• Wed. May 8th, 2024

PLACE YOUR AD HERE AT LOWEST PRICE

ಕೆಜಿಎಫ್:ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ರಾಬರ್ಟ್ಸನ್‌ಪೇಟೆ ಮತ್ತು ಬೇತಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಮನೆಗಳ್ಳತನ ಪ್ರಕರಣಗಳಲ್ಲಿ ಮೂವರು ಆರೋಪಿಗಳನ್ನು ಬಂಧಿಸಿ, ಅವರಿಂದ ಸುಮಾರು ನಾಲ್ಕು ಪ್ರಕರಣಗಳಿಗೆ ಸಂಬಂಧಿಸಿದ ಸುಮಾರು ರೂ: ೧೪ ಲಕ್ಷ ಮೌಲ್ಯದ ಚಿನ್ನ, ಬೆಳ್ಳಿಯ ಆಭರಣಗಳು, ಒಂದು ಆಟೋ ರಿಕ್ಷಾ, ಎರಡು ಕಾರುಗಳನ್ನು ವಶಪಡಿಸಿಕೊಳ್ಳುವಲ್ಲಿ ರಾಬರ್ಟ್ಸನ್‌ಪೇಟೆ ವೃತ್ತದ ವಿಶೇಷ ಅಪರಾಧ ಪತ್ತೆ ತಂಡದ ಪೊಲೀಸರು ಯಶಸ್ವಿಯಾಗಿದ್ದಾರೆ.

ರಾಬರ್ಟ್ಸನ್‌ಪೇಟೆ ಮತ್ತು ಬೇತಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ೨೦೨೩ನೇ ಸಾಲಿನ ಏಪ್ರಿಲ್ ಮಾಹೆಯಿಂದ ಜೂನ್ ಮಾಹೆಯವರೆವಿಗೂ ನಡೆದಿದ್ದ ನಾಲ್ಕು ಮನೆ ಕಳುವು ಪ್ರಕರಣಗಳಲ್ಲಿ ಆರೋಪಿಗಳು ಮತ್ತು ಕಳುವಾದ ಮಾಲನ್ನು ಪತ್ತೆ ಮಾಡಲು ಸಿಪಿಐ ಪಿ.ಎಂ.ನವೀನ್ ನೇತೃತ್ವದಲ್ಲಿ ವಿಶೇಷ ಅಪರಾಧ ಪತ್ತೆ ತಂಡವನ್ನು ರಚಿಸಲಾಗಿತ್ತು.

ಆರೋಪಿ ಮತ್ತು ಕಳುವಾದ ಮಾಲುಗಳ ಪತ್ತೆಗಾಗಿ ವಿಶೇಷ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳಾದ ಕೆಜಿಎಫ್‌ನ ನಿವಾಸಿಗಳಾದ ಹರೀಶ್ ಮತ್ತು ವಿ.ನಾಗರಾಜ್ @ ಸ್ಕೆಚ್ ನಾಗ ಮತ್ತು ತಮಿಳುನಾಡು ತಿರುಪತ್ತೂರಿನ ಎಂ.ಸತೀಶ್ ಅವರುಗಳನ್ನು ಬಂಧಿಸಿ, ಅವರಿಂದ ಸುಮಾರು ೧೪೫ ಗ್ರಾಂ ಚಿನ್ನದ ಆಭರಣ, ಸುಮಾರು ೯೦ ಗ್ರಾಂ ಬೆಳ್ಳಿ ನಾಣ್ಯಗಳು, ಕಳವು ಮಾಡಲು ಉಪಯೋಗಿಸಿದ ಸಲಕರಣಿಗಳು, ಒಂದು ಆಟೋ ರಿಕ್ಷಾ ಮತ್ತು ೨ ಕಾರುಗಳನ್ನು ವಶಪಡಿಸಿಕೊಂಡಿದ್ದು, ಇವುಗಳ ಒಟ್ಟು ಮೌಲ್ಯ ರೂ: ೧೩,೮೦,೦೦೦ (ಹದಿಮೂರು ಲಕ್ಷ ಎಂಬತ್ತು ಸಾವಿರ ರೂಪಾಯಿಗಳು ಮಾತ್ರ) ಗಳಾಗಿರುತ್ತದೆ. ಇದರಲ್ಲಿ ಇನ್ನೊಬ್ಬ ಆರೋಪಿಯೂ ಸಹ ಭಾಗಿಯಾಗಿದ್ದು, ಅವನ ಪತ್ತೆ ಕಾರ್ಯ ಮುಂದುವರೆದಿದೆ.

