• Mon. May 20th, 2024

PLACE YOUR AD HERE AT LOWEST PRICE

KUWJ ವಾರ್ಷಿಕ ಪ್ರಶಸ್ತಿ ಪುರಸ್ಕೃತರನ್ನು ಸನ್ಮಾನಿಸಿದ ಸಂಘ.

ಕೋಲಾರ: ಇತ್ತೀಚಿನ ದಿನಗಳಲ್ಲಿ ಅಭಿವೃದ್ಧಿ ಪತ್ರಿಕೋದ್ಯಮ ಮಾಯವಾಗುತ್ತಿದೆ. ಇದರ ನಡುವೆಯೂ ಬದ್ಧತೆಯ ಪತ್ರಿಕೋದ್ಯಮಕ್ಕೆ ಎಚ್.ಕೆ. ರಾಘವೇಂದ್ರ ಹಾಗೂ ಅಭಿವೃದ್ಧಿ ಪತ್ರಿಕೋದ್ಯಮಕ್ಕೆ ಸಿ.ಎನ್.ಶಿವಶಂಕರ್ ಮಾದರಿ ಎಂದು ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ತಿಳಿಸಿದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಪತ್ರಕರ್ತರ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕೆಯು ಡಬ್ಲ್ಯೂಜೆ ವಾರ್ಷಿಕ ಪ್ರಶಸ್ತಿ ಪುರಸ್ಕೃತರಾದ ಕೋಲಾರ ಪತ್ರಿಕೆ ಉಪ ಸಂಪಾದಕ ಎಚ್.ಕೆ.ರಾಘವೇಂದ್ರ ಹಾಗೂ ದೂರದರ್ಶನ ವರದಿಗಾರ ಶಿವಶಂಕರ್ ಅವರನ್ನು ಸನ್ಮಾನಿಸಿ ಮಾತನಾಡಿದರು.

ರಾಘವೇಂದ್ರ ಪತ್ರಿಕೋದ್ಯಮದ ತಪಸ್ವಿ. ಕೋಲಾರ ಪತ್ರಿಕೆ ಅದಕ್ಕೆ ವೇದಿಕೆ. ಪ್ರಹ್ಲಾದರಾಯರ ಮಾನಸಪುತ್ರ. ಶಿವಶಂಕರ್ ಅಭಿವೃದ್ಧಿ ಪತ್ರಿಕೋದ್ಯಮಕ್ಕೆ ಗಮನ ಕೊಡುತ್ತಿದ್ದಾರೆ. ಜಿಲ್ಲೆಗೆ ಹಾಗೂ ಪತ್ರಕರ್ತರಿಗೆ ಹೆಮ್ಮೆಯ ವಿಚಾರ ಎಂದು ತಿಳಿಸಿದರು.

ಸಮಾಜ ನಾವು ಬರೆದಿದ್ದನ್ನು ಗುರುತಿಸಿದರೆ ಮಾತ್ರ ನಾವು ಪತ್ರಕರ್ತರು. ಇಲ್ಲದಿದ್ದರೆ ಗುಮಾಸ್ತರು ಅಷ್ಟೆ. ಯಾರೋ ಮಾತನಾಡಿದ್ದನ್ನು ಟೈಪ್ ಮಾಡಲು ನಾವು ಪತ್ರಕರ್ತರಾಗಬೇಕೇ ಎಂದರು.

ರಾಜ್ಯ ಕಾರ್ಯಕಾರಿಣಿ ಸದಸ್ಯ ವಿ.ಮುನಿರಾಜು ಮಾತನಾಡಿ, ಈಗ ಅಕ್ಷರಜ್ಞಾನ ಇಲ್ಲದ ಸಂಪಾದಕರೂ ಇದ್ದಾರೆ. ವ್ಯಾಟ್ಸಾಫ್‌ನಲ್ಲಿ ಬಂದ ಸುದ್ದಿ ಮಾಡಲು ನೀವು ಪತ್ರಕರ್ತರಾಗಬೇಕೇ? ಯಾವುದೇ ವಿಷಯವನ್ನು ಪರಿಶೀಲನೆ ಮಾಡಿ ಬರೆದರೆ ಮಾತ್ರ ಆತ ನಿಜವಾದ ಪತ್ರಕರ್ತ, ಸಂಪಾದಕ. ಇಲ್ಲದಿದ್ದರೆ ಪತ್ರಕರ್ತರಿಗೆ ಕಳಂಕ ಎಂದರು. 

ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ.ಎಸ್.ಗಣೇಶ್ ಮಾತನಾಡಿ, ಅರ್ಹರಿಗೆ ಪ್ರಶಸ್ತಿ ಬಂದಿದೆ. ಪತ್ರಕರ್ತರಿಗೆ ಮಾದರಿಯಾಗಿದ್ದಾರೆ. ಅದು ಇನ್ನುಳಿದ ಪತ್ರಕರ್ತರಿಗೆ ಮಾದರಿಯಾಗಬೇಕು. ಈಗ ಬುದ್ಧಿವಾದ ಹೇಳುವ, ತರಬೇತಿ ನೀಡುವ ಕಾಲ ಅಲ್ಲ. ಪ್ರತಿಯೊಬ್ಬರಿಗೆ ತಮ್ಮ ಜವಾಬ್ದಾರಿ ಗೊತ್ತಿದೆ. ಕಾಲಮಿತಿಯಲ್ಲಿ ಕೆಲಸ ಮಾಡುವಾಗ ತಪ್ಪು ಸಹಜ. ಆದರೆ, ತಪ್ಪು ತಿದ್ದಿಕೊಂಡು ಕೆಲಸ ಮಾಡಬೇಕು. ಅದೇ ಪತ್ರಕರ್ತರ ಕೆಲಸ ಎಂದು ನುಡಿದರು.

ಹಿರಿಯ ಪತ್ರಕರ್ತ ಪಾ.ಶ್ರೀ.ಅನಂತರಾಮ್, ಜಿಲ್ಲೆಗೆ ಎರಡು ಪ್ರಶಸ್ತಿ ಬಂದಿರುವುದು ಹೆಮ್ಮೆಯ ಸಂಗತಿ. ಸಾಧನೆ ಟಿಪ್ಸ್ ಕೊಟ್ಟರೆ ಬರಲ್ಲ. ಈ ರಂಗಕ್ಕೆ ಬರುವವರು ಆತ್ಮಾವಲೋಕನ ಮಾಡಿಕೊಳ್ಳಬೇಕು.  ಪ್ರಶಸ್ತಿ ಎಲ್ಲರಿಗೂ ಸ್ಫೂರ್ತಿ ನೀಡುವಂಥದ್ದು. ಈಗ ಸೌಲಭ್ಯ ಬೇಕು. ಆದರೆ, ಕೆಲಸ ಮಾಡಲು ಉದಾಸೀನ ಇದೆ. ಪತ್ರಕರ್ತರ ಆದ್ಯತೆಯೇ ಬೇರೆಯಾಗಿದೆ. ಯುವಪತ್ರಕರ್ತರಲ್ಲಿ ಕಲಿಕೆಗೆ ಉತ್ಸಾಹ ಇಲ್ಲ. ಚೆನ್ನಾಗಿ ಬರೆಯಬೇಕು. ಗೊತ್ತಿದ್ದವರ ಬಳಿ ಕಲಿಯಬೇಕು. ಪ್ರಶಸ್ತಿ ಬರುವಂಥ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಕೆ.ಚಂದ್ರಶೇಖರ್ ಸ್ವಾಗತಿಸಿ ಮಾತನಾಡಿ, ರಾಘವೇಂದ್ರ ಅವರು ಶ್ರಮಜೀವಿ. ಪ್ರಹ್ಲಾದರಾವ್ ಹಾದಿಯಲ್ಲಿ ಸಾಗುತ್ತಿದ್ದಾರೆ. ಪದಬಂಧದಲ್ಲೂ ಪ್ರಸಿದ್ಧಿ ಪಡೆದಿದ್ದಾರೆ.  ಯುವಕರಿಗೆ ಸ್ಫೂರ್ತಿ ಎಂದರು.

