• Tue. Apr 30th, 2024

PLACE YOUR AD HERE AT LOWEST PRICE

ಬಂಗಾರಪೇಟೆ:ಸಮಾಜದಲ್ಲಿ ಜಾತೀಯತೆ ದೊಡ್ಡಮಟ್ಟದಲ್ಲಿ ಬೇರೂರಿದೆ. ಜಾತೀಯತೆಯನ್ನು ತೊಡೆದುಹಾಕಲು ಪ್ರತಿಯೊಬ್ಬರೂ ಪ್ರಾಮಾಣೀಕವಾಗಿ ಪ್ರಯತ್ನಿಸಬೇಕು ಎಂದು ತಹಶೀಲ್ದಾರ್ ರಶ್ಮಿ ಅಭಿಪ್ರಾಯಪಟ್ಟರು.

ಅವರು ತಾಲ್ಲೂಕಿನ ದೊಡ್ಡವಲಗಮಾದಿಯಲ್ಲಿ ನಡೆದ ಶಾಂತಿ ಸಭೆಯಲ್ಲಿ ಮಾತನಾಡಿ, ನಾನು ಈ ತಾಲ್ಲೂಕಿಗೆ ಬಂದಾಗ ಮನೆ ಹುಡುಕುವ ವೇಳೆ ನನ್ನ ಜಾತಿಯನ್ನು ಕೇಳಿದರು. ಆಗ ನನಗೇ ಜಾತೀಯತೆಯ ಅನುಭವವಾಗಿ ಅಚ್ಚರಿಯಾಯಿತು.

ಜಾತೀಯತೆಯು ಅಗಾಧವಾಗಿ ಬೇರೂರಿದ್ದು, ಅದನ್ನು ತೊಡೆದುಹಾಕಲು ಎಲ್ಲರೂ ಮನಸ್ಸು ಮಾಡಬೇಕು. ಪ್ರತಿಯೊಬ್ಬರೂ ತಮ್ಮ ತಮ್ಮ ಮನೆಗಳಲ್ಲಿ ಜಾತೀಯತೆ ತೊಡೆದುಹಾಕುವ ನಿಟ್ಟಿನಲ್ಲಿ ತಮ್ಮ ಮಕ್ಕಳಿಗೆ ತಿಳುವಳಿಕೆ ಮೂಡಿಸಬೇಕು ಎಂದರು.

ದೊಡ್ಡವಲಗಮಾದಿ ಗ್ರಾಮದಲ್ಲಿ ದಲಿತನ ಮೇಲೆ ಮಾರಣಾಂತಿಕ ಹಲ್ಲೆ ನಡೆದ ವಿಷಯ ತಿಳಿದು ನಾನು ಆಸ್ಪತ್ರೆಗೆ ಭೇಟಿ ನೀಡಿ ಹಲ್ಲೆಗೊಳಗಾದ ಅಮರೇಶರನ್ನು ಕಂಡು ಮನಸ್ಸಿಗೆ ನೋವಾಯಿತು. ಈಗಲೂ ಈ ರೀತಿಯ ವಾತಾವರಣ ಇರುವುದು ಸಾಮಾಜಿಕ ನೋವಿನ ಸಂಗತಿ.

ನಾನು ತಹಶೀಲ್ದಾರ್ ಆಗಿ ಈ ಬಗ್ಗೆ ಕಠಿಣ ಕ್ರಮ ತೆಗೆದುಕೊಳ್ಳುತ್ತೇನೆ. ಜೊತೆಗೆ ಇಂಥಹ ಘಟನೆಗಳು ಮರುಕಳಿಸದಂತೆ ಎಲ್ಲಾ ಇಲಾಖೆಗಳ ಅಧಿಕಾರಿಗಳ ಜೊತೆ ಚರ್ಚಿಸಿ ಎಚ್ಚರ ವಹಿಸುವ ಕೆಲಸವನ್ನು ಪ್ರಮಾಣಿಕವಗಿ ಮಾಡುತ್ತೇನೆ ಎಂದರು.

ಡಿ.ವೈ.ಎಸ್.ಪಿ ಪಾಂಡುರಂಗ ಮಾತನಾಡಿ, ದೊಡ್ಡವಲಗಮಾದಿಯಲ್ಲಿ ನಡೆದಿರುವ ಜಾತಿನಿಂದನೆ ಮತ್ತು ದೌರ್ಜನ್ಯ ಪ್ರಕರಣದ ಬಗ್ಗೆ ನಮಗೆ ಸಂಪೂರ್ಣವಾಗಿ ಮನವರಿಕೆಯಾಗಿದೆ. ಈ ಪ್ರಕರಣದಲ್ಲಿ ಅಗತ್ಯವಾಗಿ ಹೆಚ್ಚುವರಿ ಸೆಕ್ಷನ್ ಸೇರಿಸುವ ವಿಚಾರದಲ್ಲಿ ನಮ್ಮಲ್ಲಿ ವ್ಯತ್ಯಾಸವಾಗಿದೆ.

