• Sat. Apr 27th, 2024

PLACE YOUR AD HERE AT LOWEST PRICE

ವಿಭಾಗೀಯ ಮಟ್ಟದ ಜಾಗೃತಿ ಮತ್ತು ಮೇಲ್ವಿಚಾರಣಾ ಸಮಿತಿ ರಚನೆ ವಿಳಂಬ ಮಾಡುತ್ತಿರುವ ಉಪವಿಭಾಗಾಧಿಕಾರಿ : ಸೂಲಿಕುಂಟೆ ರಮೇಶ್ ಆರೋಪ

ಕೋಲಾರ, ಮಾ.೦೩ : ಉಪವಿಭಾಗ ಮಟ್ಟದ ಜಾಗೃತಿ ಮತ್ತು ಮೇಲ್ವಿಚಾರಣಾ ಸಮಿತಿ ರಚಿಸದೆ ಕಣ್ಣಾಮುಚ್ಚಾಲೆ ಆಡುತ್ತಿರುವ ಉಪವಿಭಾಗಾಧಿಕಾರಿಗಳ ನಿರ್ಲಕ್ಷö್ಯ ಮನೋಭಾವ ದಲಿತ ವಿರೋಧಿ ಧೋರಣೆಯಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಸೂಲಿಕುಂಟೆ ರಮೇಶ್ ಆರೋಪಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಸೂಲಿಕುಂಟೆ ರಮೇಶ್, ಅನುಸೂಚಿತ ಜಾತಿಗಳು ಮತ್ತು ಬುಡಕಟ್ಟುಗಳ(ದೌರ್ಜನ್ಯ ಪ್ರತಿಬಂಧ) ನಿಯಮಗಳು, ೧೯೮೯, (ತಿದ್ದುಪಡಿ ಕಾಯ್ದೆ ೨೦೧೫,ಕೇಂದ್ರ ಕಾಯ್ದೆ ನಂ.೧ ಆಫ್೨೦೧೬) ೧೯೯೫ರ ದೌರ್ಜನ್ಯ ಪ್ರತಿಬಂಧ ನಿಯಮ ೧೭ ಮತ್ತು ೧೭ಎ ಅಡಿಯಲ್ಲಿ ಉಪವಿಭಾಗ ಮಟ್ಟದ ಜಾಗೃತಿ ಮತ್ತು ಮೇಲ್ವಿಚಾರಣಾ ಸಮಿತಿಯನ್ನು ರಚಿಸಿ, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಜನರ ಮೇಲಿನ ದೌರ್ಜನ್ಯಗಳನ್ನು ತಡೆಗಟ್ಟಲು ಮತ್ತು ದೌರ್ಜನ್ಯಕ್ಕೊಳಗಾದವರಿಗೆ ಪರಿಹಾರ/ಪುರ್ನವಸತಿ ಕಲ್ಪಿಸುವ ನಿಟ್ಟಿನಲ್ಲಿ ಪ್ರತಿ ೩ ತಿಂಗಳಿಗೊಮ್ಮೆ ಸಭೆಗಳನ್ನು ನಡೆಸಿ, ಸೂಕ್ತ ಕ್ರಮತೆಗೆದುಕೊಳ್ಳುವ ಮೂಲಕ ತಿದ್ದುಪಡಿ ಕಾಯ್ಕೆ ೨೦೧೫ರ ಅಡಿಯಲ್ಲಿ ಕಲಂ ೧೫ಎ (ಅದ್ಯಾಯ IV (A) ಇದರಲ್ಲಿ ದೌರ್ಜನ್ಯಕ್ಕೊಳಗಾದವರಿಗೆ ಮತ್ತು ಸಾಕ್ಷಿದಾರರಿಗೆ ಕೆಲವು ಹಕ್ಕುಗಳನ್ನು ನೀಡಿದ್ದು, ಸದರಿ ಹಕ್ಕುಗಳನ್ನು ಮೇಲ್ಕಂಡ ಸಮಿತಿಗಳು ಪರಿಣಾಮಕಾರಿಯಾಗಿ ಅನುಷ್ಟಾನಗೊಳಸಬೇಕಿದೆ.

ಈ ಹಿನ್ನಲೆಯಲ್ಲಿ ಕೋಲಾರ ಉಪವಿಭಾಗಮಟ್ಟದ ಜಾಗೃತಿ ಮತ್ತು ಮೆಲ್ವಿಚಾರಣಾ ಸಮಿತಿ ರಚನೆ ಮಾಡಲು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮಸ್ಯೆಗಳ ಬಗ್ಗೆ ಅರಿವಿರುವವರನ್ನು ಅಧಿಕಾರೇತರ ಸದಸ್ಯರನ್ನಾಗಿ ಆಯ್ಕೆ ಮಾಡಿಕೊಂಡು ಸಮಿತಿ ಅಗತ್ಯ ಕ್ರಮಗಳನ್ನು ಜರುಗಿಸಬೇಕಾಗಿತ್ತು. ಆದರೆ, ಈ ಸಮಿತಿಯನ್ನು ರಚನೆ ಮಾಡಬೇಕಾದ ಜವಾಬ್ದಾರಿ ಜೊತ್ತಿರುವ ಉಪವಿಭಾಗಾಧಿಕಾರಿಗಳು ಸಮಿತಿಯನ್ನು ರಚಿಸದೆ ವಿಳಂಬ ಮಾಡುವ ಮೂಲಕ ತನ್ನ ದಲಿತ ವಿರೋಧಿ ಧೋರಣೆಯನ್ನು ಪ್ರರ್ದಶಿಸಿದ್ದಾರೆ.