ಪ್ರಶಸ್ತಿ ಪುರಸ್ಕೃತರಾದ ಎಚ್.ಕೆ.ರಾಘವೇಂದ್ರ  ಹಾಗೂ ಸಿ.ಎನ್.ಶಿವಶಂಕರ್ ಮಾತನಾಡಿದರು.

ಹಿರಿಯ ಪತ್ರಕರ್ತ ಬಿ.ಸುರೇಶ್, ರಮೇಶ್, ಟೇಕಲ್ ಲಕ್ಷ್ಮೀಶ ಮಾತನಾಡಿದರು. ಸಂಘದ ಖಜಾಂಚಿ ಎ.ಜಿ.ಸುರೇಶ್ ಕುಮಾರ್ ವಂದಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಾದ ಎಸ್.ಸಚ್ಚಿದಾನಂದ, ಸಿ.ವಿ.ನಾಗರಾಜ್, ಓಂಕಾರಮೂರ್ತಿ, ಕೆ.ಬಿ.ಜಗದಿಶ್, ಮಾಮಿ ಪ್ರಕಾಶ್, ಸ್ಕಂದಕುಮಾರ್, ಆಸೀಫ್‌ಪಾಷ, ಎನ್.ಸತೀಶ್, ಸಿ.ಅಮರೇಶ್, ಪುರುಷೋತ್ತಮ್, ಈಶ್ವರ್, ವೆಂಕಟೇಶ್, ಅಮರ್, ರಾಘವೇಂದ್ರಪ್ರಸಾದ್, ಸುಧಾಕರ್, ವಿನೋದ್, ಸರ್ವಜ್ಞಮೂರ್ತಿ, ಪ್ರಕಾಶ್, ವಿಜಿಕುಮಾರ್, ಶ್ರೀಹರಿ, ಮಂಜು, ನವೀದ್‌ಪಾಷ, ಬಾಲನ್, ಮಂಜುನಾಥ್ ಕೆ.ಜಿ, ರಘುರಾಜ್, ನಾಗೇಶ್, ಕುಮಾರ್, ಶ್ರೀನಿವಾಸ್,, ಜೆ.ರಂಗನಾಥ್ ಇದ್ದರು.

Related Post

ಎಪಿಎಂಸಿ ಕಾರ್ಯದರ್ಶಿ ವಿಜಯಲಕ್ಷ್ಮಿ ವಜಾಗೊಳಿಸಲು ತರಕಾರಿ ಮಂಡಿ ಮಾಲೀಕರ ಒತ್ತಾಯ. ಆರೋಪ ನಿರಾಕರಿಸಿದ ಎಪಿಎಂಸಿ ಕಾರ್ಯದರ್ಶಿ
ಯರಗೋಳ್ ಗ್ರಾಮದಲ್ಲಿ “ದಿ 1979 ಅನ್ ಟೋಲ್ಡ್ ಸ್ಟೋರಿ” ಸಿನಿಮಾದ ಅಂತಿಮ ಚಿತ್ರೀಕರಣ
ಶಿಕ್ಷಕರ ಸಮಸ್ಯೆಗಳನ್ನು ಬಗೆಹರಸದೆ, ಶಿಕ್ಷಕರಿಗೆ ದ್ರೋಹವೆಸಗಿದ ಎಂ.ಎಲ್.ಸಿ. ವೈ.ಎ.ನಾರಾಯಣಸ್ವಾಮಿ : ರುಪ್ಸಾ ಅಧ್ಯಕ್ಷ ಹಾಗೂ ಪಕ್ಷೇತರ ಅಭ್ಯರ್ಥಿ ಲೋಕೇಶ್ ತಾಳಿಕಟ್ಟೆ ಆರೋಪ

Leave a Reply

Your email address will not be published. Required fields are marked *

You missed

error: Content is protected !!