• Wed. May 8th, 2024

PLACE YOUR AD HERE AT LOWEST PRICE

ಕೆಜಿಎಫ್:ಕ್ಷೇತ್ರದಲ್ಲಿ ಬಡವರ ಪರವಾಗಿ ಪ್ರ‍್ರಾಮಾಣಿಕವಾಗಿ ಕೆಲಸ ಮಾಡುವ ಅಧಿಕಾರಿಗಳು ಬೇಕು. ಸುಖಾಸುಮ್ಮನೆ ಕಾಲಹರಣ ಮಾಡುವ ಅಧಿಕಾರಿಗಳು ಕ್ಷೇತ್ರ ಬಿಟ್ಟು ಹೋಗಲಿ. ನಿಗದಿತ ಅವದಿಯೊಳಗೆ ತಮ್ಮ ಕೆಲಸ ನಿರ್ವಹಿಸದ ಅಧಿಕಾರಿಗಳ ವಿರುದ್ಧ ಕ್ರಮ ಗ್ಯಾರಂಟಿ ಎಂದು ಅಧಿಕಾರಿಗಳಿಗೆ ಶಾಸಕಿ ರೂಪಕಲಾಶಶಿಧರ್ ಖಡಕ್ ಎಚ್ಚರಿಕೆ ನೀಡಿದರು.

ನಗರದ ತಾಲೂಕು ಆಡಳಿತ ಸೌಧದಲ್ಲಿ ಬರಪೀಡಿತ ತಾಲೂಕುಗಳ ಪಟ್ಟಿಯಲ್ಲಿ ರಾಜ್ಯ ಸರ್ಕಾರ ಕೆಜಿಎಫ್ ವಿಧಾನಸಭೆ ಕ್ಷೇತ್ರವನ್ನು ಬರಪೀಡಿತ ತಾಲೂಕು ಎಂದು ಘೊಷಣೆ ಮಾಡಿರುವ ಹಿನ್ನಲೆಯಲ್ಲಿ ಕೃಷಿ, ತೋಟಗಾರಿಕೆ, ಪಶು ಇಲಾಖೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

ಸರ್ಕಾರ ಕೆಜಿಎಫ್ ವಿಧಾನಸಭೆ ಕ್ಷೇತ್ರವನ್ನು ಬರಗಾಲ ಪೀಡಿತ ಕ್ಷೇತ್ರವನ್ನಾಗಿ ಘೊಷಣೆ ಮಾಡಿದ್ದು ಕ್ಷೇತ್ರದಲ್ಲಿ ಮೇವು ಎಷ್ಟು ಸಂಗ್ರಹಣೆ ಮಾಡಲಾಗಿದೆ ಮತ್ತು ಮುಂದಿನ ಬೇಸಿಗೆ ಅವದಿಯಲ್ಲಿ ಅಗತ್ಯವಿರುವ ಮೇವು ಎಷ್ಟು ಎಂಬ ಅಂಕಿ ಅಂಶದ ಪಟ್ಟಿಯನ್ನು ನೀಡಿ ಎಂದು ಪಶು ಇಲಾಖೆ ಅಧಿಕಾರಿಗಳನ್ನು ಕೇಳಿದಾಗ ಉತ್ತರಿಸಲು ಅಧಿಕಾರಿ ತಡಬಡಾಯಿಸಿದರು.

ತಾಲೂಕಿನಲ್ಲಿ ಯಾವ ಬೆಳೆಗಳು ನಷ್ಟವಾಗಿವೆ? ರೈತರು ಬೆಳೆದ ಯಾವ ಬೆಳೆ ಹೆಚ್ಚು ನಷ್ಟವಾಗಿದೆ ಮತ್ತು ರೈತರಿಗೆ ಸರ್ಕಾರದಿಂದ ವಿತರಿಸಿರುವ ನಷ್ಟ ಪರಿಹಾರದ ಅಂಕಿ ಅಂಶಗಳ ಪಟ್ಟಿಯನ್ನು ನೀಡುವಂತೆ ಸೂಚಿಸಿದರು.

ಹಲವು ವರ್ಷಗಳಿಂದ ಜನರಿಗೆ ಟ್ಯಾಂಕರ್ ಮೂಲಕ ನೀರಿನ ಸರಬರಾಜು ಮಾಡುವುದನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕೊಳವೆ ಬಾವಿಗಳನ್ನು ಕೊರೆಯಿಸುವ ಮೂಲಕ ಶಾಶ್ವತ ಕ್ರಮ ಕೈಗೊಳ್ಳಲಾಗಿತ್ತು.