ಈ ಬಗ್ಗೆ ನ್ಯಾಯಾದೀಶರ ಗಮನಕ್ಕೂ ತಂದಿದ್ದೇನೆ. ಅವರ ಬಳಿ ಆಗಿರುವ ವ್ಯತ್ಯಾಸದ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದೇನೆ. ಪ್ರಕರಣವನ್ನು ಪರಿಶೀಲಿಸಿ ಅಗತ್ಯವಾಗಿ ಆಗಬೇಕಾದ ಮಾರ್ಪಾಟುಗಳನ್ನು ಮಾಡಿ ತಪ್ಪಿತಸ್ತರಿಗೆ ಶಿಕ್ಷೆ ಆಗುವಂತೆ ಪ್ರಯತ್ನ ಮಾಡುತ್ತೇನೆ ಎಂದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಸೂಲಿಕುಂಟೆ ರಮೇಶ್ ಮಾತನಾಡಿ, ದೊಡ್ಡವಲಗಮಾದಿ ಪ್ರಕರಣದಲ್ಲಿ ಪೊಲೀಸರು ಕೊಲೆ ಯತ್ನ ಮತ್ತು ಜಾತಿನಿಂದನೆ  ವಿಷಯವನ್ನು ನಿರ್ಲಕ್ಷಿಸಿದ್ದಾರೆ ಎಂದು ಆರೋಪಿಸಿದರು.

ಇದರಿಂದಾಗಿ ಆರೋಪಿಗಳು ಸುಲಭವಾಗಿ ಜಾಮೀನು ಪಡೆದುಕೊಳ್ಳುವಂತಾಗಿದೆ. ತಡವಾಗಿ ಸೆಕ್ಷನ್ 307 ಸೇರಿಸಿರುವ ಪೊಲೀಸರು ಈಗ ಮತ್ತೆ ಆರೋಪಿಗಳನ್ನು ಬಂಧಿಸಬೇಕು ಆ ಮೂಲಕ ದೌರ್ಜನ್ಯ ಮಾಡಿರುವವರಿಗೆ ಶಿಕ್ಷೆಯಾಗಬೇಕು ಎಂದು ಒತ್ತಾಯ ಮಾಡಿದರು.

ಅಧಿಕಾರಿಗಳು ದೌರ್ಜನ್ಯ ಪ್ರಕರಣಗಳು ನಡೆದ ನಂತರ ಪ್ರತಿಕ್ರಿಯೆ ಮಾಡುವ ಮನೋಭಾವ ಬಿಟ್ಟು ದೌರ್ಜನ್ಯಗಳೇ ನಡೆಯದ ಹಾಗೆ ತಿಳಿವಳುಕೆ ಮೂಡಿಸಬೇಕು ಮತ್ತು ದಲಿತರಿಗೆ ರಕ್ಷಣೆ ನೀಡಬೇಕು ಎಂದು ಒತ್ತಾಯ ಮಾಡಿದರು.

ದಲಿತ ರೈತ ಸೇನೆಯ ಅದ್ಯಕ್ಷ  ಹುಣಸನಹಳ್ಳಿ ವೆಂಕಟೇಶ್, ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಣ್ಣಯ್ಯ ಬಣ) ರಾಜ್ಯ ಸಂಘಟನಾ ಸಂಚಾಲಕ ಕಲಾವಿದ ಯಲ್ಲಪ್ಪ, ಮುಖಂಡರಾದ ಕೆ.ಮದಿವಣ್ಣನ್, ಮಹದೇವಪುರ ವೆಂಕಟೇಶ್, ಸುಭಾಷ್, ಸಿದ್ದನಹಳ್ಳಿ ಯಲ್ಲಪ್ಪ, ಅಂಬೇಡ್ಕರ್, ನಾಗರತ್ನ ಮೊದಲಾದವರು ಮಾತನಾಡಿದರು.

ಗ್ರಾಮ ಪಂಚಾಯಿತಿ ಸದಸ್ಯ ಮುನಿರಾಜು ಘಟನೆಯ ಬಗ್ಗೆ ವಿವರಣೆ ನೀಡಿದರು. ಪೊಲೀಸ್ ನಿರೀಕ್ಷಕ ಎಂ.ನಂಜಪ್ಪ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಶಿವಾರೆಡ್ಡಿ, ಪಿಡಿಒ ಸರಸ್ವತಿ, ಜನಾಧಿಕಾರ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಹೂವರಸನಹಳ್ಳಿ ರಾಜಪ್ಪ ಮುಖಂಡರಾದ ಹಿರೇಕರಪನಹಳ್ಳಿ ರಾಮಪ್ಪ, ಚಿಕ್ಕವಲಗಮಾದಿ ಲಕ್ಷ್ಮಮ್ಮ, ದೇಶಿಹಳ್ಳಿ ಸೀನಿ, ರಘುಪತಿ, ಸಕ್ಕನಹಳ್ಳಿ ಮುನಿರಾಜು, ಹಿರೇಕರಪನಹಳ್ಳಿ ಮುನಿರಾಜು, ಕದಿರೇನಹಳ್ಳಿ ಕುಮಾರ್, ಪಿವಿಸಿ ಮಣಿ, ರವಿ, ಚೌಡಪ್ಪ, ಸುಬ್ರಮಣಿ, ಯಲ್ಲಪ್ಪ, ಕಲಾವಿದ ಮಾರುತಿ ಪ್ರಸಾಸ್,  ಗ್ರಾಪಂ ಸದಸ್ಯ ಆಲಿಂ ಖಾನ್ ಮೊದಲಾದವರಿದ್ದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!