಂಗಾರಪೇಟೆ ಠಾಣೆಗೆ, ಎಲ್.ಎಂ.ಕೃಷ್ಣಮೂರ್ತಿ ಉರಿಗಾಂ ಠಾಣೆಗೆ, ಕೆ.ಎನ್.ಸುಬ್ರಮಣ್ಯಂ ಬಂಗಾರಪೇಟೆ ಠಾಣೆಗೆ, ಡಿ.ಕೆ.ನಾರಾಯಣಸ್ವಾಮಿ ಬೇತಮಂಗಲ ಠಾಣೆಗೆ, ಎಂ.ಚಂದ್ರಶೇಖರ್ ಆಂಡ್ರಸನ್‌ಪೇಟೆ ಠಾಣೆಗೆ, ಎಸ್.ವಿ.ರಾಜಣ್ಣ ಬಂಗಾರಪೇಟೆ ಠಾಣೆಗೆ,  ಎಂ.ಸರಸ್ವತಮ್ಮ ಕೋಲಾರ ಮಹಿಳಾ ಪೊಲೀಸ್ ಠಾಣೆಗೆ, ಎಂ.ಎನ್.ನಾರಾಯಣಸ್ವಾಮಿ ಬೆಂಗಳೂರು ಗ್ರಾ. ಜಿಲ್ಲೆಯ ತಿರುಮಲಶೆಟ್ಟಿಹಳ್ಳಿ ಠಾಣೆಗೆ, ಕೆ.ವರಲಕ್ಷ್ಮಮ್ಮ ಹೊಸಕೋಟೆ ಠಾಣೆಗೆ ಸ್ಥಳ ನಿಯುಕ್ತಿಗೊಳಿಸಿ ಐಜಿಪಿ ಬಿ.ಆರ್. ರವಿಕಾಂತೇಗೌಡ ಅವರು ಆದೇಶ ಹೊರಡಿಸಿದ್ದಾರೆ.

ಪೊಲೀಸ್ ಸಬ್‌ಇನ್ಸ್ಪೆಕ್ಟರ್ ಹುದ್ದೆಗೆ ಮುಂಬಡ್ತಿ ಹೊಂದಿ, ಕೆಜಿಎಫ್ ಘಟಕದಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಂಡಿರುವ ಹಾಗೂ ಕೆಜಿಎಫ್ ಘಟಕದ ಕರ್ತವ್ಯದಿಂದ ಬಿಡುಗಡೆ ಹೊಂದಿದ ಸಂದರ್ಭದಲ್ಲಿ ಜಿಲ್ಲಾ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು ಅವರು ಶುಭ ಕೋರಿ, ಅಭಿನಂದಿಸಿದರು.

ಈ ಸಂದರ್ಭದಲ್ಲಿ ಸಹಾಯಕ ಆಡಳಿತಾಧಿಕಾರಿ ಜಿ.ವಿಶ್ವನಾಥ, ಸಿಇಎನ್ ಇನ್ಸ್ಪೆಕ್ಟರ್ ಲಕ್ಷ್ಮೀನಾರಾಯಣ ಮತ್ತಿತರರು ಉಪಸ್ಥಿತರಿದ್ದರು.

Related Post

ಶಿಕ್ಷಕರ ಸಮಸ್ಯೆಗಳನ್ನು ಬಗೆಹರಸದೆ, ಶಿಕ್ಷಕರಿಗೆ ದ್ರೋಹವೆಸಗಿದ ಎಂ.ಎಲ್.ಸಿ. ವೈ.ಎ.ನಾರಾಯಣಸ್ವಾಮಿ : ರುಪ್ಸಾ ಅಧ್ಯಕ್ಷ ಹಾಗೂ ಪಕ್ಷೇತರ ಅಭ್ಯರ್ಥಿ ಲೋಕೇಶ್ ತಾಳಿಕಟ್ಟೆ ಆರೋಪ
ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್

Leave a Reply

Your email address will not be published. Required fields are marked *

You missed

error: Content is protected !!