ಮುಂದಿನ ಬೇಸಿಗೆ ದಿನಗಳಲ್ಲೂ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಬವವಾಗದಂತೆ ಅಗತ್ಯವಿರುವೆಡೆ ಕೊಳವೆ ಬಾವಿಗಳನ್ನು ಕೊರೆಸಲು ಎನ್‌ಡಿಆರ್‌ಎಫ್‌ಗೆ ವರದಿಯನ್ನು ನೀಡಬೇಕಿರುವುದರಿಂದ ನಗರದ ೩೫ ವಾರ್ಡ್ಗಳಲ್ಲಿನ ವರದಿಯನ್ನು ಕೇಳಲಾಗಿತ್ತು.

ನಗರಸಭೆ ಪೌರಾಯುಕ್ತರು ಇದುವರೆಗೆ ಶೇ ೬೦ ರಷ್ಟು ವರದಿಯನ್ನು ಮಾತ್ರ ನೀಡಿದ್ದು, ಇನ್ನು ಶೇ ೩೦ ರಷ್ಟು ವರದಿ ನೀಡಬೇಕಿದೆ. ಅದರಂತೆ ಗ್ರಾಮೀಣ ಭಾಗದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಅಧ್ಯಕ್ಷರು, ಸದಸ್ಯರು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳಿಂದ ವರದಿಯನ್ನು ಕೇಳಲಾಗಿತ್ತು.

ಅವರು ಸಹ ಶೇ ೮೦ ರಷ್ಟು ವರದಿಯನ್ನು ನೀಡಿದ್ದು ಅಧಿಕಾರಿಗಳು ನೀಡಿರುವ ವರದಿಯನ್ನು ಎನ್‌ಡಿಆರ್‌ಎಫ್‌ಗೆ ಸಲ್ಲಿಸಲಾಗುವುದು. ಅದರಂತೆ ನಗರ ಮತ್ತು ಗ್ರಾಮೀಣ ಭಾಗಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಬವವಾಗುವ ಸ್ಥಳಗಳಲ್ಲಿ ಕೊಳವೆಬಾವಿ ಕೊರೆಸಿ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

ನಗರದ ಎಂ.ಜಿ. ಮಾರುಕಟ್ಟೆ ವ್ಯಾಪಾರಸ್ಥರು ಇನ್ನು ಮುಂದೆ ನಗರಸಭೆಗೆ ಕಟ್ಟ ಬೇಕಾಗಿರುವ ತೆರಿಗೆಯನ್ನು ಪಾವತಿಸಲು ಬ್ಯಾಂಕ್‌ಗಳ ಮುಂದೆ ಸರದಿ ಸಾಲಿನಲ್ಲಿ ನಿಲ್ಲುವ ಅವಶ್ಯಕತೆ ಇಲ್ಲ. ಪೇಟಿಎಂ ಯಂತ್ರದ ಮೂಲಕ ವ್ಯಾಪಾರಸ್ಥರು ಸುಲಭವಾಗಿ ತಾವಿರುವ ಸ್ಥಳದಿಂದಲೇ ಕಂದಾಯ, ಬಾಡಿಗೆ ಹಣವನ್ನು ಸುಲಭವಾಗಿ ಪಾವತಿ ಮಾಡಬಹುದು.

ಪೇಟಿಎಂ ಯಂತ್ರವನ್ನು ನಿಮ್ಮ ಅಂಗಡಿಗಳ ಬಳಿ ತರಲಾಗುವುದು ಹಣವನ್ನು ಪೇಟಿಎಂ ಮೂಲಕ ಪಾವತಿ ಮಾಡುವ ಅವಕಾಶವನ್ನು ಕಲ್ಪಿಸಲಾಗಿದ್ದು ಸದ್ಬಳಕೆ ಮಾಡಿಕೊಳ್ಳಿ ಎಂದು ಹೇಳಿದರು.

ಸಭೆಯಲ್ಲಿ ತಹಶೀಲ್ದಾರ್ ನಾಗವೇಣಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ್ ಹರ್ತಿ, ನಗರಸಭೆ ಪೌರಾಯುಕ್ತ ಪವನ್‌ಕುಮಾರ್, ಪಿಆರ್‌ಇಡಿ ಎಇಇ ಶೇಷಾದ್ರಿ, ಕೃಷಿ, ತೋಟಗಾರಿಕೆ ಹಾಗೂ ಇನ್ನಿತರ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!