ಜಾಗೃತಿ ಸಮಿತಿಗೆ ಅರ್ಜಿಗಳನ್ನು ಆಹ್ವಾನಿಸಿ ತಿಂಗಳುಗಳೇ ಆಗಿದೆ. ಈಗಾಗಲೇ ಅರ್ಹರು ತಮ್ಮ ಅರ್ಜಿಗಳನ್ನು ಸಹ ಸಲ್ಲಿಸಿದ್ದಾರೆ. ಉಪವಿಭಾಗಾಧಿಕಾರಿಗಳು ಇಷ್ಟೊತ್ತಿಗಾಗಲೇ ಅರ್ಜಿಗಳನ್ನು ಪರಿಶೀಲಿಸಿ ಅರ್ಹರನ್ನು ಸಮಿತಿಗೆ ನೇಮಿಸಿಕೊಂಡು ಕಾರ್ಯಪ್ರವೃತ್ತರಾಗಬೇಕಿತ್ತು. ಆದರೆ. ಸಮಿತಿ ರಚನೆ ಮಾಡಿದರೆ ವಿಭಾಗೀಯ ಕಚೇರಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಎಲ್ಲಿ ಬಹಿರಂಗವಾಗುತ್ತೋ ಎನ್ನುವ ಕಾರಣಕ್ಕೆ ಉದ್ದೇಶಪೂರ್ವಕವಾಗಿ ಜಾಗೃತಿ ಸಮಿತಿ ರಚನೆ ಮಾಡದೆ ಕಾಲಹರಣ ಮಾಡುತ್ತಿದ್ದಾರೆ.

ವಿಭಾಗೀಯ ಮಟ್ಟದಲ್ಲಿ ಜಾಗೃತಿ ಸಮಿತಿಯವರು ದೌರ್ಜನ್ಯ ತಡೆ ಸಭೆ ನಡೆಸಿ ಅದೆಷ್ಟು ತಿಂಗಳುಗಳಾಗಿವೆಯೋ ಎಂಬುದನ್ನು ದಾಖಲೆಗಳಲ್ಲಿ ಹುಡುಕಿದರೂ ಸಿಗುವುದು ಕಷ್ಟ. ಕಳೆದ ಒಂದು ವರ್ಷದಿಂದ ಒಂದೂ ಸಭೆ ನಡೆದಿಲ್ಲ ಎನ್ನುವುದನ್ನು ದಿನಪತ್ರಿಕೆಗಳನ್ನು ಓದಿದರೂ ತಿಳಿಯುತ್ತದೆ. ಆಡಳಿತ ನಡೆಸುವ ಅಧಿಕಾರಿಗಳು ಈ ರೀತಿ ಬೇಜವಾಬ್ದಾರಿಯಿಂದ ನಡೆದುಕೊಂಡರೆ, ಅನ್ಯಾಯಕ್ಕೊಳಗಾದ ದೌರ್ಜ್ಯನ್ಯಕ್ಕೆ ಒಳಗಾದ ಸಮುದಾಯದ ಜನರಿಗೆ ನ್ಯಾಯ ದಕ್ಕಿಸಿಕೊಡಬೇಕಾಗಿರುವುದದು ಯಾರು ಎಂದು ಪ್ರಶ್ನಿಸಿದ್ದಾರೆ.

ಈ ನಿಟ್ಟಿನಲ್ಲಿ ಈ ಕೂಡಲೇ ದಲಿತರ ರಕ್ಷಣೆಗಾಗಿ ಇರುವ ಜಾಗೃತಿ ಸಮಿತಿಯನ್ನು ರಚಿಸಿ, ವಿಭಾಗೀಯ ಮಟ್ಟದ ಸಭೆಗಳನ್ನು ನಡೆಸಬೇಕು. ಸಮಾನಾಂತರವಾಗಿ ಕುಂದುಕೊರತೆ ಸಭೆಗಳನ್ನು ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

ಒಂದು ವೇಳೆ ಉಪವಿಭಾಗಾಧಿಕಾರಿಗಳು ದಲಿತರ ರಕ್ಷಣೆಗಾಗಿ ಇರುವ ಉಪವಿಭಾಗೀಯ ಮಟ್ಟದ ಜಾಗೃತಿ ಮತ್ತು ಮೇಲ್ವಿಚಾರಣಾ ಸಮಿತಿ ರಚಿಸಿದೆ ಕಾಲಹರಣ ಮಾಡುವ ತಮ್ಮ ನಿರ್ಲಕ್ಷö್ಯ ಧೋರಣೆ ಮುಂದುವರೆಸುವುದೇ ಆದರೆ, ಕರ್ನಾಟಕ ದಲಿತ ಸಂಘರ್ಷ ಸಮಿತಿ ಈ ಬಗ್ಗೆ ಜಿಲ್ಲಾದ್ಯಂತ ಪ್ರತಿಭಟನೆ ನಡೆಸಲಿದೆ ಹಾಗೂ ಕಾನೂನಾತ್ಮಕ ಹೋರಾಟವನ್ನು ನಡೆಸಬೇಕಾಗುತ್ತದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಎಚ್ಚರಿಸಿದ್ದಾರೆ.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!