• Fri. May 3rd, 2024

PLACE YOUR AD HERE AT LOWEST PRICE

ಬಂಗಾರಪೇಟೆ:ಪ್ರಸ್ತುತ ಯುವ ಸಮುದಾಯ ಮಾದಕ ವ್ಯಸನಿಗಳದಾಸರಾಗಿ ತನ್ನ ಜೀವನವನ್ನು ತಾನೇ ಅಂತ್ಯಗೊಳಿಸಿಕೊಳ್ಳುವುದರ ಮೂಲಕ, ಸಮಾಜಕ್ಕೆ ಮಾರಕವಾಗಿ ಪರಿಣಮಿಸುತ್ತಿರುವುದು ಅತ್ಯಂತ ದುರಾದೃಷ್ಟಕರ. ಯುವ ಸಮುದಾಯ ಮಾದಕ ದ್ರವ್ಯ ವ್ಯಸನಗಳನ್ನು ತ್ಯಜಿಸುವುದರ ಮೂಲಕ ಉತ್ತಮ ಸಾಮಾಜಿಕ ಜೀವನಕ್ಕೆ ಮುನ್ನುಡಿ ಬರೆಯಬೇಕು ಎಂದು ಡಿ.ವೈ.ಎಸ್.ಪಿ  ಪಾಂಡುರಂಗ ಅಭಿಪ್ರಾಯಪಟ್ಟರು.

ಪಟ್ಟಣದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಸಹಯೋಗದಲ್ಲಿ ಬಂಗಾರಪೇಟೆ ಪೊಲೀಸ್ ಅಧಿಕಾರಿಗಳು ಮಾದಕ ವ್ಯಸನಿಗನ ವಿರೋಧಿ ಜಾತಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಮಾದಕ ದ್ರವ್ಯ ಸೇವನೆಯಿಂದ ವ್ಯಕ್ತಿಯ ದೈಹಿಕ, ಮಾನಸಿಕ, ಭಾವನಾತ್ಮಕ ಅಥವಾ ನಡವಳಿಕೆಯ ಸ್ಥಿತಿಯನ್ನು ಬದಲಾಯಿಸುವ ಮೂಲಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ.

ಮಾದಕ ವ್ಯಸನವು ನಿರಂತರವಾದ, ಮರುಕಳಿಸುವ ಮಿದುಳಿನ ಸ್ಥಿತಿಯಾಗಿದ್ದು, ಗೀಳಿನ ಮಾದಕ ವ್ಯಸನ ಮತ್ತು ಬಳಕೆಯಿಂದ ಗುರುತಿಸಲ್ಪಟ್ಟಿದೆ, ಹಾಗೆ ಮಾಡುವುದರಿಂದ ಋಣಾತ್ಮಕ ಪರಿಣಾಮಗಳನ್ನು ಉಂಟುಮಾಡುತ್ತದೆ. ಯುವ ಸಮುದಾಯ ಇಂತಹ ವ್ಯಸನಗಳಿಂದ ಮುಕ್ತರಾಗಿ ಸದೃಢ ಆರೋಗ್ಯವಂತ  ಸಮಾಜ ನಿರ್ಮಾಣಕ್ಕೆ ಸಹಕರಿಸಬೇಕು, ಎಂದರು.

ಕಾರ್ಯಕ್ರಮ ಜೂನಿಯರ್ ಕಾಲೇಜು ಮೈದಾನದಿಂದ ಪ್ರಾರಂಭವಾಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಅರಿವು ಮೂಡಿಸಲಾಯಿತು. ಈ ಸಂದರ್ಭದಲ್ಲಿ ಪೊಲೀಸ್ ವೃತ ನಿರೀಕ್ಷಕ ಎಂ.ನಂಜಪ್ಪ, ಸಬ್ ಇನ್ಸ್ಪೆಕ್ಟರ್ ರಾಜಣ್ಣ, ಎಎಸ್ಐ ಭಾನು, ಮುಖ್ಯೋಪಾಧ್ಯಾಯರಾದ ಶಂಕರಪ್ಪ, ಶಿಕ್ಷಕರಾದ ನಂಜುಂಡಪ್ಪ, ದೈಹಿಕ ಶಿಕ್ಷಕ ಚಂದ್ರು ಇತರರು ಉಪಸ್ಥಿತರಿದ್ದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!