ಆರೋಪಿಗಳನ್ನು ಬಂಧಿಸಿ, ಕಳವು ಮಾಲನ್ನು ವಶಪಡಿಸಿಕೊಳ್ಳುವಲ್ಲಿ ಸಿಪಿಐ ಪಿ.ಎಂ.ನವೀನ್, ಪಿಎಸ್‌ಐ ತ್ಯಾಗರಾಜ್, ಎಎಸ್‌ಐ ವೆಂಕಟೇಶಪ್ಪ, ಸಿಬ್ಬಂದಿಗಳಾದ ಗೋಪಿನಾಥ್, ಮಂಜುನಾಥರೆಡ್ಡಿ, ಗಜೇಂದ್ರ, ಶ್ರೀನಿವಾಸ್, ಗೋಪಾಲಕೃಷ್ಣ, ವೆಂಕಟಾಚಲಪತಿ, ವಿಜಯಕುಮಾರ್, ಮುರಳಿ, ರಘು, ಬಸವರಾಜ್ ಕಾಂಬ್ಳೆ, ವಿನೋದ್, ಸತ್ಯಪ್ರಕಾಶ್, ಮನೋಹರ್ ಮತ್ತು ಚಂದ್ರಕುಮಾರ್ ರವರುಗಳನ್ನೊಳಗೊಂಡ ಅಪರಾಧ ಪತ್ತೆ ತಂಡವು ಯಶಸ್ವಿಯಾಗಿದ್ದು, ತಂಡವನ್ನು ಪೊಲೀಸ್ ವರಿಷ್ಠಾಧಿಕಾರಿಗಳು ಶ್ಲಾಘಿಸಿದ್ದಾರೆ.

ಮೇಲ್ಕಂಡ ಆರೋಪಿಗಳ ಪೈಕಿ ನಾಗರಾಜ್ @ ಸ್ಕೆಚ್ ನಾಗ ಈತನ ವಿರುದ್ದ ಬೆಂಗಳೂರು ನಗರದ ಕೆ.ಆರ್.ಪುರಂ, ಬಾಣಸವಾಡಿ, ಪರಪ್ಪನಗ್ರಹಾರ, ಬಾಗಲಗುಂಟೆ, ಬೆಂಗಳೂರು ಜಿಲ್ಲೆಯ ಅತ್ತಿಬೆಲೆ, ವರ್ತೂರು, ಅನುಗೊಂಡನಹಳ್ಳಿ, ಕೋಲಾರ ಜಿಲ್ಲೆಯ ಮಾಲೂರು, ಕೋಲಾರ ನಗರ, ಕೆಜಿಎಫ್‌ನ ಬೆಮೆಲ್‌ನಗರ ಮತ್ತು ಬಂಗಾರಪೇಟೆ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಕೊಲೆ, ಕೊಲೆಯತ್ನ, ಮನೆ ಕಳ್ಳತನ, ದರೋಡೆ ಸೇರಿದಂತೆ ಒಟ್ಟು ೧೭ ಪ್ರಕರಣಗಳಲ್ಲಿ ಈ ಹಿಂದೆ ಭಾಗಿಯಾಗಿದ್ದು, ಈತನ ವಿರುದ್ದ ವಾರೆಂಟ್ ಹಾಗೂ ಉದ್ಘೋಷಣೆ ಹೊರಡಿಸಲಾಗಿರುತ್ತದೆ.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!